ಕಳೆದ ವರ್ಷ ದ ಕಾಶ್ಮೀರ್ ಫೈಲ್ಸ್ ಜಗತ್ತಿನಾದ್ಯಂತ ಸುದ್ದಿ ಮಾಡಿದರೆ, ಇತ್ತೀಚೆಗಷ್ಟೇ ಬಿಡುಗಡೆ ಆದ ಕೇರಳಾ ಸ್ಟೋರಿಯೂ ಸಹಾ ಅದೇ ಹಾದಿಯಲ್ಲಿದ್ದು, ಈ ಎರಡೂ ಚಿತ್ರಗಳೂ  ಹಿಂದೂ ಮುಸ್ಲಿಂ ಹಿನ್ನಲೆಯ ಕತೆಯಾಗಿದ್ದು, ಹೇಗೆ ಮುಸಲ್ಮಾನರು ಸಾಮ ದಾನ ಬೇಧ ದಂಡಗಳನ್ನು ಉಪಯೋಗಿಸಿ ಹಿಂದೂಗಳನ್ನು ಧಮನಿಸುತ್ತಿದ್ದಾರೆ ಮತ್ತು ಮುಸಲ್ಮಾನರಾಗಿ ಮತಾಂತರ ಮಾಡುತ್ತಿದ್ದಾರೆ ಎಂಬುದರ ಕುರಿತಾಗಿದ್ದು ಅದರ ವಿಮರ್ಶೆಗಳನ್ನು ಈಗಾಗಲೇ ಓದಿದ್ದೀರಿ. ಮೂರು ವಾರಗಳ ಹಿಂದೆ ಅದೇ ರೀತಿಯ ಶೀರ್ಷಿಕೆಯುಳ್ಳ ಮತ್ತು ಹೆಚ್ಚೂ ಕಡಿಮೆ ಹಿಂದೂ ಮುಸ್ಲಿಂ ಸಂಬಂಧಿಸಿದ ಡೇರ್ ಡೆವಿಲ್ ಮುಸ್ತಾಫಾ ಎಂಬ ಸಿನಿಮಾ ಕರ್ನಾಟಕದಲ್ಲಿ ಸದ್ದಿಲ್ಲದೆ ಬಿಡುಗಡೆಯಾಗಿ ಅದಕ್ಕೆ ಕೆಲವೊಂದು ಉತ್ತಮ ಪ್ರತಿಕ್ರಿಯೆಗಳೂ ಬಂದಾಗ, ಸಿನಿಮಾ ನೋಡಲೇ ಬೇಕು ಎಂಬ ಕುತೂಹಲ ಮೂಡಿಸಿದ್ದಂತೂ ಸತ್ಯ. ಇತ್ತೀಚೆಗೆ ಕನ್ನಡ ಸಿನಿಮಾಗಳು ಸಿನಿಮಾ ಮಂದಿರದಲ್ಲಿ ಓಡುವುದೇ ಇಲ್ಲಾ ಎನ್ನುವ ಅಪವಾದಕ್ಕೆ ವಿರುದ್ಧವಾಗಿ ಸಿನಿಮಾ ಮೂರನೇ ವಾರದಲ್ಲೂ ಪ್ರದರ್ಶನ ಆಗುತ್ತಿದೆ ಎಂದರೆ ನಿಜಕ್ಕೂ ಅದರಲ್ಲಿ ಏನೋ ಸ್ತತ್ವ ಇದೆ ಎಂದು ನೆನ್ನೆ ತಡರಾತ್ರಿ ಕುಟುಂಬ ಸಮೇತವಾಗಿ ಸಿನಿಮಾ ನೋಡಿ ಮನೆಗೆಹಿಂದಿರುಗುವಾಗ ವಾವ್! ಬಹುತೇಕ ಹೊಸಬರೇ ಇರುವ ಒಂದು ತಂಡ ಇಂತಹ ಅದ್ಭುತವಾದ ಸಿನಿಮಾವನ್ನು ಕೊಟ್ಟರೆ ಕನ್ನಡಿಗರು ಖಂಡಿತವಾಗಿಯೂ ಒಪ್ಪಿ ಅಪ್ಪಿಕೊಳ್ಳುತ್ತಾರೆ ಎಂದೆನಿಸಿದ್ದಂತೂ ಸುಳ್ಳಲ್ಲ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕುವೆಂಪು ಅವರು ಕನ್ನಡದ ಹೆಸರಾಂತ ಲೇಖಕರಾದರೆ, ಅವರ ಮಗನಾದ ಶ್ರೀ ತೇಜಸ್ವಿಯವರೂ ಸಹಾ ಅಷ್ಟೇ ಪ್ರಸಿದ್ದರು. ಅಂತಹ ಅಪ್ಪನ ಮಗನಾಗಿದ್ದರೂ ಅಪ್ಪನ ಬರವಣಿಗೆಗಿಂತ ವಿಭಿನ್ನವಾಗಿ ತಮ್ಮದೇ ವಿಶಿಷ್ಟವಾದ ಬರವಣಿಗೆಯ ಶೈಲಿಯಿಂದ ತಮ್ಮದೇ ಆದ ಓದುಗರ ಬಳಗವನ್ನು ಸೃಷ್ಟಿಸಿಕೊಂಡಿರುವ ಹೆಗ್ಗಳಿಕೆ ಅವರದ್ದು. 70-80ರ ದಶಕದ ಅವರದ್ದೇ ಡೇರ್ ಡೆವಿಲ್ ಮುಸ್ತಾಫಾ ಕಥೆಯನ್ನೇ ಅತ್ಯಂತ ಸೊಗಸಾಗಿ ಸಿನಿಮಾಕರಿಸಿದ ನಿರ್ದೇಶಕರಾದ ಶಶಾಂಕ್ ಸೋಗಾಲ ಮತ್ತು ಅವರ ತಂಡಕ್ಕೆ ನಿಜಕ್ಕೂ ಒಂದು ದೊಡ್ಡ ಅಭಿನಂದನೆ ಹೇಳಲೇ ಬೇಕು. ಅದರಲ್ಲೂ ಪ್ರಸ್ತುತವಾಗಿ ಹಿಂದೂ ಮುಸ್ಲಿಂ ಸಂಬಂಧ ಪಟ್ಟ ಕತೆಯನ್ನು ತೆರೆಯ ಮೇಲೆ ತರುವುದೆಂದರೆ ಎರಡು ಅಲಗಿನ ಕತ್ತಿಯ ಮೇಲೆ ನಡೆದಂತಿದ್ದು, ಸ್ವಲ್ಪ ಹೆಚ್ಚು ಕಡಿಮೆ ಆದರೂ ಅಪಾಯ ತಪ್ಪಿದ್ದಲ್ಲ. ಅಂತಹ ಸೂಕ್ಷ್ಮ್ನವಾದ ವಿಷಯವನ್ನು ಅತ್ಯಂತ ನಾಜೂಕಿನ ರೀತಿಯಲ್ಲಿ ಒಮ್ಮೇ ಅವರು ಹೆಚ್ಚಾಗಿ ತೋರಿಸುತ್ತಿದ್ದಾರೇನೋ ಎಂದೆನಿಸುವಷ್ಟರಲ್ಲಿ ಮತ್ತೊಬ್ಬರನ್ನು ಅದಕ್ಕೆ ಸರಿ ಸಮನಾಗಿ ನಿಲ್ಲಿಸುತ್ತಾ, ಕಡೆಯ ದೃಶ್ಯದವರೆಗೂ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರುವಂತೆ ಮಾಡಿರುವ ನಿರ್ದೇಶಕರ ಸಾಹಸ ನಿಜಕ್ಕೂ ಮೆಚ್ಚುವಂತಾಗಿದ್ದು ಖಂಡಿತವಾಗಿಯೂ ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಅನೇಕ ಉದಯೋನ್ಮುಕ ನಟ/ನಟಿಯರು ಮತ್ತು ತಂತ್ರಜ್ಞರನ್ನು ಕೊಡುಗೆಯಾಗಿ ನೀಡುವಲ್ಲಿ ಸಫಲವಾಗಿದೆ ಎಂದರೂ ಅತಿಶಯೋಕ್ತಿ ಎನಿಸಲಾರದು.

ಸಿನಿಮಾ ಆರಂಭ ಆಗೋದೇ ತೇಜಸ್ವಿ ಮತ್ತು ಜಯಂತ್ ಕಾಯ್ಕಿಣಿಯವರ ಸಂದರ್ಶನದಲ್ಲಿ ಇಂದಿನ ಯುವಪೀಳಿಗೆಯು ಮತೀಯವಾದದ ಹಿಂದೆ ಹೋಗುವುದರ ಕುರಿತಾಗಿ ಆತಂಕ ವ್ಯಕ್ತಪಡಿಸಿದ ಒಂದು ಸಣ್ಣ ತುಣಿಕಿನಿಂದಲೇ ಆದರೂ ಸಿನಿಮಾದ ಅಂತ್ಯದವರೆಗೂ ಈ ದೃಶ್ಯವನ್ನು ನಿರ್ದೇಶಕರು ಏಕೆ ತೋರಿಸಿದರು ಎಂಬುದನ್ನು ಕುತೂಹಲಕಾರಿಯಾಗಿ ಇಟ್ಟಿಕೊಂಡು ಹೋಗಿರುವುದು ನಿರ್ದೇಶಕರ ಜಾಣ್ಮೆಯಾಗಿದೆ.

mustafa4

ಕತೆ 80ರ ದಶಕದ್ದಾಗಿರುವುದರಿಂದ ಇಡೀ ಸಿನಿಮಾದಲ್ಲಿ ಅದೇ ದಶಕಕ್ಕೆ ಅನುಗುಣವಾಗಿಯೇ ವಸ್ತ್ರವಿನ್ಯಾಸ್ಯ, ಕಟ್ಟಡಗಳು, ಸಂಭಾಷಣೆ ಮತ್ತು ಸಂಗೀತಗಳನ್ನು ಅಳವಡಿಸಿಕೊಂಡಿರುವುದು ಚಿತ್ರದ ಹೈಲೈಟ್. ಇದರ ಜೊತೆ ಜೊತೆಯಲ್ಲೇ ಬಳಸಿರುವ ಅನಿಮೇಷನ್ ದೃಶ್ಯಗಳು ಅದರಲ್ಲೂ ತಿರುಚುನಾಪಳ್ಳಿಯ ಪೈಲ್ವಾನರನ್ನು ಸೋಲಿಸುವ ರಣಧೀರ ಕಂಠೀರವ ಪಾತ್ರ ವರ ನಟ ಡಾ. ರಾಜಕುಮಾರ್ ಅವರ ಹೋಲಿಕೆಯಲ್ಲಿರುವುದು ಸಿನಿಮಾದ ಓಘವನ್ನು ಹೆಚ್ಚಿಸಿರುವುದಲ್ಲದೇ, ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸಿ ಸಿಳ್ಳೇ ಗಿಟ್ಟಿಸುವುದರಲ್ಲಿ ಯಶಸ್ವಿಯಾಗಿದೆ. ಇನ್ನು ಇತ್ತೀಚೆಗೆ ಹಾಸ್ಯದ ಹೆಸರಿನಲ್ಲಿ ಮಾಡುವ ಆಶ್ಲೀಲ ಸಂಭಾಷಣೆ ಮತ್ತು ಆಂಗೀಕ ಅಭಿನಯಗಳ ಸೋಂಕಿಲ್ಲದೇ, ಶುದ್ಧವಾದ ಸಂಭಾಷಣೆ ಮತ್ತು ಅಭಿನಯದಿಂದಲೇ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿರುವುದು ಸಹಾ ಸಿನಿಮಾದ ಯಶಸ್ವಿಗೆ ಕಾರಣವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ