ಕನ್ನಡದ ಮೇರು ನಟ ಬಾಲಕೃಷ್ಣ ಅವರ ಜೊತೆ ಜೊತೆಯಲ್ಲಿಯೇ ಗುಬ್ಬಿ ನಾಟಕದ ಕಂಪನಿಯಲ್ಲಿದ್ದು ನಂತರ ರಾಧಾ ರಮಣ ಚಿತ್ರದ ಮೂಲಕವೇ ಒಟ್ಟೊಟ್ಟಿಗೆ ಚಿತ್ರರಂಗ ಪ್ರವೇಶಿಸಿ ಮುಂದೆ ದಿಗ್ಗಜರಾಗಿ ಬೆಳೆದ ಮಹಾನ್ ನಟ, ಚಿತ್ರಸಾಹಿತಿ, ಸಂಭಾಷಣೆಕಾರ, ಗೀತರಚನೆಕಾರ, ನಿರ್ಮಾಪಕ, ನಿರ್ದೇಶಕ ಎಲ್ಲದಕ್ಕಿಂತಲೂ ಹೆಚ್ಚಾಗಿ ಜನಾನುರಾಗಿ, ಕನ್ನಡ ಚಿತ್ರರಂಗದ ರಾಜರ್ಷಿ, ಕನ್ನಡ ಚಿತ್ರ ರಂಗದ ಭೀಷ್ಮ ಪಿತಾಮಹ ಎಂದರೂ ತಪ್ಪಾಗಲಾರದ ಶ್ರೀ ಗಣಪತಿ ವೆಂಕಟರಮಣ ಅಯ್ಯರ್ ಅರ್ಥಾತ್ ಜಿ.ವಿ.ಐಯ್ಯರ್ ಅವರ ಸಾಧನೆಗಳನ್ನು ಮೆಲುಕು ಹಾಕೋಣ.

1917ರ ಸೆಪ್ಟೆಂಬರ್ 3ರಂದು ನಂಜನಗೂಡಿನ ವೈದೀಕ ಮನತನದಲ್ಲಿ ಶ್ರೀ ಜಿ.ವಿ.ಅಯ್ಯರ್ ಅವರ ಜನನವಾಗುತ್ತದೆ. ಕೇವಲ ಎಂಟು ವರ್ಷದಲ್ಲಿರುವಾಗಲೇ ಬಣ್ಣದ ಗೀಳನ್ನು ಹಿಡಿದು ಮನೆ ಬಿಟ್ಟು ಹೋರಟಾಗ ಅವರಿಗೆ ಆಶ್ರಯ ನೀಡಿದ್ದೇ ಗುಬ್ಬಿ ವೀರಣ್ಣನವರ ಕಂಪನಿ. ಬಾಲಣ್ಣನವರಂತೇ ಇವರು ಸಹಾ ಭಿತ್ತಿ ಪತ್ರ ಅಂಟಿಸುವುದು, ಕರ ಪತ್ರ ಹಂಚುವುದು, ಪ್ರಚಾರ ಮಾಡುವುದು, ಬೋರ್ಡ್ ಬರೆಯುವುದರ ಮೂಲಕವೇ ಅರಂಭವಾಗಿ ನಂತರ ಸಣ್ಣ ಪುಟ್ಟ ಪಾತ್ರಗಳ ನಂತರ, ನರಸಿಂಹ ರಾಜು, ಬಾಲಕೃಷ್ಣ ಅವರ ಜೊತೆಗೂಡಿದ ಜಿ.ವಿ. ಅಯ್ಯರ್ ಅತ್ಯುತ್ತಮ ಹಾಸ್ಯ ಕಲಾವಿದರುಗಳು ಜೋಡಿ ಆದರು. ಅನಂತರ ಅವಕಾಶಗಳನ್ನರಸಿ ಪೂನಾಗೆ ಹೋಗಿ, ಅಲ್ಲಿ ಹೋಟೆಲ್ ಒಂದರಲ್ಲಿ ಮಾಣಿಯಾಗಿದ್ದುಕೊಂಡೇ ಚಲನಚಿತ್ರಗಳಲ್ಲಿ ಅವಕಾಶಗಳಿಗೆ ಪ್ರಯತ್ನಿಸಿದರಾದರೂ, ಅದು ಫಲಕಾರಿಯಾಗದೆ ಮತ್ತೆ ಕರ್ನಾಟಕಕ್ಕೆ ಹಿಂದಿರುಗಿ, ಕರ್ನಾಟಕ ನಾಟಕ ಸಭಾ ಕಂಪನಿಗೆ ಸೇರಿ ಬೇಡರ ಕಣ್ಣಪ್ಪ, ಭಾರತಲಕ್ಷ್ಮಿ, ಟಿಪ್ಪೂಸುಲ್ತಾನ್, ವಿಶ್ವಾಮಿತ್ರ, ಮುಂತಾದ ನಾಟಕಗಳಲ್ಲಿ ಅಭಿನಯಿಸುತ್ತಿರುವ ಸಮಯದಲ್ಲಿಯೇ ಎಂ.ವಿ.ರಾಜಮ್ಮನವರು ನಿರ್ಮಿಸಿದ ರಾಧಾರಮಣ ಚಿತ್ರದ ಮೂಲಕ ಬಾಲಕೃಷ್ಣ ಅವರ ಜೊತೆಯಲ್ಲಿಯೇ ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

iyer1

ಮುಂದೆ 1954ರಲ್ಲಿ ಎಚ್ ಎಲ್ ಎನ್ ಸಿಂಹರ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ದಿಗ್ಗಜರಾದ ರಾಜ್’ಕುಮಾರ್ ಮತ್ತು ನರಸಿಂಹರಾಜು ಅವರ ಜೊತೆ ಜಿ.ವಿ.ಅಯ್ಯರ್ ಅವರಿಗೂ ಕೂಡಾ ಆ ಚಿತ್ರ ಖ್ಯಾತಿಯನ್ನು ತಂದು ಕೊಟ್ಟಿತು. ಆನಂತರ ಮೂವರೂ ಅನೇಕ ಚಿತ್ರಗಳಲ್ಲಿ ಒಟ್ಟೊಟ್ಟಿಗೆ ಅಭಿನಯಿಸತೊಡಗಿದರೆ, ಅಯ್ಯರ್ ಅವರು ನಟನೆಯ ಜೊತೆಗೆ ಬರವಣಿಗೆಯಲ್ಲಿ ಕೈಯ್ಯಾಡಿಸತೊಡಗಿ ಹಲವಾರು ಜನಪ್ರಿಯ ಗೀತೆಗಳ ರಚನಕಾರರಾಗಿಯೂ ಮತ್ತು ಅತ್ಯುತ್ತಮ ಸಂಭಾಷಣೆಕಾರರಾಗಿಯೂ ಖ್ಯಾತಿ ಪಡೆಯತೊಡಗಿದರು.

iyer5

ವಾಲ್ಮೀಕಿ ಚಿತ್ರದ ‘ಜಲಲ ಜಲಲ ಜಲ ಧಾರೆ’, ದಶಾವತಾರ ಚಿತ್ರದ ‘ಗೋದಾವರಿ ದೇವಿ ಮೌನವಾಗಿಹೆ ಏಕೆ’, ‘ವೈದೇಹಿ ಏನಾದಳು’, ಎಮ್ಮೆ ತಮ್ಮಣ್ಣ ಚಿತ್ರದ ‘ನೀನಾರಿಗಾದೆಯೋ ಎಲೆ ಮಾನವ’, ಕಿತ್ತೂರು ಚೆನ್ನಮ್ಮ ಚಿತ್ರದ ‘ಸನ್ನೆ ಏನೇನೋ ಮಾಡಿತು ಕಣ್ಣು’, ರಣಧೀರ ಕಠೀರವ ಚಿತ್ರದ ‘ಕರುನಾಡ ಕಣ್ಮಣಿಯೇ ಕಂಠೀರವ’, ರಾಜಶೇಖರ ಚಿತ್ರದ ‘ಮುತ್ತಂಥ ಮಗನಾಗಿ ಹೆತ್ತವಳ ಸಿರಿಯಾಗಿ’, ಸಂಧ್ಯಾರಾಗದ ‘ನಂಬಿದೆ ನಿನ್ನ ನಾದ ದೇವತೆಯೇ’, ‘ಕನ್ನಡತಿ ತಾಯೆ ಬಾ’, ಕಣ್ತೆರೆದು ನೋಡು ಚಿತ್ರದ ‘ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ’, ಗಾಳಿಗೋಪುರ ಚಿತ್ರದ ‘ಗಾಳಿಗೋಪುರ ನಿನ್ನಾಶಾ ತೀರ ನಾಳೆ ಕಾಣುವ’, ‘ನನ್ಯಾಕೆ ನೀ ಹಾಗೇ ನೋಡುವೆ ಮಾತಾಡೇ ಬಾಯಿಲ್ಲವೇ’, ಪೋಸ್ಟ್ ಮಾಸ್ಟರ್ ಚಿತ್ರದ ‘ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ’, ತಾಯಿ ಕರುಳು ಚಿತ್ರದ ‘ಬಾ ತಾಯೆ ಭಾರತಿಯೇ ಭಾವ ಭಾಗೀರಥಿಯೇ’ ಮುಂತಾದ ಜನಪ್ರಿಯ ಗೀತೆಗಳೊಂದಿಗೆ ಸರಿ ಸುಮಾರು 850 ಅಧ್ಭುತ ಗೀತೆಗಳು ಅಯ್ಯರ್ ಅವರ ಲೇಖನಿಯಿಂದ ಮೂಡಿಬಂದವು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ