–  ರಾಘವೇಂದ್ರ ಅಡಿಗ ಎಚ್ಚೆನ್.

ಆಲ್ಫಾ 8ಎಐ ಪ್ರೊಸೆಸರ್ ಜೆನ್3 ತಂತ್ರಜ್ಞಾನದ ಬೆಂಬಲ ಹೊಂದಿರುವ ಎಲ್‌ಜಿಯ 2026ರ ಅತ್ಯಂತ ದೊಡ್ಡ ಕ್ಯೂ.ಎನ್.ಇ.ಡಿ. ಇವೊ ಟಿವಿಯು ಪ್ರಮಾಣೀಕೃತ ಶೇ.100 ರಷ್ಟು ಕಲರ್ ವಾಲ್ಯೂಮ್, ಪ್ರಿಸಿಷನ್ ಡಿಮ್ಮಿಂಗ್ ಆಲ್ಟ್ರಾ ಮತ್ತು 330ಹರ್ಟ್ಸ್ ವರೆಗಿನ ಮೋಷನ್ ಬೂಸ್ಟರ್‌ನೊಂದಿಗೆ ಚಿತ್ರಮಂದಿರ, ಕ್ರೀಡಾಂಗಣ ಹಾಗೂ ಗೇಮಿಂಗ್ ರಂಗದ ಅನುಭವವನ್ನು ಭಾರತೀಯ ಮನೆಗಳಿಗೆ ತರಲಿದೆ.

ಸುದ್ದಿ ಸಾರಾಂಶ

• ಎಲ್‌.ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಸಂಸ್ಥೆಯು ತನ್ನ 2026ರ ಕ್ಯೂ.ಎನ್.ಇ.ಡಿ. ಇವೊ ಶ್ರೇಣಿಯಲ್ಲಿ ಅತ್ಯಂತ ದೊಡ್ಡ ಮಾದರಿಯಾದ 292 ಸೆಂ.ಮೀ. ಕ್ಯೂ.ಎನ್.ಇ.ಡಿ. ಇವೊ ಎಐ ಮಿನಿ ಎಲ್.ಇ.ಡಿ. ಟಿವಿಯನ್ನು ಬಿಡುಗಡೆ ಮಾಡಿದೆ.

• ಚಿತ್ರಮಂದಿರದ ಅನುಭವ ಮನೆಗೆ ತಂದಿದೆ: ಪ್ರಿಸಿಷನ್ ಡಿಮ್ಮಿಂಗ್ ಆಲ್ಟ್ರಾ, ಇಂಟರ್‌ಟೆಕ್ -ಪ್ರಮಾಣೀಕೃತ ಶೇ.100 ಕಲರ್ ವಾಲ್ಯೂಮ್ ಹೊಂದಿರುವ ಡೈನಾಮಿಕ್ ಕ್ಯೂ.ಎನ್.ಇ.ಡಿ. ಕಲರ್ ಪ್ರೋ ಮತ್ತು ಎಐ ಸೂಪರ್ ಅಪ್‌ಸ್ಕೇಲಿಂಗ್ ತಂತ್ರಜ್ಞಾನಗಳು ಈ ಅತಿ ದೊಡ್ಡ ಪರದೆಯ ಮೇಲೆ ಆಳವಾದ ಕಾಂಟ್ರಾಸ್ಟ್, ಸಮೃದ್ಧ ಬಣ್ಣ ಹಾಗೂ ಸ್ಪಷ್ಟವಾದ 4ಕೆ ವಿವರಗಳನ್ನು ನೀಡುತ್ತವೆ.

• ಕ್ರೀಡಾಂಗಣದ ವಾತಾವರಣದ ಮರುಸೃಷ್ಟಿ: ವರ್ಚುವಲ್ 11.1.2-ಚಾನೆಲ್ ಸರೌಂಡ್ ಸೌಂಡ್ ಹೊಂದಿರುವ ಎಐ ಸೌಂಡ್ ಪ್ರೋ ಮತ್ತು ವೆಬ್ ಒ.ಎಸ್.26ರಲ್ಲಿ ಸಿಗುವ ರಿಯಲ್-ಟೈಮ್ ಸ್ಪೋರ್ಟ್ಸ್ ಅಪ್‌ಡೇಟ್‌ ಗಳು ಮನೆಗೇ ಕ್ರೀಡಾಂಗಣದ ಉತ್ಸಾಹ ಹಾಗೂ ಜೀವಂತಿಕೆಯನ್ನು ತರುತ್ತವೆ.

• ಗೇಮಿಂಗ್ ಅನುಭವದ ಉನ್ನತೀಕರಣ: 165ಹರ್ಟ್ಸ್ ವರೆಗಿನ ವಿ.ಆರ್.ಆರ್., 330ಹರ್ಟ್ಸ್ ವರೆಗಿನ ಮೋಷನ್ ಬೂಸ್ಟರ್, ಎಎಂಡಿ ಫ್ರೀಸಿಂಕ್™️ ಪ್ರೀಮಿಯಂ ಮತ್ತು ಆಟೋ ಲೋ ಲೇಟೆನ್ಸಿ ಮೋಡ್ ವೇಗದ ಗೇಮ್‌ ಗಳನ್ನು ಅತ್ಯಂತ ಸುಲಲಿತವಾಗಿ ಹಾಗೂ ವೇಗವಾಗಿ ಚಲಿಸುವಂತೆ ಮಾಡುತ್ತವೆ.

• ದೊಡ್ಡ ಪರದೆಯ ಮನರಂಜನೆ, ಇನ್ನು ಇನ್ನಷ್ಟು ಸ್ಮಾರ್ಟ್: ವೆಬ್ ಒಎಸ್ 26 ಆವೃತ್ತಿಯು ವಾಯ್ಸ್ ಐಡಿ, ಎಐ ಕನ್ಸೀರ್ಜ್ ಮತ್ತು ಮಲ್ಟಿ-ಎಐ ಬೆಂಬಲ ಸೇರಿದಂತೆ ಕೃತಕ ಬುದ್ಧಿಮತ್ತೆ ಆಧಾರಿತ ವೈಯಕ್ತಿಕ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಇವೆಲ್ಲವೂ ಎಲ್‌.ಜಿ ಶೀಲ್ಡ್‌ ನಿಂದ ಸುರಕ್ಷಿತವಾಗಿವೆ.

1001953499

ಭಾರತೀಯ ಮನೆಗಳಿಗೆ ಪ್ರವೇಶಿಸಿದ ಮನರಂಜನೆಯ ಬೃಹತ್ ದೈತ್ಯ

ಬೆಂಗಳೂರು, ಅಕ್ಟೋಬರ್ 30, 2026: ಎಲ್‌.ಜಿ. ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿಮಿಟೆಡ್ (ಎಲ್.ಜಿ.ಐ.ಎಲ್) ಸಂಸ್ಥೆಯು ತನ್ನ 2026ರ ಕ್ಯೂ.ಎನ್.ಇ.ಡಿ. ಇವೊ ಶ್ರೇಣಿಯಲ್ಲಿ ಅತ್ಯಂತ ದೊಡ್ಡ ಮಾದರಿಯಾದ 292 ಸೆಂ.ಮೀ (115”) ಕ್ಯೂ.ಎನ್.ಇ.ಡಿ. ಇವೊ ಎಐ ಮಿನಿ ಎಲ್.ಇ.ಡಿ. ಟಿವಿಯನ್ನು ಇಂದು ಬಿಡುಗಡೆ ಮಾಡಿದೆ. ಮನರಂಜನೆಯ ಬೃಹತ್ ದೈತ್ಯ ಎಂದೇ ಬಿಂಬಿತವಾಗಿರುವ ಈ ಟಿವಿಯನ್ನು, ಅತ್ಯಂತ ದೊಡ್ಡ ಹಾಗೂ ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ಬಯಸುವ ವೀಕ್ಷಕರಿಗಾಗಿ ನಿರ್ಮಿಸಲಾಗಿದೆ. ಇದು ಚಿತ್ರಮಂದಿರದ ವೈಭವ, ಕ್ರೀಡಾಂಗಣದ ರೋಮಾಂಚನ ಹಾಗೂ ಗೇಮಿಂಗ್‌ ನ ತೀವ್ರತೆಯನ್ನು ನಿಮ್ಮ ಲಿವಿಂಗ್ ರೂಮ್‌ಗೆ ತರಲಿದೆ.

ಎಲ್‌.ಜಿ.ಯ ಆಲ್ಫಾ8 ಪ್ರೊಸೆಸರ್ ಜೆನ್3 ತಂತ್ರಜ್ಞಾನದ ಬೆಂಬಲ ಹೊಂದಿರುವ ಈ 292 (115″) ಕ್ಯೂ.ಎನ್.ಇ.ಡಿ. ಇವೊ ಟಿವಿಯು, ಮಿನಿ ಎಲ್.ಇ.ಡಿ. ಚಿತ್ರದ ಗುಣಮಟ್ಟವನ್ನು ಎಐ ಆಧರಿತ ಚಿತ್ರ ಮತ್ತು ಧ್ವನಿ ತಂತ್ರಜ್ಞಾನಗಳೊಂದಿಗೆ ಸಂಯೋಜಿಸುತ್ತದೆ. ಇದರಿಂದಾಗಿ ಈ ಅತಿ ದೊಡ್ಡ ಪರದೆಯ ಪ್ರತಿ ಅಂಗುಲದಲ್ಲೂ ಬಣ್ಣ, ಕಾಂಟ್ರಾಸ್ಟ್ ಮತ್ತು ಸೂಕ್ಷ್ಮ ವಿವರಗಳು ಅತ್ಯುತ್ತಮವಾಗಿ ಮೂಡಿಬರುತ್ತವೆ.

ಎಲ್‌.ಜಿ. ಎಲೆಕ್ಟ್ರಾನಿಕ್ಸ್ ಇಂಡಿಯಾದ ಮೀಡಿಯಾ ಎಂಟರ್ಟೈನ್ಮೆಂಟ್ ಸಲ್ಯೂಷನ್ ವಿಭಾಗದ ನಿರ್ದೇಶಕ ಬ್ರಿಯಾನ್ ಜಂಗ್, 292 ಸೆಂ.ಮೀ. (115″) ಕ್ಯೂ.ಎನ್.ಇ.ಡಿ. ಇವೊ ಮಿನಿ ಎಲ್.ಇ.ಡಿ. ಟಿವಿಯು ಅತ್ಯಂತ ತಲ್ಲೀನಗೊಳಿಸುವ ಗೃಹ ಮನರಂಜನಾ ಅನುಭವಗಳನ್ನು ಸೃಷ್ಟಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅತಿ ದೊಡ್ಡ ಪರದೆಯ ತಂತ್ರಜ್ಞಾನವನ್ನು ಸುಧಾರಿತ ಚಿತ್ರದ ಗುಣಮಟ್ಟ, ಎಐ ಆಧರಿತ ಧ್ವನಿ ಮತ್ತು ಸುಧಾರಿತ ಗೇಮಿಂಗ್ ವಿಶೇಷತೆಗಳೊಂದಿಇಗೆ ಸಂಯೋಜಿಸುವ ಮೂಲಕ, ನಾವು ಗ್ರಾಹಕರಿಗೆ ತಮ್ಮ ನೆಚ್ಚಿನ ಕ್ರೀಡೆಗಳು, ಸಿನಿಮಾಗಳು ಮತ್ತು ಗೇಮ್‌ ಗಳನ್ನು ಮನೆಯಲ್ಲೇ ಆನಂದಿಸಲು ಹೊಸ ಮಾರ್ಗಗಳನ್ನು ನೀಡುತ್ತಿದ್ದೇವೆ. ಮನರಂಜನೆಯ ಬೃಹತ್ ದೈತ್ಯ ಎಂಬ ತನ್ನ ಹೆಸರಿಗೆ ತಕ್ಕಂತೆ, ಇದು ಚಿತ್ರಮಂದಿರದ ವೈಭವ, ಕ್ರೀಡಾಂಗಣದ ರೋಮಾಂಚನ ಮತ್ತು ಗೇಮಿಂಗ್‌ ನ ಉತ್ಸಾಹವನ್ನು ಒಂದೇ ಪರದೆಯ ಮೇಲೆ ಒಟ್ಟಿಗೆ ತರುತ್ತದೆ,” ಎಂದು ಹೇಳಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ