ಅದು ಎಂಭತ್ತರ ದಶಕ ಭಾರತೀಯ ಚಿತ್ರರಂಗ ಕಂಡ ಅದ್ಭುತ (ವಯಕ್ತಿಕ ಮತ್ತು ರಾಜಕೀಯ ಸಿದ್ದಾಂತದ ಹೊರತು ಪಡಿಸಿ) ನಟ ಕಮಲಹಾಸನ್ ಅವರ ತಮಿಳು ಚಿತ್ರವಾದ ನಾಯಗನ್ ಚಿತ್ರೀಕರಣ ತಮಿಳುನಾಡಿನಲ್ಲಿ ನಡೆಯುತ್ತಿದ್ದು, ಅದೇ ಚಿತ್ರದಲ್ಲಿ ಕನ್ನಡ ಪ್ರಖ್ಯಾತ ನಟಿ ತಾರಾ (ಅನುರಾಧ) ಕೂಡಾ ಸಹನಟಿಯಾಗಿ ನಟಿಸುತ್ತಿದ್ದರು. ಚಿತ್ರೀಕರಣದ ಬಿಡುವಿನಲ್ಲಿ ಕಮಲ್ ಹಾಗೇ ತಾರಾ ಅವರೊಂದಿಗೆ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಾ, ತಮ್ಮ ಮತ್ತು ಕನ್ನಡ ಚಿತ್ರರಂಗದ ಅವಿನಾಭಾವ ಸಂಬಧವನ್ನು ಮೆಲುಕು ಹಾಕುತ್ತಾ, ಹಾಗೇ ಕುತೂಹಲಕ್ಕೆ ನಿಮ್ಮ ಅಭಿಪ್ರಾಯದಲ್ಲಿ ಭಾರತೀಯ ಚಿತ್ರರಂಗದ ಅತ್ಯುತ್ತಮ ನಟ ಯಾರು? ಎಂದು ಕೇಳಿದಾಗ, ಒಂದು ಕ್ಷಣ ತಬ್ಬಿಬ್ಬಾದ ನಟಿ ತಾರಾ, ಆ ಕ್ಷಣದಲ್ಲಿ ಏನೂ ತೋಚದೇ, ಸರ್, ಇದೆಂತಹ ಪ್ರಶ್ನೆ ಕೇಳುತ್ತಿದ್ದೀರೀ? ನೀವೇ ಭಾರತೀಯ ಚಿತ್ರರಂಗದ ಶ್ರೇಷ್ಠ ನಟರು ಎಂದು ಹೇಳಿದಾಗ, ಕಮಲ್ ಹಾಗೇ ನಗುತ್ತಾ, ನೀವು ನನ್ನನ್ನು ಹೀಗೆ ಹೊಗಳುತ್ತಿರುವುದು ನನಗೆ ಸುತಾರಾಂ ಇಷ್ಟವಾಗುತ್ತಿಲ್ಲ.

ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕೆ ಅಲೆದಾಡಿದ್ರು ಎನ್ನುವಂತೆ ಕನ್ನಡ ಚಿತ್ರರಂಗದಲ್ಲಿರುವ ಅನಂತ್ ನಾಗ್ ಅವರಿಗಿಂತ ಶ್ರೇಷ್ಠ ನಟರು ಬೇಕೇ? ನನ್ನ ವಯಕ್ತಿಕ ಅಭಿಪ್ರಾಯದಲ್ಲಿ ಅನಂತ್ ನಾಗ್ ಭಾರತೀಯ ಚಿತ್ರರಂಗ ಕಂಡ ಅತ್ಯಂತ ಶ್ರೇಷ್ಠ ನಟರಲ್ಲಿ ಒಬ್ಬರು ಎಂದಿದ್ದರಂತೆ. ಹೀಗೆ ಕಮಲ್ ಅವರಿಂದ ಕಮಾಲ್ ಎನಿಸಿಕೊಂಡಿದ್ದ ಅನಂತ್ ನಾಗರಕಟ್ಟೆ ಎಲ್ಲರ ಪ್ರೀತಿಯ ಅನಂತ್ ನಾಗ್ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕರು.

ಚೆನ್ನಾಗಿ ನೃತ್ಯ ಮತ್ತು ಫೈಟಿಂಗ್ ಮಾಡಲು ಬರುವವರೇ ನಾಯಕರಾಗಲು ಅರ್ಹರು ಎಂಬುದನ್ನು ಸುಳ್ಳು ಮಾಡಿದ, ತನ್ನ ಸಹಜ ಅಭಿನಯದಿಂದಲೇ, ಕನ್ನಡಿಗರ ಮನಸೂರೆಗೊಂಡ ಅನಂತ್ ನಾಗ್ ಉತ್ತರ ಕನ್ನಡದ ಚಿತ್ರಾಪುರ ಮಠದ ಆನಂದ ಆಶ್ರಮದಲ್ಲಿ ಮ್ಯಾನೇಜರ್ ಆಗಿದ್ದ ತಂದೆ ಸದಾನಂದ ನಾಗರಕಟ್ಟೆ ಮತ್ತು ತಾಯಿ ಆನಂದಿ ಅವರ ಹಿರಿಯ ಮಗನಾಗಿ 1948ರ ಸೆಪ್ಟೆಂಬರ್ 4ರಂದು ಜನಿಸುತ್ತಾರೆ. ಮಠದ ಆಶ್ರಮದ ವಾತಾವರಣ ಎಂದ ಮೇಲೆ ಸಹಜವಾಗಿಯೇ ಧಾರ್ಮಿಕ ಆಚರಣೆಗಳು ಮತ್ತು ಸಂಪ್ರದಾಯಗಳು ಹೆಚ್ಚಾಗಿರುವ ಕಾರಣ ಅನಂತ್ ಮತ್ತು ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ನಿರ್ದೇಶಕ ಮತ್ತು ನಟ ಶಂಕರ್ ಅಲ್ಲಿಯ ವಾತಾವರಣಕ್ಕೆ ತಕ್ಕಂತೆ ಧಾರ್ಮಿಕ ಚಟುವಟಿಕೆಗಳ ಜೊತೆ ಜೊತೆಯಲ್ಲೇ ಬಾಲ್ಯದ ಶಿಕ್ಷಣ ಆಟ ಪಾಠಗಳಲ್ಲಿ ತೊಡಗಿಕೊಳ್ಳುತ್ತಾರೆ. ಮನೆ ಮಾತು ಕೊಂಕಣಿ ಆದರೆ ಪ್ರಾಥಮಿಕ ಶಿಕ್ಷಣ ನಡೆದದ್ದು ಕನ್ನಡ ಮಾಧ್ಯಮದಲ್ಲಿ.

ಅವರಿದ್ದ ಸ್ಥಳ ಸ್ವಲ್ಪ ಗ್ರಾಮೀಣ ಪ್ರದೇಶವಾದ ಕಾರಣ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅವರ ತಂದೆ ಅನಂತ್ ಅವರನ್ನು ಮುಂಬೈಗೆ ಕರೆದುಕೊಂಡು ಹೋಗಿ ಅಲ್ಲಿ ಆಂಗ್ಲ ಮಾಧ್ಯಮದ ಶಾಲೆಗೆ ಸೇರಿಸುತ್ತಾರೆ. ಗ್ರಾಮೀಣ ಪರಿಸರದಲ್ಲಿ ಕನ್ನಡ ಮಾಧ್ಯಮದಲ್ಲಿ ತಮ್ಮ ಶಾಲೆಯ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಅನಂತ್, ಮರಾಠಿ ಮತ್ತು ಆಂಗ್ಲಭಾಷೆಯ ಗಂಧಗಾಳಿಯೂ ಗೊತ್ತಿಲ್ಲದೇ ಏಕಾಏಕಿ ಮುಂಬೈಗೆ ಬಂದ ಕಾರಣ ಮೊದಲ ವರ್ಷ ಅನುತ್ತೀರ್ಣರಾಗುತ್ತಾರೆ. ಆದರೆ ಸೋಲೇ ಗೆಲುವಿನ ಮೆಟ್ಟಿಲು ಎಂಬಂತೆ ಅದನ್ನೇ ಸವಾಲಾಗಿ ಸ್ವೀಕರಿಸಿ ಮನೆಯಲ್ಲೇ ಕುಳಿತುಕೊಂಡು ಚೆನ್ನಾಗಿ ಅಭ್ಯಾಸ ಮಾಡಿ ಮರು ವರ್ಷದಲ್ಲೇ S.S.L.C. ತೇರ್ಗಡೆಯಾಗಿದ್ದಲ್ಲದೇ, ಅದೇ ಸಮಯದಲ್ಲೇ ಹೊತ್ತು ಕಳೆಯಲೆಂದು ಮರಾಠಿ ನಾಟಕಗಳತ್ತ ಮುಖ ಮಾಡುತ್ತಾರೆ.
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....