- ರಾಘವೇಂದ್ರ ಅಡಿಗ ಎಚ್ಚೆನ್. 

ಚಿತ್ರರಂಗದಲ್ಲಿ, ಚಿತ್ರಗಳಲ್ಲಿ ಆಕರ್ಷಕ ಲಲನಾಮಣಿಯರ ನಡುವೆ ಇದ್ದರೂ  ಸ್ಥಿತ ಪ್ರಜ್ಞನಂತೆ, ವೈರಾಗ್ಯ ಋಷಿಯಂತೆ,ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ ನಟಿಸಿ ಗೆದ್ದು ಬೀಗಿದ ಮಡಿವಂತ ನಟ  ಮನೋಜ್ ಕುಮಾರ್ (87) ಇಹ ಲೋಕ ತ್ಯಜಿಸಿದ್ದಾರೆ.

ಉಪ್ಕಾರ್,ಪೂರಬ್ ಔರ್ ಪಶ್ಚಿಮ್,  ಶೋರ್, ರೋಟಿ ಕಪಡಾ ಔರ್ ಮಕಾನ್  ಯಶಸ್ವಿ ಚಿತ್ರಗಳನ್ನು ನೀಡಿ ದಾದ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದುಕೊಂಡಿದ್ದ ಇವರು ದೇಶಭಕ್ತಿ ಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಬಾಲಿವುಡ್ ಹಿರಿಯ ನಟ. ಅವರ "ಉಪಕಾರ್", " ಪೂರಬ್ ಔರ್ ಪಶ್ಚಿಮ್", "ಶೋರ್".... ಸಿನಿಮಾಗಳು ನನ್ನ ಮೆಚ್ಚಿನ ಸಿನಿಮಾಗಳಲ್ಲಿ ಕೆಲವು.

"ಉಪಕಾರ್"  ಸಿನಿಮಾದ "ಮೆರೆ ದೇಶ್ ಕಿ ಧರ್ತಿ... ಸೋನಾ ಉಗಲೇ" ಆ ಕಾಲದ ಒಂದು ರೀತಿ ಎರಡನೇ ರಾಷ್ಟ್ರಗೀತೆಯಾಗಿಬಿಟ್ಟಿತ್ತು.  ಯುವಕರಲ್ಲಿ ದೇಶಪ್ರೇಮ ಹೆಚ್ಚು  ಮಾಡುವ ಸಿನಿಮಾಗಳನ್ನು ತೆಗೆದ ಖ್ಯಾತಿ ಶ್ರೀ ಮನೋಜ್ ಕುಮಾರ್ ಅವರದ್ದು
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ  ನಟ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಜುಲೈ 24, 1937ರಂದು ಪಂಜಾಬ್‌ನ ಅಮೃತಸರದಲ್ಲಿ ಹರಿಕೃಷ್ಣ ಗೋಸ್ವಾಮಿಯಾಗಿ ಜನಿಸಿದ ಮನೋಜ್ ಕುಮಾರ್ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ ಸೃಷ್ಟಿಸಿಕೊಂಡಿದ್ದರು. ಶಹೀದ್, ಉಪ್ಕಾರ್ ಮತ್ತು ರಂಗ್ ದೇ ಬಸಂತಿ ಮುಂತಾದ ಚಿತ್ರಗಳಲ್ಲಿನ ಅವರ ಅಪ್ರತಿಮ ಪಾತ್ರಗಳು ಜನರಲ್ಲಿ ದೇಶಭಕ್ತಿಯ ಭಾವನೆಗಳೊಂದಿಗೆ ಆಳವಾಗಿ ಸಂಪರ್ಕ ಹೊಂದಿದ್ದವು.

ಮನೋಜ್ ಕುಮಾರ್ ಅವರು 'ದೋ ಬದನ್', 'ಹರಿಯಾಲಿ ಔರ್ ರಾಸ್ತಾ' ಮತ್ತು 'ಗುಮ್ನಾಮ್'ನಂತಹ ಹಿಟ್ ಚಿತ್ರಗಳಿಗೆ ಹೆಸರುವಾಸಿಯಾಗಿದ್ದರು. ದೇಶಭಕ್ತಿ ಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಅವರ 'ಪುರಬ್ ಔರ್ ಪಶ್ಚಿಮ್' ಚಿತ್ರದ 'ಭಾರತ್ ಕಾ ರೆಹನೇ ವಾಲಾ ಹೂಂ, ಭಾರತ್ ಕಿ ಬಾತ್ ಸುನಾತಾ ಹೂಂ..' ಹಾಡುಗಳು ಇಂದಿಗೂ ಜನಪ್ರಿಯವಾಗಿದೆ. ಅಭಿಮಾನಿಗಳು ಅವರನ್ನು 'ಭರತ್ ಕುಮಾರ್' ಎಂದೇ ಕರೆಯುತ್ತಿದ್ದರು.

ನಿಧನದ ಸುದ್ದಿ ದೃಢಪಡಿಸಿದ ಪುತ್ರ ಕುನಾಲ್ ಗೋಸ್ವಾಮಿ: ಮನೋಜ್ ಕುಮಾರ್ ನಿಧನದ ಬಗ್ಗೆ ಅವರ ಪುತ್ರ ಕುನಾಲ್ ಗೋಸ್ವಾಮಿ ದೃಢಪಡಿಸಿದ್ದಾರೆ. ನಾಳೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ. 'ಮನೋಜ್ ಕುಮಾರ್ ಅವರು ಬಹಳ ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರು ಇಹಲೋಕ ತ್ಯಜಿಸಿದ್ದು, ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ' ಎಂದು ಕುನಾಲ್ ಹೇಳಿದರು.

--

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ