- ರಾಘವೇಂದ್ರ ಅಡಿಗ ಎಚ್ಚೆನ್.

ತವರಿಗೂ ಹೋಗದೆ 2 ವರ್ಷದಿಂದ ಕೆಲಸ ಕೆಲಸ ಅಂತಲೇ ಬಾಲಿವುಡ್ ನಲ್ಲಿ ಬಿಗ್ ಪ್ರಾಜೆಕ್ಟ್ ಗಳಲ್ಲಿ ಬುಸಿಯಾಗಿರೋ ನ್ಯಾಷನಲ್ ಕ್ರಶ್ ರಶ್ಮಿಕಾ ಈಗ ಬಿಗ್ ಬುಸಿನೆಸ್ ಗೆ ಕೈ ಹಾಕಿದ್ದಾರೆ. ಬ್ಯುಸಿನೆಸ್ ಶುರು ಮಾಡೋ ಮೊದಲು ತಾಯಿ ಅಪ್ಪಣೆ ಪಡೆದಿದ್ದಾರೆ. ಅಂತೂ ನಟಿಯಾಗಿದ್ದ ರಶ್ಮಿಕಾ ಈಗ ಬ್ಯುಸಿನೆಸ್ ವುಮೆನ್ ಆಗೋದ್ರು. ಅಷ್ಟಕ್ಕೂ ಅದ್ಯಾವ ಬ್ಯುಸಿನೆಸ್ ಅಂತೀರಾ ಈ ಸ್ಟೋರಿ ನೋಡಿ.
ರಶ್ಮಿಕ ಮಂದಣ್ಣ ಇಷ್ಟು ದಿನ ಪ್ಯಾನ್ ಇಂಡಿಯ ನಟಿ ಆಗಿದ್ದರು ,ಈಗ ಗ್ಲೋಬಲ್ ಲೆವೆಲ್ ನಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಅದೂ ಸಿನಿಮಾ ಮೂಲಕ ಅಲ್ಲ ಬದಲಿಗೆ ತಮ್ಮ ಡಿಯರ್ ಡೈರಿಯ ಮೂಲಕ ಡಿಯರ್ ಡೈರಿಗು ರಶ್ಮಿಕಾ ಹೊಸ ಕೆಲಸಕ್ಕು ಇರೋ ಲಿಂಕ್ ಏನು ಗೊತ್ತಾ..?ಕಿರಿಕ್ ಪಾರ್ಟಿಯ ಈ ಹುಡುಗಿ ಸಾನ್ವಿಯಾಗಿ ಕರ್ನಾಟಕ ಕ್ರಶ್ ಆಗಿ ಈಗ ನ್ಯಾಷನಲ್ ಕ್ರಶ್ ಆಗೋವರೆಗಿನ ಎಫರ್ಟ್ ನಿಜಕ್ಕು ಅದ್ಬುತ ಅನ್ನಿಸುತ್ತೆ, ಯಾಕಂದ್ರೆ ರಶ್ಮಿಕಾ ಡೆಡಿಕೇಶನ್ ಆ ರೀತಿ ಇರುತ್ತೆ. ಅದರಲ್ಲು ತಾವು ನಟಿ ಮಾತ್ರವಲ್ಲ  ಮಹಿಳಾ ಉದ್ಯಮಿ ಆಗುವತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಬಾಲಿವುಡ್ ನ ತುಂಬಾ ನಟಿ ಮಣಿಯರು ನಟನೆಯ ಜೊತೆ ಜೊತೆಗೆ ತಮ್ಮದೇ ಆದ ಬ್ರಾಂಡ್ ನ ಹೊಂದಿರುತ್ತಾರೆ ಉದ್ಯಮಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಆ ಸಾಲಿಗೆ ಈಗ ರಶ್ಮಿಕಾ ಕೂಡ ಸೇರ್ಪಡೆಯಾಗಿದ್ದಾರೆ. ಪ್ರತಿ ದಿನ ತಾನು ಮಾಡೋ ಕೆಲಸವನ್ನ ಡೈರಿಯಲ್ಲಿ ಬರೆಯೋ ಕೂರ್ಗ್ ಚೆಲುವೆಗೆ ಈಗ ಡೈರಿಯೇ ಬ್ರಾಂಡ್ ನೇಮ್ ಆಗಿದೆ.
ಡಿಯರ್ ಡೈರಿ ಅಂತಲೇ ತಮ್ಮ ಹೊಸ ಪರ್ಪೂಮ್ ಬುಸಿನೆಸ್ ನ ಆರಂಬಿಸಿದ್ದಾರೆ ರಶ್ಮಿಕಾ. ಕೂರ್ಗ್ ನ ಕಾಫಿ ತೋಟದ ವಾಸನೆ ತಾಯಿಯ ಬಾಡಿ ಲೋಷನ್ ಇವೆಲ್ಲವು ತಾನು ದೊಡ್ಡವಳದಾಗ ನನ್ನನ್ನ ಆ ನೆನಪಿಗೆ ಕರೆದೊಯ್ಯುತ್ತಿದ್ದವು, ಮುಂದೆ ಒಂದು ಈ ಸುವಾಸನೆಗಳೇ ತನ್ನ ಆತ್ಮವಿಶ್ವಾಸವನ್ನ ಹೆಚ್ಚಿಸಬಲ್ಲವಾ ಅನ್ನೋ ರಶ್ಮಿಕಾ ಮನದ ಮಾತಿನ ನಡುವೆಯೇ ಡಿಯರ್ ಡೈರಿ ಬ್ರಾಂಡ್ ಗೆ ಚಾಲನೆ ಕೊಟ್ಟಿದ್ದಾರೆ ರಶ್ಮಿಕಾ ಮಂದಣ್ಣ.

ರಶ್ಮಿಕಾ ಹೊಸ ಉದ್ಯಮ ಆರಂಬಿಸೋಕು ಮುನ್ನ ತನ್ನ ತಾಯಿ ಸುಮನ ಮಂದಣ್ಣ ಜೊತೆ ಮಾತನಾಡಿ ಆಶೀರ್ವಾದ ಪಡೆದಿದ್ದಾರೆ. ರಶ್ಮಿಕಾ ಅಂದ್ರೆ ಕಾಂಟ್ರವರ್ಸಿ ಅನ್ನೋರಿಗೆ ಡಿಯರ್ ಡೈರಿ ಕಾಂಟ್ರಿವರ್ಸಿಯಲ್ ಎಡಿಷನ್ ಕೂಡ ಲಭ್ಯವಿದ್ದು, ನ್ಯಾಷನಲ್ ಕ್ರಶ್  ಜೊತೆಗೆ ರಶ್ಮಿಕಾ ಕೈ ಮೇಲೆ ಹಾಕಿಸಿಕೊಂಡಿರು ಹಚ್ಚೆ ಇರ್ರೀಪ್ಲೇಸಬಲ್ ಅನ್ನೋ ಎಡಿಶನ್ ಕೂಡ ಡಿಯರ್ ಡೈರಿಯಲ್ಲಿರೋದು ವಿಶೇಷ.
ಒಟ್ಟಿನಲ್ಲಿ ರಶ್ಮಿಕಾ ಕರ್ತವ್ಯ ನಿಷ್ಟೆ ಕಾಂಟ್ರವರ್ಸಿ ಅಂದ್ರು ತಲೆಕೆಡಿಸಿಕೊಳ್ಳದ ರಶ್ಮಿಕಾ ಇವತ್ತು ಎಲ್ಲವನ್ನು ಮೀರಿ ಮತ್ತೊಂದು ಹೊಸ ಸಾಹಸಕ್ಕೆ ಹೆಜ್ಜೆ ಇಟ್ಟಿದ್ದು ಸಮಯ ಅನ್ನೋದನ್ನ ನೋಡದೆ ಕೆಲಸದ ಮೇಲೆ ಮಾತ್ರ ಗಮನ ಹರಿಸಿ ಈಗಾಗಲೇ ಸಿನಿಮಾದಲ್ಲಿ ಗೆದ್ದಿದ್ದಾರೆ. ಈಗ ಉದ್ಯಮಿಯಾಗಿಯು ಗೆಲುವು ಸಿಗಲಿ ಅನ್ನೋದೆ ನ್ಯಾಷನಲ್ ಕ್ರಶ್ ಅಬಿಮಾನಿಗಳ ಹಾರೈಕೆ ಆಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ