ಮಿಸ್ ಯೂನಿವರ್ಸ್ ಹರ್ ನಾರ್
ಓಹೋ, ಅಂತೂ 21 ವರ್ಷಗಳ ನಂತರ ಮತ್ತೊಮ್ಮೆ ಭಾರತದ ಕುವರಿಗೆ ಮಿಸ್ ಯೂನಿವರ್ಸ್ ಕಿರೀಟ! ಮೂಲತಃ ಚಂಡೀಗಢ ರಾಜ್ಯದವಳಾದ, 5 ಉ 9 ಅ ಎತ್ತರದ, ಅತ್ಯಾಕರ್ಷಕ ಮೈಕಟ್ಟಿನ 21ರ ಹರೆಯದ ಹರ್ ನಾರ್, ಈ ಸಲದ `ಭುವನ ಸುಂದರಿ' ಎನಿಸಿ ಭಾರತೀಯ ಹೆಣ್ಣು ಕುಲಕ್ಕೆ ಕಲಶಪ್ರಾಯಳಾಗಿದ್ದಾಳೆ! ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಪಡಬೇಕಾದ ಹುಡುಗಿ ಇವಳು. ಇಂದಿನ ತರುಣಿಯರು ಇವಳಿಂದ ಕಲಿಯಬೇಕಾದುದು ಎಂದರೆ, ನೀವು ನಿಮ್ಮ ಕನಸನ್ನು ನನಸಾಗಿಸ ಬಯಸಿದರೆ, ಅದಕ್ಕಾಗಿ ಅಹರ್ನಿಶಿ ಮನಸ್ಸಿಟ್ಟು ಶ್ರದ್ಧೆಯಿಂದ ದುಡಿಯಬೇಕು. ನಿಮ್ಮ ಕೈಲಾದ ಎಲ್ಲಾ ಪ್ರಯತ್ನ ಮಾಡಲೇಬೇಕು, ನಿಮ್ಮ ಐಡೆಂಟಿಟಿ ಸ್ಥಾಪಿಸಿಕೊಳ್ಳಬೇಕು. ಎಲ್ಲೋ ದೂರದ ಥಳುಕು ಬಳುಕಿನಿಂದ ದೂರವಾದ ಊರಿನ ಈ ಬೆಡಗಿ, ಕೇವಲ ಮಾಡೆಲಿಂಗ್ ಕ್ಷೇತ್ರದ ಕೆಲವೇ ಮಂದಿಗಷ್ಟೇ ಗೊತ್ತಿದ್ದಳು. ಅವಳೀಗ ಇಡೀ ವಿಶ್ವಕ್ಕೇ ಗೊತ್ತು..... ಕಂಗ್ರಾಟ್ಸ್ ಹರ್ ನಾರ್!
ದುಬಾರಿ ಆಯ್ತು ಕುದುರೆ ಮತ್ತು ಗಾಡಿ
ಸುಕೇಷ್ ಜೊತೆ ಡೇಟಿಂಗ್ ಹೊರಟ ಜ್ಯಾಕ್ಲಿನ್ ಗೆ ಅದು ಬಲು ದುಬಾರಿ ಆಯ್ತು. ಡೇಟಿಂಗ್ ಇದ್ದ ಮೇಲೆ ಗಿಫ್ಟ್ ಗಳ ಗಿವ್‌ಟೇಕ್ ಸಹಜ. ಇದೇ ಪ್ರಸಂಗ ಮುಂದುವರಿಸಿದ ಜ್ಯಾಕ್ಲಿನ್, ಅತಿ ದುಬಾರಿ ಕುದುರೆ ಮತ್ತು ಕಾರನ್ನು ಗಿಫ್ಟ್ ಆಗಿ ಪಡೆದಳು, ತಕ್ಷಣ ಕೆಂಗಣ್ಣಿಗೆ ಗುರಿಯಾದಳು! ಇದೀಗ ಆ ವಿಭಾಗದ ಮಂದಿ ಧುತ್ತೆಂದು ಮನೆ ಎದುರು ನಿಂತಾಗೆಲ್ಲ, ಮಾಡುತ್ತಿದ್ದ ಕೆಲಸ ಬಿಟ್ಟು ಅವರಿಗೆ ತನ್ನ ಮನೆಯ ದುಬಾರಿ ವಸ್ತುಗಳ ವಿವರ ನೀಡಬೇಕಾಗಿದೆ. ಅಯ್ಯೋ ಪಾಪ, ಜ್ಯಾಕ್ಲಿನ್ ಗೆ ಹಿತೈಷಿಗಳು ಹೇಳುತ್ತಿದ್ದಾರೆ, ಅಂಥ ದುಬಾರಿ ಗಿಫ್ಟ್ ಕೊಡಿಸುವ ಆ ಬಾಯ್ ಫ್ರೆಂಡ್ ಯಾವ ಮೂಲದಿಂದ ಅಂಥದ್ದು ಒದಗಿಸಿದವು ಎಂದೂ ನೋಡಬೇಕಲ್ಲವೇ.....? ಅಂತ. ಇಲ್ಲದಿದ್ದರೆ ತೆರಿಗೆ ವಿಭಾಗಕ್ಕೆ ಲೆಕ್ಕ ಒಪ್ಪಿಸೋದರಲ್ಲಿ ಜೀವನ ಅರೆ ಆಗಿಹೋದೀತು!
ದಕ್ಷಿಣದ ಚಿತ್ರಗಳು ಉತ್ತರದವರಿಗೆ ಸುಗ್ಗಿ!
ಇಲ್ಲಿಯವರೆಗೆ ದಕ್ಷಿಣದ ಚಿತ್ರಗಳು ಬಾಲಿವುಡ್ ಗೆ ಪೈಪೋಟಿ ಮಾತ್ರ ಎನಿಸಿತ್ತು. ಆದರೆ ಉತ್ತರಕ್ಕಿಂತ ದಕ್ಷಿಣವೇ ಮೇಲುಗೈ ಸಾಧಿಸಿದೆ! `ರೋಬೋ,' `ಬಾಹುಬಲಿ'ಯಂಥ ಯಶಸ್ವಿ ಚಿತ್ರಗಳ ನಂತರ `' ಮತ್ತು `ಪುಷ್ಪಾ' ಚಿತ್ರದ ಟ್ರೇಲರ್ಸ್ ಗೆ ಸಿಗುತ್ತಿರುವ ರೆಸ್ಪಾನ್ಸ್ ಕಂಡು ಬಾಲಿವುಡ್ ನ ಘಟಾನುಘಟಿಗಳೇ ಗಡಗಡ ನಡಗುತ್ತಿದ್ದಾರೆ. ಈ ಚಿತ್ರಗಳ ಯಶಸ್ಸು ಕಟ್ಟಿಟ್ಟ ಬುತ್ತಿ ಎನಿಸಿದೆ. ಬಾಲಿವುಡ್ ನ ಕರಣ್ ಜೋಹರ್ ಅಂಥ ದಿಗ್ಗಜ ನಿರ್ಮಾಪಕ ನಿರ್ದೇಶಕರುಗಳೇ ದಕ್ಷಿಣದ ಯಶಸ್ವೀ ಚಿತ್ರಗಳಿಗಾಗಿ ಬಾಯಿ ಬಿಟ್ಟುಕೊಂಡು ಕಾಯುವಂತಾಗಿದೆ! ಇದೇ ಪರಿಸ್ಥಿತಿ ಮುಂದುವರಿದರೆ, ಹಿಂದಿ ತಾರೆಯರೆಲ್ಲ ಹಾಸಿಗೆ ಸುರುಟಿಕೊಂಡು ಬೆಂಗಳೂರು, ಮದ್ರಾಸ್, ಹೈದರಾಬಾದಿಗೆ ರೈಲು ಹತ್ತುವ ದಿನ ದೂರವಿಲ್ಲ!
ಆಲಿಯಾ ಈಸ್ ಲವ್ ವಿತ್
ಆಲಿಯಾ ರಣಬೀರ್‌ನ ಜೊತೆ ಹೊಂದಿರುವ ಕನೆಕ್ಷನ್ ಈಗ ರಹಸ್ಯವಲ್ಲ. ಆದರೆ ಸುದ್ದಿಗಾರರು ಸದಾ ಇವರ ಬೆನ್ನುಬಿದ್ದು, ಈ ಸಂಬಂಧದ ಎಳೆಗಳನ್ನು ಬಿಡಿಸುತ್ತಿರುತ್ತಾರೆ. `' ಚಿತ್ರದ ಪ್ರಮೋಶನ್ ಗಾಗಿ ಬಂದಿದ್ದ ಆಲಿಯಾಳನ್ನು, ಅವಳ ಮೆಚ್ಚಿನ ಬಗ್ಗೆ ಕೇಳಿದಾಗ, ಅವಳು ಬಯಸಿಯೂ ತನ್ನ ನಾಚಿಕೆ ಅಡಗಿಸಲು ಆಗಲೇ ಇಲ್ಲ. ರಣಬೀರ್ ತನ್ನ ಮಾಜಿ ಸಂಬಂಧಗಳಲ್ಲಿ ಸ್ಟಿಕ್ ಆನ್ ಆಗಲಿಲ್ಲ. ಹೀಗಾಗಿ ಆಲಿಯಾ ಬೀ ಕೇರ್ ಫುಲ್ ಎನ್ನುತ್ತಾರೆ ಹಿತೈಷಿಗಳು. ಈ ಪ್ರೇಮದ ಕಣ್ಣಾಮುಚ್ಚಾಲೆ ಪಾಪ್ ರಾಝಿ ಸುದ್ದಿಗಾರರಿಗೆ ಮಸಾಲಾ ಒದಗಿಸಬಹುದು, ಆದರೆ ನಿನ್ನ ಭವಿಷ್ಯದ ಕಾದಂಬರಿ ಬರೆಯುವವಳು ನೀನೇ ಎಂದು ಎಚ್ಚರಿಸುತ್ತಿದ್ದಾರೆ.