ಶರತ್ ಚಂದ್ರ

ದುರಂಧರ್ 2 ಮಾರ್ಚ್ 19 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಿಸಿರುವುದು ನಿಮಗೆಲ್ಲ ಗೊತ್ತಿದೆ. ಚಿತ್ರ ನೋಡಿದ ಪ್ರೇಕ್ಷಕರಲ್ಲದೆ ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಮತ್ತು ನಿರ್ದೇಶಕರ ಎಫರ್ಟ್ ಬಗ್ಗೆ ಹಾಡಿ ಹೊಗಳುತ್ರಿದ್ದಾರೆ!

ರಿಷಬ್ ಶೆಟ್ಟಿ, ಅಲ್ಲು ಅರ್ಜುನ್ ಜೂ. ಎನ್. ಟಿ. ಆರ್ ಹೀಗೆ ಅನೇಕ ಸೂಪರ್ ಸ್ಟಾರ್ ಗಳು ನಿರ್ದೇಶಕರ ಬಗ್ಗೆ ನಾಯಕ ರಣ್ವೀರ್ ಸಿಂಗ್ ಅಭಿನಯದ ಬಗ್ಗೆ ಕೊಂಡಾಡಿದ್ದಾರೆ. ಈಗ ಸೂಪರ್ ಸ್ಟಾರ್ ಗಳ ಸೂಪರ್ ಸ್ಟಾರ್ ರಜನಿ ಕಾಂತ್ ಸರದಿ.

1000912768

ಚಿತ್ರ ನೋಡಿದ ತಲೈವ, ಎಂತಹ ಅದ್ಭುತ ಚಿತ್ರ ಎಂದು ಬಣ್ಣಿಸಿ ಆದಿತ್ಯ ಧರ್ ಅವರನ್ನು ಬಾಕ್ಸ್ ಆಫೀಸ್ ಕಾ ಬಾಪ್ ಎಂದು ಕರೆದಿದ್ದಾರೆ. ಪ್ರತೀಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ ಎಂದು ತಮ್ಮ X ಖಾತೆಯಲ್ಲಿ ಬರೆದು ಕೊಂಡಿದ್ದಾರೆ. ಎಂದಿನಂತೆ ಕೆಲವರು ರಜನಿಕಾಂತ್ ಅವರನ್ನು ಬಿಟ್ಟಿಲ್ಲ. ಅವರನ್ನು ಸಂಘಿ ಎಂದು ಕರೆದಿದ್ದಾರೆ.

ಆದಿತ್ಯ ಧರ್ ಟ್ವೀಟ್ರಿ ಗೆ ರಿಪ್ಲೈ ಮಾಡುತ್ತ ,, ಸಾರ್,,,ನಿಮ್ಮ ಹೃದಯ ಸ್ಪರ್ಶಿ ನುಡಿಗಳಿಗೆ ಧನ್ಯವಾದಗಳು. ನಿಮ್ಮಂತ ಒಬ್ಬ ಮಹಾನ್ ನಟರಿಂದ ನಮ್ಮ ಚಿತ್ರಕ್ಕೆ ಇಂತಹ ಶ್ಲಾಘನೆ ಸಿಕ್ಕಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ದಶಕಗಳಿಂದ ನಿಮ್ಮ ಚಿತ್ರಗನ್ನು ನೋಡಿಕೊಂಡು ಬೆಳೆದಿದ್ದೇವೆ.ನಮ್ಮನ್ನು ಶಿಳ್ಳೆ ಹೊಡೆಯುವಂತೆ ಮಾಡಿ, ನಗಿಸಿ, ಅಳಿಸಿ ಜೀವನದ ಅನುಭವ ನೀಡುತ್ತಾ, ಇಂದಿಗೂ ಅದೇ ಸ್ಟೈಲ್ (Swag) ಮತ್ತು ಘನತೆಯಿಂದ ಮುಂದುವರಿಸುತ್ತಿರುವುದು ನಿಜಕ್ಕೂ ಒಂದು ವಿಸ್ಮಯವೇ ಸರಿ.

1000912733

ಹಾಗಾಗಿ ನೀವು 'ಧುರಂಧರ್ 2' ಚಿತ್ರವನ್ನು 'ಖಂಡಿತಾ ವೀಕ್ಷಿಸಬೇಕಾದ ಚಿತ್ರ' (Must watch) ಎಂದು ಕರೆದಿರುವುದು ನನ್ನ ಜೀವನದ ಅತಿದೊಡ್ಡ 'ಸೂಪರ್‌ಸ್ಟಾರ್' ಕ್ಷಣದಂತೆ ಭಾಸವಾಗುತ್ತಿದೆ. ನಮಗೆಲ್ಲರಿಗೂ ದೊಡ್ಡ ಕನಸು ಕಾಣುವುದನ್ನು ಕಲಿಸಿಕೊಟ್ಟ ವ್ಯಕ್ತಿಯಿಂದಲೇ ಆಶೀರ್ವಾದ ಸಿಕ್ಕಂತಾಗಿದೆ.

ಕೃತಜ್ಞತೆಗಳನ್ನು ಹೇಳಲು ಮಾತುಗಳೇ ಸಾಲುತ್ತಿಲ್ಲ, ಸರ್. ಇದು ನೇರವಾಗಿ ಹೃದಯಕ್ಕೆ ತಲುಪಿದೆ.

1000912770

ಜೈ ಹಿಂದ್ ಎಂದು ರಿಪ್ಲೈ ಮಾಡಿದ್ದಾರೆ.

ಚಿತ್ರ ಬಿಡುಗಡೆಯಾದ ದಿನದಿಂದ ದಕ್ಷಿಣದ ಹೆಚ್ಚಿನ ಸೂಪರ್ ಸ್ಟಾರ್ ಗಳು ಮತ್ತು ನಿರ್ದೇಶಕರು ಚಿತ್ರ ಮತ್ತು ಆದಿತ್ಯ ಧರ್ ಕೆಲಸವನ್ನು ಹಾಡಿ ಹೊ ಗಳುತ್ತಿದ್ದಾರೆ. ಇತ್ತೀಚೆಗೆ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆದಿತ್ಯ ಧರ್ ಭೇಟಿ ಮಾಡಿ ಎಲ್ಲಾ ನಿರ್ದೇಶಕರು ಅವರಿಂದ ಕಲಿಯಬೇಕಾಗಿದೆ ಎಂದು ಪ್ರಶಂಸಿದ್ದಾರೆ.

ರಮ್ಯಾ ಪ್ರಕಾಶ್ ರಾಜ್ ನಂತಹ ಒಂದಷ್ಟು ಜನ ಹಾಗೂ ಬಾಲಿವುಡ್ ಒಂದಷ್ಟು ಪಗಂಡ ಇದು ಪ್ರೊಪ ಗಾಂಡ ಮೂವಿ, ಸಂಘಿಗಳ ಮೂವಿ, ಮೋದಿ ಕೃಪಾಪೋಷಿತ ಮೂವಿ ಎಂದು ಟೀಕೆ ಮಾಡುತ್ತಿದ್ದಾರೆ . ಒಟ್ಟಿನಲ್ಲಿ ಧುರಂಧರ್ 2 ಬಿಡುಗಡೆಯಾದ ಐದು ದಿನಗಳಲ್ಲಿ ಪ್ರಪಂಚದಾದ್ಯಂತ 800 ಕೋಟಿಗಿಂತಲೂ ಹೆಚ್ಚಿನ ಕಲೆಕ್ಷನ್ ಮಾಡಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ