ಕನ್ನಡ ಚಿತ್ರರಂಗದಲ್ಲೀಗ ಭಾರೀ ಸುದ್ದಿ ಮಾಡುತ್ತಿರುವ ಹೊಸ ತಾರೆ ನಿಶಾ ಯೋಗೇಶ್ವರ್. ದಿಢೀರ್ ಅಂತ ಎಂಟ್ರಿಯಾದ ಈ ಎತ್ತರ ನಿಲುವಿನ ಚೆಲುವೆ ಮೊದಲ ಚಿತ್ರದಲ್ಲೇ ದರ್ಶನ್ ಜೋಡಿಯಾಗಿ ನಟಿಸುತ್ತಿದ್ದು ಸಾಕಷ್ಟು ಸುದ್ದಿಯಾಗಿದ್ದಾಳೆ.
ನಿಶಾ ಯೋಗೇಶ್ವರ್ ಮಾಜಿ ಮಂತ್ರಿ, ಶಾಸಕ, ನಾಯಕ ಆಗಿದ್ದಂಥ ಯೋಗೇಶ್ವರ್ ಅವರ ಪುತ್ರಿ. `ಸೈನಿಕ' ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದ ಯೋಗೇಶ್ವರ್ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವಂಥ ನಟರು. ಅಪ್ಪನಿಗೆ ಮಗಳು ಸಿನಿಮಾದಲ್ಲಿ ನಟಿಸುವುದು ಮೊದ ಮೊದಲಿಗೆ ಅಷ್ಟಾಗಿ ಇಷ್ಟವಾಗಿರಲಿಲ್ಲವಂತೆ. ಸಿನಿಮಾರಂಗ ಎಲ್ಲರೂ ತಿಳಿದುಕೊಂಡಿರುವಷ್ಟು ಸ್ವರ್ಗವಲ್ಲ. ಅಲ್ಲಿ ತುಂಬಾ ಹಾರ್ಡ್ ವರ್ಕ್ ಮಾಡಬೇಕಾಗುತ್ತೆ ಎಂದೆಲ್ಲ ಹೇಳಿದ್ದರೂ ನಿಶಾ ಬಿಡಬೇಕಲ್ಲ.....? ನಾನು ನೋಡೇ ಬಿಡ್ತೀನಿ ಎಂದು ಹಟ ತೊಟ್ಟು ಬಂದಳು.
ಮಹೇಶ್ ಸುಖಧರೆ ನಿರ್ದೇಶಿಸಲಿರುವ `ಅಂಬರೀಷ' ಚಿತ್ರಕ್ಕೆ ದರ್ಶನ್ ಗೆ ಜೋಡಿಯಾಗಿ ಆಯ್ಕೆ ಆಗುತ್ತಾಳೆಂಬ ಸುದ್ದಿ ಹರಿದಾಡಿದಾಗ, ನಿಶಾ.... ಯಾರೀ ಹುಡುಗಿ? ಯೋಗೇಶ್ವರ್ ಅವರ ಪುತ್ರಿಯಂತೆ ಎಂದು ಒಂದೊಂದೇ ಸುದ್ದಿ ಕೇಳಿಬಂದ.
ಈಗ ನಿಶಾ `ಅಂಬರೀಷ' ಚಿತ್ರದ ಚಿತ್ರೀಕರಣದಲ್ಲಿ ನಿರತಳಾಗಿದ್ದಾಳೆ.
ನಿಶಾ ಸಿನಿಮಾ ಪತ್ರಿಕೆಗಳಲ್ಲಿ ರಾರಾಜಿಸುತ್ತಿರುವಂಥ ಹೊಸತಾರೆ. ಪ್ರಚಾರಕ್ಕೆ ಕೊರತೆ ಇಲ್ಲ.
ಸಿನಿಮಾ ನಟಿಯಾಗಬೇಕೆಂಬ ಆಸೆ ಚಿಗುರಿದ್ದು ಇತ್ತೀಚೆಗಷ್ಟೆ. ಸಿನಿಮಾ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಸ್ಕೂಲ್, ಕಾಲೇಜಿನಲ್ಲಿ ನಾಟಕ ಮಾಡಿದ್ದೂ ಇಲ್ಲ. ಆದರೆ ಡ್ಯಾನ್ಸ್ ಅಂದ್ರೆ ಕ್ರೇಜ್. ಚಿಕ್ಕವಳಾಗಿದ್ದಾಗಿನಿಂದ ಕ್ಲಾಸಿಕ್ ಡ್ಯಾನ್ಸ್ ಕಲಿತದ್ದು ಅಷ್ಟೆ. ನಟನೆ ಬಗ್ಗೆ ಹೇಳಬೇಕೆಂದರೆ ಅಭಿನಯ ತರಬೇತಿ ಪಡೆದದ್ದರಿಂದ ಸಿನಿಮಾದಲ್ಲಿ ನಟಿಸುವಾಗ ತುಂಬಾ ಸಹಾಯವಾಗಿದೆ. ಈಗ ಸಿನಿಮಾಗೆ ಬೇಕಾಗಿರುವಂಥ ಫಿಲ್ಮಿ ಡ್ಯಾನ್ಸ್, ಪಾಶ್ಚಾತ್ಯ ನೃತ್ಯ ಕಲಿಯುತ್ತಿದ್ದಾಳೆ.
ಫಿಟ್ ನೆಸ್ ಮಂತ್ರ ನಿಶಾ ಸಾಕಷ್ಟು ಎತ್ತರದ ನಿಲುವಿನ ಚೆಲುವೆ. ಅದಕ್ಕೆ ತಕ್ಕ ಹಾಗೆ ತನ್ನ ಮೈಮಾಟವನ್ನು ಕಾಪಾಡಿಕೊಂಡಿದ್ದಾಳೆ. ಮೊದಲು ನಾನು ದಪ್ಪ ಇದ್ದೆ. ಬಹಳ ಕಷ್ಟಪಟ್ಟು ಬಾಡಿ ಶೇಪ್ ಮಾಡಿಕೊಂಡೆ. ನಾನು ರೆಗ್ಯುಲರ್ ಡಯೆಟ್, ಜಿಮ್ ಮಾಡುವುದರ ಜೊತೆಗೆ ಇತ್ತೀಚೆಗೆ ರನ್ನಿಂಗ್, ಜಾಗಿಂಗ್ ಕೂಡಾ ಮಾಡ್ತಿದ್ದೀನಿ. ತುಂಬಾ ಫ್ರೆಶ್ ಅನಿಸುತ್ತೆ. ಫಿಟ್ನೆಸ್ ಬಗ್ಗೆ ತುಂಬಾ ಕಾಳಜಿ ಇರೋದ್ರಿಂದ ಅದಕ್ಕಾಗಿ ಸಮಯವನ್ನು ಮೀಸಲಾಗಿಡುತ್ತೇನೆ, ಎನ್ನುತ್ತಾಳೆ.
ಪ್ಲೆಸೆಂಟ್ ಸರ್ ಪ್ರೈಸ್ ಮಹೇಶ್ ಸುಖಧರೆ ಅವರು ಫೋನ್ ಮಾಡಿ ಸಿನಿಮಾದಲ್ಲಿ ನಟಿಸ್ತೀರಾ ಅಂತ ಕೇಳಿದಾಗ ನನಗದು ದೊಡ್ಡ ಸರ್‌ಪ್ರೈಸ್ ಆಗಿತ್ತು. ಬನ್ನಿ ಮಾತನಾಡೋಣ ಅಂದೆ. ಒಳಗೊಳಗೆ ಖುಷಿ ಆದರೂ ಇದನ್ನೆಲ್ಲ ಹೇಗೆ ನಿಭಾಯಿಸ್ತೀನಿ ಎನ್ನುವ ಭಯವಿದ್ದೇ ಇತ್ತು.
ಐ ಆ್ಯಮ್ ಲಕ್ಕೀ.....ಚಿತ್ರದ ಹೆಸರು `ಅಂಬರೀಷ,' ಟೈಟಲ್ಲೇ ಎಷ್ಟು ಚೆನ್ನಾಗಿದೆ! ಅಂಬರೀಷ್ ಸರ್ ನಟಿಸುತ್ತಿದ್ದಾರೆ. ದರ್ಶನ್ ಅವರು ನನ್ನ ಹೀರೋ. ಒಬ್ಬರು ಮಹಾನ್ ವ್ಯಕ್ತಿ, ಮತ್ತೊಬ್ಬರು ಯಶಸ್ವಿ ನಾಯಕರು. ನನ್ನ ಮೊದಲ ಚಿತ್ರ ಇಂಥ ಕಲಾವಿದರ ಜೊತೆಗೆ ಸಿಕ್ಕಿರುವಾಗ ನಿಜಕ್ಕೂ ನಾನು ತುಂಬಾ ಲಕ್ಕಿ ಅನಿಸುತ್ತೆ.
ಒಳ್ಳೆ ಹೆಸರು ಮಾಡುವಾಸೆ.....