2021ರಲ್ಲಿ  ರಿಲೀಸ್‌ ಆಗಿದ್ದ ಕೃತಿ ಸೇನನ್‌ ಳ `ಮಿಮಿ’ ಚಿತ್ರ ಮಹಾ ಯಶಸ್ಸು ಕಂಡಿದ್ದು ಅಷ್ಟರಲ್ಲೇ ಇದೆ. ನಂತರ ಈಕೆಯ `ಭೇಡಿಯಾ, ಆದಿಪುರುಷ್‌, ಗಣಪತ್‌’ ಮುಂತಾದ ಸಾಲು ಸಾಲು ಫ್ಲಾಪ್‌ ಚಿತ್ರಗಳು ಇವಳ ಕೆರಿಯರ್‌ ನ್ನು ಸಂಪೂರ್ಣ ಮುಳುಗಿಸಿದ. ಇತ್ತೀಚಿನ `ತೇರಿ ಬಾತೋ ಮೆ ಐಸಾ ಉ್ಝಾ ಜಿಯಾ’ ಚಿತ್ರದಿಂದ ತಾನು ದಡ ಕಾಣಬಹುದೇನೋ ಎಂದು ಆಶಿಸಿದ್ದಳು. ಆದರೆ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ತಲೆ ಎತ್ತಲೇ ಇಲ್ಲ, ಹೀಗಾಗಿ ಕೃತಿ ತಲೆ ತಗ್ಗಿಸಬೇಕಾಯಿತು. ಪಾಪ, ಕೃತಿಗಾ ಇಂಥ ಗತಿ ಎಂದು ಬಾಲಿವುಡ್‌ ಲೊಚಗುಟ್ಟುತ್ತಿದೆಯಂತೆ. ತೋರಿಕೆಗೆ ಮಾತ್ರ ಇದನ್ನು ಹಿಟ್‌ ಚಿತ್ರ ಎಂದೇ ಹೇಳಿಕೊಳ್ಳುತ್ತಿದ್ದಾಳೆ.

Soha-Ka-Fitness-Secret

ಸೋಹಾಳ ಫಿಟ್‌ ನೆಸ್‌ ಸೀಕ್ರೆಟ್‌ ವರ್ಷದ ಸೋಹಾ ಅಲಿ ಖಾನ್‌, ಇತ್ತೀಚೆಗೆ ಕ್ಯಾಲಿಫೋರ್ನಿಯಾ ಆಮಂಡ್ಸ್ ನ ಒಂದು ಇವೆಂಟ್ ನಲ್ಲಿ ಕಂಡುಬಂದಳು. ಅವಳು ಬಲು ಫಿಟ್‌ಫೈನ್‌ ಆಗಿದ್ದು, ಉತ್ಸಾಹದಿಂದ ಚಿಮ್ಮುತ್ತಿದ್ದಳು. ಈಕೆಗೆ ವಿರುದ್ಧವಾಗಿ, ಸಾಮಾನ್ಯ ಭಾರತೀಯ ವಿವಾಹಿತ ಹೆಂಗಸರು 40+ ನಂತರ, ಎಷ್ಟೇ ಫಿಟ್‌ ನೆಸ್‌ ಪ್ರೋಗ್ರಾಂಗಳಿದ್ದರೂ ದಿನೇ ದಿನೇ ದಪ್ಪ ಆಗುತ್ತಿರುತ್ತಾರೆ. ಆಂಟಿಗಳಾಗಿರುವ ತಮಗೆ ಈ ಫಿಟ್‌ ನೆಸ್‌, ಗ್ಲಾಮರ್‌ ಕಟ್ಟಿಕೊಂಡು ಏನಾಗಬೇಕಿದೆ ಅಂದುಕೊಳ್ಳುತ್ತಾರೆ. ಇಂಥವರು 45+ನ ಸೋಹಾಳನ್ನು ನೋಡಿ ಕಲಿಯಬೇಕಿರುವುದು ಬಹಳಷ್ಟಿದೆ. ಇಂದೂ ಸಹ ಈಕೆ ಡಯೆಟ್‌ ಕಂಟ್ರೋಲ್ ಮಾಡುತ್ತಾ, ತನ್ನ ಫಿಗರ್‌ ನ್ನು ಫಿಟ್‌ಫೈನ್‌ ಆಗಿರಿಸಿಕೊಂಡಿದ್ದಾಳೆ. ಅದು ತನ್ನ ಆರೋಗ್ಯ ಸಂರಕ್ಷಣೆಗಾಗಿಯೇ ಹೊರತು, ಯಾರಿಗೋ ತೋರಿಸಿಕೊಳ್ಳುವುದಕ್ಕಲ್ಲ ಎನ್ನುತ್ತಾಳೆ.

Bobby-Ki-Raah-Chale-Arjun-1

ಬಾಬಿಯ ದಾರಿ ಹಿಡಿದ ಅರ್ಜುನ್‌ `ಅನಿಮಲ್’ ಚಿತ್ರದಲ್ಲಿ ಬಾಬಿ ಡಿಯೋಲ್‌, ಅಬ್ರಾರ್‌ ಪಾತ್ರ ವಹಿಸಿ 10 ನಿಮಿಷಗಳಲ್ಲೇ ತನ್ನ ನೆಗೆಟಿವಿಟಿಯಿಂದ ಪ್ರೇಕ್ಷಕರನ್ನು ಕಟ್ಟಿ ಹಾಕಿದ್ದ. ಈಗ ಪ್ರತಿಯೊಬ್ಬ ಹೊಸ ಕಲಾವಿದನೂ ಇಂಥದ್ದೇ `ಕ್ರೂರಿ’ ಪಾತ್ರ ವಹಿಸಲು ಬಯಸುತ್ತಿದ್ದಾನೆ! ಮಲೈಕಾಳ ಬಾಯ್‌ ಫ್ರೆಂಡ್‌ ಅರ್ಜುನ್‌ ಕಪೂರ್‌ ತನ್ನ ಮುಂದಿನ ಚಿತ್ರ `ಸಂಘಂ ಅಗೆಯ್ನ್’ನಲ್ಲಿ ರಿಲೀಸ್ ಮಾಡಿದ ತನ್ನ ಫಸ್ಟ್ ಲುಕ್ಸ್ ನಿಂದ, ಎಲ್ಲರೂ ಇದನ್ನು `ಅನಿಮಲ್’ ಚಿತ್ರದ ಪೋಸ್ಟರ್‌ ಗೆ ಹೋಲಿಸುವುದೇ ಆಗಿದೆ. ಇಡೀ ಚಿತ್ರದ ತುಂಬಾ ಮಚ್ಚು, ಲಾಂಗು, ಮರ್ಡರ್‌ ಗಳೇ ತುಂಬಿವೆ ಎಂಬುದಕ್ಕೆ ಇದೇ ಸಾಕ್ಷಿ. ಇಂಥ ಮಹಾನ್‌ ಪಾತ್ರಗಳ ಮೂಲಕ ನಿರ್ದೇಶಕರು ಎಂಥ ಸಂದೇಶ ನೀಡ ಬಯಸುತ್ತಿದ್ದಾರೋ ಗೊತ್ತಿಲ್ಲ. ಮೊದಲೇ ಭಗವಾಧಾರಿಗಳು ಯುವಜನತೆಯ ಕೈಗೆ ಭಗವಾ ಝಂಡಾ ಹಿಡಿಸಿ, ಬೀದಿ ಬೀದಿಗಳಲ್ಲಿ ಅವರನ್ನು ಧರ್ಮದ ಗುತ್ತಿಗೆದಾರರನ್ನಾಗಿ ಇಳಿಸಿದ್ದಾರೆ. ಇಂಥ ಮಹಾನ್‌ ಚಿತ್ರಗಳು ಅಂಥ ಕಡೆ ಅಳಿದುಳಿದ ಕೊರತೆಯನ್ನೂ ನೀಗಿಸುತ್ತವೆ.

National-Crush-Ka-Future-Plan

ನ್ಯಾಶನಲ್ ಕ್ರಶ್ ಫ್ಯೂಚರ್ಪ್ಲಾನ್

ಟಿವಿಯ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪೋಷಕ ಪಾತ್ರ ನಿರ್ವಹಿಸುತ್ತಾ, `ವಿಕ್ರಮ್ ಬೇತಾಳ್‌’ನಂಥ ದೊಡ್ಡ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡ ರೋಹಿತ್‌ ಸರ್ರಾಫ್‌, ಆಧುನಿಕ ಟೀನೇಜ್‌ ಗರ್ಲ್ಸ್ ನ ನ್ಯಾಶನಲ್ ಕ್ರಶ್‌ ಎನಿಸಿದ್ದಾನೆ! ಸೋಶಿಯಲ್ ಮೀಡಿಯಾಗಳಲ್ಲಿ ಈತನಿಗೆ 30+ ಲಕ್ಷ ಮಂದಿ ಫಾಲೋಯೆರ್ಸ್‌ ಇದ್ದಾರೆ. ರೋಹಿತ್‌ ಇತ್ತೀಚೆಗೆ ತನ್ನ ವೆಬ್‌ ಸೀರೀಸ್‌ `ಮಿಸ್‌ಮ್ಯಾಚ್ಡ್’ನ 3ನೇ ಸೀಸನ್‌ ಗಾಗಿ ಶೂಟಿಂಗ್‌ ಮಾಡ್ತಿದ್ದಾನೆ. ಆತನಿಗೆ ಸಿನಿಮಾಗಳೆಂದರೇನೋ ಇಷ್ಟವೇ, ಆದರೂ OTTಯಲ್ಲಿ ನಿರ್ವಹಿಸುವಂಥ ಪಾತ್ರಗಳಲ್ಲಿನ ಮಜಾ, ಸಿನಿಮಾ ಯಾವ ಧಾರಾವಾಹಿಗಳಲ್ಲಿ ಸಿಗುವುದಿಲ್ಲ, ಅಂತಾನೆ. ಬಹುಶಃ ಈ ನ್ಯಾಶನಲ್ ಕ್ರಶ್‌ ತನ್ನ ಫ್ಯೂಚರ್‌ ಪೂರ್ತಿ OTTಯಲ್ಲೇ ನಿರ್ವಹಿಸಲಿದ್ದಾನೆ.

Flop-Ko-Hit-Banane-Ka-Ganit

ಫ್ಲಾಪ್ನ್ನು ಹಿಟ್ಆಗಿಸುವ ಗಣಿತ

ಒಂದು ಕಡೆ ತನ್ನ ಮೇಕಿಂಗ್‌ ಬಜೆಟ್‌ ನ್ನು ಹೇಗಾದರೂ ಮೊಟಕುಗೊಳಿಸುವ ನಿಟ್ಟಿನಲ್ಲಿ ಒದ್ದಾಡುತ್ತಿರುವ `ಫೈಟರ್‌’ ಚಿತ್ರ ತಂಡ, ಮತ್ತೊಂದು ಕಡೆ ಚಿತ್ರ ನಿರ್ಮಾಪಕರು ಹೇಗಾದರೂ ಮಾಡಿ ಇದನ್ನು `ಹಿಟ್‌’ ಎಂದು ಸಾರಲು ಹರಸಾಹಸ ಮಾಡುತ್ತಿದ್ದಾರೆ. ಚಿತ್ರದ ಗ್ರಾಸ್‌ ಪ್ರಾಫಿಟ್‌ ಸುಮಾರು 380 ಕೋಟಿ ಎನ್ನುತ್ತಾ, ಈ ಚಿತ್ರವನ್ನು `ಹಿಟ್‌’ ಎಂದೇ ಘೋಷಿಸಲಾಗಿದೆ. ಅತ್ತ ಚಿತ್ರದ ಯಾವ ಹಾಡೂ ಹಿಟ್‌ ಆಗಲಿಲ್ಲ, ಅಥವಾ ಈ ಚಿತ್ರ ಪ್ರೇಕ್ಷಕರನ್ನು ತನ್ನ ಕಥೆಯಿಂದ ಕಟ್ಟಿಹಾಕಲೂ ಇಲ್ಲ. ಆದರೂ ಫಿಲ್ಮಿ ಗಣಿತಜ್ಞರು, ಈ ಚಿತ್ರವನ್ನು ಈ ವರ್ಷದ ಮೊದಲ ಹಿಟ್‌ ಬಾಲಿವುಡ್‌ ಚಿತ್ರ ಎಂದು ಅಸರವಸರದಲ್ಲಿ ಘೋಷಿಸಿಯೇಬಿಟ್ಟರು! ಗ್ರಾಸ್‌ನೆಟ್‌ ಪ್ರಾಫಿಟ್‌ ಲೆಕ್ಕಾಚಾರ ನೋಡಿದರೆ, ಸರ್ಕಾರ ಕೇವಲ ಕಾಗದಪತ್ರಗಳ ಮೇಲೆ ದೊಡ್ಡ ಅಂಕಿಅಂಶ ತೋರಿಸಿ, ದೇಶ ಪ್ರಗತಿಯಲ್ಲಿದೆ ಎಂದು ಸಾರುತ್ತಿರುವಂತಿದೆ. ಈ `ಅಂಕಿಅಂಶ’ ಎಲ್ಲಿಂದ ಬಂತೋ ಗೊತ್ತಿಲ್ಲ, ಇದು ಇಲ್ಲದ್ದನ್ನು ಇದೆ ಎಂದೇ ಬಿಂಬಿಸುತ್ತಿದೆ!

Arjun-Ki-Action-Se-Wapsi

ಮರಳಿ ಬಂದ ಆ್ಯಕ್ಷನ್ರಾಜ ಅರ್ಜುನ್

ಆ್ಯಕ್ಷನ್‌ ರಾಜ ಎನಿಸಿದ ಅರ್ಜುನ ರಾವ್‌ ಪಾಲ್ ‌ನ `ಧಾಕಡ್‌’ ಚಿತ್ರ ಆತನ ಹಿಂದಿನ ಚಿತ್ರಗಳಂತೆಯೇ ಬಾಕ್ಸ್ ಆಫೀಸಿನಲ್ಲಿ ಸಂಪೂರ್ಣ ಮಖಾಡೆ ಮಲಗಿದೆ. ಬರೀ ನೆಗೆಟಿವ್ ‌ಪಾತ್ರಗಳಿಗಷ್ಟೇ  ಟೈಪ್‌ ಕ್ಯಾಸ್ಟ್ ಆಗಿಹೋಗಿರುವ ಅರ್ಜುನ್‌, ಇದೀಗ ಮತ್ತೊಬ್ಬ ಆ್ಯಕ್ಷನ್‌ ಕಿಂಗ್‌ ವಿದ್ಯುತ್‌ ಜಾಮ್ ವಾಲ್‌ ಜೊತೆ `ಕ್ರಾಕ್‌’ ಚಿತ್ರದಲ್ಲಿ ನಟಿಸುತ್ತಿದ್ದಾನೆ. ಎಂಥವರ ಮೈ ಮೇಲೂ ಕೂದಲು ನಿಮಿರಿ ನಿಲ್ಲುವಂತೆ ಮಾಡಬಲ್ಲ ವಿದ್ಯುತ್‌ ನ ಆ್ಯಕ್ಷನ್‌ ಎದುರು, ಅರ್ಜುನ್‌ ಎಷ್ಟು ಮಾತ್ರ ಗಟ್ಟಿಯಾಗಿ ನಿಲ್ಲಬಲ್ಲ ಎಂದು ಗೊತ್ತಾಗುತ್ತಿಲ್ಲ. ಇರಲಿ, ಅಳಿದುಳಿದ ಈತನ ಫ್ಯಾನ್ಸ್ ಗೆ ಮರಳಿ ಬಂದ ಅರ್ಜುನ್‌ ನನ್ನು ಕಂಡು ಖುಷಿ.ಓ ಖುಷಿಯಂತೆ!

K-Drama-Ke-Aage-Saasbahu-Kuch-Nahi

WEB ಡ್ರಾ ಮಾ ಎದುರು ನಿಲ್ಲದ ಅತ್ತೆ ಸೊಸೆ ಧಾರಾವಾಹಿ

ಗ್ಲಾಮರಸ್‌ ಆಗಿ ಮಿಂಚುತ್ತಾ, ಫ್ಯಾಷನೆಬ್‌ ಆಗಿ ಬಳುಕುತ್ತಾ ಓಲಾಡುವ ಆಧುನಿಕ ಸೊಸೆಯರು, ಅವರನ್ನು ಬುಗುರಿ ಆಡಿಸ ಬಯಸುವ ಗಯ್ಯಾಳಿ ಅತ್ತೆಯರ ಧಾರಾವಾಹಿ ನೋಡಿ ನೋಡಿ ಬೇಸತ್ತಿದ್ದೀರಾ? ಹಾಗಾದರೆ OTTಯ WEB ಡ್ರಾಮಾ ಸರ್ಚ್‌ಮಾಡಿ ಎಂಜಾಯ್‌ ಮಾಡಿ. ಇದರ ಕಥೆಗಳು ನಿಮ್ಮ ನಿಜ ಜೀವನದ ಸುತ್ತಾಮುತ್ತಾ ಹೆಣೆಯಲ್ಪಟ್ಟಿವೆ. ಇದು ನಿಮಗೆ ಬಹಳ ಹತ್ತಿರ ಎನಿಸುತ್ತದೆ. ಹಳ್ಳಿಗೆ ಹೋಗಿ ಡೆಂಟಲ್ ಕ್ಲಿನಿಕ್‌ ತೆರೆಯುವ ಡಾಕ್ಟರ್‌ ರ ಸಾಹಸಗಳನ್ನು `ಹೋಂಟೌನ್‌ ಚಾಚಾ’ ತೋರಿದರೆ, ಮದುವೆ ನಂತರ ಸದಾ ಕಿತ್ತಾಡುವ ದಂಪತಿಗಳ ಕಥೆ ಹೇಳಲಿದೆ `ದಿ ವರ್ಲ್ಡ್ ಆಫ್‌ ದಿ ಮ್ಯಾರಿಡ್‌’ ಶೋ. ದೋಸ್ತಿ ಮತ್ತು ಯಂಗ್ ಏಜ್‌ ರೊಮಾನ್ಸ್ ಆಧಾರಿತ `ರಿಪ್ಲೈ 1988′ ಶೋ ನಿಮಗೆ ಈ ಸೀರೀಸ್‌ ನ ಎಲ್ಲಾ ಎಪಿಸೋಡ್‌ ಗಳಿಂದಲೂ ಕಟ್ಟಿಹಾಕಬಲ್ಲವು. ಏನಾದರೂ ಚೆನ್ನಾಗಿರುವುದನ್ನು ನೋಡಬಯಸಿದರೆ, ಇನ್ನು ಟ್ರೈ ಮಾಡಿ, ಬಾಕಿ ನಿಮ್ಮ ಆಯ್ಕೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ