ಸರಸ್ವತಿ ಜಾಗೀರ್ದಾರ್*
ರಾಜು ಜೇಮ್ಸ್ ಬಾಂಡ್ ಫಿಲಂ ಒಂದು ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ಟೈನರ್ ಆಗಿ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತ ಮನೆಮಾತಾಗಿರುವಾಗಲೇ ಇದೀಗ ಚಿತ್ರದ ಯಶಸ್ಸು ವಿಧಾನಸೌಧಕ್ಕೆ ಮುಟ್ಟಿದೆ ಎಂಬುದಕ್ಕೆ, ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರು ಚಿತ್ರತಂಡವನ್ನು ಭೇಟಿ ಮಾಡಿ, ಚಿತ್ರದ ಶೋ ರೀಲ್ ನೋಡಿ ಅಭಿನಂದರಿಸುವುದೇ ಮುಖ್ಯ ಸಾಕ್ಷಿಯಾಗಿದೆ. ಈ ಸಿನಿಮಾದಲ್ಲಿನ ಸಾಲ ಎಂಬುದು ಮಧ್ಯಮ ವರ್ಗದ ಜನರಿಗೆ ಎಷ್ಟರ ಮಟ್ಟಿಗೆ ಹಿಂಸೆಯಾಗಿದೆ ಹಾಗೇ ಸಾಲದ ಸುತ್ತ ನಡೆಯುವ ಒದ್ದಾಟಗಳುಳ್ಳ ಅಂಶ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಇಷ್ಟಪಟ್ಟಿದ್ದಾರೆ. ಈ ಬ್ಯುಸಿ ಸ್ಕೆಡ್ಯೂಲ್ನಲ್ಲಿ ಆದಷ್ಟು ಬೇಗ ಸಮಯ ಮಾಡಿಕೊಂಡು ಪೂರ್ಣ ಪ್ರಮಾಣ ಚಿತ್ರವನ್ನು ವೀಕ್ಷಿಸಲಿದ್ದಾರೆಂದು ಆಸೆಯನ್ನು ವ್ಯಕ್ತ ಪಡಿಸಿದ್ದಾರೆ. ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೊದಲಾರ್ಧ ಸಿಕ್ಕಾಪಟ್ಟೆ ಕಾಮಿಡಿ ಹೊಂದಿದ್ದು, ದ್ವಿತಿಯಾರ್ಧ ಹೀರೋ ತನ್ನ ಪರಿಸ್ಥಿತಿಯನ್ನ ಹೇಗೆ ವಿಲನ್ ಜೊತೆ ಹೊಡೆದಾಡಿ ಆಚೆ ಬರುತ್ತಾನೆಂಬ ಚಾಣಾಕ್ಷತನ ವಿಷಯಗಳನ್ನ ಹೊಂದಿದೆ. ಹಾಗೇ ಮಧ್ಯಮ ವರ್ಗದ ಜನರ ಸಾಲದ ಸುಳಿಗಳಲ್ಲಿ ಹೇಗೆ ಕಷ್ಟ-ನೋವುಗಳನ್ನ ಅನುಭವಿಸುತ್ತಿದ್ದಾರೆಂಬ ವಿಷಯಗಳನ್ನ ತೀಕ್ಷ್ಣವಾಗಿ ವ್ಯಕ್ತ ಪಡಿಸಿದ್ದಾರೆ. ಈ ವಿಷಯಗಳು ಎಲ್ಲೆಡೆ ಸದ್ದು ಮಾಡುತ್ತಿದೆ. ಇದರಿಂದಾಗಿ ಮೊನ್ನೆಯಷ್ಟೆ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರು ಚಿತ್ರತಂಡವನ್ನು ಕರೆಸಿ ಮಾತನಾಡಿಸಿದ್ದಾರೆ. ಇವತ್ತು ಮುಖ್ಯಮಂತ್ರಿಗಳು ಕರೆಸಿ ಚಿತ್ರದ ಕುರಿತು ಮಾತನಾಡಿದ್ದಾರೆ. ರಾಜಕೀಯ ವಲಯದಲ್ಲು ಬಾರಿ ಸದ್ದು ಮಾಡುತ್ತಿರುವ ರಾಜು ಜೇಮ್ಸ್ ಬಾಂಡ್, ಆದಷ್ಟು ಬೇಗ ತಮ್ಮ ಹತ್ತಿರದ ಚಿತ್ರ ಮಂದಿರಗಳಲ್ಲಿ ವೀಕ್ಷಿಸಿ.