- ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವವರು ಕಮಲ್ ರಾಜ್ (ಕಲೀಂ ಪಾಷ) ಅವರು ಹೆಸರು ಇದೀಗ ವಿಶ್ವದ ಪ್ರತಿಷ್ಟಿತ ದಾಖಲೆ ಪುಸ್ತಕಗಳಲ್ಲಿ ಒಂದಾಗಿರುವ ‘ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ಸೇರ್ಪಡೆಯಾಗಿದೆ.

ಸಿನಿಮಾಗಳಷ್ಟೇ ಅಲ್ಲದೆ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಕೂಡ ಸುಮಾರು ಎರಡೂವರೆ ದಶಕಗಳಿಂದ ತೊಡಗಿಸಿಕೊಂಡಿರುವ ಕಮಲ್ ರಾಜ್ (ಕಲೀಮ್ ಪಾಷಾ) ಕನ್ನಡ, ಹಿಂದಿ ಸೇರಿದಂತೆ  ಸುಮಾರು ನೂರಕ್ಕೂ ಹೆಚ್ಚು ಸಂಗೀತ ಆಲ್ಬಮ್ ಗಳನ್ನು ಇಲ್ಲಿಯವರೆಗೆ ಸಂಯೋಜಿಸಿ, ನಿರ್ಮಿಸಿ ಅದನ್ನು ಯು-ಟ್ಯೂಬ್ ಸೇರಿದಂತೆ  ಪ್ರಮುಖ ಡಿಜಿಟಲ್ ವೇದಿಕೆಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಆಧ್ಯಾತ್ಮ, ಜೀವನ, ಪ್ರೀತಿ, ಮಾನವೀಯತೆ ಕುರಿತಾದ ಸುಮಾರು ಐದು ಸಾವಿರಕ್ಕೂ ಅಧಿಕ ಶಾಯರಿಗಳನ್ನು ರಚಿಸಿರುವ ಕಮಲ್ ರಾಜ್ (ಕಲೀಂ ಪಾಷ) ಅದನ್ನು ಪುಸ್ತಕ ರೂಪದಲ್ಲಿ ಕನ್ನಡ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಹೊರತಂದಿದ್ದಾರೆ.

ಸಾಹಿತ್ಯ, ಸಂಗೀತ ಮತ್ತು ಕಲೆಯ ಮೂಲಕ ಭಾಷಾ ಅಭಿವ್ಯಕ್ತ ಕಾರ್ಯ ಮಾಡುತ್ತಿರುವ ಕಮಲ್ ರಾಜ್ ಅವರ ಅಪರೂಪದ ಸಾಧನೆಯನ್ನು ‘ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ಪರಿಗಣಿಸಲಾಗಿದ್ದು, ಇತ್ತೀಚೆಗೆ ಕಮಲ್ ರಾಜ್ ಅವರ ಹೆಸರಿನಲ್ಲಿ ದಾಖಲಾಗಿರುವ ‘ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಪತ್ರವನ್ನು ಅವರಿಗೆ ಪ್ರಧಾನ ಮಾಡಲಾಯಿತು.

IMG-20260414-WA0019

ಇನ್ನು ‘ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ತಮ್ಮ ಹೆಸರು ಸೇರ್ಪಡೆಯಾಗಿರುವುದರ ಬಗ್ಗೆ ಮಾತನಾಡಿರುವ ನಟ ಕಮಲ್ ರಾಜ್, ‘ನಮ್ಮ ಕೆಲಸಗಳು ಇತರರಿಗೆ ಅನುಕೂಲವಾಬೇಕು, ಮಾದರಿಯಾಗಿರಬೇಕು ಮತ್ತು ಸುತ್ತಮುತ್ತಲಿನವರಿಗೆ ಪ್ರೇರಣೆಯಾಗಬೇಕು ಎಂದು ಬಯಸುತ್ತೇನೆ. ಬಹುಶಃ ನನ್ನ ಕೆಲಸದ ಅದೇ ಶೈಲಿ ಇಂದು ‘ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ಗುರುತಿಸುವಂತೆ ಮಾಡಿದೆ. ಮುಂದೆಯೂ ನನ್ನ ಅಭಿರುಚಿಯ ಕಲಾ ಸೇವೆ ನಿರಂತರವಾಗಿರುತ್ತದೆ’ ಎಂದಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ