ನಟ ಧ್ರುವ ಸರ್ಜಾ ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟ ಧ್ರುವ ಸರ್ಜಾ, ನಿರ್ದೇಶಕ ರಾಘವೇಂದ್ರ ಹೆಗಡೆ ಅವರಿಂದ ಕೋಟಿ ಹಣ ಪಡೆದಿರುವ ಆರೋಪ ಮಾಡಲಾಗಿದೆ.
ಧ್ರುವ ಸರ್ಜಾ ವಿರುದ್ಧ ನಿರ್ದೇಶಕ ರಾಘವೇಂದ್ರ ಹೆಗಡೆ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದಾಖಲೆ ಸಮೇತ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 316 (2) (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 318 (4) (ವಂಚನೆ) ಅಡಿ ಎಫ್ಐಆರ್ ದಾಖಲಾಗಿದೆ.
2018ರಲ್ಲೇ 3.5 ಕೋಟಿ ರೂಪಾಯಿಗಳನ್ನು ಧ್ರುವ ಸರ್ಜಾಗೆ ನೀಡಲಾಗಿದ್ದು, ಇದಕ್ಕೆ ಈವರೆಗೆ ಬಡ್ಡಿಯೊಂದಿಗೆ ನಷ್ಟವನ್ನು ಲೆಕ್ಕ ಹಾಕಿದರೆ, 9.58 ಕೋಟಿ ರೂಪಾಯಿಗೂ ಅಧಿಕವಾಗುತ್ತದೆ. ಇನ್ನು ನಟ ಧ್ರುವ ಸರ್ಜಾ ಅವರಿಗೆ ಹಣ ನೀಡಿರುವ ಕುರಿತು ಒಪ್ಪಂದ, ಹಣಕಾಸಿನ ದಾಖಲೆಗಳು, ಅಗ್ರಿಮೆಂಟ್ ಹಾಗೂ ಬ್ಯಾಂಕ್ನಲ್ಲಿ ಹಣದ ವ್ಯವಹಾರ ಮಾಡಿರುವ ದಾಖಲೆಗಳನ್ನು ರಾಘವೇಂದ್ರ ಹೆಗಡೆ ಅವರು ಪೊಲೀಸರಿಗೆ ಸಾಕ್ಷಿಯಾಗಿ ನೀಡಿದ್ದಾರೆ. ಇದೀಗ ತನಿಖಾಧಿಕಾರಿಗಳು ಇವುಗಳನ್ನು ಪರಿಶೀಲಿಸುತ್ತಿದ್ದಾರೆ.