ಮರಳಿ ಬರಲಿರುವ ಐಶ್
ಇತ್ತೀಚೆಗೆ ಮುಂಬೈನಲ್ಲಿ ಯಾವುದೋ ಕಾರ್ಯಕ್ರಮದ ಉದ್ಘಾಟನೆಗೆ ಬಂದಿದ್ದ ಐಶ್ವರ್ಯಾಳನ್ನು ಮತ್ತೆ ಎರಡನೇ ಸಲ ತಾಯಿ ಆಗಲಿದ್ದೀಯಾ ಎಂದಾರೋ ಕೇಳಿದರಂತೆ. ಸದ್ಯಕ್ಕೆ ಹಾಗೇನೂ ಇಲ್ಲ ಎಂದು ಆಕೆ ನಾಚಿ ಕೆಂಪು ಕೆಂಪಾದಳಂತೆ. ಈಚೀಚೆಗೆ ಈಕೆ ದುಬಾರಿ ಗಡಿಯಾರಗಳು, ವಜ್ರಾಭರಣಗಳು ಹಾಗೂ ಬ್ಯೂಟಿ ಪ್ರಾಡಕ್ಟ್ ಗಳ ಸತತ ಪ್ರಮೋಶನ್ ಗೆ ತೊಡಗಿದ್ದಾಳೆ. ಇಂದಿಗೂ ಆಕೆಯ ಫೇವರಿಟ್ ಡ್ರೆಸ್ ಅನಾರ್ಕಲಿ ಸೂಟ್ ಆಗಿದೆ. ಕೆಲವು ದಿನಗಳ ಹಿಂದೆ ವಾಚ್ ಕಲೆಕ್ಷನ್ನಿನ ಈವೆಂಟ್ ನಲ್ಲಿ ಕಪ್ಪು ಲೆಹಂಗಾದಲ್ಲಿ ಹೀಗೆ ಕಾಣಿಸಿಕೊಂಡಿದ್ದಳು. ಬಹಳ ದಿನಗಳಿಂದ ಈಕೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ಅಭಿಮಾನಿಗಳ ಆಕ್ಷೇಪ. ಅವರಿಗೆ ನಿರಾಸೆಯಾಗಬಾರದೆಂದೇ ಪತಿ ಅಭಿಷೇಕ್ ಬಚ್ಚನ್ ಜೊತೆ `ಹ್ಯಾಪಿ ಆ್ಯನಿವರ್ಸರಿ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.
ವ್ಯಾಂಪೈರ್ ಅಕ್ಷಯ್
ಸದಾ `ಕಿಲಾಡಿ' ಸೀರೀಸ್ ನಲ್ಲಿ ಮಿಂಚುತ್ತಿದ್ದ ಅಕ್ಷಯ್ ಕುಮಾರ್, ಸ್ಟಂಟ್ ಕಿಂಗ್ ಎಂಬುದು ಗೊತ್ತಿರುವ ವಿಚಾರವಾದರೆ, ಕಾಮಿಡಿ ರೋಲ್ಸ್ ನಲ್ಲೂ ಸಾಕಷ್ಟು ಕಾಣಿಸಿಕೊಂಡಿದ್ದಾನೆ. ಹೀಗಾಗಿ ಒಂದು ಚೇಂಜ್ ಗೋಸ್ಕರ ಡ್ರಾಕುಲಾ ತರಹ ಈಗ ್ಯಾಂಪೈರ್ ಆಗಿ ಅಭಿಮಾನಿಗಳನ್ನು ಭಯಪಡಿಸಬೇಕೆಂದು ಆಸೆಯಂತೆ, ಆಲ್ ದಿ ಬೆಸ್ಟ್! ಮೀಡಿಯಾಗಾಗಿ ಸ್ಲಿಮ್ ಟ್ರಿಮ್ ಸಲ್ಮಾನ್ ಖಾನ್ ನಾಯಕತ್ವದ `ವೀರ್' ಚಿತ್ರದ ಪ್ರಿನ್ಸೆಸ್ ಯಶೋಧರಾ ಪಾತ್ರದಿಂದ ಖ್ಯಾತಳಾದ ಜರೀನ್ ಖಾನ್, ಕ್ರಮೇಣ ಬಲೂನಿನಂತೆ ಊದಿದ್ದಳು. ಇಂಥವಳನ್ನು ಗ್ಲಾಮರ್ ಮೀಡಿಯಾ ಯಾಕೆ ಮೂಸೀತು? ಅದನ್ನು ಮನಗಂಡು ಸತತ ತನ್ನ ದೇಹ ದಂಡಿಸಿಕೊಂಡು ಈಕೆ ಈಗ ಸ್ಲಿಮ್ ಟ್ರಿಮ್ ಆಗಿದ್ದಾಳೆ. ತನ್ನ ಆರೋಗ್ಯದ ಕ್ರೆಡಿಟ್ ಮೀಡಿಯಾಗೇ ಸಲ್ಲಬೇಕೆಂದು ಹೇಳುತ್ತಾಳೆ. ಇದಕ್ಕಾಗಿ ಪಡಬಾರದ ಪಾಡು ಪಟ್ಟಿರುವ ಜರೀನ್ ಳನ್ನು ಇನ್ನಾದರೂ ಮೀಡಿಯಾ ಮೆರೆಸಲಿದೆಯೇ?
ಶೃತಿಗೆ ದಕ್ಕಿದ ಅವಕಾಶ
ಸಾರಿಕಾ ಕಮಲಹಾಸನ್ ರ ಮಗಳು ಶೃತಿ ಹಾಸನ್ `ರಾಮಯ್ಯ ಸ್ತಾಯ್ಯ' ಹಾಗೂ `ಡೀ ಡೇ' ಚಿತ್ರಗಳಲ್ಲಿ ಮೈಚಳಿ ಬಿಟ್ಟು ನಟಿಸಿದ್ದರೂ ಯಾರೂ ಚಳಿ ಚಳಿ ಎನ್ನುತ್ತಾ ಈಕೆಗೆ ಸೊಪ್ಪು ಹಾಕಲಿಲ್ಲ. ಸತತ 2 ಫ್ಲಾಪ್ ಗಳಿಂದ ಇವಳ ಕೆರಿಯರ್ ಕುಸಿಯಿತೆಂದೇ ಸಹನಟಿಯರು ಸಂಭ್ರಮಿಸಿದ್ದರು. ಆದರೆ ಅಷ್ಟರಲ್ಲಿ ಅನೀಸ್ ಬಜ್ಮಿ ನಿರ್ದೇಶನದ `ವೆಲ್ ಕಂ ಬ್ಯಾಕ್' ಚಿತ್ರದಲ್ಲಿ ನಾಯಕಿ ಪಟ್ಟ ದೊರೆತಾಗ, ಈಕೆ ನಿರಾಳವಾಗಿ ಉಸಿರಾಡಿದಳು. ಸೂಪರ್ ಹಿಟ್ ಎನಿಸಿದ್ದ `ವೆಲ್ ಕಂ' ಚಿತ್ರದ ಸೀಕ್ವೆಲ್ `ವೆಲ್ ಕಂ ಬ್ಯಾಕ್'ನಲ್ಲಿ ಕತ್ರೀನಾಳ ಪಾತ್ರವನ್ನು ನರ್ಗೀಸ್ ಫಕ್ರಿ ನಿಭಾಯಿಸುವುದೆಂದಿತ್ತು, ಏನು ಕಾರಣವೋ.... ನರ್ಗೀಸ್ ಔಟ್, ಶೃತಿ ಇನ್!
ಬಾಲಿವುಡ್ ನಲ್ಲಿ ಗರ್ಬಾ ದರ್ಬಾರ್
ಕಳೆದ ನವರಾತ್ರಿ, ದೀಪಾವಳಿ ಹಬ್ಬಗಳಿಂದಾಗಿ ಇಡೀ ಭಾರತೀಯ ಚಿತ್ರೋದ್ಯಮದಲ್ಲಿ ಹಬ್ಬದ ವಾತಾವರಣ ಹರಡಿರುವಾಗ ಬಾಲಿವುಡ್ ಮಾತ್ರ ಹೇಗೆ ಹಿಂದುಳಿದೀತು? `ಪೊಲೀಸ್ ಗಿರಿ' ಚಿತ್ರದಲ್ಲಿ ಐಟಂ ಗರ್ಲ್ಸ್ ಆಗಿದ್ದ ಕವಿತಾ ವರ್ಮ ಹಾಗೂ ಶಹಾಬಾದಿ ಸೇಠ್, ಇಂಥ ಗುಜರಾತಿ ಗೆಟಪ್ ನಲ್ಲಿ ಮುಂಬೈನ ರಾಜಬೀದಿಗಳಲ್ಲಿ ದಾಂಡಿಯಾ ಆಡುತ್ತಾ, ಟ್ರೆಡಿಷನಲ್ ಗರ್ಬಾ ನೃತ್ಯಗಳ ಮೂಲಕ ಫೋಟೋ ಶೂಟಿಂಗ್ ಗೆ ಪೋಸ್ ನೀಡಿ ಮಿಂಚಿದರು. ಈ ಕನ್ಯಾಮಣಿಗಳ ಕೋಲಾಟ ನಮ್ಮ ಪಡ್ಡೆಗಳಿಗೆ ಕಿಚ್ಚು ಹಚ್ಚದಿದ್ದೀತೇ?