- ರಾಘವೇಂದ್ರ ಅಡಿಗ ಎಚ್ಚೆನ್.
ನ್ನಡ ಚಿತ್ರರಂಗದ ನಟರಲ್ಲೊಬ್ಬರಾಗಿದ್ದ ಉಮೇಶ್ ಅಲಿಯಾಸ್ ಕೋತಿ ಮಂಜ (ವಯಸ್ಸು 45) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಅವರು ಕೊನೆಯುಸಿರೆಳೆದಿದ್ದು, ಅವರ ಅಗಲಿಕೆ ಕನ್ನಡ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಶಿವರಾಜ್ ಕುಮಾರ್ ಅಭಿನಯದ 2005ರ ಸೂಪರ್ ಹಿಟ್ ಚಿತ್ರ ‘ಜೋಗಿ’ಯಲ್ಲಿ ಕೋತಿ ಮಂಜ ಎಂಬ ಪಾತ್ರದ ಮೂಲಕ ಉಮೇಶ್ ಜನಪ್ರಿಯರಾಗಿದ್ದರು. ತಮ್ಮ ಅಭಿನಯ ಶೈಲಿಯಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಅವರ ಪಾತ್ರವು ಆಳವಾಗಿ ಬೇರು ಬಿಟ್ಟಿತ್ತು. ಚಿತ್ರದಲ್ಲಿ ಹಾಸ್ಯಭರಿತ ಹಾಗೂ ಮಾನವೀಯ ಅಂಶಗಳೊಂದಿಗೆ ಮೂಡಿದ ಪಾತ್ರವನ್ನು ಮಾಡಿದ್ದರಿಂದ ಅವರು ‘ಕೋತಿ ಮಂಜ’ ಎಂಬ ಹೆಸರಿನಿಂದಲೇ ಜನಪ್ರಿಯರಾದರು.
‘ಜೋಗಿ’ ಚಿತ್ರದ ನಂತರ ಉಮೇಶ್ ಹಲವಾರು ಕನ್ನಡ ಚಲನಚಿತ್ರಗಳಲ್ಲಿ ಸಹಾಯ ನಾಯಕನಾಗಿ, ಸಪೋರ್ಟ್ ರೋಲ್‌ಗಳಲ್ಲಿ ಹಾಗೂ ಕೆಲವೊಂದು ಹಾಸ್ಯಭರಿತ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರು ನಿರ್ದೇಶಕ ಜೋಗಿ ಪ್ರೇಮ್ ಅವರ ಆಪ್ತರಾಗಿ ಹಲವು ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿದ್ದರು. ಪ್ರೇಮ್ ಅವರ ಸಿನಿಮಾಗಳಲ್ಲಿ ಅವರು ನಿರಂತರವಾಗಿ ನಟಿಸುತ್ತಿದ್ದರು ಮತ್ತು ನಿರ್ದೇಶಕನಿಗೆ ಆಪ್ತರಾಗಿದ್ದರು.
ಕೋತಿ ಮಂಜ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದಾಗಿ ಅವರ ಸ್ನೇಹಿತರು, ಕುಟುಂಬಸ್ಥರು, ಚಿತ್ರರಂಗದ ಕಲಾವಿದರು ಮತ್ತು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

 

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ