- ರಾಘವೇಂದ್ರ ಅಡಿಗ ಎಚ್ಚೆನ್.

ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮೂಲಕ ದೊಡ್ಡ ಜನಪ್ರಿಯತೆ ಪಡೆದ ನಂತರ ಇದೀಗ ಹೊಸ ಹೆಜ್ಜೆ ಇಟ್ಟಿದ್ದಾರೆ. ಅವರು ತಮ್ಮ ಹೊಸ ಆಹಾರ ಉದ್ಯಮವಾಗಿ ‘ಪಟಾಕಿ ಕಿಚನ್’ ಅನ್ನು ಆರಂಭಿಸಿದ್ದಾರೆ.
ಮೂಲತಃ ಯೂಟ್ಯೂಬರ್ ಆಗಿರುವ ರಕ್ಷಿತಾ ಶೆಟ್ಟಿ ಅಡುಗೆ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಮಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಅವರು “ಪಟಾಕಿ ರಕ್ಷಿತಾ” ಎಂಬ ಹೆಸರಿನಿಂದಲೇ ಹೆಚ್ಚು ಗುರುತಿಸಿಕೊಂಡಿದ್ದರು.
ಅದೇ ಬ್ರ್ಯಾಂಡ್ ಹೆಸರನ್ನು ಮುಂದುವರಿಸಿಕೊಂಡು ಅವರು ಹಳ್ಳಿಯಲ್ಲಿ ‘ಪಟಾಕಿ ಕಿಚನ್’ ಅನ್ನು ನಿರ್ಮಿಸಿದ್ದು, ಇಲ್ಲಿ ತಮ್ಮದೇ ಶೈಲಿಯ ಅಡುಗೆಗಳನ್ನು ಪರಿಚಯಿಸಲು ಯೋಜಿಸಿದ್ದಾರೆ.
ಈ ಕಿಚನ್ ಉದ್ಘಾಟನೆಗೆ ಬಿಗ್ ಬಾಸ್ ಮನೆಯ ಸಹ ಸ್ಪರ್ಧಿಯಾಗಿದ್ದ ರಘು ಆಗಮಿಸಿ ರಿಬ್ಬನ್ ಕಟ್ ಮಾಡಿ ಉದ್ಘಾಟನೆ ನೆರವೇರಿಸಿದ್ದಾರೆ. ಮೊದಲ ದಿನವೇ ಅವರು ಏಡಿ ಘೀ ರೋಸ್ಟ್ ತಯಾರಿಸಿ ವಿಶೇಷವಾಗಿ ಗಮನ ಸೆಳೆದಿದ್ದಾರೆ.
ಕಿಚನ್ ಒಳಗೆ ಮಣ್ಣಿನ ಹೂಜಿಯಲ್ಲಿ ನೀರು, ಗೋಡೆಯ ಮೇಲೆ ರಕ್ಷಿತಾ ಫೋಟೋ ಹಾಗೂ ಕಲಾತ್ಮಕ ಅಲಂಕಾರಗಳನ್ನು ಮಾಡಲಾಗಿದೆ. ಹೊಸ ಉದ್ಯಮದ ಮೂಲಕ ತಮ್ಮ ಯೂಟ್ಯೂಬ್ ಹಾಗೂ ಆಹಾರ ಉದ್ಯಮದ ಪ್ರಯಾಣವನ್ನು ರಕ್ಷಿತಾ ಶೆಟ್ಟಿ ಮುಂದುವರಿಸುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ