ಡರ್ಟಿ ಆಗ್ತಾಳೆ ಈಶಾ
ಈಶಾ ಗುಪ್ತಾ ಇಷ್ಟರಲ್ಲೇ ಒಂದು ಮ್ಯೂಸಿಕ್ ವಿಡಿಯೋ `ಗಾಟ್ ಡರ್ಟಿ'ಯಲ್ಲಿ ಕಾಣಿಸಲಿದ್ದಾಳೆ. ಇದರ ವಿಶೇಷತೆ ಎಂದರೆ ಈ ವಿಡಿಯೋದಲ್ಲಿ ಈಶಾ ಬೋಲ್ಡ್ ಸೆಕ್ಸೀ ಸ್ಟೆಪ್ಸ್ ನಿಂದ ಗಮನ ಸೆಳೆಯಲಿದ್ದಾಳೆ. ತನ್ನ ಹಾಟ್ ಫೋಟೋಗಳಿಂದ ಈಶಾ ಈಗಾಗಲೇ ಫೇಸ್‌ಬುಕ್‌ನೋಡುಗರ ಎದೆಬಡಿತ ಹೆಚ್ಚಿಸಿದ್ದಾಳೆ. ಇದೀಗ ವಿಡಿಯೋ ಮೂಲಕ ಅವರುಗಳಿಗೆ ಹಾರ್ಟ್‌ಅಟ್ಯಾಕ್‌ಬರಿಸುತ್ತಾಳಾ?
ಎಲ್ಲೆಡೆ ಜನಪ್ರಿಯ ಕಾಲೀನ್ ಭೈಯಾ
ವೆಬ್‌ಸೀರೀಸ್ ಕಲ್ಚರ್ ಪ್ರತಿಭಾವಂತ ಕಲಾವಿದರಿಗೆ ಒಂದು ವರದಾನವೇ ಸರಿ. ತಮ್ಮ ಬಹುಮುಖ ಪ್ರತಿಭೆಯಿಂದ ಹೀಗೆ ಮಿಂಚುತ್ತಿರುವ ನಾಜಿರುದ್ದೀನ್`ಸೇಕ್ರೆಡ್ ಗೇಮ್ಸ್'ನಿಂದ ಎಲ್ಲೆಡೆ ಜನಪ್ರಿಯತೆ ಗಳಿಸುತ್ತಿದ್ದಾರೆ. ಇದಾದ ಮೇಲೆ ಪಂಕಜ್ ತ್ರಿಪಾಠಿಯ `ಮಿರ್ಜಾಪುರ್'ದಲ್ಲಿ ಕಾಲೀನ್ ಭೈಯಾನ ಪಾತ್ರವಹಿಸಿ ಮತ್ತಷ್ಟು ಮಿಂಚಿದರು. ಹಿಂದೆಲ್ಲ ದೊಡ್ಡ ದೊಡ್ಡ ಚಿತ್ರಗಳಲ್ಲಿ ಎಲ್ಲೋ ಎಲೆಮರೆಯ ಕಾಯಿಯಾಗಿ ದೂರ ಸರಿಯುತ್ತಿದ್ದ ಈ ನಟ, ಇದೀಗ `ಸೇಕ್ರೆಡ್ ಗೇಮ್ಸ್'ನ ಗಣೇಶ್‌ಹಾಗೂ `ಮಿರ್ಜಾಪುರ್'ನ ಕಾಲೀನ್ ಭೈಯಾ ಆಗಿ ಗಮನ ಸೆಳೆಯುತ್ತಿದ್ದಾರೆ.
ಬಾಲಿವುಡ್‌ಗೆ ಹೆಜ್ಜೆಯಿಟ್ಟ ಅಲಾಯಿಯಾ
ಬಾಲಿವುಡ್ ಸ್ಟಾರ್ಸ್ ಮಕ್ಕಳು ಚಿತ್ರರಂಗಕ್ಕೇ ಬರುವುದು ಅನಾದಿ ಕಾಲದಿಂದಲೂ ನಡೆದುಕೊಂಡೇ ಬಂದಿದೆ. ಈ ವರ್ಷ ಅಂಥ ಹಲವು ಎಂಟ್ರಿಗಳಾಗಿವೆ. ಈ ಬಾರಿ ಕೇಳಿಬರುತ್ತಿರುವ ಹೊಸ ಹೆಸರು ಪೂಜಾ ಬೇಡಿಯ ಮಗಳು ಅಲಾಯಿಯಾಳದು. ಈಕೆ ನಿತಿನ್ ಕುಕ್ಕಡ್‌ರ ಫ್ಯಾಮಿಲಿ ಕಾಮಿಡಿ `ಜಾನಿ ಜಾನೆಮನ್' ಚಿತ್ರದಲ್ಲಿ ಸೈಫ್ ಆಲಿಖಾನ್ ಜೊತೆ ಕಾಣಿಸಲಿದ್ದಾಳೆ. ಗ್ಲಾಮರ್‌ವಿಷಯದಲ್ಲಂತೂ ತಾಯಿಗಿಂತ ಮಿಗಿಲು ಈ ಮಗಳು!
ಅಕ್ಷಯ್ ಈಗ ಕೇಸರಿ
ಮುಘಲ್ ಸರಾಯಿಯ ಯುದ್ಧ ಮತ್ತು ಸಿಖ್ ಸೈನಿಕರ ಸಾಹಸಗಾಥೆಯ ಕುರಿತಾದ `ಕೇಸರಿ' ಚಿತ್ರ ಇದೀಗ ಅಕ್ಷಯ್ ಕುಮಾರ್‌ಗೆ `2.0' ನಂತರ ಮಹತ್ವದ ಟರ್ನಿಂಗ್ ಪಾಯಿಂಟ್ ಆಗಲಿದೆ. ಇಲ್ಲಿ ಅಕ್ಷಯ್ ಪ್ರತಿಭಾವಂತ ನಟನಾಗಿ ಮಾತ್ರವಲ್ಲದೆ ಭಾವನಾತ್ಮಕ ರೂಪದಲ್ಲಿಯೂ ಮಿಂಚುತ್ತಿದ್ದಾನೆ. ಈ ಚಿತ್ರದ ಪೋಸ್ಟರ್ ಇತ್ತೀಚೆಗೆ ಬಿಡುಗಡೆಗೊಂಡು ಅದರಲ್ಲಿ ಸೈನಿಕ ವೇಷಧಾರಿ ಸಿಖ್ ಆಗಿ ಅಕ್ಷಯ್ ಎಲ್ಲೆಡೆ ಮಿಂಚಿದ್ದಾನೆ. ಈ ಚಿತ್ರ ಬಾಕ್ಸ್ ಆಫೀಸ್ ಯುದ್ಧದಲ್ಲಿ ಗೆಲ್ಲಲಿದೆಯೇ? ಕಾದು ನೋಡಬೇಕು.
ಕೇಸ್ ತೀರ್ಪಿನ ಮೇಲೆ ನಿಂತಿದೆ ಸಲ್ಲೂ ಮದುವೆ
ಇದುವರೆಗೂ ಜನರಿಗೆ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮದುವೆಯೇ ಆಗಲಾರ ಎನಿಸಿತ್ತು. ಆದರೆ ಇದೀಗ ಬಾಲಿವುಡ್‌ನ ನಂಬಲರ್ಹ ಸುದ್ದಿಮೂಲಗಳ ಪ್ರಕಾರ, ಸಲ್ಮಾನ್ ಮದುವೆ ಆಗಲೇನೋ ಬಯಸಿದ್ದಾನೆ, ಆದರೆ.... ಕಸ್ತೂರಿ ಮೃಗದ ಬೇಟೆಯ ಕೇಸ್ ಅವನನ್ನು ಬಿಡುತ್ತಿಲ್ಲ. ಆ ಪ್ರಕರಣಗಳಲ್ಲಿ ಅಪರಾಧ ಸಾಬೀತಾದರೆ ಸಲ್ಮಾನ್‌ಗೆ ಸೆರೆವಾಸ ತಪ್ಪಿದ್ದಲ್ಲ. ಆದರೆ ಈಗಿರುವ ಸವಾಲು ಎಂದರೆ, ವರ್ಷಗಟ್ಟಲೆ ಎಳೆದಾಡುತ್ತಿರುವ ಕೇಸಿನ ತೀರ್ಪು ಸುಮುಖವಾಗಿ ಬರುವವರೆಗೂ ಲೂಲಿಯಾ ಕಾಯುತ್ತಾಳೆಯೇ?
ಮಿಶಿಕಾಳಿಗೆ ತೆರೆದ ಭಾಗ್ಯದ ಬಾಗಿಲು
`ರಂಗೀಲಾ ರಾಜಾ' ಚಿತ್ರದಲ್ಲಿ ಗೋವಿಂದ ಜೊತೆ ಮಿಶಿಕಾ ಚೌರಾಸಿಯಾ ನಾಯಕಿಯಾಗಿ ನಟಿಸಿದ್ದಳಂತೆ. ಆದರೆ ಆ ಚಿತ್ರ ಡಬ್ಬದಲ್ಲೇ ಕೊಳೆತಿದ್ದರಿಂದ ಜನ ನೋಡೇ ಇಲ್ಲ! ಆದರೆ ಮಿಶಿಕಾ ಬೇಬಿಗೆ ಗುಡ್ ನ್ಯೂಸ್ ಎಂದರೆ ಪಹ್ಲಾಜ್ ನಿಹ್ಲಾನಿ ತಮ್ಮ ಮುಂದಿನ `ಐ ಲವ್ ಯೂ ಬಾಸ್' ಚಿತ್ರದಲ್ಲಿ ಚಾನ್ಸ್ ನೀಡಿದರು. ಆದರೆ ಗಮನಿಸಬೇಕಾದ ವಿಷಯ ಎಂದರೆ, ಸೆನ್ಸಾರ್ ಬೋರ್ಡ್‌ನಲ್ಲಿ ತಮ್ಮ ಕರಾಮತ್ತು ಪ್ರದರ್ಶಿಸಿರುವ ಪಹ್ಲಾಜ್ ಸಹ ತಮ್ಮ ಚಿತ್ರಗಳಿಗಾಗಿ ಪ್ರೇಕ್ಷಕರನ್ನು ಕಲೆಹಾಕಲು ಯಶಸ್ವಿಯಾಗಿಲ್ಲ ಎಂಬುದು ಶೋಚನೀಯ!