ಶರತ್ ಚಂದ್ರ

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾ ಸಂಗೀತ ಕ್ಷೇತ್ರದ ಮೋಸ್ಟ್ ಹ್ಯಾಪಿಪನಿಂಗ್ ಸಿಂಗರ್ ಅನಿಸಿಕೊಂಡಿರುವ ಸಂಚಿತ್ ಹೆಗ್ಡೆ ಈಗ ಹಿಂದಿಯಲ್ಲೂ ಸದ್ದು ಮಾಡುತ್ತಿದ್ದಾರೆ. ಕನ್ನಡ ರಿಯಾಲಿಟಿ ಶೋ ಜೀ ಸರಿಗಮ ಪ ದಲ್ಲಿ ಸ್ಪರ್ದಿಸಿ ಗೆಲುವು ಸಾಧಿಸದೆ ಇದ್ದರೂ ಕೂಡ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಪ್ರೋತ್ಸಾಹದಿಂದ ಸ್ಯಾಂಡಲ್ವುಡ್ ನಲ್ಲಿ ಒಂದಷ್ಟು ಅವಕಾಶಗಳನ್ನು ಪಡೆದು ತನ್ನದೇ ಪ್ರತಿಭೆ ಪ್ರದರ್ಶಿಸಿ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದರು.

ಕಳೆದ ವರ್ಷ ಮುಂಬೈಯ ಜನಪ್ರಿಯ  ಸಂಗೀತ ನಿರ್ದೇಶಕರಾದ ಸಲೀಂ ಮರ್ಚೆಂಟ್ ಭೂಮಿ 2024 ಎಂಬ ಪ್ರಾಜೆಕ್ಟ್ ನಲ್ಲಿ ಸಂಚಿತ್ ಕೈಜೋಡಿಸಿದ್ದರು. ತಾನೇ ಕಂಪೋಸ್ ಮಾಡಿರುವ' ಮಾಯಾವಿ 'ಎಂಬ ಆಲ್ಬಮ್ ಸಾಂಗ್ ನ್ನು ಸೋನು ನಿಗಮ್ ಜೊತೆ ಹಾಡಿದ್ದರು. ಕನ್ನಡದ ಜನಪ್ರಿಯ ಯುವ ಚಿತ್ರ ಸಾಹಿತಿ ನಾಗಾರ್ಜುನ ಶರ್ಮ ಬರೆದಿರುವ ಈ ಹಾಡು ಯೂಟ್ಯೂಬ್ ನಲ್ಲಿ 80 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದ್ದು ಅತೀ ದೊಡ್ಡ ಆಲ್ಬಮ್ ಆಗಿ ಹೊರಹೊಮ್ಮಿತ್ತು.

1000794780

ಈಗ ಅದೇ ಹಾಡನ್ನು ಸಲೀಂ ಮರ್ಚೆಂಟ್ ತಮ್ಮ ಮರ್ಚೆಂಟ್ ಯುಟ್ಯೂಬ್ ಚಾನೆಲ್ ನಲ್ಲಿ ಸೋನು ನಿಗಮ್ ವಾಯ್ಸ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಇಲ್ಲಿ ಪೂರ್ಣ ಹಾಡನ್ನು ಸೋನು ನಿಗಮ್ ಅವರು ಹಾಡಿದ್ದು,

1000794793

ಹಾಡು ನೋಡಿದ ಕನ್ನಡದ ಪ್ರೇಕ್ಷಕರು ಮೂಲ ಹಾಡಿನಂತೆ  ಎರಡನೇ ಚರಣ ಸಂಚಿತ್ ಹೆಗಡೆಯವರೇ ಹಾಡಬೇಕಿತ್ತು ಎನ್ನುವ ಅಭಿಪ್ರಾಯವನ್ನು ವ್ಯಪಡಿಸಿದ್ದಾರೆ. ಹಾಡಿನ ಚಿತ್ರೀಕರಣ ಕೂಡ  AI ತಂತ್ರಜ್ಞಾನ ಬಳಸಿ ಮಾಡಿರುವುದು ತುಂಬಾ ಜನಕ್ಕೆ ಇಷ್ಟವಾಗಿಲ್ಲ. ಸದ್ಯದ ಮಟ್ಟಿಗೆ ಹಿಂದಿ ಹಾಡಿಗೆ ಅಂತ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿಲ್ಲ. ಒಟ್ಟಿನಲ್ಲಿ ಕನ್ನಡದ ಹುಡುಗ ಸಂಚಿತ ಹೆಗಡೆ ಬಾಲಿವುಡ್ ನಲ್ಲಿ ಮಿಂಚಲು ಈ ಹಾಡು ಸಹಕಾರಿಯಾಗಬಹುದು.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ