- ರಾಘವೇಂದ್ರ ಅಡಿಗ ಎಚ್ಚೆನ್.

ಡಾರ್ಲಿಂಗ್ ಕೃಷ್ಣ ನಟನೆಯ ‘ಲವ್ ಮಾಕ್ಟೇಲ್ 3’ ಸಿನಿಮಾ ಯಶಸ್ಸಿನ ನಡುವೆ ಇದೀಗ ಕಥೆ ಕಳ್ಳತನದ ವಿವಾದ ಸದ್ದು ಮಾಡುತ್ತಿದೆ. ನಿರ್ದೇಶಕ ರಾಘವೇಂದ್ರ ನಾಯ್ಕ್, ಈ ಚಿತ್ರದ ಕಥೆ ತಮ್ಮದೇ ಎಂದು ಗಂಭೀರ ಆರೋಪ ಮಾಡಿದ್ದು, ಚಿತ್ರತಂಡದ ವಿರುದ್ಧ ಪ್ರಶ್ನೆ ಎಬ್ಬಿಸಿದ್ದಾರೆ.
ತಾವು ಈ ಕಥೆಯನ್ನು ಮೊದಲು ಡಾರ್ಲಿಂಗ್ ಕೃಷ್ಣ ಅವರಿಗೆ ಹೇಳಿದ್ದರೂ, ಆ ಸಮಯದಲ್ಲಿ ಅದನ್ನು ತಿರಸ್ಕರಿಸಲಾಗಿತ್ತು ಎಂದು ನಾಯ್ಕ್ ಹೇಳಿದ್ದಾರೆ. ಆದರೆ ಇದೀಗ ಅದೇ ಕಥೆಯನ್ನು ಚಿತ್ರದಲ್ಲಿ ಬಳಸಿರುವುದನ್ನು ನೋಡಿ ತಮಗೆ ಶಾಕ್ ಆಗಿದೆ ಎಂದು ಅವರು ಆರೋಪಿಸಿದ್ದಾರೆ.
ಆರಂಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ‘ಇತ್ತೀಚೆಗೆ ಹಿಟ್ ಆದ ಸಿನಿಮಾ’ ಎಂದು ಉಲ್ಲೇಖಿಸಿ ಆರೋಪ ಮಾಡಿದ್ದ ನಾಯ್ಕ್, ನಂತರ ಮಾಧ್ಯಮಗಳ ಮುಂದೆ ಬಂದು ನೇರವಾಗಿ ‘ಲವ್ ಮಾಕ್ಟೇಲ್ 3’ ವಿರುದ್ಧ ಆರೋಪ ಹೊರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾರ್ಲಿಂಗ್ ಕೃಷ್ಣ, ಆರೋಪಗಳನ್ನು ಸಂಪೂರ್ಣ ತಳ್ಳಿ ಹಾಕಿ, ಅದನ್ನು ‘ಜೋಕ್’ ಎಂದು ಕರೆಯುತ್ತಾರೆ. ‘ನಿಮ್ಮ ಬಳಿ ಪೂರ್ಣ ಸ್ಕ್ರೀನ್ಪ್ಲೇ ಇದೆಯಾ? ಡೈಲಾಗ್‌ಗಳಿವೆಯಾ? ಕೋರ್ಟ್ ಸೀನ್ ಒಂದೇ ಇದ್ದರೆ ಅದು ನಿಮ್ಮದೇ ಎಂದು ಹೇಗೆ ಹೇಳಬಹುದು? ಕೋರ್ಟ್‌ಗೇ ಪೇಟೆಂಟ್ ಇದೆಯಾ?’ ಎಂದು ಪ್ರಶ್ನಿಸಿದ್ದಾರೆ.
‘ನಾವು ಈ ಕಥೆಯನ್ನು ಶ್ರಮಪಟ್ಟು ನಿರ್ಮಿಸಿದ್ದೇವೆ, ಕಳ್ಳತನ ಎನ್ನುವುದು ತಪ್ಪು ಆರೋಪ’ ಎಂದು ಕೃಷ್ಣ ಸ್ಪಷ್ಟಪಡಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ