- ರಾಘವೇಂದ್ರ ಅಡಿಗ ಎಚ್ಚೆನ್.

ಈ ಹಿಂದೆ ‘ಜಟ್ಟ’, ‘ಮೈತ್ರಿ’ ಮೊದಲಾದ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಬಿ. ಎಂ. ಗಿರಿರಾಜ್ ಅಲಿಯಾಸ್‍ ‘ಜಟ್ಟ’ ಗಿರಿರಾಜ್, ಈ ಬಾರಿ ‘ಕಲ್ಯಾಣಿ’ ಎಂಬ ಮತ್ತೊಂದು ವಿಭಿನ್ನ ಕಥಾಹಂದರವನ್ನು ತೆರೆಮೇಲೆ ತರುವ ತಯಾರಿಯಲ್ಲಿದ್ದಾರೆ.

ಕೆಲವು ತಿಂಗಳ ಹಿಂದೆಯೇ ಸದ್ದಿಲ್ಲದೆ ಶುರುವಾಗಿದ್ದ ಈ ಚಿತ್ರ, ಸದ್ಯ ಚಿತ್ರೀಕರಣವ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಹಾಡುಗಳನ್ನು ಬಿಡುಗಡೆ ಮಾಡಿದ ಚಲನಚಿತ್ರ ನಿರ್ದೇಶಕ ಶಶಾಂಕ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ನಿರ್ಮಾಣ ಸಂಸ್ಥೆಯ ಮೂಲಕ ಚಿತ್ರ ಮಾಡುವುದು ಈಗಿನ ಕಾಲಘಟ್ಟದಲ್ಲಿ ಸವಾಲಿನ ಕೆಲಸ. ಜೊತೆಗೆ ಹೊಸ ಕಲಾವಿದರು ಚಿತ್ರದಲ್ಲಿದ್ದಾರೆ. ಈಗ ನಡೆಯುತ್ತಿರುವುದೇ ಹೊಸಬರ ಹವಾ . ಗಿರಿರಾಜ್ ಚಿತ್ರದಲ್ಲಿ ಕಥೆಗೆ ಆದ್ಯತೆ ಕೊಡ್ತಾರೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಥಳುಕು ಬಳುಕಿನ ಮಿಂಚಿನ ಬಳ್ಳಿ ನಮ್ಮ ಹೃದಯ ಕದಿಯುವ ಕಳ್ಳಿ, ಮಾಯಾವಿ .. ಮಾಯಾವಿ ಹಾಡುಗಳ ಜೊತೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ ರಾ ಬೇಂದ್ರೆ ಅವರ ರಚನೆಯ “ ಬಂಗಾರ ನೀರ.. ಕಡಲಾಚೆ ಗೀಚೆಗಿದೆ .. ನೀಲ ನೀಲ ತೀರ…ಹಾಡು ಬಳಸಿಕೊಂಡಿದ್ದು ಗೀತೆಗೆ ಪುನರ್ವಸು ಬೇಂದ್ರೆ ಅವರು ಒಪ್ಪಿಗೆ ನೀಡಿದ್ದಾರೆ. ಚಿತ್ರಕ್ಕೆ ಭರತ್ ಬಿ.ಜೆ ಸಂಗೀತ ನೀಡಿದ್ದಾರೆ

kalyani 1

ಚಿತ್ರದ ನಿರ್ದೇಶಕ ಬಿ.ಎಂ. ಗಿರಿರಾಜ್ ಮಾತನಾಡಿ ಚಿತ್ರ ಸೆನ್ಸಾರ್ ಹಂತದಲ್ಲಿದ್ದು ನವೆಂಬರ್ ಕೊನೆಯ ಹಂತದಲ್ಲಿ ಬಿಡುಗಡೆ ಮಾಡಲು ಉದ್ದೇಶವಿದೆ. ಪ್ಯಾನ್ ಇಂಡಿಯಾ ಅಲ್ಲ.‌ ಇಂಡಿಯಾದ ಪೇನ್ ಇಟ್ಟುಕೊಂಡಿರುವ ಸಿನಿಮಾ. ಗಂಗಾಧರ್ ವಿತರಣೆ ಮಾಡುತ್ತಿದ್ದಾರೆ. ಕನ್ನಡ ಮತ್ತು ಹಿಂದಿಯ ಮುಖಾಮುಖಿ,ಸಂಘರ್ಷ, ಅನುಸಂಧಾನದ ಹಿನ್ನೆಲೆಯಲ್ಲಿ ಚಿತ್ರ ಸಾಗಲಿದೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ವಿಭಿನ್ನವಾಗಿ ಮಾಡಲಾಗಿದೆ ಎಂದು ಹೇಳಿದರು.

ನಾಯಕ ಸಮರ್ಥ್ ಶೆಟ್ಟಿ,ಕಲಾವಿದೆಯಾದ ಯಮುನಾ ಶ್ರೀನಿಧಿ, ನಿರ್ಮಾಪಕ ಆರ್. ಕುಮಾರಸ್ವಾಮಿ, ಸಂಗೀತ ನಿರ್ದೇಶಕ ಬಿಜೆ ಭರತ್ ಪತ್ರಿಕಾ ಗೋಷ್ಠಿಯಲ್ಲಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.

ಕುಮಾರಸ್ವಾಮಿ ಆರ್, ‘ಆರ್. ಕೆ. ಸಿನೆಮಾಸ್’ ಬ್ಯಾನರಿನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಾಮ್ರಾಟ್ ಶೆಟ್ಟಿ ನಾಯಕನಾಗಿ ನಟಿಸಿದರೆ,  ಸಿಮ್ರನ್, ರಾಹುಲ್ ಜೇಟ್ಲಿ, ಶಮಂತ್ ರಾವ್, ಪಿ. ಡಿ. ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ‘ಕಲ್ಯಾಣಿ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಬಿ.ಜೆ. ಭರತ್‍ ಸಂಗೀತ ಸಂಯೋಜಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ