• ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರ: ಜಸ್ಟ್ ಮ್ಯಾರೀಡ್
ನಿರ್ದೇಶನ: ಸಿ.ಅರ್.ಬಾಬಿ
ನಿರ್ಮಾಣ: ಅನಜನೀಶ್ ಲೋಕನಾಥ್
ತಾರಾಂಗಣ: ಶೈನ್ ಶೆಟ್ಟಿ , ಅಂಕಿತಾ ಅಮರ್, ಶ್ರುತಿ ಕೃಷ್ಣ, ಡೈರೆಕ್ಟರ್ ಅನೂಪ್ ಭಂಡಾರಿ ಗಾಯಕಿ ವಾಣಿ ಹರಿಕೃಷ್ಣ, ನಟ ದೇವರಾಜ್ ಅಚ್ಯುತಕುಮಾರ್, ಶ್ರುತಿ ಹರಿಹರನ್, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ಮಾಳವಿಕ ಅವಿನಾಶ್ ಮೊದಲಾದವರು
ರೇಟಿಂಗ್: 3/5

married 6

ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ಜೋಡಿಯಾಗಿರುವ “ಜಸ್ಟ್ ಮ್ಯಾರೀಡ್” ಈ ವಾರ (ಆಗಸ್ಟ್ 22) ತೆರೆಗೆ ಬಂದಿದೆ. ಶ್ರುತಿ ಕೃಷ್ಣ, ಡೈರೆಕ್ಟರ್ ಅನೂಪ್ ಭಂಡಾರಿ ಗಾಯಕಿ ವಾಣಿ ಹರಿಕೃಷ್ಣ, ನಟ ದೇವರಾಜ್ ಅಚ್ಯುತಕುಮಾರ್, ಶ್ರುತಿ ಹರಿಹರನ್, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ಮಾಳವಿಕ ಅವಿನಾಶ್, ಸೇರಿದಂತೆ ಇನ್ನೂ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಅನಜನೀಶ್ ಲೋಕನಾಥ್ ಮತ್ತು ಸಿ.ಅರ್.ಬಾಬಿ ಈ ಸಿನಿಮಾ ನಿರ್ಮಾಣ ಮಾಡಿದ್ದು .ಬಾಬಿ ಈ ಸಿನಮಾವನ್ನ ಡೈರೆಕ್ಷನ್ ಮಾಡಿದ್ದಾರೆ.. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತವನ್ನೂ ಮಾಡಿದ್ದಾರೆ. ಪ್ರೇಮ ಕಥೆಯೊಂದಿಗೆ, ಕೌಟುಂಬಿಕ ಕಥಾಹಂದರವನ್ನೂ ಹೊಂದಿರುವ ಈ ಚಿತ್ರ ನಿಜಕ್ಕೂ ಹೇಗಿದೆ ತಿಳಿಯಲು ಮುಂದೆ ಓದಿ..

married 5

ಸುಮಾರು ಇನ್ನೂರಿಅವತ್ತು ಮುನ್ನೂರು ವರ್ಷದ ಪರಂಪರೆ ಇರುವ ತುಂಬು ಕುಟುಂಬ, ಅದರ ನವಯುಗದ ಕುಡಿ ಸೂರ್ಯ (ಶೈನ್ ಶೆಟ್ಟಿ) ಈಗಷ್ಟೇ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಆಡ್ ಶೂಟ್ ಮಾಡಿಕೊಂಡು ಆಗಾಗ ಯುವತಿಯರೊಡನೆ ಫ್ಲರ್ತಿಂಗ್, ಡೇಟಿಂಗ್ ಮಾಡಿಕೊಂಡಿರುತ್ತಾನೆ. ಅವನಿಗೆ ಮನೆಯವರೆಲ್ಲಾ ಸೇರಿ ಸಹನಾ (ಅಂಕಿತಾ ಅಮರ್) ಜೊತೆಯಲ್ಲಿ ಮದುವೆ ಮಾಡಿಸುತ್ತಾರೆ. ಆದರೆ ಅದೊಂದು ಅಗ್ರಿಮೆಂಟ್ ವಿವಾಹವಾಗಿರುತ್ತದೆ..

married

ಅದರೊಡನೆ ಆ ಕುಟುಂಬದ ಹಿರಿಯರಲ್ಲಿ ಸಹ ಒಬ್ಬೊಬ್ಬರೂ ಒಂದೊಂದು ಬಗೆ ತಪ್ಪು ಮಾಡಿ ಒಳಗೊಳಗೇ ನೋವಲ್ಲಿ ಬೇಯುತ್ತಿರುತ್ತಾರೆ.. ನೂರಾರು ವರ್ಷದ ಪರಂಪರೆ ಇರುವ ಕುಟುಂಬದ ಗೌರವ ಉಳಿಯಬೇಕು ಜೊತೆಗೆ ತನ್ನ ಸಂಸಾರವೂ ಸಹ ಉಳಿಸಿಕೊಳ್ಲಬೇಕು ಈ ನಿಟ್ಟಿನಲ್ಲಿ ನಾಯಕ ಸೂರ್ಯ ಹೇಗೆ ಯಶಸ್ವಿಯಾಗುತ್ತಾನೆ ಎನ್ನುವುದು ಕಥೆ ಸಾರಾಂಶ..

married 2

ಇಲ್ಲಿ ಶೈನ್ ಶೆಟ್ಟಿ, ಅಂಕಿತಾ ಸೇರಿದಂತೆ ಎಲ್ಲಾ ನಟರ ಅಭಿನಯ, ಅದ್ದೂರಿ ಸೆಟ್, ತಾಂತ್ರಿಕವಾಗಿ ಸಿನಿಮಾ ಉತ್ತಮವಾಗಿ ಮುಡಿಬಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಚಿತ್ರಕಥೆ, ಅಡಿಷನಲ್ ಸ್ಕ್ರೀನ್ ಪ್ಲೇ ವಿಚಾರಕ್ಕೆ ಬಂದರೆ “ಜಸ್ಟ್ ಮ್ಯಾರೀಡ್” ಪ್ರೇಕ್ಷಕನ ಮನಸ್ಸಿಗೆ ಮುಟ್ತುವುದಿಲ್ಲ ಎಂದೇ ಹೇಳಬೇಕು. ಚಿತ್ರದ ಮೊದಲಾರ್ಧ ಪ್ರೇಕ್ಷಕನಲ್ಲಿ ಸಾಕಷ್ಟು ಗೊಂದಲ ಎಬ್ಬಿಸುತ್ತದೆ..ದ್ವಿತೀಯಾರ್ಧದಲ್ಲಿ ಸಹ ಕ್ಲೈಮ್ಯಾಕ್ಸ್ ಹೊರತಾಗಿ ಚಿತ್ರಕಥೆ ಗಂಭೀರವಾಗಿದೆ ಎನಿಸುವುದಿಲ್ಲ. ಚಿತ್ರದ ಕಡೆಯಲ್ಲಿ ಮಾನವ ಜೀವನಕ್ಕೆ ಸಂಬಂಧಿಸಿ ಒಂದೊಳ್ಳೆಯ ಸಂದೇಶ ನೀಡಲಾಗಿದೆ ಆದರೂ ಆ ಕ್ಲೈಮ್ಯಾಕ್ಸ್ ಗಾಗಿ ಪ್ರೇಕ್ಷಕ ಮೊದಲಿಂದ ಕಡೆಯವರೆಗೆ ತಾಳ್ಮೆಯಿಂದ ಕಾದು ಕುಳಿತಿರಬೇಕು ಎನ್ನುವುದು ಚಿತ್ರದ ಪ್ರಮುಖ ಋಣಾತ್ಮಕ ಅಂಶ. ಆರು ಹಾಡುಗಳಿದ್ದರೂ “ಇದು ಮೊದಲನೆ ಸ್ವಾಗತಾನಾ.. ” ಹಾಡು ಹೊರತು ಬೇರಾವ ಹಾಡೂ ಗಮನ ಸೆಳೆಯುವುದಿಲ್ಲ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಉತ್ತಮವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ