- ರಾಘವೇಂದ್ರ ಅಡಿಗ ಎಚ್ಚೆನ್.

ಹಿರಿಯ ಸಿನಿ ಪತ್ರಕರ್ತರಾದ ಕೆ.ಜೆ. ಕುಮಾರ್ ಅವರು ನಿಧನರಾಗಿದ್ದಾರೆ. ಅವರ ನಿಧನದಿಂದ ಮಾಧ್ಯಮ ವಲಯದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ಬುಧವಾರ ಮಧ್ಯಾಹ್ನದ ವೇಳೆಗೆ ಎದೆನೋವು ಕಾಣಿಕೊಂಡ ಹಿನ್ನೆಲೆಯಲ್ಲಿ ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆಗೆ ಕರೆ ತರಲಾಯಿತು. ಅಲ್ಲಿ ಹೃದಯಾಘಾತದಿಂದ ಮೃತಪಟ್ಟರಿವುದಾಗಿ ವೈದ್ಯರು ತಿಳಿಸಿದರು.

ಸುಮಾರು ನಾಲ್ಕು ದಶಕಗಳ ಕಾಲ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇವರು ಪತ್ರಕರ್ತ ಆಗಿ ಮಾತ್ರವಲ್ಲ ಮೈಸೂರಿನ ಹಲವೆಡೆ ಪ್ರಮುಖ ಪತ್ರಿಕೆಗಳ ವಿತರಕರಾಗಿ ಸಹ ಕಾರ್ಯನಾರ್ವಹಿಸಿದ್ದರು.

IMG-20260311-WA0035

ಚಿತ್ರರಂಗದ ಸುದ್ದಿಗಳನ್ನು ಹಲವು ವರ್ಷಗಳ ಕಾಲ ವರದಿ ಮಾಡಿದ್ದ ಕೆ.ಜೆ. ಕುಮಾರ್ ಅವರು ಮೈಸೂರಿನ ಪತ್ರಿಕಾ ವಲಯದಲ್ಲಿ ಪರಿಚಿತ ಮುಖವಾಗಿದ್ದರು. ತಮಿಳುನಟ ರಜನಿಕಾಂತ್, ದಿ.ಅಂಬರೀಶ್ ಅವರ ಜತೆಗೆ ಆತ್ಮೀಯ ಒಡನಾಟ ಹೊಂದಿದ್ದ ಕೆ.ಜೆ.ಕುಮಾರ್, ಸಿನಿತಾರೆಯರಿಗೆ ಆತ್ಮೀಯರಾಗಿದ್ದರು.

ಸೌಮ್ಯ ಸ್ವಭಾವ ಹಾಗೂ ಸರಳ ವ್ಯಕ್ತಿತ್ವ ಹೊಂದಿದ್ದ ಅವರು ಸಹೋದ್ಯೋಗಿಗಳ ನಡುವೆ ಗೌರವಕ್ಕೆ ಪಾತ್ರರಾಗಿದ್ದರು. ಅವರ ನಿಧನ ಸುದ್ದಿ ತಿಳಿದು ಪತ್ರಕರ್ತರು, ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ, ಸಿನಿ ಕ್ಷೇತ್ರದ ಗಣ್ಯರು ಹಾಗೂ ಸ್ನೇಹಿತರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕುಮಾರ್ ಅವರ ಅಗಲಿಕೆಯಿಂದ ಪತ್ರಿಕಾ ಹಾಗೂ ಸಿನಿ ವಲಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ