ಒಂದಾನೊಂದು ಕಾಲದಲ್ಲಿ ಕನ್ನಡ ಚಿತ್ರಗಳೆಂದರೆ ಮೂಗು ಮುರಿಯುವ ಕಾಲವಿತ್ತು. ಅತ್ಯಂತ ಪ್ರತಿಭಾವಂತ ನಿರ್ದೇಶಕರ ಚಿತ್ರಗಳು ಕೇವಲ ಪ್ರಶಸ್ತಿಗಷ್ಟೇ ನಿರ್ಮಾಣ ಮಾಡಿ ವರ್ಷಾನುವರ್ಷ ಸ್ವರ್ಣ ಕಮಲಗಳನ್ನು ಬಾಚುತ್ತಿದ್ದರೂ, ಕನ್ನಡಿಗರ ಮನೋರಂಜನೆಗಾಗಿ ರಾಜಕುಮಾರು ವಿಷ್ಣುವರ್ಧನ್, ಅನಂತ್ ನಾಗ್, ರಮೇಶ್ ಅರವಿಂದ್ ಮುಂತಾದವರ ಪ್ರಬುದ್ಧ ನಟನೆಯ ಹೊರತಾಗಿ ಕನ್ನಡಿಗರು, ಅದೇ ತೆಲುಗು ಮತ್ತು ತಮಿಳು ಭಾಷೆಗಳ ಹಳಸಲು ರಿಮೀಕ್ ಚಿತ್ರಗಳಿಗೇ ತೃಪ್ತಿ ಪಟ್ಟುಕೊಳ್ಳಬೇಕಿತ್ತು. ಆದರೆ ಕಳೆದ ಎರಡು ದಶಕಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದ ಹೊಸಾ ಪೀಳಿಗೆಯಿಂದಾಗಿ ಇಡೀ ಸಿನಿಮಾ ಜಗತ್ತೇ ಕನ್ನಡ ಚಿತ್ರಗಳತ್ತ ನೋಡುವಂತಾಗಿದೆ. ಹಾಗಾಗಿ ಈ ಬದಲಾದ ಕಾಲಘಟ್ಟದಲ್ಲಿ ಕನ್ನಡ ಸಿನಿಮಾಗಳನ್ನು ತೆಗಳುವವರೂ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂತಹ ಸಿನಿಮಾಗಳು ಬರುತ್ತಿದ್ದು ಈಗ ಅದರ ಸಾಲಿಗೆ ಸೆಪ್ಟೆಂಬರ್ 30ರ ಶುಕ್ರವಾರ ರಿಲೀಸ್ ಆದ ರಿಷಬ್ ಶೆಟ್ಟಿಯವರ ರಚನೆ, ನಟನೆ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ಸೇರಿದೆ.

shetty_gang

ಕನ್ನಡ ಚಿತ್ರರಂಗದಲ್ಲಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಎಂದರೆ ಕೇವಲ ದ್ವಂದಾರ್ಥ ಬರುವ ಸಂಭಾಷಣೆಯ ಕೆಟ್ಟ ಸಂಭಾಷಣೆಗಷ್ಟೇ ಮೀಸಲಿಟ್ಟು ಆ ಎರಡೂ ಪ್ರಾಂತ್ಯಗಳ ನಿಜವಾದ ಪರಿಚಯವೇ ಕನ್ನಡಿಗರಿಗೆ ಇಲ್ಲದೇ ಇದ್ದಾಗ, ರಕ್ಷಿತ್ ಶೆಟ್ಟಿಯವರ ಉಳಿದವರು ಕಂಡಂತೆ ಸಿನಿಮಾದ ನಂತರ ಬಂದ ಭಂಡಾರಿ ಸಹೋದರರು ನಟಿಸಿ/ನಿರ್ದೇಶಿಸಿದ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ರಂಗಿತರಂಗ ಸಿನಿಮಾ ಕನ್ನಡದ ಚಿತ್ರರಂಗದ ದಿಕ್ಕನ್ನೇ ಬದಲಿಸಿತು ಎಂದರೂ ತಪ್ಪಾಗದು. ಮತ್ತೆ ರಕ್ಷಿತ್ ರಿಷಬ್ ಜೊತೆಗಾರಿಕೆಯಲ್ಲಿ ರಿಕ್ಕಿ, ಕಿರಿಕ್ ಪಾರ್ಟಿ, ರಾಜ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅಭಿನಯದ ಗರುಡಗಮನ ವೃಷಭವಾಹನ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವ ಮೂಲಕ ಬೆಂಗಳೂರಿನ ಗಾಂಧಿನಗರದ ಆಚೆಯೂ, ಕರಾವಳಿ ಪ್ರಾಂತ್ಯದಲ್ಲಿಯೂ ಅದ್ಭುತವಾದ ಪ್ರತಿಭಾವಂತ ಕನ್ನಡ ನಟ ನಟಿಯರು ಮತ್ತು ತಂತ್ರಜ್ಞರಿದ್ದಾರೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಈ ಎಲ್ಲರೂ ತಮ್ಮ ತಮ್ಮ ಚಿತ್ರಗಳಲ್ಲಿ ಕರಾವಳಿಯ ಮೂಲದ ಅನೇಕ ಕಲಾವಿದರುಗಳಿಗೆ ಅವಕಾಶ ಮಾಡಿಕೊಟ್ಟಿರುವುದಲ್ಲದೇ, ಅಲ್ಲಿಯ ಮೂಲ ಸಂಸ್ಕೃತಿಯನ್ನು ಅತ್ಯಂತ ಮನೋಜ್ಞವಾಗಿ ತೋರಿಸುವ ಮೂಲಕ ತುಳುನಾಡಿನಲ್ಲಿಯೂ ತುಳು ಸಿನಿಮಾ ಉದ್ಯಮ ಕೂಡ ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದರೂ ತಪ್ಪಾಗದು.

kant5

ರಿಷಬ್ ಶೆಟ್ಟಿ ನಟಿಸಿ ಮತ್ತು ನಿರ್ದೇಶಿಸಿರುವ ದಕ್ಷಿಣ ಕನ್ನಡದ ಬಹುತೇಕರ ನಂಬಿಕೆಯ ಭೂತದ ಕೋಲ ಮತ್ತು ಕಂಬಳದ ಹಿನ್ನೆಲೆಯ ಸ್ಥಳೀಯ ಸಾಂಸ್ಕೃತಿಕ ಕಥಾಹಂದರವನ್ನು ಹೊಂದಿರುವ ಕಾಂತಾರ ಚಿತ್ರ ಪ್ರಸ್ತುತ ಕನ್ನಡ ಸಿನಿಮಾರಂಗದಲ್ಲಿ ವಿಶೇಷವಾಗಿ ಗಮನಸೆಳೆಯುತ್ತಿದೆ. 2022, ಸೆಪ್ಟೆಂಬರ್ 30 ಶುಕ್ರವಾರ ಸುಮಾರು 250ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆಯಾದ ಬಳಿಕ, ಚಿತ್ರವನ್ನು ನೋಡಿದ ಬಹುತೇಕರು ಇದೊಂದು ಅದ್ಭುತವಾದ ದೃಶ್ಯಕಾವ್ಯ. ಕನ್ನಡದಲ್ಲೊಂದು ಈ ರೀತಿಯ ಅಪರೂಪದ ಪ್ರಯತ್ನವನ್ನು ಖಂಡಿತವಾಗಿಯೂ ಎಲ್ಲರೂ ನೋಡಲೇ ಬೇಕು ಎಂದು ಹೇಳುತ್ತಿದ್ದಂತೆಯೇ, ವಾರಾಂತ್ಯದಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಹೆಚ್ಚಿನ ಶೋಗಳು ನಡೆಯತೊಡಗಿದ್ದಲ್ಲದೇ, ಕೇವಲ ಕರ್ನಾಟಕವಲ್ಲದೇ, ಭಾರತಾದ್ಯಂತ ವಿವಿಧ ರಾಜ್ಯಗಳಲ್ಲಿ, ಅಮೇರಿಕಾ, ಇಂಗ್ಲೇಡ್, ಯುರೋಪ್, ಮಧ್ಯಪ್ರಾಚ್ಯ ಮತ್ತು ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಲ್ಲೂ ಕಾಂತಾರ ಕೇವಲ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗುವ ಮೂಲಕ ಕನ್ನಡ ಬಾರದಿರುವ ಪ್ರೇಕ್ಷಕರನ್ನೂ ಸೆಳೆಯುವ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆಯಲ್ಲಿ ಪಸರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ