ಜಾಗೀರ್ದಾರ್*
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ವೃಷಭ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ನವೆಂಬರ್ 6ಕ್ಕೆ ವಿಶ್ವಾದ್ಯಂತ ವೃಷಭ ಚಿತ್ರ ತೆರೆಗೆ ಬರ್ತಿದೆ. ತೆಲುಗು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ಸಿನಿಮಾ ‘ವೃಷಭ’ ಸಿನಿಮಾ ನಿರ್ಮಾಣವಾಗಿದ್ದು ಇನ್ನುಳಿದ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ನಂದ ಕಿಶೋರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ.
ಚಿತ್ರ ರಿಲೀಸ್ ಬಗ್ಗೆ ಮಾತನಾಡಿದ ನಿರ್ಮಾಪಕಿ ಏಕ್ತಾ ಆರ್ ಕಪೂರ್ , ನಮ್ಮ ವೃಷಭ ಸಿನಿಮಾ ನವೆಂಬರ್ 6 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ಇದು ನನ್ನ ಹೃದಯಕ್ಕೆ ಹತ್ತಿರವಾದ ಕಥೆ, ಶಕ್ತಿಯುತ ಭಾವನೆಗಳಿಂದ ತುಂಬಿದೆ. ವೃಷಭವನ್ನು ವಿಶ್ವಾದ್ಯಂತ ಪ್ರೇಕ್ಷಕರಿಗೆ ತರಲು ನಾವು ಕಾಯಲು ಸಾಧ್ಯವಿಲ್ಲ” ಎಂದು ಹೇಳಿದರು
ನಿರ್ದೇಶಕ ನಂದ ಕಿಶೋರ್ ಮಾತನಾಡಿ, “ವೃಷಭ ಸಿನಿಮಾ ಸಂಬಂಧಗಳು, ತ್ಯಾಗ ಮತ್ತು ಸಾಹಸಗಳ ಘರ್ಷಣೆಯನ್ನು ಹೇಳುತ್ತದೆ. ನವೆಂಬರ್ 6 ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಪ್ರೇಕ್ಷಕರ ಪ್ರತಿಕ್ರಿಯೆಗೆ ನಾನು ಕಾಯುತ್ತಿದ್ದೇನೆ” ಎಂದು ಅಭಿಪ್ರಾಯ ಹಂಚಿಕೊಂಡರು.
ವೃಷಭ ಸಿನಿಮಾದಲ್ಲಿ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಕೂಡ ಬಣ್ಣ ಹಚ್ಚಿದ್ದಾರೆ. ಮೋಹನ್ ಲಾಲ್ ಹಾಗೂ ಸಮರ್ಜಿತ್ ತಂದೆ, ಮಗನಾಗಿ ನಟಿಸಿದ್ದಾರೆ. ರಾಗಿಣಿ ದ್ವಿವೇದಿ ಮತ್ತು ನಯನ್ ಸಾರಿಕಾ ತಾರಾಬಳಗದಲ್ಲಿದ್ದಾರೆ.
ಚಿತ್ರಕ್ಕೆ ಸ್ಯಾಮ್ ಸಿಎಸ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರೆಸುಲ್ ಪೂಕುಕ್ಯೂ ಸೌಂಡ್ ಡಿಸೈನ್ , ಎಸ್‌ಆರ್‌ಕೆ, ಜನಾರ್ಧನ್ ಮಹರ್ಷಿ ಮತ್ತು ಕಾರ್ತಿಕ್ ಅವರ ಸಂಭಾಷಣೆ ಮತ್ತು ಪೀಟರ್ ಹೈನ್, ಸ್ಟಂಟ್ ಸಿಲ್ವಾ ಮತ್ತು ನಿಖಿಲ್ ಅವರ ಹೈ-ಆಕ್ಟೇನ್ ಸೀಕ್ವೆನ್ಸ್ ವೃಷಭ ಸಿನಿಮಾಗೆ ಇದೆ.
ಕನೆಕ್ಟ್ ಮೀಡಿಯಾ ಮತ್ತು ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್ ಅಭಿಷೇಕ್ ಎಸ್ ವ್ಯಾಸ್ ಸ್ಟುಡಿಯೋಸ್ ಸಹಯೋಗದಲ್ಲಿ ಪ್ರಸ್ತುತಪಡಿಸಿದ್ದು, ಶೋಭಾ ಕಪೂರ್, ಏಕ್ತಾ ಆರ್ ಕಪೂರ್, ಸಿ.ಕೆ. ಪದ್ಮ ಕುಮಾರ್, ವರುಣ್ ಮಾಥುರ್, ಸೌರಭ್ ಮಿಶ್ರಾ, ಅಭಿಷೇಕ್ ಎಸ್ ವ್ಯಾಸ್, ಪ್ರವೀರ್ ಸಿಂಗ್, ವಿಶಾಲ್ ಗುರ್ನಾನಿ ಮತ್ತು ಜೂಹಿ ಪರೇಖ್ ಮೆಹ್ತಾ ಚಿತ್ರ ನಿರ್ಮಿಸಿದ್ದಾರೆ.