ಬಿಗ್​ಬಾಸ್ ಖ್ಯಾತಿಯ ನಟಿ ನಿವೇದಿತಾ ಗೌಡ ದಿಢೀರನೇ ಬದಲಾಗಿದ್ದಾರಾ..? ಅದ್ಯಾಕ್ ಇದ್ದಕ್ಕಿದ್ದಂತೇ ಸಿಕ್ಕಾಪಟ್ಟೆ ಗೌರಮ್ಮನ ಲುಕ್​ಗೆ ಕನ್ವರ್ಟ್​ ಆಗಿದ್ದಾರೆ..? ಅಯ್ಯೋ.. ಬಿಚ್ಚಮ್ಮ ಅಂತಾನೇ ಕರೆಸಿಕೊಳ್ತಿದ್ದ ನಿವೇದಿತಾಗೆ ಏನಾಯ್ತು..? ರ್ಯಾಂಪರ್ ಚಂದನ್ ಶೆಟ್ಟಿ​​ ಜೊತೆಗಿನ ಡಿವೋರ್ಸ್ ಬಳಿಕ ನಿವೇದಿತಾ ಯಾಕಿಂಗೆ ಬದಲಾದ್ರು..? ಅನ್ನೋ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಿವೆ. ಹೀಗೆ ಪ್ರಶ್ನೆಗಳು ಹುಟ್ಟಿಕೊಳ್ಳೋಕೆ ಅಸಲಿ ಕಾರಣ ನಿವೇದಿತಾ ಗೌಡ ಹಾಕಿರೋ ಹೊಸ ರೀಲ್ಸ್​.

ಹೌದು.. ಡಿಫರೆಂಟ್ ರೀಲ್ಸ್.. ಡಿಫರೆಂಟ್​​ ಬಟ್ಟೆ ಮೂಲಕ ಸಾಕಷ್ಟು ಸುದ್ದಿಯಲ್ಲಿರೋ ನಿವೇದಿತಾ ಗೌಡ ಈಗ ಮತ್ತೆ ಆಕ್ಟೀವ್ ಆಗಿದ್ದಾರೆ. ಡಿವೋರ್ಸ್ ಬಳಿಕವಂತೂ ಬ್ಯಾಕ್ ಟು ಬ್ಯಾಕ್ ರೀಲ್ಸ್​​ ಮಾಡಿ ಇನ್​ಸ್ಟಾದಲ್ಲಿ ಶೇರ್ ಮಾಡುತ್ತಿದ್ದಾರೆ. ಆದ್ರೆ ಈ ಬಾರಿ ಸೀರೆಯುಟ್ಟು ರೀಲ್ಸ್ ಮಾಡಿ ನಾಚಿ ನೀರಾಗಿದ್ದಾರೆ. ಒಲವೇ ಒಲವೇ ಒಲವೇ ಅನ್ನೋ ಹಾಡಿಗೆ ಸಖತ್ತಾಗೇ ರೀಲ್ಸ್ ಮಾಡಿರೋ ನಿವೇದಿತಾ ವೈಟ್ ಅಂಡ್​​​ ಪಿಂಕ್​​​ ಕಲರ್​​ ಸೀರೆಯಲ್ಲಿ ಸಖತ್ತಾಗೇ ಮಿಂಚುತ್ತಿದ್ದಾರೆ. ನಿವೇದಿತಾರ ಹೊಸ ಅವತಾರ ಕಂಡು ಪುಳಕಿತರಾಗಿರೋ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿಬಿಟ್ಟಿದ್ದಾರೆ. ಅಯ್ಯೋ ಶಿವಾ.. ಇದೇನಿದು ಅವತಾರ.. ಹೆಂಗಿದ್ರಿ.. ಹಿಂಗ್ಯಾಕಾದ್ರೀ.. ಅಂತಾನೂ ಪ್ರಶ್ನೆ ಮಾಡಿದ್ದಾರೆ.

 

ಇನ್ನು ಕೆಲವರಂತೂ ಹಾರ್ಟ್ ಎಮೋಜಿ ಜೊತೆ ಕಮೆಂಟ್​ ಹಾಕಿ ತುಂಬಾ ಚೆನಾಗಿದೆ.. ಡೀಸೆಂಟ್ ಆಗಿದೆ.. ಎಷ್ಟು ಚೆಂದ ನಿವಿ.. ನೀನು ಅಂದದ ಗೊಂಬೆ ಅಂತೆಲ್ಲಾ ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಾತ್ ಟಬ್​​, ಶಾರ್ಟ್​ ಡ್ರೆಸ್​.. ಮಿಡಿ.. ಜೀನ್ಸ್​​ ಹೀಗೆ ನಾನಾ ಬಟ್ಟೆ ಹಾಕಿಕೊಂಡು ನಾನೇ ತ್ರಿಪುರ ಸುಂದ್ರಿ ಅಂತೆಲ್ಲಾ ರೀಲ್ಸ್ ಮಾಡ್ತಿದ್ದ ನಿವೇದಿತಾ ಗೌಡ ಈಗ ತುಂಬಾ ಸಿಂಪಲ್ ಆಗಿ ಸೀರೆ ಉಟ್ಟು ರೀಲ್ಸ್ ಮಾಡಿರೋದಕ್ಕೆ ಸ್ವಲ್ಪ ಜಾಸ್ತಿನೇ ಜನ ಇಂಪ್ರೆಸ್ ಆಗೋಗಿದ್ದಾರೆ.

 

ಅಸಲಿಗೆ ಬಿಗ್ ಬಾಸ್ ಕನ್ನಡ ಸೀಸನ್ 5’ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿ, ಸ್ನೇಹ ನಂತರ ಪ್ರೀತಿಯಾಗಿ ಬದಲಾಯಿತು. 2017ರಲ್ಲಿ ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದರು. ಬಳಿಕ ಅವರಿಬ್ಬರು 2020 ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ, ಕಳೆದ ವರ್ಷ ಜೂನ್ 7ರಂದು ಇಬ್ಬರೂ ಪರಸ್ಪರ ಒಪ್ಪಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಆದ್ರೂ ಇಬ್ಬರೂ ಇತ್ತೀಚೆಗಷ್ಟೇ ಒಂದು ಚಿತ್ರದಲ್ಲಿ ಒಟ್ಟಿಗೆ ಕಣ್ಣೀರು ಹಾಕುವ ದೃಶ್ಯದಲ್ಲಿ ಅಭಿನಯಿಸಿದ್ದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ