ರಶ್ಮಿ ರಾವ್

ರೆಡಿ ಮೇಡ್ ಗಾರ್ಮೆಂಟ್ಸ್, ಆನ್ ಲೈನ್ ಶಾಪಿಂಗ್, ಇದೆಲ್ಲದರ ನಡುವೆ ಬೂಟಿಕ್ ಗಳು ದಿನೇ ದಿನೇ ಹೆಚ್ಚಾಗುತ್ತಿದೆ, ಫ್ಯಾಷನ್ ವಿನ್ಯಾಸಕರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ..ಈ ಕಾಂಪಿಟೇಶನ್ ಯುಗದಲ್ಲಿ ಫ್ಯಾಷನ್ನಿಗೆ ಒತ್ತು ಕೊಡುವ ಯುವ ಪೀಳಿಗೆ ಟ್ರೆಂಡ್ ಗೆ ತಕ್ಕಂತೆ ಉಡುಗೆ ತೊಡುಗೆ ತೊಟ್ಟು ಮೆರೆಯುವ ಕ್ರೇಜ್ ಇದೆ.

ಕೆಲವು ಡಿಸೈನರ್ ಗಳು ಬರೀ ಫ್ಯಾಷನ್ ಶೋ ಗೆ ಮಾತ್ರ ಅಂಟಿಕೊಳ್ಳದೇ ಏನಾದರೂ ಹೊಸದನ್ನು ಪ್ರಯತ್ನಿಸಿ ಅದರಿಂದ ಪರಿಸರಕ್ಕೂ ಹಾನಿಯಾಗದಂತೆ ಫ್ಯಾಬ್ರಿಕ್ ಬಳಸಿ ಲಾಭಕ್ಕಾಗಿ ಆಸೆ ಪಡದೇ ನಾಲ್ಕು ಜನಕ್ಕೆ ಉಪಯೋಗವಾಗುವಂಥ ಕೆಲಸ ಮಾಡುತ್ತಿದ್ದಾರೆ ಅಂಥವರಲ್ಲಿ ವಸ್ತ್ರ ವಿನ್ಯಾಸಕಿ , ಜೂವೆಲರಿ ಡಿಸೈನರ್, ಪರಿಸರ ಪ್ರೇಮಿ, ಪ್ರಾಣಿಗಳ ಸಂರಕ್ಷಕಿ ಆಗಿರುವಂಥ ಕನ್ನಡದ

fashion

ರಶ್ಮಿ ರಾವ್ ಉಳಿದೆಲ್ಲರಿಗಿಂತ ವಿಶೇಷವಾಗಿ ಕಾಣುತ್ತಾರೆ. 'ಹೌದು ಮೊದಲಿನಿಂದಲೂ ನನಗೆ ದೇಸಿ ಕಲೆ , ಹಳ್ಳಿ ಜನರ ಪ್ರತಿಭೆ ಗುರುತಿಸಿ ಅವರನ್ನು ಮಾತನಾಡಿಸುವ ಆಸೆ ‌‌.‌ನಾವು ಪಟ್ಟಣ ವಾಸಿಗಳಾದರೂ ನಮ್ಮ ಪೂರ್ವಜರ ಹಳ್ಳಿಗಳಿಗೆ ಹೋಗಿ ಈಗಲೂ ಇದ್ದು ಬರುತ್ತೇವೆ. ಅಲ್ಲಿ ಕಂಡಂತಹ ದೇಸಿ ನೇಕಾರರು, ಮಹಿಳೆಯರಲ್ಲಡಗಿರುವ ಪ್ರತಿಭೆ ಕಂಡು ಆಶ್ಚರ್ಯ ಪಟ್ಟದ್ದುಂಟು.. ಫ್ಯಾಷನ್ ವಿನ್ಯಾಸಕಿ ಜೊತೆಗೆ ಇಪ್ಪತ್ತೈದು ವರ್ಷಗಳಿಂದ ಜೂವೆಲರಿ ಡಿಸೈನರ್ ಆಗಿದ್ದೇನೆ ನನ್ನದೇ ಆದ'

'ಸ್ಟುಡಿಯೋ ರೇನ್' ಬೂಟಿಕ್ ಶುರು ಮಾಡಿದಾಗ ಹೆಚ್ಚು ಆದ್ಯತೆ ಕೊಟ್ಟಿದ್ದು ನಮ್ಮ ಸಂಸ್ಕೃತಿ ಬಿಂಬಿಸುವ ಉಡುಗೆ, ಕಾಟನ್, ಖಾದಿ ಬಳಕೆ ,ಪರಿಸರ ಹಾಳುಮಾಡುವಂಥ ಚೀಪ್ ಫ್ಯಾಬ್ರಿಕ್ ಬಳಸದಿರುವುದು ‌.

fashion 3

ಹಳೇ ಕಾಲದ ಸೀರೆಗಳನ್ನು ರೀ ಸೈಕಲ್ ಮಾಡಿ ಅದರಿಂದ ಫ್ಯಾಷನ್ ಸೃಷ್ಟಿಸಿದೆವು ಅದೆಷ್ಟು ಜನ ತಮ್ಮ ಅಜ್ಜಿ, ಅಮ್ಮಂದಿರ ಹಳೇ ರೇಷಿಮೆ ಸೀರೆಗಳನ್ನು ತಂದು ಕೊಟ್ಟಾಗ ಅವರೇ ಬೆರಗಾಗುವಂತೆ ನಾವು ಅಪ್ ಸೈಕ್ಲಿಂಗ್ ಮಾಡಿ ಇಂದಿನ ಟ್ರೆಂಡಿಗೆ ತಕ್ಕಂತೆ ಉಡುಗೆ ರೆಡಿ ಮಾಡಿಕೊಟ್ಟಾಗ ಅವರಿಗಾದ ಖುಷಿ ಅಷ್ಟಿಷ್ಟಲ್ಲ ಸೆಂಟಿಮೆಂಟ್ ಮೂವ್ ಆಗಿತ್ತು 'ಎಂದು ರಶ್ಮಿ ಹೇಳುತ್ತಾರೆ. ನೇಕಾರರ ಜೊತೆಗೆ ಕಲಾಕಾರರಿಗೂ ಅವಕಾಶ ಕೊಟ್ಟು ಪ್ರೋತ್ಸಾಹ ನೀಡುವ ಇವರಿಗೆ ಇನ್ನಷ್ಟು ಹುರುಪು ಸಿಗಲಿ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ