- ರಾಘವೇಂದ್ರ ಅಡಿಗ ಎಚ್ಚೆನ್.
’ಫ್ಯುಯಲ್’ (FUEL) ಚಿತ್ರದ ಮುಹೂರ್ತ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ನೀಲಕಂಠ ಫಿಲಂ ಸ್ಟುಡಿಯೋ ಪ್ರೊಡಕ್ಷನ್ ಅಡಿಯಲ್ಲಿ ನೀಲಕಂಠ ಮತ್ತು ಸಂಪ್ರೀತ್ ಕಬ್ಬಾಳ.ಕೆಟಿಆರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ ಮತ್ತು ನಿರ್ದೇಶನದ ಜವಬ್ದಾರಿಯನ್ನು ಡಿ.ಯೋಗರಾಜ್ ಹೊತ್ತುಕೊಂಡಿದ್ದಾರೆ. 1980-1988 ಎಂಬ ಅಡಿಬರಹ, ’ಹಿಂದೆಂದೂ ಕೇಳಿರದ ಸತ್ಯ ಅಂಶಗಳು’, ’ಹೊಗೆಯ ಹಿಂದೆ ಅಡಗಿರುವ ಸತ್ಯಾಂಶಗಳು’ ಎಂಬ ಪದಗಳು ಪೋಸ್ಟರ್‌ದಲ್ಲಿ ಕಾಣಿಸಿಕೊಂಡಿದೆ. ತಂಡಕ್ಕೆ ಶುಭ ಹಾರೈಸಲು ಉಗ್ರಂ ರವಿ ಆಗಮಿಸಿದ್ದರು.

ನಂತರ ಮಾತನಾಡಿದ ನಿರ್ದೇಶಕರು, ಇದು ನನಗೆ ಆರನೇ ಚಿತ್ರವಾಗಿದೆ. ಇಪ್ಪತ್ತು ವರ್ಷಗಳ ಕಾಲ ಪೆಟ್ರೋಲಿಯಂ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಅಲ್ಲಿ ನಡೆಯುವ ಭ್ರಷ್ಟ ವ್ಯವಸ್ಥೆ, ಕಳ್ಳಸಾಗಣೆ ಮತ್ತು ವಂಚನೆಗಳ ಸರಮಾಲೆಗಳನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.

ಇದರ ಹಿಂದೆ ಕಾಣದ ಕೈಗಳು, ರಾಜಕೀಯ ಹಸ್ತಕ್ಷೇಪ ಮೂಲ ಕಾರಣವಾಗಿದೆ. ಸಾಮಾನ್ಯ ಜನರಿಗೆ ಕಣ್ಣಮುಂದೆ ಅಕ್ರಮಗಳು ನಡೆಯುತ್ತಿದ್ದರೂ, ಅದು ತಿಳಿಯದ ಕಾರಣ ಪ್ರಶ್ನೆ ಮಾಡಲು ಹೋಗುವುದಿಲ್ಲ. ಇವೆಲ್ಲವನ್ನು ಸಮಾಜಕ್ಕೆ ಅರಿವು ಮೂಡಿಸುವ, ಜತೆಗೆ ಫ್ಯಾಮಿಲಿ ಸೆಂಟಿಮೆಂಟ್‌ಗಳು ಇರಲಿದೆ. ಚಿತ್ರಕಥೆಯಲ್ಲಿ ಕೃತಿಕಾ.ಎನ್ ನೆರವಾಗಿದ್ದಾರೆ. ಸನ್ನಿವೇಶಕ್ಕೆ ಅನುಗುಣವಗಿ ವಿಎಫ್‌ಎಕ್ಸ್ ಪ್ರಮುಖವಾಗಿ ಕಾರ್ಯನಿರ್ವಹಿಸಲಿದೆ ಎಂದು ಡಿ.ಯೋಗರಾಜ್ ಒಂದಷ್ಟು ಮಾಹಿತಿಗಳನ್ನು ತೆರೆದಿಟ್ಟರು.

ಪತ್ರಕರ್ತನ ಪಾತ್ರದಲ್ಲಿ ರಘುವೀರ್.ಕೆ.ಟಿ, ಎಸಿಪಿಯಾಗಿ ಅಶೋಕ್ ನಾಯಕರು. ಪತ್ರಕರ್ತೆಯಾಗಿ ಅಂಜಲಿ.ಆರ್ ಹಾಗೂ ವಿನ್ಯಾ ನಾಯಕಿಯರು. ಉಳಿದಂತೆ ಸಂಪ್ರೀತ್‌ಹೆಬ್ಬಾಳ.ಕೆಟಿಆರ್, ಲಕ್ಷೀ, ಮಾಸ್ಟರ್ ಗ್ರಿಶಾಂಕ್ ಮುಂತಾದವರು ನಟಿಸುತ್ತಿದ್ದಾರೆ. ಸಂಗೀತ ಸ್ಪರ್ಜನ್‌ಪಾಲ್, ಕಾಸ್ಟ್ಯೂಮ್ ಸುಶೀಲ.ಎನ್, ಸಾಹಸ ವೈಲೆಂಟ್ ವೇಲು, ವಿಎಫ್‌ಎಕ್ಸ್ ಅನಿಲ್ ಅವರದಾಗಿದೆ. ಬೆಂಗಳೂರು, ಬಳ್ಳಾರಿ ಮತ್ತು ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.





