ಮಾರ್ಚ್ ೧೧ ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ ಎಂದರೂ ತಪ್ಪಾಗದು. ಏಕೆಂದರೆ ಸಾವಿರಾರು ವರ್ಷಗಳ ಇತಿಹಾಸವನ್ನು ಕರಾರುವಾಕ್ಕಾಗಿ ತಿಳಿದಿರುವ ನಮಗೆ ಕೇವಲ 32 ವರ್ಷಗಳ ಹಿಂದೆ ನಡೆದಿದ್ದ ಕಾಶ್ಮೀರೀ ಪಂಡಿತರ ನರಮೇಧದ ಕುರಿತಾಗಿ ನಿಜವಾದ ಇತಿಹಾಸವನ್ನೇ ತಿಳಿಯದಿದ್ದ ನಮಗೆ ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿಯವರ ಕಾಶ್ಮೀರಿ ಫೈಲ್ಸ್ ಚಲನಚಿತ್ರ ಬಿಡುಗಡೆಯಾದ ದಿನ. ಈ ಚಿತ್ರದ ಮೂಲಕ ಆ ನಿರ್ದೇಶಕ ಕಾಶ್ಮೀರದ ಕುರಿತಾದ ನೈಜ ಇತಿಹಾಸನ್ನು ಜಗತ್ತಿಗೇ ತಿಳಿಸಿದ್ದಕ್ಕಾಗಿ ಮೊದಲು ಅಭಿನಂದನೆಗಳನ್ನು ಸಲ್ಲಿಸೋಣ.

ಚಿತ್ರ ಬಿಡುಗಡೆ ಆದಗನಿಂದ ಅನೇಕರು ಈ ಚಿತ್ರದ ಬಗ್ಗೆ ನೂರಾರು ಲೇಖನಗಳನ್ನು ಬರೆದು ಖಂಡಿತವಾಗಿಯೂ ಪ್ರತಿಯೊಬ್ಬ ಭಾರತೀಯ ಅದರಲ್ಲೂ ಹಿಂದೂಗಳು ಖಡ್ಡಾಯವಾಗಿ ನೋಡಲೇ ಬೇಕು ಎಂದು ತಿಳಿಸಿದ್ದರು. ಇದೇ ಕುರಿತಂತೆ ನನ್ನ ಲೇಖನದ ಅಭಿಮಾನಿ ದೇವರುಗಳು ಸಹಾ ಅರೇ ನಿಮ್ಮಿಂದ ಆ ಚಿತ್ರದ ಕುರಿತಾದ ಲೇಖನಿ ಇನ್ನೂ ಏಕೆ ಬರಲಿಲ್ಲ ಎಂದು ಮೇಲಿಂದ ಮೇಲೆ ವಿಚಾರಿಸುತ್ತಲೇ ಇದ್ದರು. ಅದರ ಕುರಿತಾಗಿ ಈಗಾಗಲೇ ನೂರಾರು ಜನರು ಬರೆದಿರುವ ಕಾರಣ ಬರೆಯುವುದಕ್ಕೆ ನನಗೇನೂ ಉಳಿದಿಲ್ಲ ಎಂಬ ಹಾರಿಕೆ ಉತ್ತರವನ್ನು ಅವರೆಲ್ಲರಿಗೂ ಕೊಟ್ಟಿದ್ದೆನಾದರೂ ಅಸಲಿ ಕಾರಣ ಬೇರೆಯೇ ಇತ್ತು.

ಕಳೆದ ಎರಡು ವಾರಗಳಿಂದಲೂ ಒಂದಲ್ಲಾ ಒಂದು ಕೆಲಸದ ನಿಮಿತ್ತ ಆ ಚಿತ್ರವನ್ನು ನೋಡಲಾಗಿರಲಿಲ್ಲ. ಚಿತ್ರವನ್ನೇ ನೋಡದೇ ಅದರ ಕುರಿತಾಗಿ ಲೇಖನ ಬರೆಯುವುದು ಸರಿಯಲ್ಲದ ಕಾರಣ, ಇಂದು ಸಮಯ ಮಾಡಿಕೊಂಡು ಮಗನೊಂದಿಗೆ (ನನಗಾಗಿ ಕಾದೂ ಕಾದು ಸುಸ್ತಾಗಿ ಮಡದಿ, ಮಗಳು ಅತ್ತೆ ಮತ್ತು ಮಾವನವರು ಅದಾಗಲೇ ಚಿತ್ರವನ್ನು ನೋಡಿಬಿಟ್ಟಿದ್ದರು) ಹೋಗಿ ೩ ಗಂಟೆಗಳ ಕಾಲ ನಿಶ್ಯಬ್ಧ ಮೌನದೊಂದಿಗೆ ಚಿತ್ರವನ್ನು ವೀಕ್ಷಿಸಿ ಹೊರಬರುವಾಗ ಸೂತಕದ ಮನೆಯಿಂದ ಹೊರಬಂದ ಹಾಗಿತ್ತು ಎನ್ನುವುದೇ ನನ್ನ ಮೊದಲ ಪ್ರತಿಕ್ರಿಯೆಯಾಗಿತ್ತು.

ಚಿತ್ರದಲ್ಲಿ ತೋರಿಸಿರುವ ಅನೇಕ ಘಟನೆಗಳನ್ನು ಬಿಡಿ ಬಿಡಿಯಾಗಿ ಈಗಾಗಲೇ ಅನೇಕ ಕಡೆಯಿಂದ ಓದಿ ತಿಳಿದಿದ್ದ ನಮಗೆ ಅವೆಲ್ಲವನ್ನೂ ೩ ಗಂಟೆಗಳಲ್ಲಿ ಪ್ರಭಲ ಮಾಧ್ಯಮವಾದ ಚಿತ್ರದ ಮೂಲಕ ನೋಡುವ ಅನುಭವವೇ ವಿಭಿನ್ನವಾಗಿತ್ತು. ಅದರಲ್ಲೂ ಕೃಷ್ಣಾ ಪಂಡಿತ್ ಕಶ್ಯಪ ಋಷಿಗಳಿಂದ ಆರಂಭವಾದ ಕಾಶ್ಮೀರ ಹೇಗೆ ಇಡೀ ಪ್ರಪಂಚದ ವಿದ್ಯೆ ಬುದ್ಧಿ ಜ್ಣಾನಗಳ ಶಕ್ತಿ ಪೀಠವಾಗಿತ್ತು. ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದದ್ದು ಅತ್ಯಂತ ಮನಮುಟ್ಟುವಂತಿತ್ತು.

ವಿವರಿಸುವ ಮೋಡೊದ ತಿಳಿಸಿದ್ದು ಕಶ್ಮೀರದ ಕುರಿತಾದ
ಹಸಿ ಮೆಣಸಿನಕಾಯಿಯನ್ನು ಸಿಗಿದ ಹಾಗೆ ಜೀವಂತ ಮಹಿಳೆಯೊಬ್ಬಳನ್ನು ಮರಕೊಯ್ಯುವ ಯಂತ್ರಕ್ಕೆ ಕೊಟ್ಟು ಎರಡು ಹೋಳು ಮಾಡಿ ಎಸೆದ ಪಾಪಿ ಯಾಸಿನ್ ಮಲಿಕನ ರಕ್ತಸಿಕ್ತ ಕೈಯನ್ನು ಮನಮೋಹನಸಿಂಗ್ ಎಂಬ ಆಕೃತಿ ಕುಲುಕುಲು ಕುಲುಕುತ್ತಿರುವ ದೃಶ್ಯ ಕಂಡು ಕರುಳು ಕಿವುಚಿದ ಅನುಭವವಾಯಿತು.

ಕಾಶ್ಮೀರಿ ಫೈಲ್ಸ್ ಚಿತ್ರದ ಮೂಲಕ ಸದ್ದಿಲ್ಲದೆ ಸತ್ತು ಹೋದ ನತದೃಷ್ಟ ಕಾಶ್ಮೀರೀ ಹಿಂದುಗಳು ತಮ್ಮ ಮಾರಣಹೋಮದ ಭಯಾನಕ ಕಥೆಗಳನ್ನು ಒಂದೊಂದಾಗಿ ಶವಪೆಟ್ಟಿಗೆಯಿಂದ ಹೊರಬಂದು ಹೇಳತೊಡಗಿದ್ದಾರೆ. ಸರ್ಕಾರಿ ದಾಖಲೆಯಲ್ಲೇ ಉಳಿದಿದ್ದ ಅನೇಕ ರಾಕ್ಷಸೀ ಕೃತ್ಯಗಳನ್ನು ಜನರು ದೂಳು ಕೊಡವಿ ಓದಲು ಆರಂಭಿಸಿದ್ದಾರೆ. ಕಾಶ್ಮೀರದ ಅರಣ್ಯರೋಧನಕ್ಕೆ ಮೂರು ದಶಕದ ಬಳಿಕ ಇಡೀ ದೇಶ ಈಗ ಕಿವಿಯಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ