ನಮ್ಮ ಕರ್ನಾಟಕದ ಪಡುಕೋಣೆ ಎಂಬ ಊರಿನ ಹೆಸರು ಕ್ರೀಡಾಜಗತ್ತಿನಲ್ಲಿ ಮತ್ತು ಚಲನಚಿತ್ರರಂಗದಲ್ಲಿ ಸಾಕಷ್ಟು ಚಿರಪರಿತವಾಗಿದೆ. ತಂದೆ ಪ್ರಕಾಶ್ ಪಡುಕೋಣೆ 1980ರಲ್ಲಿ ಆಲ್ ಇಂಗ್ಲೇಂಡ್ ಬ್ಯಾಂಡ್ಮಿಂಟನ್ ಛಾಂಪಿಯನ್ ಆಗುವ ಮೂಲಕ ಚಿರಪರಿಚಿತರಾದರೆ ಅವರ ಮಗಳು ದೀಪಿಕ ಪಡುಕೋಣೆ ಕಳೆದ ಎಂಟು ಹತ್ತು ವರ್ಷಗಳಿಂದ ಜನಪ್ರಿಯ ನಾಯಕಿಯಾಗಿ ಮಿಂಚುತ್ತಿದ್ದಾಳೆ. ಅದರೆ 1940ರಲ್ಲೇ ಪಡುಕೋಣೆ ಹೆಸರನ್ನು ದೇಶಾದ್ಯಂತ ಪಸರಿಸಿದ ಹೆಸರಾಂತ ಚಿತ್ರಕಾರ, ನಟ, ನೃತ್ಯ ಸಂಯೋಜಕ,ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದ ಅಪ್ಪಟ ಕನ್ನಡಿಗ ಗುರುದತ್ ಶಿವಶಂಕರ್ ಪಡುಕೋಣೆ. ಎಲ್ಲರ ಪ್ರೀತಿಯ ಗುರುದತ್ ಅವರ ಬಗ್ಗೆ ನಾವಿಂದು ತಿಳಿಯೋಣ.

ದಕ್ಷಿಣ ಕನ್ನಡದ ಪಡುಕೋಣೆಯ ಮೂಲದ ಕೊಂಕಣಿ ಸಾರಸ್ವತ ಸಂಪ್ರದಾಯದ ಶ್ರಿ ಶಿವಶಂಕರ ರಾವ್ ಪಡುಕೋಣೆ ಹಾಗೂ ವಸಂತಿ ಪಡುಕೋಣೆ ದಂಪತಿಗಳ ಮಗನಾಗಿ ವಸಂತ ಕುಮಾರ್ ಅವರು ಜುಲೈ 9, 1925 ರಂದು ಬೆಂಗಳೂರಿನಲ್ಲಿ ಜನಿಸಿದರು. ಆರಂಭದಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಆವರ ತಂದೆ ಸ್ವಲ್ಪ ಸಮಯದ ನಂತರ ಬ್ಯಾಂಕ್ ಉದ್ಯೋಗಿಯಾಗಿ, ದೂರದ ಪಶ್ವಿಮ ಬಂಗಾಳದ ಭವಾನಿಪುರ್ ಎಂಬಲ್ಲಿಗೆ ವರ್ಗಾಯಿಸಲ್ಪಟ್ಟ ಕಾರಣ, ವಸಂತ್ ಕುಮಾರರ ಶಿಕ್ಷಣವೆಲ್ಲಾ ಬೆಂಗಾಲಿಯಲ್ಲಿಯೇ ಆಗುತ್ತದೆ. ಅವರ ತಾಯಿ ವಸಂತಿಯವರೂ , ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿ ಅವರು ಕನ್ನಡದಲ್ಲಿ ಸಣ್ಣ ಕಥೆಗಳನ್ನು ಬರೆದಿದ್ದಾರೆ ಮತ್ತು ಹಲವಾರು ಬಂಗಾಳಿ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಸಂತಕುಮಾರ್ ತಮ್ಮ ಬಾಲ್ಯದಲ್ಲಾದ ಕೆಲವು ಅಹಿತಕರ ಘಟನೆಗಳಿಂದ ಮಾನಸಿಕವಾಗಿ ಜರ್ಜರಿತಗೊಂಡಿದ್ದಾಗ ಹಿರಿಯರ ಸಲಹೆಯ ಮೇರೆಗೆ ಶುಭ ಶಕುನವೆಂದು ಭಾವಿಸಿ, ಬಹುತೇಕ ಸಾರಸ್ವತರ ಆರಾಧ್ಯ ದೈವ ದತ್ತಾತ್ರೇಯರ ಕೃಪೆ ಇರಲಿ ಎಂದು ಅವರಿಗೆ ಗುರುದತ್ ಎಂದು ಮರುನಾಮಕರಣ ಮಾಡಲಾಗುತ್ತದೆ.
ಓದಿನಲ್ಲಿ ಚುರುಕಾಗಿದ್ದ ಗುರುದತ್, ಬಾಲ್ಯದಲ್ಲಿ ಚಲನಚಿತ್ರಗಳ ಪೋಸ್ಟರ್ಗಳನ್ನು ಚಿತ್ರಿಸುತ್ತಿದ್ದ ತಮ್ಮ ಮಾವ ( ತಾಯಿಯ ದೂರದ ಸಂಬಂಧಿ) ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ದೊಡ್ಡಪ್ಪನವರಾಗಿದ್ದ ಬಾಲಕೃಷ್ಣ.ಬಿ.
ತಮ್ಮ ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಕಾಲೇಜು ವಿದ್ಯಾಭ್ಯಾಸ ಮುಂದು ವರಿಸಲಾಗದ ಕಾರಣ ಅಲ್ಮೋರಾದಲ್ಲಿದ್ದ ಉದಯ ಶಂಕರ್ ಇಂಡಿಯಾ ಕಲ್ಚರ್ ಸೆಂಟರ್ ಎಂಬ ನೃತ್ಯ , ನಾಟಕ ಮತ್ತು ಸಂಗೀತವನ್ನು ಕಲಿಸುವ ಕೇಂದ್ರಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿ ಗುರುಕುಲ ಪದ್ಧತಿ ಹಾಗೂ ಆಧುನಿಕ ಶೈಲಿ ಇವೆರಡರನ್ನೂ ಹೇಳಿಕೊಡುತ್ತಿದ್ದರು. ಈ ಎಲ್ಲಾ ಕಲೆಗಳಲ್ಲೂ ಬಹಳ ಚುರುಕಾಗಿದ್ದ ಗುರುದತ್ ಸುಮಾರು ಐದು ವರ್ಷಗಳ ಅಂದಿನ ಕಾಲಕ್ಕೇ 25ರೂಗಳ ವಿದ್ಯಾರ್ಥಿ ವೇತನದೊಂದಿಗೆ ತಮ್ಮ ಕಲಾಭ್ಯಾಸವನ್ನು ಮಾಡುತ್ತಾರೆ. ಎರಡನೇ ಮಹಾಯದ್ಧದ ಪರಿಣಾಮವಾಗಿ ಈ ಕಲಾ ಕೇಂದ್ರವನ್ನು ಬಲವಂತವಾಗಿ ಮುಚ್ಚಲಾಗುತ್ತದೆ.

ಕಲಾ ಕೇಂದ್ರದಿಂದ ಹೊರಬಂದ ಮೇಲೆ ಜೀವನ ನಿರ್ವಹಣೆಗಾಗಿ ಅಲ್ಲಿಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ಕಡೆಗೆ ಚಿತ್ರ ನಗರಿ, ಮಹಾ ನಗರಿ , ಬಾಲಿವುಡ್ ಮುಂಬೈಗೆ ಬರುತ್ತಾರೆ. ಹಾಗೆ ಬಾಲಿವುಡ್ಡಿಗೆ ಬಂದ ಮೇಲೆ ತಮ್ಮ ಹೆಸರಿನಲ್ಲಿದ್ದ ಶಿವಶಂಕರ್ ಪಡುಕೋಣೆಯನ್ನು ತೆಗೆದು ಹಾಕಿ ಕೇವಲ ಗುರುದತ್ ಎಂದೇ ಗುರುತಿಸಿಕೊಳ್ಳುತ್ತಾರೆ ಇವರ ಹೆಸರು ದತ್ ಎಂದು ಕೊನೆಗೊಳ್ಳುವದರಿಂದ, ಸುಲಲಿತವಾಗಿ ಬಂಗಾಳಿ ಭಾಷೆಯನ್ನು ಮಾತನಾಡುತ್ತಿದ್ದರಿಂದ ಮತ್ತು ಕಲ್ಕತ್ತಾದಿಂದ ಬಂದಿದ್ದ ಕಾರಣ ಅಪ್ಪಟ ಕನ್ನಡಿಗರಾಗಿದ್ದರೂ ಅವರನ್ನು ಬಹುತೇ





