– ರಾಘವೇಂದ್ರ ಅಡಿಗ ಎಚ್ಚೆನ್.
ಥೈಲೆಂಡ್ ನಲ್ಲಿ ಥೈ ಥೈ ಅಂತ ಡಾನ್ಸ್ ಮಾಡ್ತಿರೋ ದರ್ಶನ್.. ಬೆಂಗಳೂರಿನಲ್ಲಿ ಜೈ ಜೈ ಡಿ ಬಾಸ್ ಅಂತಿರೋ ಅಭಿಮಾನಿಗಳು. ಸದ್ಯ ಡೆವಿಲ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ಸಿನಿಮಾ ತಡವಾಗಿ ರಿಲೀಸ್ ಆದ್ರೂ ಸ್ವಗ್ ಲುಕ್ ನಲ್ಲಿ ದರ್ಶನ್ ‘ದರ್ಶನ’ ಕೊಟ್ಟಿದ್ದಾರೆ.. ದಚ್ಚು ಡೆವಿಲ್ ಲುಕ್ ಗೆ ಫ್ಯಾನ್ಸ್ ಏನು ಹೇಳಿದ್ದಾರೆ.. ಸೆಲೆಬ್ರಿಟಿಗಳಿಗೆ ದಾಸ ಕೊಟ್ಟಿರೋ ಸಂದೇಶವೇನು ಹ್ಯಾವ್ ಎ ಲುಕ್ ದಾಸ ದರ್ಶನ್ ನಟನೆಯ ಡೆವಿಲ್ ರಿಲೀಸ್ ಗೆ ಸಜ್ಜಾಗಿದೆ. ಶರವೇಗದಲ್ಲಿ ಶೂಟಿಂಗ್ ಮುಗಿಸ್ತಿರೋ ದರ್ಶನ್.. ಇನ್ನೆರಡು ತಿಂಗಳಲ್ಲಿ ಎನಿ ಕಂಡಿಷನ್ ಬೆಳ್ಳಿತೆರೆಯ ಮೇಲೆ ಅಬ್ಬರಿಸಲೇಬೇಕು ಅಂತ ಫಿಕ್ಸ್ ಆಗಿದ್ದಾರೆ. ಅದರಂತೆ ಥೈಲೆಂಡ್ ನಲ್ಲಿ ಥೈ ಥೈ ಅಂತ ರಚನಾ ರೈ ಜೊತೆ ಡ್ಯುಯೆಟ್ ಹಾಡ್ತಿದ್ದಾರೆ. ಈ ಹಾಡಿನ ಶೂಟಿಂಗ್ ಮುಗುದ್ರೆ? ಡೆವಿಲ್ ಶೂಟಿಂಗ್ ಮುಗಿದಂತೆಯೇ.
ಇನ್ನು ಒಂದು ಕಡೆ ಶೂಟಿಂಗ್ ನಡೀತಾ ಇರುವಾಗಲೇ, ಇನ್ನೊಂದು ಕಡೆ ಪ್ರಮೋಷನ್ ಗೆ ಸಹ ಕಿಕ್ ಸ್ಟಾರ್ಟ್ ಕೊಡಲಾಗಿದೆ. ಡೆವಿಲ್ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಕಳೆದ ವರ್ಷ ದಾಸನ ಹುಟ್ಟುಹಬ್ಬಕ್ಕೆ ಡೆವಿಲ್ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಟೀಸರ್ ನಲ್ಲಿ ದರ್ಶನ್ ಅವ್ರ ಲುಕ್ಕು, ಗೆಟಪ್, ಕಂಡು ಫ್ಯಾನ್ಸ್ ಖುಷ್ ಆಗಿದ್ರು. ಇದು ಹಿಂದೆಂದೂ ಕಂಡಿರದಂತಿದೆ ಅಂತ ಜೈಕಾರ ಹಾಕಿದ್ರು.
ಆದ್ರೆ ಶೂಟಿಂಗ್ ನಡುವಲ್ಲೇ ದಾಸ ಅರೆಸ್ಟ್ ಆಗಿ ಕಂಬಿ ಹಿಂದೆ ಹೋಗುವ ಹೊತ್ತಿಗೆ ಡೆವಿಲ್ ಕಥೆ ಮುಗೀತು ಅಂತ ಗಾಂಧಿನಗರ ಸಪ್ಪೆ ಆಗಿತ್ತು. ಆದ್ರೆ ಅಭಿಮಾನಿಗಳ ಹಾರೈಕೆ, ದರ್ಶನ್ ಪತ್ನಿಯ ದೈವ ಬಲ ಈಗ ದರ್ಶನ್ ಮತ್ತೆ ಶೂಟಿಂಗ್ ಅಡ್ಡಾದಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದೆ. ಈಗ ಅದರ ಜೊತೆ ಡೆವಿಲ್ ನ ಗೆಟಪ್ ಸಹ ಕಣ್ಣುಮುಂದೆ ಬಂದಿದ್ದು, ದಾಸ ಇಲ್ಲಿ ಮತ್ತಷ್ಟು ರಗಡ್ ಆಗಿ, ರಾ ಲುಕ್ ನಲ್ಲಿ ಮಿಂಚು ಹರಿಸಿದ್ದಾರೆ. ಮೋಷನ್ ಪೋಸ್ಟರ್ ನೋಡ್ತಿದ್ರೆ ಅಭಿಮಾನಿಗಳಲ್ಲಿ
ಮಿಲನ ಖ್ಯಾತಿಯ ಪ್ರಕಾಶ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇಲ್ಲಿಯವರೆಗೂ ಅವ್ರು ಮಾಡಿಕೊಂಡು ಬಂದ ಸಿನಿಮಾಗಳಿಗಿಂತ ಈ ಸಿನಿಮಾ ವಿಭಿನ್ನ ಪ್ಯಾಟ್ರನ್ ನಲ್ಲಿರೋದು ಟೀಸರ್, ಪೋಸ್ಟರ್ ಈಗ ರಿಲೀಸ್ ಆಗಿರೋ ಮೋಷನ್ ಪೋಸ್ಟರ್ ಹೇಳ್ತಾ ಇದ್ದಾವೆ.ಹೀಗಾಗಿ ಡೆವಿಲ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಕೊಂಡಿದೆ. ಮೋಷನ್ ಪೋಸ್ಟರ್‌ನ 1:05 ನಿಮಿಷದ ವಿಡಿಯೋ ಹಂಚಿಕೊಂಡಿರುವ ದರ್ಶನ್, ನಲ್ಮೆಯ ಸೆಲಬ್ರಿಟಿಗಳಿಗೆ ವಿಶೇಷ ಸಂದೇಶವೊಂದನ್ನೂ ನೀಡಿದ್ದಾರೆ. ನಲ್ಮೆಯ ಸೆಲಬ್ರಿಟಿಗಳಿಗೆ… ನಿಮ್ಮೆಲ್ಲರ ಕಾತುರಕ್ಕೆ ಇಂದು ನಮ್ಮ ‘ದಿ ಡೆವಿಲ್’ ತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದರೊಂದಿಗೆ ಬೆಳ್ಳಿಪರದೆಯ ಮೇಲೆ ಶೀಘ್ರದಲ್ಲೇ ಬರುವ ಮುನ್ಸೂಚನೆ ನೀಡಿದೆ.
ಅಂದಹಾಗೆ ಅತ್ತಿಬೆಲೆಯಲ್ಲಿ ದರ್ಶನ್ ಅಭಿಮಾನಿಗಳ ಸಮ್ಮುಖದಲ್ಲೇ ಡೆವಿಲ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ? ಸೆಪ್ಟೆಂಬರ್ 25ರಂದು ದಸರಾ ಪ್ರಯುಕ್ತಾ ಡೆವಿಲ್ ದರ್ಶನವಾಗಲಿದ್ದು, ಯಾವ ರೀತಿ ಮೋಡಿ ಮಾಡಲಿದೆ ಕಾದು ನೋಡಬೇಕು.