ಒಬ್ಬ ಸ್ಟಾರ್ ಹೀರೋಗೆ ಸಿಗಬೇಕಾದ ಜನಪ್ರಿಯತೆ ತೆರೆ ಹಿಂದೆ ಕೆಲಸ ಮಾಡೋ ನಿರ್ದೇಶಕರಿಗೆ ಸಿಗೋದು ಕಡಿಮೆ. ಆದರೆ ಆ ವಿಚಾರದಲ್ಲಿ ಸ್ಟಾರ್ ಡೈರಕ್ಟರ್ ಅಂತ ಕೆಲವೇ ಕೆಲವು ಸಿನಿಮಾಗಳನ್ನ ಮಾಡಿ ಸೈ ಅನ್ನಿಸಿಕೊಂಡವರು ನಿರ್ದೇಶಕ ಪ್ರಶಾಂತ್ ನೀಲ್.
ಕನ್ನಡ ಸಿನಿಮಾ ಇಂಡಸ್ಡ್ರಿ ಬಗ್ಗೆ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಮಾತಾಡೋಕೆ ಕಲ್ಟ್ ಕ್ರಿಯೇಟ್ ಮಾಡಿದ್ದು ಪ್ರಶಾಂತ್. ನೀಲ್ ನಕ್ಷೆಯಲ್ಲಿ ಮೂಡಿ ಬಂದಿದ್ದ ಕೆಜಿಎಫ್ ಸಿನಿಮಾ...ಅದಾದ ನಂತರ ಸಲಾರ್ ಮೂಲಕ ಕಮಾಲ್ ಮಾಡಿದ್ದ ನೀಲ್ ಈಗ ಡ್ರ್ಯಾಗನ್ ಮೂಲಕ ದರ್ಬಾರ್ ಶುರು ಮಾಡ್ತಿದ್ದಾರೆ.
ರೀ ಆಕ್ಷನ್ ಚಿತ್ರಗಳಿಗೆ ಹೊಸ ಭಾಷ್ಯ ಬರೆದ ನಿರ್ದೇಶಕ ಪ್ರಶಾಂತ್ ನೀಲ್. ಈಗ ಯಂಗ್ ಟೈಗರ್ ಜೂ.ಎನ್ಟಿಆರ್ ಜೊತೆ ಪ್ಯಾನ್-ಇಂಡಿಯಾ ಮಟ್ಟದ ಮತ್ತೊಂದು ಬಿಗ್ ಆಕ್ಷನ್ ಸಿನಿಮಾ ಮಾಡ್ತಿದ್ದಾರೆ. ಅಂದಹಾಗೆ ಬರ್ತ್ ಡೇ ಸಂಭ್ರಮದಲ್ಲಿದ್ದ ಪ್ರಶಾಂತ್ ನೀಲ್ ಗೆ ಮೈತ್ರಿ ಮೂವಿ ಮೇಕರ್ಸ್ ಹಾಗೆ ಜೂ. ಎನ್ ಟಿ ಆರ್ ಟೀಂ ಹೆಮ್ಮೆಯಿಂದ ಶುಭ ಹಾರೈಸಿವೆ. ಅಂದ ಹಾಗೆ ಜೂ ಎನ್ ಟಿ ಆರ್ ಜೊತೆಗಿನ ಡ್ರ್ಯಾಗನ್ ಟೀಂ ಕರ್ನಾಟಕದ ಮಂಗಳೂರಿನ ಬಳಿ ಕುಮಟಾದಲ್ಲಿ ಬೀಡು ಬಿಟ್ಟಿತ್ತು. ದೊಡ್ಡ ಸೆಟ್ ಹಾಕಿ ಶೂಟಿಂಗ್ ಶುರು ಮಾಡಿದ್ದ ಪೋಟೋ ವೈರಲ್ ಆಗಿದ್ವು.
ಈಗ ಡ್ರ್ಯಾಗನ್ ಅವತಾರದಲ್ಲಿ ಜೂ ಎನ್ ಟಿ ಆರ್ ತಮ್ಮ ಅಭಿಮಾನಿಗಳನ್ನ ಫಿಧಾ ಮಾಡೋದಂತೂ ಪಕ್ಕಾ ಆಗಿದೆ. ಹೀಗಿರುವಾಗ ಸದ್ಯ ಸ್ವತ ಜೂ.ಎನ್ ಟಿ ಆರ್ ಕೂಡ ಪ್ರಶಾಂತ್ ನೀಲ್ ಕೆಲಸದ ಬಗ್ಗೆ ಹೆಮ್ಮೆ ಪಡ್ತಿದ್ದಾರೆ. ಸದ್ಯ ನಿರ್ಮಾಪಕರ ಪ್ರಕಾರ ಡ್ರ್ಯಾಗನ್ ಸಿನಿಮಾ ಥಿಯೇಟರ್ ನಲ್ಲಿ ಹಬ್ಬದ ವಾತಾವರಣ ಸೃಷ್ಟಿಸೋದಂತೂ ಗ್ಯಾರಂಟಿ ಅಂತಿದೆ. ಜೊತೆಗೆ ಸಿನಿಮಾ ಮೈಂಡ್ ಬ್ಲೋಯಿಂಗ್ ಅನುಭವ ಕೋಡೋದು ಪಕ್ಕಾ ಅಂತಿದೆ ಚಿತ್ರತಂಡ.