ರಾಘವೇಂದ್ರ ಅಡಿಗ ಎಚ್ಚೆನ್.

ಕೆಜಿಎಫ್ ಚಾಪ್ಟರ್ 2 ಸಹ-ನಿರ್ದೇಶಕರಾದ ಕೀರ್ತನ್ ನಾಡಗೌಡ ಅವರ ನಾಲ್ಕು ವರ್ಷದ ಪುತ್ರ ಆಕಸ್ಮಿಕವಾಗಿ ಲಿಫ್ಟ್‌ನಲ್ಲಿ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ನಡೆದಿದೆ. ಸಾವನ್ನಪ್ಪಿದ ಬಾಲಕನ ಹೆಸರು ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ.
ಕೀರ್ತನ್ ನಾಡಗೌಡ ಮತ್ತು ಪತ್ನಿ ಸಮೃದ್ಧಿ ಪಟೇಲ್ ತಮ್ಮ ಪುತ್ರನ ಅಕಾಲಿಕ ಮರಣದಿಂದ ತೀವ್ರ ದುಃಖದಲ್ಲಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಚಲನಚಿತ್ರ ಮತ್ತು ರಾಜಕೀಯ ವ್ಯಕ್ತಿಗಳು ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಹ ಸೋಶಿಯಲ್ ಮೀಡಿಯಾದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಪವನ್ ಕಲ್ಯಾಣ್ ಅವರು ತಮ್ಮ ಪೋಸ್ಟ್‌ನಲ್ಲಿ “ನಿರ್ದೇಶಕ ಕೀರ್ತನ್ ನಾಡಗೌಡ ಅವರ ಮಗನ ಅಕಾಲಿಕ ಮರಣ ತೀವ್ರ ದುಃಖ ತಂದಿದೆ. ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನಿರ್ದೇಶಕರಾಗಿ ಪರಿಚಯವಾಗಿರುವ ಕೀರ್ತನ್ ನಾಡಗೌಡ ಅವರ ಕುಟುಂಬದಲ್ಲಿ ಸಂಭವಿಸಿದ ಈ ದುರಂತ ನಮ್ಮನ್ನ ತೀವ್ರವಾಗಿ ನೋಯಿಸಿದೆ. ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡು ದುರಂತಕ್ಕೀಡಾದ ಚಿರಂಜೀವಿ ಸೋನಾರ್ಷ್‌.ಕೆ ನಾಡಗೌಡ ಅವರ ಕುಟುಂಬಕ್ಕೆ ಈ ದುಃಖ ತಾಳಲು ಭಗವಂತ ಶಕ್ತಿ ನೀಡಲಿ” ಎಂದು ಹೇಳಿದ್ದಾರೆ.
ಕೀರ್ತನ್ ನಾಡಗೌಡ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಪ್ರಮುಖವಾಗಿ ಕೆಲಸ ಮಾಡಿದ್ದಾರೆ. ಅವರು ಪ್ಯಾನ್ ಇಂಡಿಯಾ ಹಿಟ್‌ ಚಿತ್ರ ಕೆಜಿಎಫ್ 2ಗೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ