ಬಾಲಿವುಡ್‌ ಚಿತ್ರಗಳಲ್ಲಿ ತನ್ನ ನಟನೆಯ ಸಾಮರ್ಥ್ಯದಿಂದ ಸದಾ ಪ್ರಗತಿ ಪಥದಲ್ಲಿರುವ ನಟಿ ರಿಚಾ ಚಡ್ಡಾ ಈಗಾಗಲೇ `ಗ್ಯಾಂಗ್ಸ್ ಆಫ್‌ ವಾಸಿಪುರ್‌, ಪಕ್ರೆ, ರಾಮಲೀಲಾ, ಲವ್ ಸೋನಿಯಾ, ಮಸಾನ್‌, ಸೆಕ್ಷನ್‌ 375, ಪಂಗಾ......' ಮುಂತಾದ ತನ್ನ ಚಿತ್ರಗಳಿಂದ ಯಶಸ್ವಿ ಎನಿಸಿದ್ದಾಳೆ. ಇತ್ತೀಚೆಗೆ, ದ. ಭಾರತದ ಐಟಂ ಕ್ವೀನ್‌`ಶಕೀಲಾ'ಳ ಬಯೋಪಿಕ್‌ ಕುರಿತಾಗಿ ಬಹಳ ಚರ್ಚೆಯಲ್ಲಿದ್ದಾಳೆ. ಕನ್ನಡವನ್ನೂ ಒಳಗೊಂಡಂತೆ ಶಕೀಲಾ ದ. ಭಾರತದ ಎಲ್ಲಾ ಭಾಷೆಗಳಲ್ಲೂ ತನ್ನ ಅದ್ಭುತ ಅಡಲ್ಟ್ ಚಿತ್ರಗಳು, ಬಾಡಿ ಮ್ಯಾನರ್ಸ್ ನಿಂದ ಐಟಂ ಧಮಾಕಾ ಎನಿಸಿದ್ದಾಳೆ. ವಿದ್ಯಾ ಬಾಲನ್‌ ಸಿಲ್ಕ್ ಸ್ಮಿತಾ ಕುರಿತಾದ `ಡರ್ಟಿ ಪಿಕ್ಚರ್‌' ಬಯೋಪಿಕ್‌ ನಂತೆ ಇದು ಧಮಾಕಾ ಮಾಡಲಿದೆಯೇ.... ಕಾದು ನೋಡಬೇಕು. ಹಿಂದಿ ಮಾತ್ರವಲ್ಲದೆ, ದ. ಭಾರತದ ಎಲ್ಲಾ ಭಾಷೆಗಳಲ್ಲೂ ಈ ಚಿತ್ರ ಡಬ್ ಆಗಿರುವುದೇ ಇದರ ಪ್ಲಸ್‌ ಪಾಯಿಂಟ್‌.

ಲಾಕ್ಡೌನ್ಕಾರಣ ಏನೇನು ಬದಲಾವಣೆ ಎದುರಿಸಬೇಕಾಯಿತು?

ಮುಖ್ಯ ಬದಲಾವಣೆ ಅಂದ್ರೆ ಎಲ್ಲಾ ಕೆಲಸಗಳನ್ನೂ ನಾನೇ ಮಾಡಿಕೊಳ್ಳಬೇಕಾಯ್ತು. ನಮ್ಮ ಮನೆಗೆಲಸ ನಾವೇ ಮಾಡಿಕೊಳ್ಳುವುದರಲ್ಲಿ ಸೋಮಾರಿತನ ಅಥವಾ ಪ್ರೆಸ್ಟೀಜ್‌ ಪ್ರಶ್ನೆ ಏನಿಲ್ಲ. ನನ್ನ ಶೂಟಿಂಗ್‌ ಬಿಸಿ ಶೆಡ್ಯೂಲ್ ‌ನಿಂದಾಗಿ ಮನೆಗೆಲಸದವಳು ಅನಿವಾರ್ಯ. ಲಾಕ್‌ ಡೌನ್‌ ಕಾರಣ ಅವಳು ಬಾರದಿದ್ದಾಗ, ಎಲ್ಲಾ ಕೆಲಸ ನಾನೇ ಮಾಡಿಕೊಳ್ಳತೊಡಗಿದೆ. ಅಂಗಡಿಗೆ ಹೋಗಿ ಹಾಲು, ತರಕಾರಿ, ರೇಶನ್‌..... ಇತ್ಯಾದಿ ಎಲ್ಲಾ ನಾನೇ ತರಬೇಕಾದಾಗ ಬದುಕಲು ಇದೆಲ್ಲ ಎಷ್ಟು ಅನಿವಾರ್ಯ ಎಂದು ಈಗೀಗ ಗೊತ್ತಾಗುತ್ತಿದೆ.

ಕಡಿಮೆ ಇದ್ದಾಗ ಅಡ್ಜೆಸ್ಟ್ ಮಾಡಿಕೊಳ್ಳುವುದು ಹೇಗೆ ಎಂದು ಮುಖ್ಯವಾಗಿ ಕಲಿತೆ. ಎಲ್ಲರೂ ಲಾಕ್‌ ಡೌನ್‌ ನಲ್ಲಿ ಫೋನಿನಲ್ಲಿ ಹರಟುತ್ತಿದ್ದರೆ, ನಾನು ಮಾತ್ರ ಅದರಿಂದ ದೂರವೇ ಇರುತ್ತಿದ್ದೆ. ನನ್ನ ಪುಸ್ತಕ ರಚನೆ, ಶಾರ್ಟ್‌ ಫಿಲ್ಮ್ ಚಿತ್ರಕಥೆ, ಕಿಚನ್ ಗಾರ್ಡನಿಂಗ್‌..... ಇತ್ಯಾದಿಗಳಲ್ಲಿಯೇ ಸಮಯ ಕಳೆದೆ. ಪರಿಸರ ಸಂರಕ್ಷಣೆಯ ಕೆಲಸಗಳತ್ತಲೂ ಗಮನ ಹರಿಸುತ್ತಿದ್ದೆ.

. ಭಾರತದ ಮಾಡರ್ನ್ಸಿಲ್ಕ್ ಸ್ಮಿತಾ ಎಂದೇ ಖ್ಯಾತಳಾದ ಐಟಂ ಬಾಂಬ್ಶಕೀಲಾ ಕುರಿತಾದ ಬಯೋಪಿಕ್ಬಗ್ಗೆ ಆಸಕ್ತಿ ಹೇಗೆ ಬಂತು?

ಇದಕ್ಕೆ ಹಲವು ಕಾರಣಗಳಿವೆ. ಶಕೀಲಾಳ ಕಥೆಯಲ್ಲಿ ಇಂಟರೆಸ್ಟಿಂಗ್‌ ಪಾಯಿಂಟ್‌ ಅಂದ್ರೆ, ದಢೂತಿ ವ್ಯಕ್ತಿತ್ವ ಹೊಂದಿದ್ದರೂ ಆಕೆ ಹೇಗೆ ಈ ಮಟ್ಟದಲ್ಲಿ ಐಟಂ ಬಾಂಬ್‌ ಎನಿಸಿ ಖ್ಯಾತಳಾದಳು ಎಂಬುದು ನಿಜಕ್ಕೂ ರೋಚಕ. ಪಕ್ಕಾ ಮುಸ್ಲಿಂ ಕಂದಾಚಾರಿ. ಜೀವನವಿಡೀ ಬುರ್ಖಾ ಇಲ್ಲದೆ ಹೊರಗೆ ಬಂದಳಲ್ಲ. ತನ್ನ ಗ್ಲಾಮರಸ್‌ ಸೆಕ್ಸಿ ಪಾತ್ರಗಳಿಗೂ ಹೆವಿ ಬಾಡಿಗೂ ತೊಂದರೆ ಆಗದಂತೆ ನಿಭಾಯಿಸಿದಳು. ಭಾರೀ ದೇಹವಿದ್ದರೂ ಎಲ್ಲಾ ಚಟುವಟಿಕೆಗಳಲ್ಲೂ ಬಲು ಚುರುಕಾಗಿದ್ದಳು.

ಈ ಪುರುಷ ಪ್ರಧಾನ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾಳೆ, ದಕ್ಷಿಣದ ಎಷ್ಟೋ ಸೂಪರ್‌ ಸ್ಟಾರ್‌ ಗಳ ಜೊತೆ ತೆರೆ ಹಂಚಿಕೊಂಡಿದ್ದಾಳೆ.

ಅಂದಹಾಗೆ 10 ವರ್ಷಗಳ ಹಿಂದೆ ತೆರೆಕಂಡಿದ್ದ ವಿದ್ಯಾಳ `ಡರ್ಟಿ ಪಿಕ್ಚರ್‌' ಸಿಲ್ಕ್ ಸ್ಮಿತಾಳ ಬಯೋಪಿಕ್ಆಗಿತ್ತು. ಅದಕ್ಕೂ `ಶಕೀಲಾ'ಗೂ ಎಷ್ಟು ವ್ಯತ್ಯಾಸ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ