ಸರಿ ಸುಮಾರು 2010ರ  ಜುಲೈ ತಿಂಗಳಿನಲ್ಲಿ ಕಮ್ಯೂನಿಸ್ಟ್ ಪಕ್ಷದ ಕೇರಳದ ಮುಖ್ಯಮಂತ್ರಿಗಳಾಗಿದ್ದಂತಹ ವಿ.ಎಸ್. ಅಚ್ಯುತಾನಂದನ್ ಅವರು ಬಲವಂತದ ಮತಾಂತರದ ಮೂಲಕ ಕೇರಳ ರಾಜ್ಯವನ್ನು ಮುಸ್ಲಿಂ ಬಹುಸಂಖ್ಯಾತ ಪ್ರದೇಶವನ್ನಾಗಿ ಪರಿವರ್ತಿಸುವ ಪ್ರಯತ್ನಗಳ ಕುರಿತಾಗಿ ಬಹಿರಂಗವಾಗಿ ಹೇಳಿದ್ದಲ್ಲದೇ ಈ ಪ್ರಕ್ರಿಯೆಗೆ ಲವ್ ಜಿಹಾದ್  ಎನ್ನಲಾಗುತ್ತದೆ ಎನ್ನುವ ಮೂಲಕ ಇಡೀ ದೇಶದ ಗಮನವನ್ನು ಸೆಳೆದರೂ, ಈ ರೀತಿ ಪ್ರೀತಿಯ ಸೋಗಿನಲ್ಲಿ ಬಲವಂತದ ಧಾರ್ಮಿಕ ಮತಾಂತರದ ಆರೋಪಗಳನ್ನು ಪ್ರಸ್ತುತ ಕೇರಳ ಸರ್ಕಾರ, ಮುಸ್ಲಿಂ ನಾಯಕರುಗಳು ಮತ್ತು ಈ ದೇಶದ ಸ್ವಘೋಷಿತ ಬುದ್ದಿಜೀವಿಗಳು ಅಲ್ಲಗಳಿಯುತ್ತಲೇ ಬಂದಿದ್ದು, ಕೇರಳದಲ್ಲಿ ನಡೆಯುತ್ತಿರುವ ಈ ಕೃತ್ಯದ  ಸಂಬಂಧಿತವಾಗಿ ಕೇರಳಾ ಸ್ಟೋರಿ ಎಂಬ ಚಿತ್ರವು  ಮೇ 5, 2023ರಲ್ಲಿ ಬಿಡುಗಡೆಯಾಗಿ ಸದ್ದು ಮಾಡಿದರೆ  ಇದರ ಮುಂದುವರೆದ ಭಾಗವಾಗಿ ಕೇರಳಾ ಸ್ಟೋರಿ -2 2026ರ ಫೆಬ್ರವರಿ 27ರಂದು ಬಿಡುಗಡೆಯಾಗಿರುವ ಸಂಧರ್ಭದಲ್ಲೇ, ಕೇರಳ ಸರ್ಕಾರದ ಮಂತ್ರಿಗಳು ಮತ್ತು ಸಂಸದರುಗಳ  ಉಪಸ್ಥಿತಿಯಲ್ಲೇ ಮಾರ್ಚ್ 11, 2026ರಂದು ಅಂತರ್ಧಮೀಯ ವಿವಾಹವೊಂದು ನಡೆದಿದ್ದು ವಿವಾದಕ್ಕೆ ಕಾರಣೀಭೂತವಾಗಿದೆ.

ಕೇರಳ ಸ್ಟೋರಿ ಸರಣಿ ಚಿತ್ರಗಳಲ್ಲಿ ತೋರಿಸುತ್ತಿರುವುದೆಲ್ಲವೂ ಸುಳ್ಳು ಎಂದು  ಚಿತ್ರದ ಬಿಡುಗಡೆಗೆ ತಡೆ ಕೋರಿದ್ದ ಪ್ರಸಕ್ತ ಕೇರಳ ಸರ್ಕಾರ ಎರಡು ದಿನಗಳ ಹಿಂದೆ ಮಹಾರಾಷ್ಟ್ರ ಮೂಲದ ಮುಸ್ಲಿಂ ಹುಡುಗ, ಮಧ್ಯ ಪ್ರದೇಶ ಮೂಲದ ಹಿಂದೂ ಹುಡುಗಿ, ಉತ್ತರ ಪ್ರದೇಶದಲ್ಲಿ ಪ್ರೀತಿಸಿದನ್ನು ಆ ಹುಡುಗಿಯ ಪೋಷಕರ ವಿರೋಧ ವ್ಯಕ್ತ ಪಡಿಸಿದ್ದರಿಂದ ಅವರುಗಳು ನೇರವಾಗಿ ಕೇರಳಕ್ಕೆ ಬಂದು ಪೋಲೀಸರ ಪೌರೋಹಿತ್ಯದಲ್ಲಿ, ಸಕಲ ಸರ್ಕಾರಿ ಆತಿಥ್ಯದಲ್ಲಿ ನೂರಾರು ಕಮ್ಯೂನಿಸ್ಟ್ ಕಾರ್ಯಕರ್ತರು ಮತ್ತು ರಾಜಕೀಯ ಧುರೀಣರ ಮುಂದೆ ಮದುವೆ ಆಗುತ್ತಾರೆ ಎಂದರೆ ಲವ್ ಜಿಹಾದ್ ಎಂಬುದು ಸರ್ಕಾರೀ ಕೃಪಾಪೋಷಿತ ಅಲ್ಲದೇ ಮತ್ತೇನು? ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಹಾಗೆ ನೋಡಿದರೆ ಈ ಪ್ರಕರಣದ ಹುಡುಗಿ ಈಗಾಗಲೇ ಕೇವಲ ಭಾರತವೇಕೆ ಇಡೀ ವಿಶ್ವಕ್ಕೇ ಅಮಾಯಕ ಹುಡುಗಿ ಎಂದೇ ಚಿರಪರಿತವಾಗಿದ್ದು, 2025ರಲ್ಲಿ ಉತ್ತರ ಪ್ರದೇಶದ ಅಲಹಾಬಾದಿನಲ್ಲಿ ನಡೆದ ಐತಿಹಾಸಿಕ ಕುಂಭಮೇಳದಲ್ಲಿ ರುದ್ರಾಕ್ಷಿ ಹಾರವನ್ನು ಮಾಡುತ್ತಾ, ತನ್ನ ಆಕರ್ಷಕ ಬೆಕ್ಕಿನ ಕಣ್ಣು ಮತ್ತು ಸ್ನಿಗ್ಧ ಸೌಂದರ್ಯದಿಂದ ಇಡೀ ವಿಶ್ವಾದ್ಯಂತ ವೈರಲ್ ಆಗಿದ್ದ ಹಾರ ಮಾರುತ್ತಿದ್ದ ಯುವತಿ ಮೊನಾಲಿಸಾ ಭೋಸ್ಲೆ ಈಗ ಫರ್ಮಾನ್ ಖಾನ್‌ ಎಂಬ ಯುವಕನೊಂದಿಗೆ ಕೇರಳದಲ್ಲಿ ಅಂತರ್‌ಧರ್ಮೀಯ ವಿವಾಹ ಆಗಿ ಮತ್ತೊಮ್ಮೆ ಸುದ್ದಿ ಆಗುವ ಮೂಲಕ, ಜನರು ಇದು  ಲವ್ ಜಿಹಾದ್ ನ ಮತ್ತೊಂದು ಉದಾರಣೆಯಾಗಿದ್ದು ಮುಂದೆ ಇದೇ ಕಥೆ ಕೇರಳ ಸ್ಟೋರಿ-3 ಗೆ ಸ್ಪೂರ್ತಿ ಆ ಬಹುದು ಎನ್ನುತ್ತಿದ್ದಾರೆ ಹಲವರು.

ಉತ್ತರ ಪ್ರದೇಶ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮಧ್ಯಪ್ರದೇಶ ಮೂಲದ ಮೊನಾಲಿಸಾ  ಎನ್ನುವ ಅಮಾಯಕ ಹುಡುಗಿ ಅದಾವುದೋ ಯೂಟ್ಯೂಬರ್ ಕಣ್ಣಿಗೆ ಬಿದ್ದು, ಆಕೆಯ ಕಣ್ಣುಗಳು ಮತ್ತು ಸೌಂದರ್ಯಕ್ಕೆ ಮನೆಸೋತು  ಆಕೆಯನ್ನು ಸತವಾಗಿ ಹಿಂಬಾಲಿಸಿ ಆಕೆಯ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿ ಅದು ವೈರಲ್‌ ಆಗುತ್ತಿದ್ದಂತೆಯೇ, ಕುಂಭಮೇಳಕ್ಕೆ ಸ್ನಾನಕ್ಕೆ ಹೋಗುವುದಕ್ಕಿಂತಲೂ ಮೊನಾಲಿಸಾಳನ್ನು ನೋಡಿ ಅವಳೊಂದಿಗೆ ಪೋಟೋ ತೆಗೆಸಿಕೊಳ್ಳಲೆಂದೇ ಮುಗಿಬಿದ್ದ ಜನರನ್ನು ಕಂಡು ಬೆಚ್ಚಿಬಿದ್ದ ಆಕೆಯ ಕುಟುಂಬ ಕುಂಭಮೇಳದ ಮಧ್ಯದಲ್ಲೇ ಆಕೆಯನ್ನು ಊರಿಗೆ ಕಳುಹಿಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿದ್ದರು. ಮಳೆ ನಿಂತ ಮೇಲೂ ಮರಗಳ ಹನಿಯಿಂದ ನೀರು ಬೀಳುವಂತೆ, ಆಕೆಯನ್ನು ಹಲವರು ದೈವಕನ್ಯೆ ಕರೆಯುವ ಮೂಲಕ  ದೊಡ್ಡ ಮಟ್ಟದಲ್ಲಿ ಆಕೆಯ ಫೋಟೋಗಳು ವೈರಲ್‌ ಮಾಡಿದ ನಂತರ ಮೊನಾಲಿಸಾಗೆ ವಿವಿಧ  ಟಿವಿ ಚಾನೆಲ್ಲುಗಳ ಕಾರ್ಯಕ್ರಮಗಳಲ್ಲಿ ಮತ್ತು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶಗಳೂ ಸಿಕ್ಕಿದ್ದವು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ