- ರಾಘವೇಂದ್ರ ಅಡಿಗ ಎಚ್ಚೆನ್.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆಯಲ್ಲಿ  ಗೌತಮ್‌ ದಿವಾನ್‌ ಮತ್ತೆ ಮರಳಿ ತನ್ನ ಸಾಮ್ರಾಜ್ಯಕ್ಕೆ ಬಂದಿದ್ದಾನೆ. ಭೂಮಿಕಾ ಹಾಗೂ ಗೌತಮ್‌ ಜೋಡಿಯನ್ನು ಮತ್ತೊಮ್ಮೆ ತುಂಬು ಮನಸ್ಸಿನಿಂದ ಮನೆ ತುಂಬಿಸಿಕೊಂಡಿದ್ದಾಳೆ ಶಕುಂತಲಾ. ಅತ್ತ ಕೆಡಿ ಜೈದೇವ್‌ ಬಾಳು ಬೀದಿಗೆ ಬಿದ್ದಿದೆ. ದಿಯಾ ಮನೆ ಮುಂದೆ ಗಲಾಟೆ ಕೂಡ ಮಾಡಿದ್ದಾನೆ.
ಬೆಟ್ಟಿಂಗ್ ಆ್ಯಪ್ ಮಾಡಿಕೊಂಡ ಜಯದೇವ್ ನಂತರ ಅದರಿಂದ ಸಾಕಷ್ಟು ನಷ್ಟ ಅನುಭವಿಸಿದ. ಜಯದೇವ್​​ ಈಗ ಆತನು ಬೀದಿ ಬದಿಯಲ್ಲೇ ಮಲಗುವಂತಾಗಿದೆ. ಈ ಸಮಯದಲ್ಲಿ ಆತನ ಕೈ ಬೆರಳಲ್ಲಿ ಇದ್ದ ಚಿನ್ನದ ಉಂಗುರುವನ್ನು ವ್ಯಕ್ತಿಯೋರ್ವ ಕದ್ದು ಓಡಿದ್ದಾನೆ. ಇದರಿಂದ ಜಯದೇವ್ ಶಾಕ್​ಗೆ ಒಳಗಾಗಿದ್ದಾನೆ. ಊಟಕ್ಕೂ ಗತಿ ಇಲ್ಲದೇ ಅಲೆದಾಡುತ್ತಿದ್ದಾನೆ. ಈಗಾಗಲೇ ಜಯದೇವ್​​ಗೆ ಕೆಟ್ಟ ಪರಿಸ್ಥಿತಿ ಬಂದಿದೆ. ದಿಯಾ ಇದ್ದ ಆಸ್ತಿ ಒಡವೆಯಲ್ಲವನ್ನೂ ದೋಚಿಕೊಂಡು ಹೋಗಿದ್ದಾಳೆ. ಅವಳ ಮನೆಗೆ ಬಂದ ಜೈದೇವ್‌ ಕೂಗಾಡುತ್ತಿದ್ದಾನೆ. ಹೋಗಾಗಿ ಪೊಲೀಸರಿಗೆ ದೂರು ಕೊಟ್ಟು ಒದ್ದು ಒಳಗೆ ಹಾಕಿಸಿದ್ದಾಳೆ ದಿಯಾ.

Gowtham

ಇತ್ತ ಭೂಮಿ ಹಾಗೂ ಗೌತಮ್‌ ಮತ್ತೆ ಹಳೆ ಮನೆಗೆ ಬಂದಿದ್ದಾರೆ. ಮದುವೆ ಆಗಿ ಬಂದಾಗ, ತುಂಬು ಮನಸ್ಸಿನಿಂದ ನಿಮ್ಮನ್ನು ಒಳಗೆ ಕರೆದುಕೊಂಡಿರಲಿಲ್ಲ. ಈಗ ಹಾಗಲ್ಲ. ನಾನೇ ನಿಮ್ಮನ್ನು ಒಳಗೆ ಕರೆದುಕೊಳ್ಳುವೆ ಅಂತ ಆರಿ ಎತ್ತಿ ಮನೆಗೆ ತುಂಬಿಸಿಕೊಂಡಿದ್ದಾಳೆ ಶಕುಂತಲಾ. ಈಗಾಗಲೇ ಜಯದೇವ್​​ಗೆ ಕೆಟ್ಟ ಪರಿಸ್ಥಿತಿ ಬಂದಿದೆ. ಅವನ ತಾಯಿ ಬದಲಾಗಿದ್ದಾಳೆ. ಇನ್ನು, ಗೌತಮ್​​ಗೂ ಮನೆ ಮರಳಿ ಸಿಕ್ಕಿದೆ. ಈಗ ಅವರ ಜಾತಕದಲ್ಲಿ ಮಗಳಿಂದ ಕೆಟ್ಟದಾಗುತ್ತದೆ ಎಂಬುದು ಬಂದಿದೆ.
ಜ್ಯೋತಿಷಿಯ ಈ ಮಾತಿನಿಂದ ಇನ್ನೂ ಕೆಲವು ವರ್ಷ ಅಮೃತಧಾರೆ ಮುಂದುವರೆಯುವಂತೆ ಕಾಣುತ್ತಿದೆ. ಇದರ ಅರ್ಥ, ಮಗಳಿಂದ ತೊಂದರೆ ಎಂದರೆ ಅದು ಕಳೆದು ಹೋಗಿರುವ ಮಗಳಿಂದ ಎನ್ನುವುದು ಈಗ ನಿಶ್ಚಿತವಾಗಿದೆ. ಹಾಗಿದ್ದರೆ ಆ ಮಗಳು ಎಲ್ಲಿದ್ದಾಳೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ಜ್ಯೋತಿಷಿಯ ಮಾತು ಕೇಳಿ ಕೆಲವರು ಭೂಮಿಕಾ ಮತ್ತು ಗೌತಮ್​ಗೆ ಇನ್ನೊಂದು ಹೆಣ್ಣುಮಗು ಹುಟ್ಟುತ್ತದೆ.
ಅದರಿಂದ ಸಮಸ್ಯೆ ಆಗಬಹುದು ಎಂದು ಹೇಳುತ್ತಿದ್ದರಾದರೂ, ಸದ್ಯದ ಮಟ್ಟಿಗೆ ಮಿಸ್ಸಿಂಗ್​ ಮಗಳ ಬಗ್ಗೆ ಇನ್ನೂ ತೋರಿಸದ ಕಾರಣದಿಂದ ಆಕೆಯೇ ವಿಲನ್​ ಆಗಿ ಬಂದು ತೊಂದರೆ ಕೊಡಬಹುದು ಎನ್ನಲಾಗುತ್ತಿದೆ.ಇನ್ನೊಂದೆಡೆ ಜೈದೇವ ಬೀದಿಪಾಲಾಗಿ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಇವನಿಗೆ ಏನಾದ್ರೂ ಭೂಮಿಕಾ-ಗೌತಮ್​ ಮಗಳು ಸಿಕ್ಕು ಆಕೆಯನ್ನು ತನ್ನ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ