ನೇಹಾ ಸರಗಮ್ ಹಿಂದಿ ಧಾರಾವಾಹಿಗಳಿಂದ ದೇಶಾದ್ಯಂತ ಮನೆ ಮಾತಾಗಿದ್ದಾಳೆ. ಈಕೆ ಕಿರುತೆರೆಯ ಜನಪ್ರಿಯ ನಟಿ. ಬಿಹಾರ್‌ ರಾಜ್ಯದ ಪಾಟ್ನಾ ನಗರ ಈಕೆಯ ತವರು. ಈಕೆ ತನ್ನ ಕೆರಿಯರ್‌ ಶುರು ಮಾಡಿದ್ದು ಗಾಯಕಿಯ ರೂಪದಲ್ಲಿ. ಸೋನಿ ಟಿವಿಯ ಇಂಡಿಯನ್‌ ಐಡಲ್ ನಿಂದ ಐಡೆಂಟಿಟಿ ಪಡೆದ ಈಕೆ, `ಚಾಂದ್‌ ಛುಪಾ ಬಾದ್‌ ಮೇ' ಕಿರುತೆರೆಯ ಧಾರಾವಾಹಿಯಿಂದ ದೇಶಾದ್ಯಂತ ಮನೆಮಗಳಾಗಿ ಗುರುತಿಸಿಕೊಂಡಿದ್ದಾಳೆ.

ನೇಹಾ `ಇಂಡಿಯನ್‌ ಐಡಲ್'  ಹಾಡುಗಾರಿಕೆಯ ಸ್ಪರ್ಧೆಯಲ್ಲಿ ಮಿಂಚಿ ಎಲ್ಲರ ಗಮನ ಸೆಳೆದಳು. ಈಕೆ 2 ಸಲ ಈ ಶೋನಲ್ಲಿ ಭಾಗವಹಿಸಿದ್ದಳು. ಹಾಡುಗಾರಿಕೆಯಲ್ಲಿ ಕೆರಿಯರ್‌ ಅರಸುತ್ತಾ ಬಂದಾಗ, ಸೋನಾಲಿ ಬೇಂದ್ರೆಯ ದೃಷ್ಟಿಗೆ ಬಿದ್ದಳು. ಹೀಗಾಗಿ ಕಿರುತೆರೆಯ ಧಾರಾವಾಹಿಗಳಲ್ಲಿ ಕ್ರಮೇಣ ಪಾತ್ರಗಳನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಾಯಿತು. `ಹಾರ್‌ಜೀತ್‌, ಸಾವ್ ‌ಧಾನ್‌ ಇಂಡಿಯಾ, ಏ ಹೈ ಆಶಿಕಿ, ರಾಮಯಣ್‌, ಏ ರಿಶ್ತಾ ಕ್ಯಾ ಕೆಹ್ಲಾತಾ ಹೈ,' ಇತ್ಯಾದಿ ಧಾರಾವಾಹಿಗಳಲ್ಲಿ ಸಾಲು ಸಾಲಾಗಿ ನಟಿಸಿದಳು.

ಸರಳ ಸುಂದರಿ, ಶಾಂತ ಸ್ವಭಾವದ, ಸದಾ ಹಸನ್ಮುಖಿ ನೇಹಾಳ `ಯಶೋಮತಿ ಮೈಯಾ ಕಿ ನಂದಲಾಲ'  ಸೋನಿ ಟಿವಿಯಲ್ಲಿ ಪ್ರಸಾರಗೊಳ್ಳುತ್ತಿದೆ. ಇದರಲ್ಲಿ ಈಕೆ ಯಶೋದೆಯ ಪಾತ್ರ ನಿರ್ವಹಿಸಿ, ಕೃಷ್ಣನ ಬಾಲಲೀಲೆಗಳನ್ನು ಆನಂದಿಸುತ್ತಾಳೆ. ಇವಳ ಈ ಪಾತ್ರವನ್ನು ವೀಕ್ಷಕರು ಬಹಳ ಮೆಚ್ಚಿಕೊಂಡಿದ್ದಾರೆ. ಮುಂದೆ ಕೃಷ್ಣ ಬೆಳೆದು ಯುವಕನಾದಾಗ ಪ್ರೌಢ ಯಶೋದೆಯಾಗಿ ಪ್ರಬುದ್ಧ ಅಭಿನಯ ನೀಡಿದ್ದಾಳೆ. ಈ ಪಾತ್ರದಿಂದ, ಹೆಣ್ಣು ಒಬ್ಬ ತಾಯಿಯಾಗಿ ಮಗುವನ್ನು ಬೆಳೆಸಿ ದೊಡ್ಡವರನ್ನಾಗಿಸಲು ಎಷ್ಟೆಲ್ಲ ಪ್ರಯಾಸಪಡುತ್ತಾಳೆ ಎಂದು ಗುರುತಿಸಿಕೊಂಡಳಂತೆ. ವೀಕ್ಷಕರಿಗಂತೂ ಇವಳ ನಟನೆ ಬಹಳ ನ್ಯಾಚುರಲ್ ಎನಿಸಿದೆ. ಕೃತಕತೆ ಇಲ್ಲದ ಗ್ರಾಮೀಣ ಹೆಣ್ಣು ಯಶೋದೆಯಾಗಿ, ನೇಹಾ ಗೆದ್ದಿದ್ದಾಳೆ ಎಂದೇ ಹೇಳಬಹುದು. ಆಕೆಯ  ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ :

ನಟನೆ ಕ್ಷೇತ್ರಕ್ಕೆ ಬಂದದ್ದು ಹೇಗೆ?

ಒಬ್ಬ ನಟಿಯಾಗಿ ಮುಂದುವರಿಯುತ್ತೇನೆ ಎಂಬ ಯಾವ ಪ್ಲಾನೂ ಇರಲಿಲ್ಲ. ನಾನು ನನ್ನ ಶಿಕ್ಷಣ ಮತ್ತು ಹಾಡುಗಾರಿಕೆಯಲ್ಲೇ ಫೋಕಸ್ಡ್ ಆಗಿದ್ದೆ. ನಾನು ಮೊದಲಿನಿಂದಲೂ ಶಾಸ್ತ್ರೀಯ ಸಂಗೀತ ಕಲಿತಿದ್ದೆ. ನಾನು ಟಿವಿಗೆ ಡೆಬ್ಯೂ ಆಗಿದ್ದೆ ಸೋನಿಯ `ಇಂಡಿಯನ್‌ ಐಡಲ್'  ಹಾಡುಗಾರಿಕೆಯ ಶೋನಿಂದ. ನನ್ನ ಆಡಿಶನ್‌ ಗಮನಿಸಿದ ನಿರ್ಮಾಪಕ, ನಿರ್ದೇಶಕರು ನಾನು ಉತ್ತಮ ನಟನೆ ಮಾಡಬಲ್ಲೆ ಎಂದು ನಿರ್ಧರಿಸಿದರು. ಹೀಗೆ ನಾನು ಕೆಲಸ ಪ್ರಾರಂಭಿಸಿದೆ.

ನಾನು ಸದಾ ಕುಟುಂಬದವರ ಜೊತೆಗಿದ್ದುಕೊಂಡೇ ಈ ಕೆಲಸ ನಿಭಾಯಿಸಿದೆ. ಎಷ್ಟೋ ಸಲ ಅವರನ್ನು ಶೂಟಿಂಗ್‌ ನೋಡಲೆಂದು ಕರೆ ತಂದಿದ್ದೇನೆ. ನನ್ನ ಮೊದಲ ನಿರ್ಮಾಪಕರು ನನ್ನ ತಾಯಿ ತಂದೆಯವರನ್ನು ಕಂಡು, ಪ್ರತಿದಿನ ಇಬ್ಬರಲ್ಲಿ ಒಬ್ಬರು ಅಗತ್ಯವಾಗಿ ದಿನಾ ಶೂಟಿಂಗ್‌ ಸ್ಪಾಟ್‌ ಗೆ ಬರಬೇಕೆಂದು ಆಗ್ರಹಿಸಿದರು. ದಿನದ ಅಂತ್ಯದ ಹೊತ್ತಿಗೆ ಮನೆಯವರ ಮುಖ ಕಂಡು ಅವರ ಸಪೋರ್ಟ್‌ ಸಿಗುತ್ತದೆ ಎಂಬ ಆತ್ಮವಿಶ್ವಾಸ ಮೂಡುತ್ತದೆ ಎನ್ನುತ್ತಿದ್ದರು. ನಿಧಾನವಾಗಿ ನನ್ನ ಮನೆಯವರು ಸಂಪೂರ್ಣ ಮುಂಬೈಗೆ ಶಿಫ್ಟ್ ಆದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ