- ರಾಘವೇಂದ್ರ ಅಡಿಗ ಎಚ್ಚೆನ್.

ಮೊಗಾಚಿ ಲಾರಂ ಕ್ರಿಯೇಶನ್ ಅಡಿಯಲ್ಲಿ ಸಿದ್ದಗೊಂಡಿರುವ ’ನೀನಿದ್ದರೆ’ 5.52 ನಿಮಿಷದ ಆಲ್ಬಂ ಸಾಂಗ್ ಸಿರಿ ಮ್ಯೂಸಿಕ್ ಸಂಸ್ಥೆಯು ಹೊರತಂದಿದೆ. ಹಿರಿಯ ನಟ ರಮೇಶ್ ಭಟ್ ಹಾಡನ್ನು ಲೋಕಾರ್ಪಣೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು ಈ ಸಂದರ್ಭದಲ್ಲಿ ಮಾತನಾಡುತ್ತಾ, ನಿರ್ಮಾಪಕರು ನನ್ನನ್ನು ಫಾದರ್ ಅಂತ ಸಂಭೋದಿಸುತ್ತಾರೆ. ಆದರೆ ನನಗೆ ಅವರು ಗಾಡ್‌ಫಾದರ್. ಮಂಗಳೂರಿಗೆ ಶೂಟಿಂಗ್ ಅಂತ ಹೋದಾಗ, ತಪ್ಪದೆ ಭೇಟಿಯಾಗುವುದು ಅಲ್ಲದೆ ಉಡುಗೊರೆ ನೀಡುತ್ತಾರೆ. ಇಂತಹವರ ಋಣ ತೀರಿಸಲು ಬ್ಯುಸಿ ಇದ್ದರೂ ಬಂದಿರುವೆ. ಸದ್ಯ ವೆಬ್ ಸೀರೀಸ್‌ದಲ್ಲಿ ಅಭಿನಯಿಸುತ್ತಿದ್ದೇನೆಂದು ಹೇಳಿ ರಮೇಶ್‌ಭಟ್ ನಿರ್ಗಮಿಸಿದರು. ಇದೇ ಸಮಯದಲ್ಲಿ ಟೆನ್ನಿಸ್ ಕೃಷ್ಣ ಮತ್ತು ಸಿರಿ ಮ್ಯೂಸಿಕ್ ಮಾಲೀಕರಾದ  ಸುರೇಶ್ ಚಿಕ್ಕಣ್ಣ ಉಪಸ್ತಿತರಿದ್ದರು.

IMG-20260519-WA0064

ಮಂಗಳೂರು ಮೂಲ, ಸದ್ಯ ಆಸ್ಟೇಲಿಯಾ ನಿವಾಸಿ, ಅನಿವಾಸಿ ಭಾರತೀಯ   ನೂರ್ ರ್ಬಟ್ ನಿರ್ಮಾಣ ಮಾಡಿದ್ದಾರೆ. ಕಥೆ,ಚಿತ್ರಕಥೆ, ಸಾಹಿತ್ಯ, ಸಂಗೀತ ಮತ್ತು ಆಕ್ಷನ್ ಕಟ್ ಹೇಳಿರುವುದು ವಿನ್ಸೆಂಟ್ ಫರ್ನಾಂಡಿಸ್ ಕಾಸ್ಸಿಯಾ.

IMG-20260519-WA0060

ಆಕೆ ಮನೆಯಲ್ಲಿ ಬ್ರೇಸ್‌ಲೆಟ್ ನೋಡುತ್ತಾ ಹಿಂದಿನದನ್ನು ನೆನಪಿಸಿಕೊಳ್ಳುವ ದೃಶ್ಯಗಳೊಂದಿಗೆ ಗೀತೆಯು ಸಾಗುತ್ತದೆ. ಇದರಲ್ಲಿ ತಾಯಿ, ಮಗಳು ನಟಿಸಿರುವುದು ವಿಶೇಷ.  ನಾಯಕನಾಗಿ ಅವಿಲ್ ರೋಡ್ರೀಗಸ್, ನಾಯಕಿಯಾಗಿ ಕೆರನ್ ಪಿಂಟೋ ಹಾಗೂ ಹಳೇ ಪ್ರೇಯಸಿಯಾಗಿ ಸ್ಮಿತಾಪಿಂಟೋ ಅಭಿನಯಿಸಿದ್ದಾರೆ.

IMG-20260519-WA0061

ಛಾಯಾಗ್ರಹಣ ಲಕ್ಷೀಕಾಂತ್, ಸಂಕಲನ ರಾಜೇಶ್ ಚೌಹಾಣ್, ಗಾಯಕಿ ಶಿಲ್ಪ ಕುಟೀನ್‌ಹ ಅವರದಾಗಿದೆ ಹಿಮಗಿರಿ ಎಸ್ಟೇಟ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಸಾಂಗ್  ವೈರಲ್ ಆಗಿರುವುದು ತಂಡಕ್ಕೆ ಸಂತಸ ತಂದಿದೆ.

IMG-20260519-WA0066

ನಿರ್ದೇಶಕರು ಹೇಳುವಂತೆ, ಮೊದಲು ಒಂದು ಹಾಡು ಮಾಡುವುದೆಂದು ಯೋಜನೆ ಹಾಕಲಾಗಿತ್ತು. ಮುಂದೆ ಅದು ಐದಕ್ಕೆ ಮುಂದುವರೆಯಿತು. ಇದನ್ನೆ ಸಿನಿಮಾ ಯಾಕೆ ಮಾಡಬಾರದು ಎಂಬ ಆಲೋಚನೆ ಬಂದು, ಅದಕ್ಕೂ ನಿರ್ಮಾಪಕರಿಂದ ಹಸಿರು ನಿಶಾನೆ ಸಿಕ್ಕಿದೆ. ಎಲ್ಲ ಅಂದುಕೊಂಡಂತೆ ಆದರೆ,  ಮೂರು ತಿಂಗಳಲ್ಲಿ ಸೆಟ್ಟೇರಲಿದೆ. ಹನ್ನೊಂದು ವರ್ಷದ ಪ್ರತಿಭೆ ಕೆಮರಿಲ್ ಪಿಂಟೋ ಹಾಡಿಗೆ ಡ್ರಮ್ ಬಾರಿಸಿದ್ದಾನೆಂದು ವಿನ್ಸೆಂಟ್ ಫರ್ನಾಂಡಿಸ್ ಕಾಸ್ಸಿಯಾ ಆತನನ್ನು ಪರಿಚಯಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ