- ರಾಘವೇಂದ್ರ ಅಡಿಗ ಎಚ್ಚೆನ್. 

ತಮಿಳು ನಟ ಜಯಂ ರವಿ ತಮ್ಮ ವೈಯಕ್ತಿಕ ಜೀವನದ ವಿವಾದಗಳ ಬಗ್ಗೆ ಮೌನ ಮುರಿದಿದ್ದು, ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಪತ್ನಿ ಆರತಿಯಿಂದ ಪ್ರತ್ಯೇಕವಾಗಿರುವ ರವಿ, ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಮಾತನಾಡಿ, ತಮ್ಮ ವೈವಾಹಿಕ ಜೀವನದಲ್ಲಿ ಅನುಭವಿಸಿದ ನೋವು, ಅವಮಾನ ಮತ್ತು ಆನ್‌ಲೈನ್ ಟ್ರೋಲಿಂಗ್ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

‘ನನಗೆ ಅಧಿಕೃತವಾಗಿ ವಿಚ್ಛೇದನ ಸಿಗುವವರೆಗೆ ಯಾವುದೇ ಸಿನಿಮಾದಲ್ಲಿ ನಟಿಸುವುದಿಲ್ಲ. ನನ್ನ ಖಾಸಗಿ ಬದುಕಿಗೆ ಆಗಿರುವ ಹಾನಿ ಮತ್ತು ಅವಮಾನದಿಂದ ಹೊರಬರಬೇಕು. 14 ವರ್ಷಗಳಿಂದ ಮೌನವಾಗಿದ್ದೆ, ಆದರೆ ಇನ್ನು ಮುಂದೆ ಎಲ್ಲ ಸತ್ಯಗಳನ್ನು ಹೊರಗೆ ತರುತ್ತೇನೆ’ ಎಂದು ಜಯಂ ರವಿ ಹೇಳಿದ್ದಾರೆ.

ಸುದ್ದಿಗೋಷ್ಠಿಯ ವೇಳೆ ತೀವ್ರ ಭಾವೋದ್ವೇಗಕ್ಕೆ ಒಳಗಾದ ರವಿ, ‘ನಾನು ಮನೆಯಲ್ಲಿದ್ದಾಗ ನನ್ನನ್ನು ಗುಲಾಮನಂತೆ ನೋಡಿದರು. ಈಗ ನನ್ನ ಮಕ್ಕಳನ್ನೇ ನೋಡಲು ಅವಕಾಶ ಕೊಡುತ್ತಿಲ್ಲ. ಮಕ್ಕಳ ಶಿಕ್ಷಣಕ್ಕಾಗಿ 90 ಲಕ್ಷ ರೂ. ಫೀಸ್ ಕಟ್ಟುತ್ತಿದ್ದೇನೆ. ಪ್ರತಿದಿನ ಮಗನ ಜೊತೆ ಚೆಸ್ ಆಡುತ್ತಿದ್ದೆ. ಆದರೂ ನನಗೆ ಮಕ್ಕಳ ಮೇಲೆ ಪ್ರೀತಿ ಇಲ್ಲ ಎಂದು ಹೇಳಲಾಗುತ್ತಿದೆ’ ಎಂದು ಕಣ್ಣೀರಿಟ್ಟರು.

ಆನ್‌ಲೈನ್ ಟ್ರೋಲಿಂಗ್ ವಿರುದ್ಧವೂ ಅವರು ಕಿಡಿಕಾರಿದ್ದು, ‘ನನ್ನ ಜೀವನ ಈಗಾಗಲೇ ಹಾಳಾಗಿದೆ. ಮತ್ತಷ್ಟು ನೋವು ಕೊಡಬೇಡಿ. ಒಬ್ಬ ಮಹಿಳೆಯನ್ನು ಚೆನ್ನೈ ಬಿಟ್ಟು ಹೋಗುವ ಮಟ್ಟಿಗೆ ಟ್ರೋಲ್ ಮಾಡಲಾಗಿದೆ’ ಎಂದು ಪರೋಕ್ಷವಾಗಿ ಗಾಯಕಿ ಕೆನೀಶಾ ಫ್ರಾನ್ಸಿಸ್ ವಿಚಾರ ಪ್ರಸ್ತಾಪಿಸಿದರು.

ಈ ನಡುವೆ, ರವಿ ಜೊತೆ ಆಪ್ತವಾಗಿದ್ದರು ಎನ್ನಲಾದ ಗಾಯಕಿ ಕೆನೀಶಾ ಫ್ರಾನ್ಸಿಸ್ ಸಾಮಾಜಿಕ ಜಾಲತಾಣದಲ್ಲಿ ‘ವಿದಾಯ ಚೆನ್ನೈ, ಅವನು ಈಗ ಸಂಪೂರ್ಣವಾಗಿ ನಿಮ್ಮವನೇ’ ಎಂದು ಪೋಸ್ಟ್ ಮಾಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ