ಬೆಂಗಳೂರು : ಕುಮಾರಿ ಅನಿಕಾ ನಟ್ಟಮೈ ಮತ್ತು ಕುಮಾರಿ ಐಶಾನಿ ಕಾಮತ್ ಉದಯೋನ್ಮುಖ ಭರತನಾಟ್ಯ ಕಲಾವಿದೆಯರಿಬ್ಬರು, ಅಮೇರಿಕೆಯಲ್ಲಿದ್ದರೂ ಭಾರತೀಯ ಸಂಸ್ಕೃತಿಯ ಮೇಲೆ ಅಪಾರ ಒಲವುಳ್ಳ ಇವರು, ಅಮೇರಿಕಾದ ಒಹಾಯೋ ವೆಸ್ಟ್ ಚೆಸ್ಟರ್ನಲ್ಲಿರುವ ‘ನೃತ್ಯಾರ್ಪಣ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’- ಖ್ಯಾತ ನೃತ್ಯ ಸಂಸ್ಥೆಯ ಹೆಸರಾಂತ ನೃತ್ಯಗುರು ಮತ್ತು ನೃತ್ಯಕಲಾವಿದೆ –  ಸಂಯೋಜಕಿಯಾಗಿರುವ ಶ್ರೀಮತಿ ಅನುಪಮ ರಾವ್ ಮಿರ್ಲೆ ಇವರ ನುರಿತ ಗರಡಿಯಲ್ಲಿ ಕಳೆದ 14 ವರ್ಷಗಳಿಂದ ಬಹು ಬದ್ಧತೆಯಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.

ಈಗಾಗಲೇ ಇವರಿಬ್ಬರೂ ಯಶಸ್ವಿಯಾಗಿ ತಮ್ಮ ರಂಗಪ್ರವೇಶಗಳನ್ನು ಪೂರೈಸಿಕೊಂಡಿದ್ದು, ಇಬ್ಬರೂ ಜೊತೆಯಾಗಿ ಹಲವಾರು ವೇದಿಕೆಗಳ ಮೇಲೆ ಜುಗಲ್ಬಂದಿ ಪ್ರದರ್ಶನಗಳನ್ನು ನೀಡುತ್ತಾ, ಕಲಾತ್ಮಕ ಸಾಮರಸ್ಯ ಮತ್ತು ಗಾಢವಾದ ಬಾಂಧವ್ಯವನ್ನು ಅವಿನಾಭಾವವಾಗಿ ನೃತ್ಯದೊಂದಿಗೆ ಬೆಳೆಸಿಕೊಂಡಿದ್ದಾರೆ.

ಪರಿಶ್ರಮಿಗಳಾದ ಇವರು, ಬಹು ಉತ್ಸಾಹದಿಂದ ಪ್ರದರ್ಶನಗಳನ್ನು ನೀಡುತ್ತಿರುವ ಈ ಇಬ್ಬರೂ ಬಹುಮುಖ ಪ್ರತಿಭೆಗಳು. ಈ ಜೋಡಿ ಇದೀಗ ದಿನಾಂಕ 23 ಮೇ 2026ರ ಶನಿವಾರ ಬೆಳಗ್ಗೆ 10-00 ಗಂಟೆಗೆ ಬೆಂಗಳೂರಿನ ವಾಡಿಯಾ ರಸ್ತೆಯಲ್ಲಿರುವ ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ತಮ್ಮ ಭರತನಾಟ್ಯದ ‘ಸಮರ್ಪಣಾ’ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಅವರ ಮನಮೋಹಕ ಕಲಾನೈಪುಣ್ಯವನ್ನು ವೀಕ್ಷಿಸಲು ಎಲ್ಲ ಕಲಾರಸಿಕರಿಗೂ ಹಾರ್ದಿಕ ಸುಸ್ವಾಗತ.

ಇನ್ನಷ್ಟು ಅನ್ವೇಷಿಸಿ
Books & Literature
Books
ಪುಸ್ತಕ

 

ಕುಮಾರಿ ಅನಿಕಾ ಮತ್ತು ಕುಮಾರಿ ಐಶಾನಿಗೆ ನೃತ್ಯ ಇವರ ಬಾಲ್ಯದ ಒಲವು. ಉತ್ತಮ ನೃತ್ಯ ಗುರುವೆಂದು ಖ್ಯಾತರಾಗಿದ್ದ ಶ್ರೀಮತಿ ಅನುಪಮಾ ಮಿರ್ಲೆ ಇವರ ಬಳಿ ಈಗ 14 ವರ್ಷಗಳ ಹಿಂದೆ ನೃತ್ಯ ಕಲಿಯಲು ಸೇರಿ ರಂಗಪ್ರವೇಶ ನೆರವೇರಿಸಿಕೊಳ್ಳುವವರೆಗೂ ಸತತ ಅಭ್ಯಾಸ ಮಾಡಿ ಪ್ರೇಕ್ಷಕರ ಸಮ್ಮುಖ ತಮ್ಮ ಪ್ರತಿಭಾ ಪ್ರದರ್ಶನ ಮಾಡಿ ಮೆಚ್ಚುಗೆ ಗಳಿಸಿದರು.

ಇಬ್ಬರಿಗೂ ನೃತ್ಯ ಬಿಡದ ನಂಟು. ನೃತ್ಯಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸು. ಶಾಸ್ತ್ರೀಯ ಕಲೆಗಳಲ್ಲಿನ ಇವರ ಸಮರ್ಪಣೆ ಮತ್ತು ಶ್ರೇಷ್ಠತೆಯನ್ನು ಗುರುತಿಸಿ ಒಹಾಯೋ ಆರ್ಟ್ಸ್ ಕೌನ್ಸಿಲ್ ಇವರನ್ನು ಹಲವು ಬಾರಿ ‘ಸಾಂಪ್ರದಾಯಿಕ ಕಲೆಗಳ ಅಪ್ರೆಂಟಿಸ್‌ಗಳು’ ಎಂದು ಗೌರವಿಸಿದೆ.

ಕಲೈಮಾಮಣಿ ಮಧುರೈ ಆರ್. ಮುರಳೀಧರನ್ ಇವರ ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದ ಇವರು ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನೂ ಪಡೆದಿದ್ದಾರೆ. ತಮ್ಮ ಗುರುವಿನ ಶಾಲೆಯಾದ ‘ನೃತ್ಯಾರ್ಪಣ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ನಲ್ಲಿ ತರಗತಿಗಳನ್ನು ನಡೆಸಿಕೊಡುವ ಅವಕಾಶವೂ ಇವರಿಗೆ ಲಭಿಸಿದೆ.

ಅನಿಕಾ ಮತ್ತು ಐಶಾನಿ ನೃತ್ಯದಲ್ಲಿ ಹಲವು ಮೈಲಿಗಲ್ಲುಗಳನ್ನು ಜೊತೆಯಾಗಿ ಹಂಚಿಕೊಂಡಿದ್ದರೂ, ಇಬ್ಬರೂ ನೃತ್ಯದ ಹೊರತಾಗಿ ತಮ್ಮದೇ ಆದ ಆಸಕ್ತಿ ಮತ್ತು ಆಶಯಗಳನ್ನು ಬೆಳೆಸಿಕೊಂಡಿದ್ದಾರೆ.

ಕುಮಾರಿ ಅನಿಕಾ ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದು, ತನ್ನ ಮೊದಲ ಏಕವ್ಯಕ್ತಿ ಗಾಯನ ‘ಮಾರ್ಗಂ’ ಪ್ರದರ್ಶನವನ್ನು ನೀಡಿರುವ ವೈಶಿಷ್ಟ್ಯ ಇವಳದು.

ಗಾಯನದ ಜೊತೆಗೆ ಪಿಯಾನೋ ಮತ್ತು ಕೊಳಲು ನುಡಿಸುವ ಕಲೆಯನ್ನೂ ಇವಳು, ಕರಗತ ಮಾಡಿಕೊಂಡಿದ್ದು, ಬಿಡುವಿನ ವೇಳೆಯಲ್ಲಿ ಹವ್ಯಾಸವಾಗಿ ನೇಲ್ ಆರ್ಟ್, ಅಡುಗೆ ಮಾಡುವುದಲ್ಲದೆ ಅಥ್ಲೇಟಿಕ್ ಆಗಿರುವ ವಿಶೇಷತೆ ಪಡೆದಿದ್ದಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ