ಬಟ್ಟೆಗಳಂತೆ ಬಾಯ್ಫ್ರೆಂಡ್ಬದಲಾಯಿಸೋಲ್ಲ!

ಶತ್ರುಘ್ನ ಸಿನ್ಹಾರ ಮಗಳು ಸೋನಾಕ್ಷಿ ಯಾವ ಚಿತ್ರದಲ್ಲಿ ನಟಿಸುತ್ತಾಳೋ ಅದರ ಹೀರೋ ಜೊತೆ ಅವಳ ರೊಮಾನ್ಸ್ ಸುದ್ದಿ ಹಬ್ಬುತ್ತಿರುತ್ತದೆ. ಇತ್ತೀಚೆಗೆ ನಟಿಸುತ್ತಿರುವ `ತೇರ್‌’ ಚಿತ್ರದಿಂದಾಗಿ ಅರ್ಜುನ್‌ ಕಪೂರ್‌ ಜೊತೆ ಇವಳ ಅಫೇರ್‌ ನಡೆಯುತ್ತಿದೆ ಎಂದು ಎಲ್ಲೆಡೆ ಸುದ್ದಿ ಹರಡಿದೆ. ಅದಕ್ಕೆ ಮುಂಚೆ `ಆರ್‌. ರಾಜ್‌ಕುಮಾರ್‌’ ಚಿತ್ರದ ಶಾಹಿದ್‌ ಕಪೂರ್‌ ಜೊತೆ ಇವಳ ಹೆಸರು ತಗುಲಿಕೊಂಡಿತ್ತು. ಇದರ ಬಗ್ಗೆ ಕೇಳಿದರೆ ಸಿಡುಕುವ ಸೋನಾಕ್ಷಿ, “ಇಂಥ ಗಾಳಿ ಸುದ್ದಿಗಳಿಗೆಲ್ಲ ಕ್ಯಾರೇ ಎನ್ನುವವಳಲ್ಲ ನಾನು. ಇಂಥ ಮಾತುಗಳಿಗೆ ಪ್ರತಿಕ್ರಿಯ ವ್ಯಕ್ತಪಡಿಸುವವಳೂ ಅಲ್ಲ. ಯಾರ ಜೊತೆಯಲ್ಲಾದರೂ ರೆಸ್ಟೋರೆಂಟ್‌ಗೆ ಅಥವಾ ಸಿನಿಮಾಗೆ ಹೋದರೆ ಅಷ್ಟಕ್ಕೇ ಅಫೇರ್‌ ಹಣೆಪಟ್ಟಿ ಕಟ್ಟಿಬಿಡುವುದೇ? ಮೈ ಫುಟ್‌!”

ದೇವದಾಸ್ಗೀಗ ಹೊಸ ಪಾರೋ

ಬಾಲಿವುಡ್‌ನಲ್ಲಿ ದೇವದಾಸ್‌ ಕುರಿತಂತೆ ಚಿತ್ರಗಳು ಬರುತ್ತಲೇ ಇರುತ್ತವೆ. ಇತ್ತೀಚೆಗೆ ನಿರ್ಮಾಣಗೊಳ್ಳುತ್ತಿರುವ ಹೊಸ ಅವತಾರಕ್ಕೆ ನಿರ್ದೇಶಕ ಸುಧೀರ್‌ ಮಿಶ್ರಾ `ಔರ್‌ ದೇವದಾಸ್‌’ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದಲ್ಲಿ ಅದಿತಿ ಪಾರೋಳ ಪಾತ್ರ ನಿರ್ವಹಿಸುತ್ತಿದ್ದಾಳೆ. `ಬಾಸ್‌’ ಚಿತ್ರದ ಬಿಕಿನಿ ಸೀನ್‌ ದೃಶ್ಯದಿಂದ ರಾತ್ರೋರಾತ್ರಿ ಮೋಸ್ಟ್ ಗ್ಲಾಮರಸ್‌ ಎಂದು ಗುರುತಿಸಲ್ಪಟ್ಟ ಅದಿತಿ, ಇಲ್ಲಿ ನಾಯಕಿಯಾಗಿದ್ದಾಳೆ. ಪ್ರತಿ ಸಣ್ಣಪುಟ್ಟ ಈವೆಟ್‌ನಲ್ಲೂ ಕಾಣಿಸಿಕೊಳ್ಳುವ ಅದಿತಿಯನ್ನು ಪತ್ರಕರ್ತರು ಇಂದಿನ ಮಹಿಳೆ ಎಷ್ಟು ಸುರಕ್ಷಿತೆ ಎಂದು ಪ್ರಶ್ನಿಸಿದಾಗ, ನಮ್ಮ ದೇಶದಲ್ಲಿ ಮಹಿಳೆ ಎಲ್ಲೂ ಸುರಕ್ಷಿತಳಲ್ಲ ಬಿಡಿ, ಎಂದಳು. ಇಲ್ಲಿ ಹೆಣ್ಣನ್ನು ಹೇಗೆ ಬೆಳೆಸಲಾಗುತ್ತದೆ ಎಂದರೆ, ಅತ್ಯಾಚಾರದಂಥ ಅತಿರೇಕದ ಪ್ರಸಂಗ ನಡೆದರೆ ಯಾವ ಅತಿಶಯ ಇಲ್ಲ. ಹುಡುಗರ ರೋಗಿಷ್ಟ ಮಾನಸಿಕತೆಗೆ ಕಾರಣ, ಹೆಣ್ಣುಮಕ್ಕಳ ಕಡೆ ಅವರಿಗಿರುವ ದುರಭಿಪ್ರಾಯ. ಇಂಥ ಪಾಪಿ ಯಾವ ವಯಸ್ಸಿನವನೇ ಆದರೂ, ಅವನಿಗೆ ಕಠಿಣಾತಿ ಕಠಿಣ ಸಜೆ ವಿಧಿಸಬೇಕು ಎನ್ನುತ್ತಾಳೆ.

ಅಕ್ಷಯ್ಗೆ ನ್ಯಾಚುರ್ಬಾಡಿಯೇ ಇಷ್ಟ

ಬಾಲಿವುಡ್‌ನ ಸ್ಟಂಟ್‌ ಕುಮಾರ್‌ ಯಾನೇ ಅಕ್ಷಯ್‌ ಕುಮಾರ್‌ ಹೇಳುವುದೆಂದರೆ, ತಾನೆಂದೂ ತನ್ನ ಬಾಡಿ ಎಕ್ಸ್ ಪೋಸ್‌ಮಾಡಿಕೊಳ್ಳಲು ಬಯಸುವುದಿಲ್ಲವಂತೆ., ಏಕೆಂದರೆ ಅವನಿಗೆ ನ್ಯಾಚುರಲ್ ಬಾಡಿಯೇ ಇಷ್ಟವಂತೆ. ಬಾಲಿವುಡ್‌ನಲ್ಲಿ ಈಗ ಆ್ಯಬ್ಸ್ ತಾನೇ ಮುಖ್ಯ ಎಂದರೆ, ಅದನ್ನು ಸಾಧಿಸಲು ಬಹಳ ಟೈಂ ಬೇಕು. ಹಾಗೇ ಓಡಾಡಿಕೊಂಡು ಆ್ಯಬ್ಸ್ ಹೊಂದಲು ಸಾಧ್ಯವಿಲ್ಲ. ನಾನು 6 ಅಥವಾ 8 ಪ್ಯಾಕ್ಸ್ ಸಪೋರ್ಟರ್‌ ಅಲ್ಲ. ಬಹಳ ಜನ ಆ್ಯಬ್ಸ್ ಗಾಗಿ ಏನೇನೋ ಹೆಲ್ತ್ ಪ್ರಾಡಕ್ಟ್ಸ್ ಸೇವಿಸುತ್ತಾರೆ. ಶುರುವಿನಲ್ಲಿ ಎಲ್ಲಾ ಚೆಂದ ಎನಿಸಿದ್ದು ಆಮೇಲೆ ಅದರ ಸೈಡ್‌ ಎಫೆಕ್ಟ್ಸ್ ನಿಂದ ತತ್ತರಿಸುವಂತಾಗುತ್ತದೆ. ಈ ತಿಂಗಳು ತೆರೆಕಾಣಲಿರುವ `ಬೇಬಿ’ ಚಿತ್ರದಲ್ಲಿ ಈತನದು ಇಂಟೆಲಿಜೆನ್ಸ್ ಇನ್‌ಸ್ಪೆಕ್ಟರ್‌ ಪಾತ್ರ.

ಹಿರಿಯರ ಅವಸರಕ್ಕಾಗಿ ಮದುವೆ

ಇತ್ತೀಚೆಗಷ್ಟೇ ತೆರೆಕಂಡು ತೋಪೆದ್ದು ಹೋದ ತನ್ನ `ಚಾರ್‌ ಪಟಿಯಾ ಛೋಕ್ರೆ’ ಚಿತ್ರದ ಕುರಿತಾಗಿ ಸೋಹಾಳಿಗೆ ಬಹಳ ವಿಷಾದವಿದೆ. ನಾನಂತೂ ನನ್ನ ಕಡೆಯಿಂದ ಬೆಸ್ಟ್ ಪರ್ಫಾರ್ಮೆನ್ಸ್ ಕೊಡುತ್ತೇನೆ ಆದರೆ ಪ್ರೇಕ್ಷಕರು ಏನು ಬಯಸುತ್ತಾರೆ ಎಂದು ತಿಳಿಯಲು ಯಾವುದೇ ಸಿದ್ಧಸೂತ್ರಗಳಿಲ್ಲ. ಏನು ಮಾಡಲಿ? ತನ್ನ ಬಾಯ್‌ ಫ್ರೆಂಡ್‌ ಕುನಾಲ್ ‌ಜೊತೆ ಗುಟ್ಟಾಗಿ ಎಂಗೇಜ್‌ಮೆಂಟ್‌ಮುಗಿಸಿಕೊಂಡಿದ್ದ ಸೋಹಾ, ಇದೇ ತಿಂಗಳಲ್ಲಿ ಆತನನ್ನು ಮದುವೆಯಾಗುತ್ತಿದ್ದಾಳೆ. ಇದೇನು ಇಷ್ಟು ಅವಸರದಲ್ಲಿ ಮದುವೆ ಎಂದರೆ, ನಮಗಲ್ಲ, ನಮ್ಮ ಹಿರಿಯರಿಗೆ ಮೊಮ್ಮಕ್ಕಳನ್ನು ಕೈಗೆತ್ತಿಕೊಳ್ಳುವ ಆತುರ ಎನ್ನುತ್ತಾರೆ.

ಹುಡುಗನ ಸ್ಟೈಲೇ ಬೇರೆ

ತನ್ನ ಕೆರಿಯರ್‌ ಶುರುವಾದ 2 ವರ್ಷಗಳ ನಂತರ ತಂದೆಯ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅರ್ಜುನ್‌ ಕಪೂರ್‌ ವಿಭಿನ್ನ ಗೆಟಪ್‌ನಲ್ಲಿ ಇಲ್ಲಿ ಮಿಂಚಲಿದ್ದಾನಂತೆ. ಇಷ್ಟು ದಿನಗಳಾದ ಮೇಲೆ ತಂದೆಯ ಚಿತ್ರಕ್ಕೆ ಸಹಿ ಮಾಡಿದ್ದಕ್ಕೆ ಅರ್ಜುನ್‌ ಹೇಳುವುದೆಂದರೆ, ನಾನು ಹೋಂ ಪ್ರೊಡಕ್ಷನ್ಸ್ ನಲ್ಲಿ ನಟಿಸಲು ಲಾಯಕ್‌ ಹೌದೋ ಅಲ್ಲವೋ ತಿಳಿಯಲು ನನ್ನನ್ನೇ ಪರೀಕ್ಷಿಸಿಕೊಳ್ಳುತ್ತಿದ್ದೆ. ಇದು ಅಪ್ಪನ ಚಿತ್ರವಾದ್ದರಿಂದ ಹೆಚ್ಚು ಚೆನ್ನಾಗಿ ನಟಿಸಬೇಕು ಎಂಬಂಥ ಮನೋಭಾವ ನನ್ನದಲ್ಲ. ಒಬ್ಬ ಕಲಾವಿದನಾಗಿ ನಾನು ಎಲ್ಲಾ ಪಾತ್ರಗಳನ್ನೂ ಚೆನ್ನಾಗಿ ನಿರ್ವಹಿಸಲು ಬಯಸುತ್ತೇನೆ. ಇದು ನಮ್ಮದೇ ಬ್ಯಾನರ್‌ ಆದ್ದರಿಂದ ನನಗೆ ಹೆಚ್ಚು ಸೆಂಟಿಮೆಂಟ್ಸ್ ಇರುವುದು ಸಹಜ. ಚಿತ್ರದ ಕಥೆ ಮಾಮೂಲಿ ಲವ್ ಸ್ಟೋರಿ ಅಲ್ಲ. ಈ ಚಿತ್ರದ ನಿರ್ದೇಶಕ ಅಮಿತ್‌ ಶರ್ಮ, ಉತ್ತರ ಪ್ರದೇಶದವರು. ಹೀಗಾಗಿ ಅಲ್ಲಿನ ಮ್ಯಾನರಿಸಂ, ಉಚ್ಚಾರಣೆ ಕಲಿಸಿದರು. ಅಲ್ಲಿನ ನೇಟಿವಿಟಿಗೆ ಹೆಚ್ಚು ಒತ್ತುಕೊಡಲಾಗಿದೆ. ಇಲ್ಲಿನ ನನ್ನ ಸ್ಟೈಲ್ ‌ ಹೇಗಿದೆ ಎಂಬುದನ್ನು ಚಿತ್ರ ನೋಡಿ ಪ್ರೇಕ್ಷಕರೇ ನಿರ್ಧರಿಸಬೇಕಷ್ಟೇ ಎನ್ನುತ್ತಾನೆ.

ವರುಣ್ ರಫ್‌& ಟಫ್ಅವತಾರ

ವರುಣ್‌ ಎಂದಿನ ತನ್ನ ಲವರ್‌ ಬಾಯ್‌ ಲುಕ್ಸ್ ಬಿಟ್ಟುಕೊಟ್ಟು ರಫ್‌& ಟಫ್‌ ಅವತಾರದಲ್ಲಿ ಕಾಣಿಸಲಿದ್ದಾನೆ. ತನ್ನ ಮುಂದಿನ `ಬದಾಪುರ್‌’ ಚಿತ್ರದಲ್ಲಿ ವರುಣ್‌ ಈ ತರಹ ಕಾಣಿಸಲಿದ್ದಾನೆ. ಈ ಚಿತ್ರ ತನ್ನ ಕೆರಿಯರ್‌ಗೆ ಒಂದು ಟರ್ನಿಂಗ್‌ ಪಾಯಿಂಟ್‌. ಫೆಬ್ರವರಿಯಲ್ಲಿ ತೆರೆಕಾಣಲಿರುವ ಈ ಚಿತ್ರದಲ್ಲಿ ವರುಣ್‌ಗೆ ಟೋಟಲಿ ಡಿಫರೆಂಟ್‌ ಪಾತ್ರ. ಮೀಸೆ ಗಡ್ಡಧಾರಿಯಾಗಿ ಸದಾ ಕೋಪದಲ್ಲಿ ಸಿಡುಕು ಇವನಿಗೆ ಸಾಕಷ್ಟು ಆ್ಯಕ್ಷನ್‌ ಸೀನ್ಸ್ ಇವೆಯಂತೆ. ವರುಣ್‌ ಜೊತೆ ಇದರಲ್ಲಿ ನಾಜರುದ್ದೀನ್‌ ಸಿದ್ದಿಕಿ, ಹುಮಾ ಕುರೇಶಿ, ಯಾಮಿ ಗೌತಮ್, ರಾಧಿಕಾ ಆಪ್ಟೆ ಮುಂತಾದವರಿದ್ದಾರೆ.

ಮಂಜರಿಯ ವಾಹ್ತಾಜ್

`ರೋಕ್‌ ಸಕೋ ತೋ ರೋಕ್‌ ಲೋ’ ಚಿತ್ರದಿಂದ ತನ್ನ ಫಿಲ್ಮ್ ಕೆರಿಯರ್‌ ಆರಂಭಿಸಿದ ಮಂಜರಿ ಹಿಂದಿ, ತಮಿಳು, ಬಂಗಾಳಿ ಸೇರಿದಂತೆ 14ಕ್ಕೂ ಹೆಚ್ಚು ಚಿತ್ರ ಪೂರೈಸಿದ್ದಾಳೆ. 2004ರಲ್ಲಿ ಬಾಲಿವುಡ್‌ಗೆ ಎಂಟ್ರಿ ನೀಡಿದ್ದ ಮಂಜರಿ ಕಳೆದ ವರ್ಷದ ಸೆಕ್ಸ್ ಕಾಮಿಡಿ `ಗ್ರ್ಯಾಂಡ್‌ ಮಸ್ತಿ’ ಚಿತ್ರದಿಂದ ಬಿಸಿ ಬಿಸಿ ಚರ್ಚೆಯಲ್ಲಿದ್ದಳು. ಈಕೆ ಇಷ್ಟರಲ್ಲಿ ಅಜಿತ್‌ ಸಿನ್ಹಾರ `ವಾಹ್‌ ತಾಜ್‌’ ಚಿತ್ರದಲ್ಲಿ ಕಾಣಿಸಲಿದ್ದಾಳೆ. ಶ್ರೇಯಸ್‌ ತಲ್ಪಡೆ, ಹೇಮಂತ್‌ ಪಾಂಡೆ ಮುಖ್ಯ ಪಾತ್ರದಲ್ಲಿರುವ ಈ ಚಿತ್ರ ತೆರೆಗೆ ಸಿದ್ಧವಾಗಿದೆ.

ಇವರೂ ಸುರಕ್ಷಿತರಲ್ಲ

ಒಂದು ರಿಯಾಲಿಟಿ ಶೋನಲ್ಲಿ ಗೌಹರ್‌ ಖಾನ್‌ಗೆ ಕೋಸ್ಟಾರ್‌ನಿಂದ ಕೆನ್ನೆಗೆ ಬಾರಿಸಲ್ಪಟ್ಟಾಗ, ಇಂಡಸ್ಟ್ರೀಯ ಎಲ್ಲಾ ಕಲಾವಿದರೂ ತಮ್ಮ ಆತಂಕ ವ್ಯಕ್ತಪಡಿಸಿದರು. ಒಂದು ಪ್ರೆಸ್‌ ಕಾನ್‌ಫರೆನ್ಸ್ ನಲ್ಲಿ ಈಕೆ, ಪೆಟ್ಟು ಬಿದ್ದ ನಂತರ ಕೆನ್ನೆ ಊದಿ ಕೆಂಪಾಯಿತು ಎಂದು ತೋರಿಸಿದಳು. ಇಂಥ ಅವತಾರದಲ್ಲಿ ನಾನು ಹೊರಗೆಲ್ಲಿ ಓಡಾಡಲಿ ಎಂದು ಪತ್ರಕರ್ತರನ್ನು ಕೇಳಿದಳು. ಇಂಥ ಉರಿ ಉರಿಯುವ ಚರ್ಮ ಹೊತ್ತು ಹೇಗೆ ಮೇಕಪ್‌ ಮಾಡಿಸಲಿ? ಹೇಗೆ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿ ಎಂದು ಅಹವಾಲು ತೋಡಿಕೊಂಡಳು. ನಾನು ಆತನಿಗೆ ತಕ್ಕ ಪಾಠ ಕಲಿಸುತ್ತೇನೆ ಎನ್ನುತ್ತಾಳೆ. ಹೀಗೆ ಸೆಲೆಬ್ರಿಟಿಗಳ ಪೈಕಿ ಗೌಹರ್‌ ಖಾನ್‌ ಒಬ್ಬಳೇ ಹೊಡೆಸಿಕೊಂಡು ಅಪಮಾನ ಸಹಿಸಿದವಳಲ್ಲ. ಈ ತರಹ ಪ್ರಖ್ಯಾತರಾದ ಬೇರೆಯವರೂ ಇದ್ದಾರೆ. ಅಮೀಷಾ ಪಟೇಲ್ ‌ಒಂದು ಜ್ಯೂವೆಲರಿ ಶೋರೂಮಿನ ಲಾಂಚಿಂಗ್‌ಗಾಗಿ ಗೋರಖ್‌ ಪುರ್‌ಗೆ ಹೋಗಿದ್ದಳು. ಅವಳನ್ನು ನೋಡಲೆಂದು ಹೊರಗೆ ಅಪಾರ ಅಭಿಮಾನಿಗಳು ತುಂಬಿದ್ದರು. ಅವರ ಮಧ್ಯೆ ನುಸುಳಿಕೊಂಡು ಆಕೆ ಶೋರೂಂ ಕಡೆ ನಡೆಯುತ್ತಿದ್ದಾಗ ಒಬ್ಬ ಯುವಕ ಬೇಕೆಂದೇ ಅವಳನ್ನು ಸ್ಪರ್ಶಿಸಲು ಇನ್ನಿಲ್ಲದ ಹುನ್ನಾರ ನಡೆಸಿದ್ದ. ಕೋಪಗೋಂಡು ಸಿಡಿದ ಈಕೆ ಅಲ್ಲೇ ಅವನ ಕೆನ್ನೆಗೆ ಬಾರಿಸಿದಳು.

ಕೋಲ್ಕತಾದಲ್ಲಿ 2005ರಲ್ಲಿ ಇಂಥದೇ ಒಂದು ಸಂದರ್ಭದಲ್ಲಿ ಕತ್ರೀನಾ ಕೈಫ್‌ಗೆ, ಸೆಕ್ಯೂರಿಟಿ ಗಾರ್ಡ್ಸ್ ನ್ನೂ ತಳ್ಳಿಕೊಂಡು, ಕೆಲವು ಯುವಕರು ಇವಳ ಬಳಿ ಹದ್ದುಮೀರಿ ವರ್ತಿಸಲು ಯತ್ನಿಸಿದ್ದರು. ಬಿಪಾಶಾ ತನ್ನ `ರಾರ್‌’ ಚಿತ್ರದ ಪ್ರಮೋಶನ್‌ಗಾಗಿ ಅಹಮದಾಬಾದ್‌ಗೆ ಹೋಗಿದ್ದಾಗ, ಒಬ್ಬ ಬೇಕೆಂದೇ ಅವಳ ಸ್ಕರ್ಟ್‌ ಎಳೆಯಲು ಯತ್ನಿಸಿದ. ಇಷ್ಟಲ್ಲದೆ ನ್ಯೂಜೆರ್ಸಿಯಲ್ಲೂ ಆಕೆ ಇಂಥದೇ ಇಕ್ಕಟ್ಟಿಗೆ ಸಿಲುಕಿದ್ದಳು.

ಆಲಿಯಾಳ ಹೊಸ ಐಡಿಯಾ

ಸೋನಾಕ್ಷಿ ತರಹವೇ ಈಗ ಆಲಿಯಾ ಭಟ್‌ ಸಹ ತನ್ನ ವಯೋಮಾನದ ಹೀರೋಗಳಿಗಿಂತ ಹಿರಿಯ ಹೀರೋಗಳ ಜೊತೆ ನಟಿಸಲು ಶುರು ಮಾಡಿದ್ದಾಳೆ. ಆಲಿಯಾ ತನ್ನ ಮುಂದಿನ ಚಿತ್ರಗಳಲ್ಲಿ ಶಾಹಿದ್‌, ರಣಬೀರ್‌ ಕಪೂರರ ಜೊತೆ ನಟಿಸಲಿದ್ದಾಳೆ. ಇದರಲ್ಲಿ ಒಂದು ಚಿತ್ರದ ನಿರ್ದೇಶಕರು ವಿಕಾಸ್‌ ಬೆಹ್‌ ಆದರೆ, ಮತ್ತೊಂದು ಅಯಾನ್‌ ಮುಖರ್ಜಿ. ಹಾಗಿಯೇ ಸುಶಾಂತ್‌ ಸಿಂಗ್‌ರಾಜ್‌ಪೂತ್‌ ಜೊತೆ ಸಹ ಇವಳು ನಟಿಸುತ್ತಿದ್ದಾಳೆ. ಆದರೆ ಈ ಕುರಿತು ಆಕೆ ಹೆಚ್ಚಿಗೇನೂ ಹೇಳುತ್ತಿಲ್ಲ. ರಣಬೀರ್‌ ಜೊತೆ ನಟಿಸುವುದರ ಕುರಿತಾಗಿ ಆಕೆ ಹೆಮ್ಮೆಯಿಂದ ಬೀಗುತ್ತಾ, ತನ್ನ ಫೇವರಿಟ್‌ ಹೀರೋ ಜೊತೆ ನಟಿಸುತ್ತಿದ್ದೇನೆ ಎನ್ನುತ್ತಾಳೆ. ಸದ್ಯ ಶಾನ್‌ದಾರ್‌, ರಾಕ್‌ ಆನ್‌ ಚಿತ್ರಗಳಲ್ಲಿ ನಟಿಸುತ್ತಿರುವ ಈಕೆ ಅವುಗಳಲ್ಲಿ ಹಾಡನ್ನೂ ಹಾಡಿದ್ದಾಳಂತೆ.

ಜೀನ ಅಂಗೂರ್ಚಿತ್ರದಂತಿತ್ತು

ಬಾಲಿವುಡ್‌ನಲ್ಲಿ ಮೊದಲಿನಿಂದಲೂ ಕಾಮಿಡಿಗೇನೂ ಕೊರತೆಯಿಲ್ಲ. ಒಂದು ವರ್ಗದಲ್ಲಿ ಚುರುಕಾದ ಕಚಗುಳಿ ಇಡುವ ಡೈಲಾಗ್‌ನಿಂದ ಜನ ನಕ್ಕರೆ, ಮತ್ತೊಂದು ವರ್ಗದಲ್ಲಿ ಹಾಸ್ಯನಟರ ಮ್ಯಾನರಿಸಂ, ಬಾಡಿ ಲ್ಯಾಂಗ್ವೇಜ್‌ ಜನರನ್ನು ನಗಿಸುತ್ತದೆ. ದೇನ್‌ ವರ್ಮ ಎರಡನೇ ಗುಂಪಿಗೆ ಸೇರಿದರು. ಆತ ಎಂದೂ ತಮ್ಮ ಸೀನಿಯರ್‌ ಕಾಮಿಡಿಯನ್‌ರನ್ನು ಅನುಕರಿಸಲು ಹೋದವರಲ್ಲ. ಅವರು ಇದೇ ನಿಟ್ಟಿನಲ್ಲಿ ಬೆಳೆದು ವ್ಯಾಪಿಸಿಕೊಂಡರು. 1937ರಲ್ಲಿ ಪುಣೆಯಲ್ಲಿ ಹುಟ್ಟಿದ ದೇವನ್‌ ವರ್ಮ ಅಲ್ಲೇ ಸ್ನಾತಕೊತ್ತರ ಶಿಕ್ಷಣ ಪಡೆದರು. 1959ರಲ್ಲಿ ಮುಂಬೈಗೆ ಬಂದ ಅವರು ತಮ್ಮ ಕೆರಿಯರ್‌ ಆರಂಭಿಸಿದರು, ಮುಂದೆ ಅಶೋಕ್‌ ಕುಮಾರ್‌ರ ಮಗಳು ರೂಪಾ ಗಂಗೂಲಿಯನ್ನು ಮದುವೆಯಾದರು. ಇವರಿಗೆ 3 ಬಾರಿ ಬೆಸ್ಟ್ ಕಾಮಿಡಿಯನ್‌ ಫಿಲ್ಮ್ ಫೇರ್‌ ಅವಾರ್ಡ್‌ ಲಭಿಸಿದೆ. 1951ರಲ್ಲಿ `ಧರ್ಮಪುತ್‌್ರ’ ಚಿತ್ರದಿಂದ ತಮ್ಮ ಪಯಣ ಅರಂಭಿಸಿದ ದೇನ್‌, 1964ರ `ಸುಹಾಗನ್‌’ ಚಿತ್ರದಿಂದ ಎಲ್ಲರ ಗಮನಸೆಳೆದರು. `ದೇನ್‌’ ಚಿತ್ರದಲ್ಲಿ  ಖಳನಟನಾದರೂ, `ಮೊಹಬ್ಬತ್‌ ಜಿಂದಗಿ ಹೈ’ನಲ್ಲಿ ಮತ್ತೆ ಕಾಮಿಡಿಯನ್‌. ಮುಂದೆ ಗೋಲ್‌ಮಾಲ್‌, ಅಂಗೂರ್‌, ರಂಗ್‌ಬಿರಂಗಿ ಮುಂತಾಗಿ ಸಾಲುಸಾಲು ಚಿತ್ರಗಳಾದವು. ಇಷ್ಟು ಮಾತ್ರವಲ್ಲದೆ ಇವರು ಎಷ್ಟೋ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿದ್ದರು. ಕಾಮಿಡಿಗೆ ಎಂದು ಅಶ್ಲೀಲತೆ ಬೆರೆಸದೆ ಈ ಉನ್ನತ ವ್ಯಕ್ತಿ ತಮ್ಮ ಸಂಭಾಷಣಾ ವೈಖರಿಯಿಂದ ಜನರ ಮನದಲ್ಲಿ ಶಾಶ್ವತ ಸ್ಥಾನ ಪಡೆದವರು ನಟನೆ ಜೊತೆಗೆ ನಿರ್ದೇಶನಕ್ಕೂ ಕೈಹಾಕಿದಾಗ ಅವರು ಯಶಸ್ಸು ಕಾಣಲಿಲ್ಲ. ಕಳೆದ ತಿಂಗಳಷ್ಟೇ ತೀರಿಕೊಂಡ ಈ ಮಹಾನ್‌ ಹಾಸ್ಯನಟನಿಗೆ ಚಿತ್ರಶೋಭಾ ಅಶ್ರುಪೂರಿತ ಶ್ರದ್ಧಾಂಜಲಿ ಅರ್ಪಿಸುತ್ತಾಳೆ.

ಬ್ಯಾಕ್ಲೆಸ್ ಜಾದೂ

ಒಂದೇ ವೇದಿಕೆಯ ಮೇಲೆ ನಿಮಗೆ ಬಾಲಿವುಡ್‌ನ ಎಲ್ಲಾ ನಕ್ಷತ್ರಗಳೂ ಮಿಂಚತೊಡಗಿದರೆ, ಆ ಕಾರ್ಯಕ್ರಮದ ಆಹ್ಲಾದಕತೆ ವರ್ಣಿಸಲು ಸಾಧ್ಯವೇ? ಇತ್ತೀಚೆಗೆ ಮುಂಬೈನಲ್ಲಿ `ಗ್ರೇ ಗೂಸ್‌ ಇಂಡಿಯಾಸ್‌ ಫ್ಲೈ ಬಿಯಾಂಡ್‌’ ಅವಾರ್ಡ್‌ ಶೋನಲ್ಲಿ ಬಾಲಿವುಡ್‌ನ ಎಲ್ಲಾ ತಾರೆಯರೂ ಒಟ್ಟುಗೂಡಿದ್ದರು. ಆದರೆ ಬೇಗಂ ಕರೀನಾ ಕಪೂರ್‌ಖಾನ್‌, ಲೀಸಾ ಹೇಡನ್‌ರಂಥ ಸುಂದರಿಯರನ್ನು ಬಿಟ್ಟು ಜನ ಅಪರೂಪಕ್ಕೊಮ್ಮೆ ಮೈಕಾ ಅರೋರಾರಂಥ ಗ್ಲಾಮರಸ್‌ ಗೊಂಬೆಗಳನ್ನೂ ನೋಡುತ್ತಿದ್ದರು. ಕಾರಣವಿಷ್ಟೆ, ಈ ಬೆಡಗಿಯರು ಧರಿಸಿದ ಬ್ಯಾಕ್‌ ಲೆಸ್‌ ಈವ್ನಿಂಗ್‌ ಗೌನ್‌. ಫೋಟೋ ನೋಡಿ ಉಳಿದಿದ್ದನ್ನು ನೀವೇ ಊಹಿಸಿಕೊಳ್ಳಿ.

ಚಳಿಗೆ ಹೆದರುವವರಾರು?

ಆ್ಯಕ್ಟಿಂಗ್‌ ಎಂಬುದು ಎಂಥ ಹುಚ್ಚಾಗುತ್ತದೆ ಎಂಬುದನ್ನು ಯಾಮಿಯನ್ನು ನೋಡಿದವರಿಗೆ ತಿಳಿಯುತ್ತದೆ. ಆಕೆಯ ಅತಿಯಾದ ಶ್ವೇತ ವರ್ಣದಿಂದಾಗಿ ಸೋಶಿಯಲ್ ನೆಟ್‌ವರ್ಕ್‌ನಲ್ಲಿ ಯಾಮಿ ಬಗ್ಗೆ ಇಲ್ಲದ ಜೋಕೇ ಇಲ್ಲ. ಯಾಕಾದರೂ ಫೇರ್‌ನೆಸ್‌ ಕ್ರೀಮಿಗೆ ಮಾಡೆಲ್ ‌ಆದೆನೋ? ಎಂದು ನಾಚಿಕೆಯಿಂದ ಕೆಂಪಾದ ಇವಳು, ಜನರ ಹೃದಯ ಗೆಲ್ಲಲೆಂದೇ `ಜುನೂನಿಯತ್‌’ ಚಿತ್ರಕ್ಕಾಗಿ ಕಾಶ್ಮೀರದ ಕೊರೆಯುವ 10 ಚಳಿಯಲ್ಲೂ ಗಡಗಡ ನಡುಗುತ್ತಾ ನಿರ್ದೇಶಕರಿಂದ ಸೈ ಎನಿಸಿದ್ದಾಳೆ. ಅಲ್ಲಿನ ನಿಶಾತ್‌ ಬಾಗ್‌ ಎಂಬಲ್ಲಿ ಸುರಿ ಮಂಜಿನ ಮಧ್ಯೆ ಬಿಳಿ ಸಲ್ವಾರ್‌ ಕಮೀಜ್‌ ಧರಿಸಿ ಈಕೆ ಶೂಟಿಂಗ್‌ ಪೂರೈಸಿದಳು. ಇಂಥ ಚಳಿಯಲ್ಲೂ ಸಹನೆ ಕಳೆದುಕೊಳ್ಳದೇ ನಸುನಗುತ್ತಾ ಕ್ಯಾಮೆರಾ ಎದುರಿಸಿದಳು. ಶೂಟಿಂಗ್‌ ಮುಗಿದ ತಕ್ಷಣ ಕಂಬಳಿ ಹೊದ್ದುಕೊಂಡರೂ ನಡುಕ ನಿಲ್ಲದಾಗ, ಕುದಿ ನೀರನ್ನು ಕುಡಿಸಿದರಂತೆ. ಯಾಮಿಯ ಈ ಚಿತ್ರ ಗೆಲ್ಲಲೇಬೇಕೆಂದು ಎಲ್ಲರೂ ಹಾರೈಸಿದರಂತೆ, ಆಲ್ ದಿ ಬೆಸ್ಟ್ ವೈಟಿ ಯಾಮಿ!

ಇದಕ್ಕೆ ಅಮಿತಾಬ್ ಏನಂತಾರೆ?

ಒಂದು ಚರ್ಚೆಯಲ್ಲಿ ನಾಸಿರುದ್ದೀನ್‌ ಶಾ, ತಾವು ಅಮಿತಾಬ್ ‌ಬಚ್ಚನ್‌ರನ್ನು ದಿಲೀಪ್‌ ಕುಮಾರ್‌ಗಿಂತಲೂ ಮೇರು ನಟರೆಂದೇ ಭಾವಿಸುವುದಾಗಿ ಹೇಳಿದರು. ಅದು ಏಕೆಂದರೆ ದಿಲೀಪ್‌ರಂಥ ದಿಗ್ಗಜರಿಗೆ ಅಮಿತ್‌ರ ಚಿತ್ರಗಳನ್ನು ಮಾತ್ರ ಹೋಲಿಸಲು ಸಾಧ್ಯ. ಇಷ್ಟಾದರೂ ಇವರ ಪ್ರಕಾರ ಬಾಲಿವುಡ್‌ಗೆ ದಿಲೀಪ್‌ರ ಕೊಡುಗೆ ಎಲ್ಲರಿಗಿಂತ ಹಿರಿದಂತೆ. ಬಿಮಲ್ ರಾಯ್‌ರಂಥ ಕ್ಲಾಸಿಕ್‌ನಿರ್ದೇಶಕರ ಚಿತ್ರಗಳನ್ನು ಸಾಮಾನ್ಯ ಜನತೆ ಬಳಿ ಕೊಂಡೊಯ್ಯುವಲ್ಲಿ ದಿಲೀಪ್‌ರ ಪಾತ್ರ ಹಿರಿದು ಎನ್ನುತ್ತಾರೆ. ಆ ರೀತಿ ಅವರ ಕೊಡುಗೆ ಹೆಚ್ಚು ಎನ್ನುತ್ತಾರೆ. ಅಷ್ಟೆಲ್ಲ ಪ್ರಭಾವಶಾಲಿಗಳಾಗಿದ್ದರೂ ಅಮಿತಾಬ್ ‌ಹಿಂದಿ ಚಿತ್ರೋದ್ಯಮಕ್ಕೆ ಈವರೆಗೂ ಹೇಳಿಕೊಳ್ಳುವಂಥ ವಿಶೇಷವೇನೂ ಮಾಡಿಲ್ಲ ಎನ್ನುತ್ತಾರೆ. ಅವರು ಬಯಸಿದ್ದರೆ ಚಿತ್ರೋದ್ಯಮದಲ್ಲಿ ಏನಾದರೂ ಸಕಾರಾತ್ಮಕ ಬದಲಾವಣೆ ತರಬಹುದಿತ್ತು, ಅದರ ದಿಕ್ಕನ್ನೇ ಬದಲಿಸಬಹುದಿತ್ತು, ಆದರೂ ಏನೂ ಮಾಡಲಿಲ್ಲ. ಅಮಿತಾಬ್ ಕೇವಲ ಮಾಸ್‌ ಪ್ರಿಯ ಪಾಪ್‌ಕಾರ್ನ್‌ ಚಿತ್ರಗಳನ್ನಷ್ಟೇ ಮಾಡಿದರೆ ಹೊರತು ಬೇರೇನೂ ಮಾಡಲಿಲ್ಲ. ಆದರೂ ಅವರ ಮಹಾನ್‌ ನಟನೆಗೆ ಎರಡು ಹೇಳಲಾಗದು ಎನ್ನುತ್ತಾರೆ. ನೀವೇನಂತೀರಿ ಅಮಿತ್‌ಜಿ? ಬಚ್ಚನ್‌ ಪರಿವಾರಕ್ಕೆ ಮಮತೆಯ ಶ್ರೀರಕ್ಷೆ ಕೋಲ್ಕತಾದಲ್ಲಿ ಬಿಗ್‌ ಬಿ `ಪೀಕು’ ಚಿತ್ರದ ಶೂಟಿಂಗ್‌ ಶುರು ಮಾಡಿದಾಗಿನಿಂದ, ಅವರು ಮಮತಾ ಬ್ಯಾನರ್ಜಿಯವರಿಗೆ ಪೆಟ್‌ ಆಗಿದ್ದಾರೆ. ಇತ್ತೀಚೆಗಷ್ಟೇ ಈ ದೀದೀ ಅಮಿತಾಬ್‌, ಶಾರೂಖ್‌ರೊಂದಿಗೆ ಕೋಲ್ಕತಾದ ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ `ಗೋಲ್ಡನ್‌ ರಾಯ್‌ ಬೆಂಗಾಲ್ ‌ಟ್ರೋಫಿ’ಯನ್ನು ಅನಾರಣಗೊಳಿಸಿದ್ದರು. ಇದ್ದಕ್ಕಾಗಿ ಅಮಿತಾಬ್ ‌ರ ಇಡೀ ಕುಟುಂಬ ಆಗಮಿಸಿತ್ತು. ಈ ಸಂದರ್ಭದಲ್ಲಿ, ಲಂಡನ್ನಿನ ಮೇಡಂ ಟುಸಾಡ್‌ ಸಂಗ್ರಹಾಲಯದಂತೆಯೇ ಕೋಲ್ಕತಾದಲ್ಲಿ ಆಗಿರುವ ಮೇಣದ ಸಂಗ್ರಹಾಲಯವನ್ನೂ ಉದ್ಘಾಟಿಸಲಾಯಿತು. ಆ ಸಂದರ್ಭದಲ್ಲಿ ದೀದೀ ಹಿಂದಿ ಚಿತ್ರಗಳೂ ಸಹ ಹೆಚ್ಚಾಗಿ ಪ. ಬಂಗಾಳದಲ್ಲೇ ಶೂಟಿಂಗ್‌ ನಡೆಸಬೇಕೆಂದು ಆಗ್ರಹಿಸಿದರು.

ನಚ್ಬಲಿಯೇ ಹೊಸ ಸೀಸನ್

ಜನಪ್ರಿಯ ಡ್ಯಾನ್ಸ್ ಸೀಕ್ವೆನ್‌ `ನಚ್‌ ಬಲಿಯೇ-7’ನ ಸೀಸನ್‌ ಶುರುವಾಗಿದೆ. ಇದು ಹಿಂದೆಲ್ಲದಕ್ಕಿಂತ ಹೆಚ್ಚು ರೋಮಾಂಚನ ಉಂಟು ಮಾಡಲಿದೆ. ಮತ್ತೊಂದು ಹೊಸ ಸುದ್ದಿ ಎಂದರೆ, ಈ ಶೋನ ಸಹನಿರ್ಮಾಪಕಿ ಏಕ್ತಾ ಕಪೂರ್‌ ಆಗಲಿದ್ದಾಳಂತೆ! ಕಪ್‌ಡ್ಯಾನ್ಸ್ ರಿಯಾಲಿಟಿ ಶೋ ಆಗಿರುವ ಇದನ್ನು ಹೆಚ್ಚೆಚ್ಚು ಗ್ಲಾಮರಸ್‌ಗೊಳಿಸಲು ನಿರ್ಮಾಪಕರು ಹಾಟ್‌ ಹಾಟ್‌ ಜೋಡಿಗಳನ್ನು ಹುಡುಕುತ್ತಿದ್ದಾರೆ. ಈಗಾಗಲೇ ಆಯ್ಕೆ ಶುರುವಾಗಿದೆ. ಇದರಲ್ಲಿ ಮೋಹಿನ್‌ ರೈನಾ, ಅವನ ಗರ್ಲ್ ಫ್ರೆಂಡ್‌ ಮೌನಿರಾಯ್‌, ಮೋಹಿತ್‌ ಸೆಹಗಲ್ ಸನಾಯಾ ಇರಾನಿ, ಜಯ್‌ ಸೋನಿ ಪೂಜಾ ಶಾ, ರುಸ್ಲಾನ್‌ ಮುಮ್ತಾಜ್‌ ನಿರಾಲಿ ಮೆಹ್ತಾ ಮುಂತಾದವರಿದ್ದಾರೆ.

ಪ್ರಾಸ್ಟಿಟ್ಯೂಟ್ಅಂದ್ರೆ ಬಿಟ್ಟೇನಾ?

ತನ್ನ ಬಾಯಿಬಡುಕತನದಿಂದ (ಕು)ಖ್ಯಾತಳಾದ ರಾಖಿ ಸಾವಂತ್‌ ಹಿಂದೂ ಮಹಾಸಭಾದ ಇತ್ತೀಚಿನ ಒಂದು ಟೀಕೆಯಿಂದ ಸಿಟ್ಟಿಗೆದ್ದಿದ್ದಾಳೆ. ಆ ಸಂಸ್ಥೆ ಎಲ್ಲಾ ಐಟಂ ಗರ್ಲ್ಸ್ ನ್ನೂ ಪ್ರಾಸ್ಟಿಟ್ಯೂಟ್ಸ್ ಎಂದಿತ್ತು. ನಮ್ಮಂಥ ಕಲಾವಿದೆಯರನ್ನು ತಮ್ಮ ತಂಗಿ ಮಗಳ ಸಮಾನ ಎಂದುಕೊಳ್ಳುವ ಬದಲು ಸೂಳೆಯರೆಂದಿರುವ ಈ ಸಂಸ್ಥೆಗೆ ನಾಚಿಕೆಯಾಗಬೇಕು. ಇಂಥವರನ್ನು ಕೊರಡೆಯಲ್ಲಿ ಥಳಿಸಿ, ತಲೆ ಬೋಳಿಸಿ, ಕತ್ತೆ ಮೇಲೆ ಮೆರವಣಿಗೆ ಮಾಡಿಸಿ, ಸೀದಾ ತಾಲಿಬಾನಿಗಟ್ಟಬೇಕು ಎಂದು ಗುಡುಗಿದ್ದಾಳೆ. ಬಾಲಿವುಡ್‌ನಲ್ಲಿ ಐಟಂ ಮಾಡದವರಾರು? ಕತ್ರೀನಾಳಿಂದ ಕರೀನಾವರೆಗೆ ಅದೇ ಏನು? ಎಂದು ಗುಡುಗಿದ ಈಕೆಯ ಪರಿಗೆ ಸಭಾ ಸುಸ್ತಾಗಿದೆ.

ದಾಂಪತ್ಯದಲ್ಲಿ ಬಿರುಕು

ಕಿರುಪರದೆಯ ಹಾಟ್‌ ಕಪಲ್ಸ್ ಎಂದೇ ಖ್ಯಾತರಾದ ಕರಣ್‌ ಜೆನಿಫರ್‌ ದಂಪತಿಗಳ ನಡುವೆ ಬಿರುಕು ಮೂಡಿದೆಯೇ? ಸದ್ಯಕ್ಕೆ ಇದು ಒಗಟಿನ ಪ್ರಶ್ನೆಯಾದರೂ ಮೀಡಿಯಾ ಇವರನ್ನು ಸಂಪರ್ಕಿಸಿದಾಗ ಇಬ್ಬರೂ ಉತ್ತರಿಸಲು ಮುಂದಾಗಲಿಲ್ಲ, ಮೀಡಿಯಾ ಕಣ್ತಪ್ಪಿಸಿ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ಅಷ್ಟರಲ್ಲಿ ಜೆನಿ ತನ್ನ ಟ್ವಿಟರ್‌ನಲ್ಲಿ, ತಮ್ಮಿಬ್ಬರ ನಡುವೆ ಯಾವ ಬಿರುಕೂ ಇಲ್ಲ, ಮದುವೆ ಮುರಿದುಬೀಳುವ ಸಂಭವವಿಲ್ಲ ಎಂದಿದ್ದಾಳೆ. ಆದರೆ ಕರಣ್‌ ನೋಡಿದರೆ ಅತ್ತ ಬಿಪಾಶಾಳ ಜೊತೆ ಸದಾ ಜುಹೂ ಬೀಚ್‌ನಲ್ಲಿ ಅಂಡಲೆಯುತ್ತಿದ್ದಾನಂತೆ! ಈ ಕುರಿತಾಗಿ ಬಿಪಾಶಾ ಸಹ ಕಮಕ್‌ ಕಿಮಕ್‌ ಎನ್ನುತ್ತಿಲ್ಲ. ಜೆನಿಯ ಆಶಯದಂತೆ ಅವಳ ಸಂಸಾರ ಉಳಿಯಲಿ, ಕರಣ್‌ಗೆ ಬೇಗ ಬುದ್ಧಿ ಬರಲಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ