ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಹಾಗೂ ಇತರೆ ಭಾಷೆಗಳಲ್ಲೂ ತಮ್ಮನ್ನು ಗುರುತಿಸಿಕೊಂಡಿರುವ ಡಾಲಿ ಧನಂಜಯ ಅವರ ಹೊಸ ಬದುಕು ಶುರುವಾಗಿದೆ. ವೈದ್ಯೆ ಆಗಿರುವ ಧನ್ಯತಾ ಜೊತೆ ಡಾಲಿ ಧನಂಜಯ ವಿವಾಹ ಬಂಧನಕ್ಕೊಳಗಾಗಿದ್ದಾರೆ.
ಮೈಸೂರಿನಲ್ಲಿ ಬಹಳ ಅದ್ದೂರಿಯಾಗಿ ಡಾಲಿ ಧನಂಜಯ ಅವರ ಮದುವೆ ನಡೆದಿದೆ. ಅನೇಕ ಸೆಲೆಬ್ರಿಟಿಗಳು ಈ ಮದುವೆಗೆ ಸಾಕ್ಷಿ ಆಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ವಿವಾಹ ಸಮಾರಂಭಕ್ಕೆ ಹಾಜರಿ ಹಾಕಿದ್ದಾರೆ.
ಇನ್ಲ್ಯಾಂಡ್ ಪೋಸ್ಟ್ ಲೆಟರ್ನಲ್ಲಿ ಮದುವೆ ಆಮಂತ್ರಣ ನೀಡಿ ಗಮನ ಸೆಳೆದಿದ್ದ ಡಾಲಿ ಮದುವೆ ತುಂಬಾ ಅದ್ಭುತವಾಗಿ ನೆರವೇರಿದೆ. ಇಡೀ ಕರ್ನಾಟಕದ ಎಲ್ಲಾ ರಾಜಕೀಯ ಗಣ್ಯರು, ಸ್ವಾಮೀಜಿಗಳು, ನಟ, ನಟಿಯರು ಸೇರಿದಂತೆ ಅಭಿಮಾನಿಗಳಿಗೂ ಆಹ್ವಾನ ನೀಡಿದ್ದ ಧನಂಜಯಗೆ ಅಸಂಖ್ಯಾತರು ಬಂದು ಹರಸಿ ಹಾರೈಸಿದರು. ಭಾನುವಾರದಿಂದಲೇ ನಟ ಡಾಲಿ ಬದುಕಿನಲ್ಲಿ ಈಗ ಹೊಸ ಅಧ್ಯಾಯ ಆರಂಭವಾಗಿದೆ.
ಮದುವೆ ಫಿಕ್ಸ್ ಆದ ಕ್ಷಣದಿಂದಲೂ ಖುಷಿ ಖುಷಿಯಾಗಿದ್ದ ಡಾಲಿ ಧನಂಜಯ ಅವರು, ಧನ್ಯತಾಗೆ ತಾಳಿ ಕಟ್ಟುವಾಗ ಕೊಂಚ ಎಮೋಷನಲ್ ಆಗಿದ್ದರು. ಅದೆಷ್ಟೇ ನಟಿಸಿದ್ದರೂ.. ಅದೆಷ್ಟೇ ಮಾತನಾಡಿದರೂ.. ಮದುವೆ ಆಗುವ ಹುಡುಗಿ ಅದೆಷ್ಟೇ ಪರಿಚಯವಿದ್ರೂ ಕೂಡ ಮೂರು ಗಂಟು ಹಾಕುವಾಗ ಯಾರೇ ಆಗಲಿ ಒಂದು ಕ್ಷಣ ಎಮೋಷನಲ್ ಆಗೋದಂತೂ ಪಕ್ಕಾ.
ಮೈಸೂರಿನಲ್ಲೇಕೆ ಮದುವೆ..? :
ಅಸಲಿಗೆ ಡಾಲಿ ಧನಂಜಯ ಹಾಗೂ ಧನ್ಯತಾ ಅವರಿಗೆ ಮೈಸೂರು ಇಷ್ಟದ ಸ್ಥಳ. ಹಾಗಾಗಿ ಮೈಸೂರಿನಲ್ಲೇ ಮದುವೆ ಮಾಡಲಾಗಿದೆ. ದೇವಸ್ಥಾನದ ಥೀಮ್ನಲ್ಲಿ ಗ್ರ್ಯಾಂಡ್ ಆಗಿ ಡಾಲಿ ಮದುವೆಯ ಮಂಟಪ ಸಿದ್ಧವಾಗಿತ್ತು.
ಧನ್ಯತಾ ಅವರು ವೈದ್ಯರಾಗಿದ್ದಾರೆ. ಅವರದ್ದು ಅರೇಂಜ್ ಮ್ಯಾರೇಜ್. ಕುಟುಂಬದವರು, ಆಪ್ತರು, ಸೆಲೆಬ್ರಿಟಿಗಳು, ಅಭಿಮಾನಿಗಳು ಈ ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಡಾಲಿ ಮದುವೆಯದ್ದೇ ಮಾತಾಗಿದ್ದು, ಮದುವೆಯ ಫೋಟೋಗಳು ಕಲರ್ಫುಲ್ ಆಗಿವೆ.
ನಟನಾಗಿ, ನಿರ್ಮಾಪಕನವಾಗಿರುವ ಡಾಲಿ ಧನಂಜಯ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಹೀರೋ ಆಗಿ.. ವಿಲನ್ ಆಗಿಯೂ ಜನಮನ ಗೆದ್ದಿರುವ ಡಾಲಿ, ತೆಲುಗಿನಲ್ಲೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಅಭಿಮಾನಿಗಳಿದ್ದರೆ ನಾವು.. ಅವರಿಂದಲೇ ನಮಗೆ ಅನ್ನ.. ಬಡವರ ಮಕ್ಕಳು ಬೆಳೀಬೇಕು ಅನ್ನೋ ಡಾಲಿ ತುಂಬಾ ಸಿಂಪಲ್ ಮತ್ತು ಹಂಬಲ್ ಪರ್ಸನ್ ಆಗಿಯೂ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದಾರೆ.