- ರಾಘವೇಂದ್ರ ಅಡಿಗ ಎಚ್ಚೆನ್.

ಮದನಿಕ ಒಂದೊಳ್ಳೆ ವಿಭಿನ್ನವಾದ ಟೈಟಲ್ ನೊಂದಿಗೆ ಬಿ.ಎಸ್.ಸಂಜಯ್ ಮತ್ತೆ ಬಂದಿದ್ದಾರೆ. ರಾಗಿಣಿ ದ್ವಿವೇದಿ ನಟನೆಯ ಮದನಿಕ ಇದೀಗ ಟ್ರೇಲರ್ ಹಾಗೂ ಹಾಡನ್ನ ರಿಲೀಸ್ ಮಾಡಿದೆ. ಹಳೆಗನ್ನಡದಲ್ಲಿ ಎಲ್ಲರ ಮನಸ್ಸಿಗೂ ಮುದ ನೀಡಿದೆ.
ಸಿನಿಮಾ ಬಗ್ಗೆ ಮಾತನ್ನಾಡುವಾಗಲೇ ಎಮೋಷನಲ್ ಆದಂತ ನಿರ್ದೇಶಕ ಬಿ ಎಸ್ ಸಂಜಯ್ ಮಾತನ್ನಾಡುತ್ತಾ, ನಂಗೆ ಗೊತ್ತಿಲ್ಲದಂತೆ ಈ ಕಥೆ ಮಾಡುವಾಗ ಒಂದಷ್ಟು ಘಟನೆಗಳು ನಡೀತು. ತುಂಬಾ ಅದ್ಭುತವಾಗಿ ಕಥೆಯನ್ನ ಮಾಡಿಕೊಂಡೆ. ನನ್ನ ಹಂಎಡತಿ ಬಳಿ, ಕುಮಾರಸ್ವಾಮಿ ಅವರ ಬಳಿ ಹೇಳಿದೆ. ಸಿನಿಮಾ ಮಾಡೋಣಾ ಅಂತ ಒಪ್ಪಿಗೆ ನೀಡಿದ್ರು. ರಾಗಿಣಿ ಅವರು ಈ ಕಥೆಯನ್ನ ಒಪ್ಪಿ ಮಾಡಿದ್ದಾರೆ. ಸಿನಿಮಾದಲ್ಲಿ ಹತ್ತು ಹಾಡುಗಳಿವೆ. ಕ್ಲಾಸಿಕಲ್ ಸಾಂಗ್ಸ್ ಇದೆ. ಮದನಿಕ ಅಂದ್ರೆ 400 ವರ್ಷದ ಹಳೇ ಕಥೆ. ರಾಗಿಣಿ ಅವರು ಮದನಿಕ ಆಗಿ ಅಭಿನಯಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

madanika 1

ನಟಿ ರಾಗಿಣಿ ಮಾತನ್ನಾಡಿ, ಮದನಿಕ ಬಗ್ಗೆ ಸಾಕಷ್ಟು ಕುತೂಹಲವಿದೆ. ಇದು ಬರೀ ಆರಂಭ ಅಷ್ಟೇ. ಗ್ಲಿಂಪ್ಸ್ ಆಫ್ ಮದನಿಕ ನೋಡಿದ್ದೀವಿ ಅಷ್ಟೆ. ಆದರೆ ಅದೆ ಹಿಂದೆ ಅದ್ಭುತ ನಟನೆ, ಕಥೆ, ಒಂದಷ್ಟು ಕಥೆ ಇದಾವೆ. ಎರಡೂವರೆ ವರ್ಷದ ಜರ್ನಿ ಇದು. ಎಲ್ಲರಿಗೂ ಗೊತ್ತಿರುವ ಹಾಗೇ, ಟೆಕ್ನಾಲಜಿ, ಮೇಕಿಂಗ್, ಮ್ಯೂಸಿಕ್ ಎಲ್ಲವೂ ಬದಲಾಗಿದೆ. ನಾವೂ ಅಂದುಕೊಂಡಿರಲಿಲ್ಲ ಇಷ್ಟೊಂದು ಬದಲಾವಣೆ ಆಗುತ್ತೆ ಅಂತ. ಭಾವನೆಗಳು ಮಾತ್ರ ಬದಲಾಗಿಲ್ಲ. ಮಿಕ್ಸ್ಡ್ ವರ್ಷನ್ ಈ ಸಿನಿಮಾದಲ್ಲಿದೆ. ಅದ್ಭುತವಾದ ಆಕ್ಷನ್ ಸೀಕ್ವೆನ್ಸ್ ಇದೆ, ಮ್ಯೂಸಿಕ್ ಇದೆ. ಈ ರೀತಿಯಾದ ಸಿನಿಮಾ ಬಹಳಷ್ಟು ವರ್ಷಗಳಿಂದ ಬಂದಿಲ್ಲ ಎಂದು ತಮ್ಮ ಸಿನಿಮಾದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದರು.

madanika 2

ಸಂಗೀತ ನಿರ್ದೇಶಕ ಸಲಾಂ ಕೇರಳ ಅವರು ಮಾತನ್ನಾಡಿ, ಇದಕ್ಕಿಂತ ಮೊದಲು ಮೂರು ಸಿನಿಮಾ ಮಾಡಿದ್ದೆ. ಸಂಜಯ್ ಸರ್ ಒಂದು ಒಳ್ಳೆ ಅವಕಾಶ ನೀಡಿದರು. ನನ್ನ ಜೀವನದಲ್ಲು ಬೆಸ್ಟ್ ಮ್ಯೂಸಿಕ್ ಇದು ಅಂತಾನೇ ಹೇಳಬಹುದು. ನನ್ನ ಯೋಚನೆಯಲ್ಲಿ ಜನರಲ್ ಮ್ಯೂಸಿಕ್ ಅಂತಾನೆ ಇತ್ತು. ಆದರೆ ಡೈರೆಕ್ಟರ್ ನ ಭೇಟಿ ಮಾಡಿದ ಮೇಲೆ ಕ್ಲಾಸಿಕಲ್ ಮ್ಯೂಸಿಕ್ ಇರ್ಲಿ ಅಂತ ಹೇಳಿದ್ರು ಎಂದಿದ್ದಾರೆ.

madanika 3

ವಿಕ್ಟರಿ ವಾಸು ಮಾತನ್ನಾಡಿ, ಮದನಿಕ ಹೆಸರೇ ಒಂದು ಆಕರ್ಷಕ, ಸುಂದರ ಹುಡುಗಿ. ಅದಕ್ಕೆ ರಾಗಿಣಿ ಅವರು ಜೀವ ತುಂಬಿದ್ದಾರೆ. ಸಂಜಯ್ ಸರ್ ಮತ್ತು ನನ್ನದು ಇಪ್ಪತ್ತು ವರ್ಷಗಳ ಅವಿನಾಭಾವ ಸಂಬಂಧ. ಈ ಸಿನಿಮಾಗೆ ಗೆಲುವು ಸಿಗಲಿ ನಿಮ್ಮಿಂದ ಅಂತ ಕೇಳಿಕೊಳ್ತೇನೆ ಎಂದಿದ್ದಾರೆ.

madanika

ಎಸ್ ಪಿ ಆರ್ ಪ್ರೊಡಕ್ಷನ್ ಹಾಗೂ ಸಖರ್ಥ್ ಡಿಜಿಟಲ್ ಹೌಸ್ ಬ್ಯಾನರ್ ನಡಿ ಸುಜಾತ ಲಕ್ಷ್ಮೀ ಹಾಗೂ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದಾರೆ. ಧರ್ಮ ಕೀರ್ತಿರಾಜ್, ಹರೀಶ್ ರಾಜ್, ಅಶ್ವಿನ್, ರಾಜ್ವಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಸಂಗೀತ ಕಲಾಂ ಕೇರಳ, ಛಾಯಾಗ್ರಹಣ ಆರ್ ಗಿರಿ, ಸಾಹಸ ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್ ಅವರು ನೀಡಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾ ತೆರೆಗೆ ತರಲು ತಂಡ ರೆಡಿಯಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ