ಬ್ಲಾಕ್ ಬಸ್ಟರ್‌ಗಳಲ್ಲಿ ಮಿಂಚುತ್ತಿರುವ ವಾಣಿ
ಇಂಥ ಬಿಂದಾಸ್‌ಹುಡುಗಿಯರು ಐಟಂ ಸಾಂಗ್ಸಿಗೆ ಸೀಮಿತವಾಗದೆ ನಾಯಕಿಯರಾಗಿ ಮಿಂಚುವುದು ಅಪರೂಪ. ಅದರಲ್ಲೂ ಈ ವಾಣಿ ದೊಡ್ಡ ದೊಡ್ಡ ಸ್ಟಾರ್ಸ್ ಜೊತೆ ಬ್ಲಾಕ್ ಬಸ್ಟರ್‌ಗಳಲ್ಲೇ ಕಾಣಿಸುತ್ತಿದ್ದಾಳೆ. ಇತ್ತೀಚೆಗಷ್ಟೆ ವಾಣಿ ರಣವೀರ್ ಕಪೂರ್ ಜೊತೆ `ಶಂಶೇರಾ’ ಚಿತ್ರದ ಶೂಟಿಂಗ್‌ನಲ್ಲಿ ಬಿಝಿ ಆಗಿದ್ದಳು. ಅದು ಮುಗಿಯುವ ಮೊದಲೇ ಹೃತಿಕ್ ರೋಷನ್, ಟೈಗರ್ ಶ್ರಾಫ್‌ರ ಜೊತೆ ಮತ್ತೆರಡು ಆ್ಯಕ್ಷನ್ ಚಿತ್ರಗಳಿಗೆ ಸಹಿ ಹಾಕಿದ್ದಾಗಿದೆ. ಅದೃಷ್ಟ ಒಲಿದು ಬರುವುದೆಂದರೆ ಇದೇ!
ಸತ್ಯಮೇವ ಜಯತೆ!
ಕ್ರೈಮ್ ಅಂದ್ರೆ ಆಸಕ್ತಿ ತೋರಿಸದ ವೀಕ್ಷಕರಿಲ್ಲ. ಹೀಗಾಗಿ ಕಲರ್ಸ್ ಟಿ.ವಿ ಹೊಸ ಟಿವಿ ಶೋ `ಕೋರ್ಟ್ ರೂಮ್’ ಪ್ರಸ್ತುತಪಡಿಸಲಿದೆ. ಕೋರ್ಟಿನ ಅಸಲಿ ಕೇಸುಗಳಿಂದ ಈ ಶೋ ಪ್ರೇರಿತವಾಗಿರುತ್ತದೆ. ಇತ್ತೀಚೆಗೆ ಒಂದು ಚರ್ಚೆ ಮುಖಾಂತರ ಈ ಶೋ ಪ್ರಮೋಟ್ ಮಾಡಲಾಯಿತು. ಇದರಲ್ಲಿ ಸ್ವರಾ ಭಾಸ್ಕರ್, ಸುಪ್ರೀಂ ಕೋರ್ಟ್‌ನ ವಕೀಲರಾದ ವಿವೇಕ್ ನಾರಾಯಣ ಶರ್ಮ, ರಾಜಿ ಮುಖರ್ಜಿ ಮುಂತಾದ ಘಟಾನುಘಟಿಗಳಿದ್ದಾರೆ.
ಯಶಸ್ಸಿನ ಹಿಂದೆ ಹೆಣ್ಣು ಇರುತ್ತಾಳೆ
ಗಂಡಸು ಪಾತ್ರಧಾರಿಗಳು ಯಾವಾಗೆಲ್ಲ ಹೆಣ್ಣು ವೇಷ ಧರಿಸಿ ನಟಿಸಿದ್ದಾರೋ, ಯಶಸ್ಸು ಕಟ್ಟಿಟ್ಟ ಬುತ್ತಿ! ಕಮಲ್‌ರ `ಚಾಚಿ 420′ ನೆನಪಾಯ್ತೇ? ಈ ಪರಿಪಾಠ ಮುಂದುವರಿಸಲೆಂದು ಬರುತ್ತಿದೆ ಸಬ್ ಟಿ.ವಿಯ `ಜೀಜಾಜಿ ಛತ್ ಪರ್ ಹೈ’ ಶೋ. ಇಲ್ಲಿ ನಿಖಿಲ್‌ಖುರಾನಾ ಹೆಣ್ಣಾಗಿರುವ ಪರಿ ಗಮನಿಸಿ. ಈ ಶೋನಲ್ಲಿ ಹೀರೋ ಮಾತ್ರವಲ್ಲದೆ, ಅವನ ಕಸಿನ್ ಪಂಚಮಿಯೂ ಆಗಿರುವ ಈತ, ಕಿರುತೆರೆಯ ವೀಕ್ಷಕರಿಗೆ ಆಪ್ತನಾಗಿದ್ದಾನೆ. ಮುಂದೆ ಎಷ್ಟು ಧಾರಾವಾಹಿಗಳಲ್ಲಿ ಇವನು ಹೀಗೆ ಹೆಣ್ಣಾಗಬೇಕೋ ಗೊತ್ತಿಲ್ಲ!
ಫರಾ ರೋಹಿತ್ ಹೊಸ ಜುಗಲ್‌ಬಂದಿ
ಸುದ್ದಿ ಮೂಲಗಳ ಪ್ರಕಾರ ಕಾಫಿ ಫ್ರಮ್ ಮಾಸ್ಟರ್ ರೋಹಿತ್ ಶೆಟ್ಟಿ (ಕನ್ನಡದ ಫೈಟರ್ ಶೆಟ್ಟಿ ಮಗ) ಒಂದು ಹೊಸ ಕಾಮಿಡಿ ಚಿತ್ರ ಮಾಡಲು ಮುಂದಾಗಿದ್ದಾನೆ. ಈ ಚಿತ್ರಕ್ಕಾಗಿ ಆತ ಫರಾ ಖಾನ್‌ಳನ್ನೂ ಒಪ್ಪಿಸಿದ್ದಾನೆ. ಅಯ್ಯಯ್ಯೋ….. ಈ ಚಿತ್ರದಲ್ಲಿ ರೋಹಿತ್‌ಗೆ ನಾಯಕಿ ಫರಾ ಅಂದುಕೊಂಡಿರಾ? ಖಂಡಿತಾ ಇಲ್ಲ. ಆಕೆ ಈ ಚಿತ್ರದ ನಿರ್ದೇಶಕಿ ಮಾತ್ರ. ರೋಹಿತ್ ಮತ್ತವನ ಎಂದಿನ ಕಾಮಿಡಿ ಗ್ಯಾಂಗ್ ಈ ಚಿತ್ರದಲ್ಲಿರುತ್ತದೆ. ಪಾಪ ರೋಹಿತ್, ಫರಾಳ ನಿರ್ದೇಶನದ ಸಾಲು ಸಾಲು ಚಿತ್ರಗಳು ತೋಪೆದ್ದಿವೆ ಎಂಬುದನ್ನು ಮರೆತಂತಿದೆ.
ಕ್ಯೂಟ್ ಕಪಲ್
ಬಾಲಿವುಡ್‌ನ ಕಪಲ್ಸ್ ಬಗ್ಗೆ ಮಾತನಾಡುವಾಗ ಶಾಹಿದ್ ಕಪೂರ್ ಮೀರಾ ರಾಜ್‌ಪೂತ್ ಜೋಡಿ ಮುಂದೆ ಬೇರಾವ ಜೋಡಿಯೂ ಈಡಲ್ಲ. ಶಾಹಿದ್ ತನ್ನ ಚಾರ್ಮಿಂಗ್ ನೇಚರ್‌ನಿಂದ ಜನಪ್ರಿಯನಾಗಿದ್ದರೆ, ಮೀರಾ ತನ್ನ ಫ್ರ್ಯಾಂಕ್ ಆ್ಯಟಿಟ್ಯೂಡ್‌ನಿಂದ ಮಿಂಚುತ್ತಿದ್ದಾಳೆ. ಇತ್ತೀಚೆಗೆ ಕರಣ್ ಜೋಹರ್‌ನ `ಕಾಫಿ ವಿತ್ ಕರಣ್’ ಚ್ಯಾಟ್ ಶೋನಲ್ಲಿ ಮೀರಾಳನ್ನು ಫೇವರಿಟ್ ಸೆಕ್ಸ್ ಪೊಝಿಶನ್ ಬಗ್ಗೆ ಕೇಳಿದಾಗ ಆಕೆ, ಅದನ್ನೆಲ್ಲ ಶಾಹಿದ್ ನೋಡಿ ಕಂಟ್ರೋಲ್ ಮಾಡ್ತಾನೆ ಎಂದಾಗ, ಪಾಪ ಗೃಹಸ್ಥ ಶಾಹಿದ್ ನಾಚಿ ನೀರಾಗಿದ್ದ!
ಬರುತ್ತಿದ್ದಾರೆ ಛಿಛೋರೆ
ಲೇಖಕ ನಿರ್ದೇಶಕ ನಿತೇಶ್ ತಿವಾರಿ ತಮ್ಮ ಮುಂದಿನ ಚಿತ್ರವಾಗಿ `ಛಿಛೋರೆ’ (ಪೋಲಿ ಗೆಳೆಯರು) ಪ್ರಸ್ತುತಪಡಿಸುತ್ತಿದ್ದಾರೆ. ಇದರ ಇಂಟರೆಸ್ಟಿಂಗ್ ಟ್ಯಾಗ್ ಲೈನ್ ಏನು ಗೊತ್ತೇ? `ನಾಯಿ ಬಾಲ ಡೊಂಕು!’ ತಮ್ಮ ಕಾಲೇಜ್ ದಿನಗಳ ಅಸಲಿ ಅನುಭವವನ್ನು ಇಲ್ಲಿ ಹಸಿಹಸಿಯಾಗಿ ಹಂಚಿದ್ದಾರಂತೆ. ಈ ಚಿತ್ರದ ಪಾತ್ರಗಳನ್ನು ಗಮನಿಸಿ ಆ್ಯಸಿಡ್, ಮಮ್ಮಿ, ಸ್ಯಾಕ್ಸಾ, ಗುಚ್ಚಿ, ದರ್ದ್‌ಕುಮಾರ್‌ಇತ್ಯಾದಿ. ಇದೀಗ ಗಮನಿಸತಕ್ಕ ಅಂಶವೆದರೆ ಸುಶಾಂತ್‌ಸಿಂಗ್ ರಾಜಪೂತ್, ಶ್ರದ್ಧಾ ಕಪೂರ್, ವರುಣ್ ಶರ್ಮಾರಂಥ ನಾಟೀ ಸ್ಟಾರ್ಸ್ ಈ ಚಿತ್ರವನ್ನು ಹೇಗೆ ಗೆಲ್ಲಿಸಿ ಕೊಡಲಿದ್ದಾರೆ ಅಂತ.
ಅಭ್ಯಾಗತನಾಗಿ ಮದುವೆಯಲ್ಲಿ ಕುಣಿದ ರಾಜ್‌ಕುಮಾರ್
ನಟ ರಾಜ್‌ಕುಮಾರ್ ರಾವ್ ಇತ್ತೀಚೆಗೆ ಯಶಸ್ಸಿನ ಮತ್ತೊಂದು ಹೆಸರು ಎನಿಸಿದ್ದಾನೆ. ಈತ ಪರ್ಫೆಕ್ಟ್ ಆ್ಯಕ್ಟಿಂಗ್ ಜೊತೆ ಕೀಟಲೆಗೂ ಖ್ಯಾತ. ಸೋನಿ ಟಿ.ವಿಯ ಇತ್ತೀಚಿನ `ಸೂಪರ್ ಡ್ಯಾನ್ಸರ್ ಚಾಪ್ಟರ್ 3′ ಶೋನಲ್ಲಿ ಕಾಣಿಸಿದ ಈತನ ಬಗ್ಗೆ ಅನುರಾಗ್ ಬಸು ಹೇಳಿದ ರಹಸ್ಯವಿದು. ಭೂಪಾಲ್‌ನಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ಆ ತಂಡದ ಸದಸ್ಯರ ಬೋರಿಂಗ್ ದೂರ ಮಾಡಲೆಂದು, ರಾಜ್‌ಕುಮಾರ್ ಹತ್ತಿರದಲ್ಲೇ ಹೋಗುತ್ತಿದ್ದ ಒಂದು ಮದುವೆ ಮೆರವಣಿಗೆಗೆ ನುಗ್ಗಿ ಹುಚ್ಚಾಪಟ್ಟೆ ಕುಣಿದದ್ದೇ ಕುಣಿದದ್ದು. ಈತನನ್ನು ಗುರುತಿಸಿದ ಮದುವೆ ತಂಡ ಹುಚ್ಚೆದ್ದು ಕುಣಿದಾಗ, ಶೋ ಸದಸ್ಯರೆಲ್ಲ ಇದರಲ್ಲಿ ಭಾಗವಹಿಸಿ, ಆ ಮೆರವಣಿಗೆಯನ್ನು ಸಾಲಿಡ್‌ಸಕ್ಸಸ್ ಮಾಡಿಸಿದರಂತೆ. ಈತನ ದೆಸೆಯಿಂದ ಇಡೀ ತಂಡಕ್ಕೆ ಮದುವೆ ಮನೆಯಲ್ಲಿ ಭರ್ಜರಿ ಔತಣ!
ಎಲ್ಲಿದ್ದಿಯಮ್ಮ ಚಿತ್ರಾಂಗದಾ?
ಕಳೆದ ವರ್ಷ `ಬಾರ್ ಗರ್ಲ್’ ಚಿತ್ರದಲ್ಲಿ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಮಿಂಚಿದ ಯುವ ನಟಿ ಚಿತ್ರಾಂಗದಾ ಇದ್ದಕ್ಕಿದ್ದಂತೆ ಕಣ್ಮರೆ ಆಗಿದ್ದಾಳೆ. ಅವಳ ವೈಯಕ್ತಿಕ ಬದುಕಿನಲ್ಲೂ ಯಾವುದೂ ಸರಿಹೋಗ್ತಿಲ್ಲವಂತೆ. ಪತಿ ಜ್ಯೋತಿ ರಂಧಾಲಾನಿಂದ ಬೇರೆಯಾದ ಇವಳ ಕೆರಿಯರ್ ಮತ್ತಷ್ಟು ಡೋಲಾಯಮಾನ ಆಯ್ತು. ಅತ್ತ ಪತಿ ಸಹ `ದುಧ್ವಾ ಟೈಗರ್ ರಿಸರ್ವ್’ನಲ್ಲಿ ಅನಧಿಕೃತ ಬೇಟೆ ಕೇಸ್‌ನಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿದ್ದಾನೆ. ಚಿತ್ರಾಂಗದಾ ಇವೆಲ್ಲದರಿಂದ ಹೊರಬಂದು ತನ್ನ ಅಭಿಮಾನಿ ಪಡ್ಡೆ ಹುಡುಗರಿಗೆ ಹೇಗೆ ಸರ್‌ಪ್ರೈಸ್ ನೀಡಲಿದ್ದಾಳೋ…. ಕಾದು ನೋಡಬೇಕು.
ಮತ್ತೆ ಒಂದಾಗಲಿರುವು ರೆಮೋ ವರುಣ್ ಜೋಡಿ
ರೆಮೋ ಡಿಸೋಸಾರ ಡ್ಯಾನ್ಸ್ ಫ್ರಾಂಚೈಸಿ `ABCD’ ಇದೀಗ `ಭಾಗ 3′ ಆಗಿ ಮೂಡಿಬರಲಿದೆ `ಸ್ಟ್ರೀಟ್ ಡ್ಯಾನ್ಸರ್.’ ಪಂಜಾಬ್‌ನ ನಾನಾ ನಗರಗಳಲ್ಲಿ ವರುಣ್ ಧವನ್ ಈಗಾಗಲೇ ಇದರ ಶೂಟಿಂಗ್ ಆರಂಭಿಸಿದ್ದಾನೆ. ಈ ಚಿತ್ರದ ಬೊಂಬಾಟ್ ಟೀಸರ್ ಪೋಸ್ಟರ್ ಡ್ಯಾನ್ಸ್, ಈ ಅಚ್ಚುಮೆಚ್ಚಿನ ಜೋಡಿಯ ವೀಕ್ಷಕರಿಗೆ ರಸದೌತಣ ನೀಡುತ್ತಿದೆ. ಚಿತ್ರ ಹೇಗಿದೆಯೋ ಎಂದು ಎಲ್ಲರೂ ಕಾಯುತ್ತಿದ್ದಾರೆ.
ನಾನಂತೂ ಹೀರೋ ಆಗುವವನೇ!
ಸಲ್ಮಾನ್‌ಖಾನ್ ಸಾವಿರಾರು ಪ್ರಯತ್ನಪಟ್ಟ ನಂತರ ಆಯುಷ್ ಶರ್ಮಾನ ಹೊಸ ಚಿತ್ರ `ಲವ್ ಯಾತ್ರಿ’ ಫ್ಲಾಪ್ ಆಯ್ತು. ಆದರೆ ಆಯುಷ್ ಅಷ್ಟಕ್ಕೆ ಸೋಲು ಒಪ್ಪುವವನಲ್ಲ. ತನ್ನ ಬಾಡಿ ಗೆಟಪ್ ಹಾಗೂ ಲುಕ್ಸ್ ಕುರಿತಾಗಿ ಬಹಳಷ್ಟು ಕಸರತ್ತು ನಡೆಸುತ್ತಿದ್ದಾನೆ. ಫಿಟ್‌ನೆಸ್‌ಗಾಗಿ ಆಯುಷ್ ಇದೀಗ ಟೈಗರ್ ಶ್ರಾಫ್‌ನನ್ನೇ ತನ್ನ ಗುರುವಾಗಿಸಿಕೊಂಡು, ಅವನ ಫಿಟ್‌ನೆಸ್ ಸೆಂಟರ್‌ನಲ್ಲಿ ದಿನವಿಡೀ ದೇಹ ದಂಡಿಸುತ್ತಿದ್ದಾನೆ. ಅದೇ ರೀತಿ ಟೈಗರ್‌ನಿಂದ ಡ್ಯಾನ್ಸ್ ಕಲಿತು ಮುಂದೆ ಮಿಂಚುತ್ತಾನೋ…..? ಕಾಲವೇ ಉತ್ತರಿಸಬೇಕು.