ಕಳೆದ ವರ್ಷ ದ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿ ಮತಾಂಧರು ಕಾಶ್ಮೀರಿ ಪಂಡಿತರ ಮೇಲೆ ನಡೆಸಿದ ಅಟ್ಟಹಾಸ ಮತ್ತು ದೌರ್ಜನ್ಯಗಳ ಬಗ್ಗೆ ಮಮ್ಮುಲ ಮರುಗಿದ್ದ ಮನಸ್ಸು ಇನ್ನೂ ತಣ್ಣಗಾಗುವ ಮೊದಲೇ, ಅದೇ ರೀತಿಯ ಮತ್ತೊಂದು ಸಿನಿಮಾ ದಿ ಕೇರಳ ಸ್ಟೋರಿ ಎಂಬ ಟ್ರೈಲರ್ ಇದ್ದಕ್ಕಿದ್ದಂತೆಯೇ ಕಳೆದ ಎರಡು ಮೂರು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಆದಾಗ ಮೇ 5 ರಂದು ಹೇಗೂ ಸಿನಿಮಾ ಬಿಡುಗಡೆಯಾದಾಗ ಖಂಡಿತವಾಗಿಯೂ ನೋಡಲೇ ಬೇಕೆಂದು ನಿರ್ಧರಿದ್ದಾಗಲೇ, ಬೆಂಗಳೂರಿನ ರಾಜಾಜೀನಗರದ ಒರಿಯಾನ್ ಮಾಲ್ ನಲ್ಲಿ ಈ ಸಿನಿಮಾದ ಪ್ರೀಮಿಯರ್ ಷೋ ನೋಡುವ ಸೌಭಾಗ್ಯ ದೊರೆತು ಆ ಸಿನಿಮಾ ನೋಡಿದಾಗ ಆದ ನೋವು ಮತ್ತು ಸಂಕಟಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ke9

ದೇವರ ಸ್ವಂತ ನಾಡು ಎಂದೇ ಕರೆಸಿಕೊಳ್ಳುವ ಕೇರಳದ ವಿವಿಧ ಭಾಗಗಳಿಂದ ನರ್ಸಿಂಗ್ ಶಿಕ್ಷಣಕ್ಕಾಗಿ ಕಾಸರಗೋಡಿನ ಪ್ರತಿಷ್ಟಿತ ಪದವಿ ಕಾಲೇಜಿಗೆ ಸೇರಿಕೊಂಡು ಅಲ್ಲಿಯ ಹಾಸ್ಟೆಲ್ಲಿನ ಒಂದು ಕೊಠಡಿಯಲ್ಲಿ ಒಂದಾಗುವ ಸ್ಥಳೀಯ ಮುಸ್ಲಿಂ ಹುಡುಗಿ, ಇಬ್ಬರು ಹಿಂದು, ಮತ್ತೊಬ್ಬಳು ಕ್ರಿಶ್ಚಿಯನ್ ಹುಡುಗಿಯರೇ ಈ ಸಿನಿಮಾದ ಕೇಂದ್ರ ಬಿಂದು. ಅವರೆಲ್ಲರೂ ಪರಸ್ಪರ ಪರಿಚಯಿಸಿಕೊಂಡು ಒಬ್ಬರೊನ್ನೊಬ್ಬರು ಕಾಲು ಎಳೆದುಕೊಂಡು ಇನ್ನು ಮೂರು ವರ್ಷಗಳ ಕಾಲ ನಾವೆಲ್ಲರೂ ಒಟ್ಟಾಗಿ ಉತ್ತಮವಾಗಿ ಓದಿ ಪದವಿಯನ್ನು ಪಡೆದು ದೇಶವಿದೇಶದ ಪ್ರತಿಷ್ಷಿತ ಆಸ್ಪತ್ರೆಗಳಲ್ಲಿ ದಾದಿಯರಾಗಿ ಸೇವೆ ಮಾಡುವ ಕನಸನ್ನು ಹಂಚಿಕೊಳ್ಳುತ್ತಾರೆ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವ ಗಾದೆ ಮಾತು ಹಳೆಯದಾಗಿ, ತಾನೊಂದು ಬಗೆದರೆ, ಮತೀಯವಾದಿಗಳು ಮತ್ತೊಂದು ಬಗೆದಿರುತ್ತಾರೆ ಎನ್ನುವಂತೆ ಆ ನಾಲ್ವರ ಪೈಕಿಯ ಮುಸ್ಲಿಂ ಹುಡುಗಿಗೆ ಶಿಕ್ಷಣ ಎನ್ನುವುದು ನೆಪ ಮಾತ್ರವಾಗಿ ಆಕೆ ಅಂತರಾಷ್ಟ್ರೀಯ ಮತಾಂಧರ ಷಢ್ಯಂತ್ರದ ಭಾಗವಾಗಿ ಮುಸ್ಲಿಂ ಅಲ್ಲದ ಅಮಾಯಕ ಹುಡುಗಿಯರನ್ನು ಮುಸಲ್ಮಾನರಾಗಿ ಮತಾಂತರ ಮಾಡುವ ಕಾಯಕದ ಭಾಗವಾಗಿರುತ್ತಾಳೆ.

ke8

ಆ ಮುಸ್ಲಿಂ ಯುವತಿ ತಲೆಯ ಮೇಲೆ ಹಿಜಾಬ್ ಧರಿಸಿ, ಕಾಲಕಾಲಕ್ಕೆ ಪ್ರಾರ್ಥನೆ ಮಾಡುತ್ತಾ, ತಾನು ಸಂಪ್ರದಾಯಕ ಮುಸ್ಲಿಂ ಹುಡುಗಿ ಎಂಬುದನ್ನು ಬಿಂಬಿಸಿಕೊಳ್ಳುತ್ತಾಳೆ. ನಂತರ ಎಲ್ಲರೂ ಸೇರಿ ಒಟ್ಟಾಗಿ ಊಟ ಮಾಡುವಾಗಲೂ ಆ ಇಬ್ಬರು ಹಿಂದು ಹೆಣ್ಣು ಮಕ್ಕಳು ಗಬಕ್ಕೆಂದು ತಟ್ಟೆಗೆ ಕೈ ಹಾಕಿ ತಿನ್ನಲು ಆರಂಭಿಸಿದಾಗ ಆ ಮುಸ್ಲಿಂ ಯುವತಿ ಮತ್ತು ಮತ್ತೊಬ್ಬ ಕ್ರಿಶ್ಚಿಯನ್ ಯುವತಿ ದೇವರ ಪ್ರಾರ್ಥನೆ ಮಾಡಿ ಊಟಕ್ಕೆ ಕೈ ಹಾಕಿ, ಯಾಕೇ? ನೀವು ಊಟ ಮಾಡುವ ಮೊದಲು ಭಗವಂತನಿಗೆ ಪ್ರಾರ್ಥಿಸುವುದಿಲ್ಲವೇ? ಎಂದು ಪ್ರಶ್ನಿಸುತ್ತಾಳೆ. ಆಗ ಶಾಲಿನಿ ಉನ್ನಿಕೃಷ್ಣನ್ ಎನ್ನುವ (ಕಥೆಯಲ್ಲಿ ಪ್ರಮುಖ ನಾಯಕಿ) ಮನೆಯಲ್ಲಿ ಅಮ್ಮಾ ಮತ್ತು ಅಜ್ಜಿ ಏನೋ ಶ್ಲೋಕಗಳನ್ನು ಹೇಳಿಕೊಳ್ಳುತ್ತಾರೆ. ಆದರೆ ನನಗೆ ಅದು ಸರಿಯಾಗಿ ಗೊತ್ತಿಲ್ಲಾ ಎಂದರೆ, ಮತ್ತೊಬ್ಬ ಹುಡುಗಿ ದೀಪಾಂಜಲಿ ನಮ್ಮ ತಂದೆ ಕಮ್ಯೂನಿಸ್ಟ್ ಹಾಗಾಗಿ ನಾವು ಹಿಂದೂಗಳಾದರೂ ನಮ್ಮ ಮನೆಯಲ್ಲಿ ಯಾವುದೇ ರೀತಿಯ ಹಿಂದೂ ಪದ್ದತಿಗಳ ಆಚರಣೆ ರೂಡಿಯಲ್ಲಿ ಇಲ್ಲಾ ಎಂದಾಗ, ನಾವು ಏನೇ ಕೆಲಸ ಮಾಡಿದರೂ ಮೊದಲು ಅಲ್ಲಾನಿಗೆ ಸಮರ್ಪಿಸಲೇ ಬೇಕು ಇಲ್ಲದಿದ್ದಲ್ಲಿ ಅಲ್ಲಾನ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎನ್ನುವುದರ ಮೂಲಕ ಮೊದಲ ಹಂತದ ಬ್ರೈನ್ ವಾಷ್ ಆರಂಭವಾಗುತ್ತದೆ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ