ಕೇವಲ ಪ್ರೀತಿ ಪ್ರೇಮದಿಂದ ಎಲ್ಲವನ್ನೂ ಗೆಲ್ಲಬಹುದೇ? ಪ್ರೀತಿ ವಾತ್ಸಲ್ಯಗಳಿಂದ ಅತಿ ಕಠಿಣ ಮನಸ್ಕ ವ್ಯಕ್ತಿಯನ್ನೂ ಮುಗುಳ್ನಗುವ ಬೀರಿ ಆತ್ಮೀಯನಾಗಿಸಬಹುದೇ? ಇಂಥದೇ ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಿದೆ ಝೀ ಟಿವಿಯ ಹೊಸ ಶೋ `ಪ್ಯಾರ್ ಕಾ ಪಹ್ಲಾ ನಾಮ್ ರಾಧಾ ಮೋಹನ್.' ಇದೊಂದು ಕಾಲ್ಪನಿಕ ಕಥೆ ಆಧಾರಿತ ಧಾರಾವಾಹಿ. ಇದರಲ್ಲಿ ನಟಿ ನಿಹಾರಿಕಾ ರಾಯ್ ರಾಧಾಳ ಮುಖ್ಯ ಪಾತ್ರದಲ್ಲಿದ್ದಾಳೆ. ಇವಳು ತನ್ನ ಪ್ರೀತಿ ಪ್ರೇಮಗಳಿಂದ ಕಲ್ಲಿನಂತೆ ಕಠೋರ ಮನಸ್ಕನಾದ ಮೋಹನ್‌ನನ್ನು (ಶಬೀರ್ ಅಹ್ಲುವಾಲಿಯಾ) ಸ್ವಭಾವತಃ ಬದಲಾಯಿಸಿ ಅವನನ್ನು ಮೃದು ಮನಸ್ಸಿನವನನ್ನಾಗಿ ಬದಲಾಯಿಸುವಲ್ಲಿ ಯಶಸ್ವಿಯಾಗುತ್ತಾಳೆ. ಇಡೀ ಧಾರಾವಾಹಿಯನ್ನು ಪ್ರೀತಿಗೆ ಹೆಸರಾದ ಲಖ್ನೌ ನಗರದಲ್ಲಿ ವೈಭವದಿಂದ ಚಿತ್ರೀಕರಿಸಲಾಗಿದೆ.
ಮೂಲತಃ ಮುಂಬೈನವಳಾದ ನಿಹಾರಿಕಾ ಬಾಲ್ಯದಿಂದಲೇ ನಟನೆಯ ಹುಚ್ಚು ಹಚ್ಚಿಕೊಂಡಳು. ಅವಳು ಕಥಕ್ ಕ್ಲಾಸಿಕ್ ನೃತ್ಯ ಕಲಿಯಲು ಆರಂಭಿಸಿ, ತನ್ನ ವಿದ್ಯಾಭ್ಯಾಸದೊಂದಿಗೆ ಮಾಡಲಿಂಗ್ ನಲ್ಲೂ ಹೆಸರೂ ಗಳಿಸಿದಳು. ಇದಕ್ಕೆ ಇವಳ ಹೆತ್ತವರು ಬಹಳ ಪ್ರೋತ್ಸಾಹ, ಮಾರ್ಗದರ್ಶನ ನೀಡಿದರು. ಒಂದು ಲೀಡ್ ರೋಲ್ ಗಾಗಿ ಇವಳು ಅನೇಕ ವರ್ಷ ಆಡಿಶನ್ ಎದುರಿಸಬೇಕಾಯಿತು.
ಆಧುನಿಕ, ಸರಸ ಸ್ವಭಾವದ, ಚಿನಕುರಳಿ ನಿಹಾರಿಕಾಳ ಜರ್ನಿ ಬಗ್ಗೆ ಅವಳಿಂದ ಕೇಳಿ ತಿಳಿಯೋಣವೇ? :
ನೀನು ಬಾಲನಟಿಯಾಗಿ ಅನೇಕ ವರ್ಷಗಳ ಹಿಂದೆ ಬಾಲಿವುಡ್ ಗೆ ಎಂಟ್ರಿ ಪಡೆದಳು. ಇದು ಹೇಗೆ ಸಾಧ್ಯವಾಯಿತು?
ಬಂಗಾಳಿ ಸಂಸ್ಕೃತಿಯಲ್ಲಿ ಬಾಲ್ಯದಿಂದಲೇ ಕಲೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ನಾನು 9 ವರ್ಷದವಳಿದ್ದಾಗಲೇ ನಟನೆ ಶುರು ಮಾಡಿದೆ. ನಾನು ಏನಾದರೂ ವಿಭಿನ್ನ ಕೆರಿಯರ್ ಆರಿಸಿಕೊಳ್ಳಲಿ ಎಂದು ನನ್ನ ತಂದೆ ಬಯಸುತ್ತಿದ್ದರು. ನಮ್ಮ ಶಾಲೆ ಅಥವಾ ಮನೆಯ ಬಳಿ ಯಾವುದೇ ಸಾಂಸ್ಕೃತಿಕ ಚಟುವಟಿಕೆ ನಡೆದಾಗಲೂ, ಅಲ್ಲಿ ನಾನು ಅತಿ ಉತ್ಸಾಹದಿಂದ ಅದರಲ್ಲಿ ಪಾಲ್ಗೊಳ್ಳುತ್ತಿದ್ದೆ. ನನಗಂತೂ ಡ್ಯಾನ್ಸ್, ನಾಟಕಗಳಲ್ಲಿ ಭಾಗಹಿಸುವುದು ಅಂದ್ರೆ ಬಲು ಇಷ್ಟ. ಅದೇ ತರಹ ಮುಂದೆ ಕಥಕ್ ನೃತ್ಯಾಭ್ಯಾಸ ಕಲಿಯತೊಡಗಿದೆ. ಆದರೆ ನಾನು ಆ ಕೋರ್ಸ್ ನ್ನು ಪೂರ್ತಿ ಮಾಡಿಕೊಳ್ಳಲು ಆಗಲಿಲ್ಲ. 2 ವರ್ಷದ ಆ ಕೋರ್ಸ್ ಇನ್ನೂ ಹಾಗೇ ಬಾಕಿ ಉಳಿದಿದೆ. ಅದನ್ನು ಪೂರೈಸಿದರೆ ನನಗೆ ಶಾಸ್ತ್ರೀಯ ನೃತ್ಯದಲ್ಲಿ `ವಿಶಾರದಾ' ಪದವಿ ಸಿಗುತ್ತದೆ.
ನೀನು ಈ ಸಿನಿಮಾ ಫೀಲ್ಡ್ ಗೆ ಬಂದ ಮೇಲೆ ನಿನ್ನ ಕುಟುಂಬದವರ ಪ್ರತಿಕ್ರಿಯೆ ಹೇಗಿತ್ತು?
ನನ್ನ ಇಡೀ ಕುಟುಂಬದಲ್ಲಿ ಬಹುತೇಕರು ಕುಹಕ ಮಾಡಿದ್ದೇ ಹೆಚ್ಚು! ನಾನು ನನ್ನ ತಾಯಿ ತಂದೆಯರ ಒಬ್ಬಳೇ ಮಗಳು, ಹೀಗಾಗಿ ನಾನು ಎಲ್ಲರಿಗೂ ಅತಿ ಮುದ್ದು. ನಾನು ಕುಟುಂಬದವರಂತೆ ಬರೀ ಓದಿಗೆ ಅಂಟಿಕೊಳ್ಳದೆ ಏನಾದರೂ ವಿಭಿನ್ನವಾದುದನ್ನು ಮಾಡಬೇಕೆಂದು ನಮ್ಮ ತಂದೆ ಸದಾ ಹೇಳುತ್ತಿದ್ದರು. ನನ್ನ ನಟನೆ, ಡ್ಯಾನ್ಸ್, ಭಾವನೆಗಳನ್ನು ವ್ಯಕ್ತಪಡಿಸುವ ರೀತಿ.... ಎಲ್ಲ ಎಲ್ಲರಿಗೂ ಬಹಳ ಇಷ್ಟವಾಗುತ್ತಿತ್ತು. ಹೀಗಾಗಿ ನಾನು ನಟನೆಯ ಕೆರಿಯರ್ ಆರಿಸಿಕೊಳ್ಳಬೇಕೆಂದು ಮನೆಯಲ್ಲಿ ಎಲ್ಲರೂ ಸಲಹೆ ನೀಡುತ್ತಿದ್ದರು. ಆಗ ನೀನು ಸಿನಿಮಾಗಾಗಿ ಆಡಿಶನ್ಸ್ ನೀಡಲು ಆರಂಭಿಸಿದೆ. ಅಂತೂ ಕೊನೆಯಲ್ಲಿ ಈ ದೊಡ್ಡ ಪ್ರಾಜೆಕ್ಟ್ ನನಗೆ ಸಿಕ್ಕಿತು.