- ರಾಘವೇಂದ್ರ ಅಡಿಗ ಎಚ್ಚೆನ್.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ  ಹೊಸ ಟ್ವಿಸ್ಟ್‌ ಪಡೆದುಕೊಂಡಿದೆ. ಒಂದು ಕಡೆ ಕೆಡಿ ಜೈದೇವ್‌, ಬೇಬಿ ದಿಯಾಳ ಆಳಾಗಿದ್ದಾನೆ. ಇನ್ನೊಂದು ಕಡೆ ಗೌತಮ್‌ ದಿವಾನ್‌ ಮಕ್ಕಳನ್ನು ಸಂಭಾಳಿಸಲು ಪರದಾಡಿದ್ದಾನೆ. ಅಮೃತಧಾರೆ ಸೀರಿಯಲ್‌ನಲ್ಲಿ ವಿಲನ್ ಕೇಡಿ ಜೈದೇವ್ ಅಕ್ಷರಶಃ ಬೀದಿಗೆ ಬಿದ್ದಿದ್ದಾನೆ. ಜೈದೇವ್‌ ಇದೀಗ ತನ್ನ ಎರಡನೇ ಪತ್ನಿಯ ಮನೆಯಲ್ಲಿ ಕೆಲಸದಾಳಾಗಿದ್ದೇನೆ. ಪೊಲೀಸ್ ಸ್ಟೇಷನ್‌ನಿಂದ ಸುಸ್ತಾಗಿ ಹೊರಗೆ ಬಂದು ಎಲ್ಲಿಯೂ ಊಟ ಸಿಗದೆ ಕಂಗಾಲಾಗಿದ್ದಾನೆ. ಜೈದೇವ್‌ಗೆ ಬೇಬಿ ಇನ್ನಷ್ಟು ಕೆಲಸ ಕೊಟ್ಟಿದ್ದಾಳೆ. ಅಷ್ಟೇ ಅಲ್ಲ ಕ್ಷಣ ಕ್ಷಣಕ್ಕೂ ಅವಮಾನ ಮಾಡುತ್ತಿದ್ದಾಳೆ.
ಮೊದಲಿಗೆ ಊಟ ಮಾಡು ಎಂದು ಮನೆಯ ಎಲ್ಲ ಕೆಲಸಗಳನ್ನು ಮಾಡಿಸಿಕೊಂಡಿದ್ದಾಳೆ ದಿಯಾ. ಅಷ್ಟೇ ಅಲ್ಲ ಇನ್ನಷ್ಟು ಜೈದೇವ್‌ನನ್ನು ಬಳಸಿಕೊಳ್ಳುವೆ ಅಂತ ಮನಸ್ಸಿನಲ್ಲಿಯೇ ಮಾತನಾಡಿಕೊಂಡಿದ್ದಾಳೆ. ಅಷೇ ಅಲ್ಲ ನನ್ನನ್ನು ಯಾವತ್ತೂ ಉಪಯೋಗಿಸಿಕೊಂಡೆ, ಭಿಕ್ಷುಕಿ ಥರ ಟ್ರೀಟ್‌ ಮಾಡಿದ್ದೆ, ನಿನ್ನನ್ನು ಸುಮ್ಮನೆ ಬಿಡೋಲ್ಲ ಅಂತ ಕೂಡ ನೇರವಾಗಿ ಸವಾಲ್‌ ಹಾಕಿದ್ದಾಳೆ. ಮುಂದೆ ಜೈದೇವ್‌ ಗತಿ ಇನ್ನಷ್ಟು ಕಷ್ಟಕರ ಆಗೋದ್ರಲ್ಲಿ ಸಂಶಯವೇ ಇಲ್ಲ.
ಇನ್ನು ಮಹಿಮಾ ಗರ್ಭಿಣಿಯಾಗಿದ್ದಾರೆ. ಗೌತಮ್ ಮನೆಗೆ ಭೇಟಿ ನೀಡಿರುವ ಮಹಿಮಾ ಎಲ್ಲರೊಂದಿಗೆ ಮಾತನಾಡಿರುವುದು ಹೊಸ ಎಪಿಸೋಡ್‌ನಲ್ಲಿ ಇದೆ. ನೀನು ಹೆಚ್ಚು ಪ್ರವಾಸ ಮಾಡಬಾರದು ಎಲ್ಲಿಯೂ ಓಡಾಡಬಾರದು ಅಂತ ಹೇಳಿದ್ದಾರೆ. ಅದಕ್ಕೆ ಮಹಿಮಾ ನನ್ನು ಇಷ್ಟೊಂದು ರಿಸ್ಟ್ರಿಕ್ ಮಾಡಬೇಡಿ, ನನ್ನ ಇಷ್ಟದಂತೆ ಬಿಡಿ ಅಂತ ಹೇಳಿದ್ದಾಳೆ. ಇದಕ್ಕೆ ಗೌತಮ್ ನಿನ್ನ ಇಷ್ಟದ ಪ್ರಕಾರವೇ ಇರು ಆದರೆ ಈ ರೀತಿಯ ಸಮಯದಲ್ಲಿ ಹೆಚ್ಚು ಕಾಳಜಿ ವಹಿಸಬೇಕು ಅಂತ ಸಲಹೆ ನೀಡಿದ್ದಾರೆ.
ಇನ್ನು ಅಮೃತಧಾರೆ ಸೀರಿಯಲ್‌ನಲ್ಲಿ ಮಿಂಚು ಹಾಗೂ ಅಪ್ಪು ನಡುವಿನ ಮುದ್ದಿನ ಕಿತ್ತಾಟವು ಹೈಲೈಟ್‌ ಆಗಿದೆ. ಅಪ್ಪುವಿನ ವರ್ತನೆಗೆ ಗೌತಮ್ ದಿವಾನ್ ಅವರು ಸಣ್ಣದಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಪ್ಪುವಿಗೆ ಗೌತಮ್‌ ನೋಡಪ್ಪ ನೀನು ಹಿಂಗೆ ಮಾಡಿದರೆ ನಾನು ಮಾತೇ ಆಡಲ್ಲ ಅಂತ ಹೇಳಿದ್ದಾರೆ. ಏನು ಕೊಡಿಸುವುದು ಇಲ್ಲ, ಬೋರ್ಡಿಂಗ್‌ ಸ್ಕೂಲ್‌ ಹಾಕುವೆ ಎಂದಿದ್ದಾನೆ. ಅಲ್ಲಿಗೆ ಸಾರಿ ಅಂತ ಕೇಳಿ ಸುಮ್ಮನಾಗಿದ್ದಾರೆ ಮಕ್ಕಳು. ಇದೀಗ ಮಗಳು ಕಾಣೆಯಾಗಿರುವ ವಿಷಯದ ಬಗ್ಗೆ ಮನೆಯ ಪೂಜೆಯಲ್ಲಿ ಭಾಗಿಯಾಗಿದ್ದ ಅಖಿಲಾಂಡೇಶ್ವರಿ ಅವರಿಗೆ ವಿಷಯ ತಿಳಿದಿದ್ದು, ಮಗಳ ಪತ್ತೆಗೆ ಉದ್ಯಮಿ ಅಖಿಲಾಂಡೇಶ್ವರಿ ಅವರ ಅಭಯ ಹಸ್ತ ಸಿಕ್ಕಿದೆ.ಮುಂದೆ ಏನಾಲಗಲಿದೆ ಎನ್ನೋದೇ ವೀಕ್ಷರಲ್ಲಿ ಇರೋ ಕುತೂಹಲ.
ʻಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ