ಸ್ಯಾಂಡಲ್​ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ ಹೊಚ್ಚಹೊಸ ಚಲನಚಿತ್ರ 'UI' ಮೊಟ್ಟಮೊದಲ ಬಾರಿಗೆ ಜೀ ಕನ್ನಡ ವಾಹಿನಿಯಲ್ಲಿ ಭಾನುವಾರ ಸಂಜೆ 4:30 ಕ್ಕೆ ಪ್ರಸಾರವಾಗಲಿದೆ.

ತಾವೇ ನಿರ್ದೇಶಿಸಿದ UI ಚಿತ್ರದಲ್ಲಿ ಉಪೇಂದ್ರ ಅವರು ಕಲ್ಕಿ ಮತ್ತು ಸತ್ಯ ಎಂಬ ಪಾತ್ರವನ್ನು ನಿರ್ವಹಿಸಿದ್ದು, ಅವರಿಗೆ ರೀಷ್ಮಾ ನಾಣಯ್ಯ ಅವರು ಜೋಡಿಯಾಗಿದ್ದಾರೆ. ಅಷ್ಟೇ ಅಲ್ಲದೆ, ರವಿಶಂಕರ್, ಸಾಧುಕೋಕಿಲ, ನಿಧಿ ಸುಬ್ಬಯ್ಯ, ಮುರಳಿ ಶರ್ಮಾ ಹಾಗು ಅಚ್ಯುತ್ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ಉಪೇಂದ್ರ ಸತ್ಯ ಮತ್ತು ಕಲ್ಕಿ ಎಂಬ ದ್ವಿಪಾತ್ರದಲ್ಲಿ ಅಭಿನಯಿಸಿದ್ದು, ಈ ಸಿನೆಮಾದಲ್ಲಿ “ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ”  ಎಂಬ ಉಪ್ಪಿಯ ಲೈನ್ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿತ್ತು. “ಆಡು ಮುಟ್ಟದ ಸೊಪ್ಪಿಲ್ಲ” ಎಂಬ ಗಾದೆ ಮಾತಿನಂತೆ ಈ ಸಿನಿಮಾದಲ್ಲಿ ಉಪೇಂದ್ರ ಹೇಳದೇ ಇರುವ ವಿಚಾರಗಳೇ ಇಲ್ಲ. ದೇವರು, ಜಾತಿ, ಧರ್ಮ, ಪ್ರಕೃತಿ, ಸಮಾಜ, ಮಹಿಳೆ, ಬುದ್ಧ, ಬಸವ, ಭ್ರಷ್ಟಾಚಾರ, ಕಲ್ಕಿ ಯುಗ & ಸತ್ಯ ಯುಗ, ಭವಿಷ್ಯ, ಕೊನೆಗೆ ಸಾಮಾಜಿಕ ಜಾಲತಾಣಗಳನ್ನೂ ಕೂಡ ಉಪ್ಪಿ ಬಿಟ್ಟಿಲ್ಲ. ಇಡೀ ಸಿನಿಮಾದಲ್ಲಿ ಇವೆಲ್ಲವೂ ಒಂದಲ್ಲಾ ಒಂದು ಕಡೆ ಬಂದು ತಮ್ಮ ಇರುವಿಕೆಯನ್ನು ತೋರಿಸಿಕೊಟ್ಟು ಹೋಗುತ್ತವೆ.

ಸಿನೆಮಾದೊಳಗೆ ಮತ್ತೊಂದು ಸಿನೆಮಾದ ಕಥೆಯೇ UI. ಇಲ್ಲಿ ಸತ್ಯ ನ್ಯಾಯದ ಪರ ಹೋರಾಡಿದರೆ, ಕಲ್ಕಿ ಅನ್ಯಾಯದ ಪರ ಹೋರಾಡುತ್ತಾನೆ. ಫೋಕಸ್ ಮಾಡಿದರೆ ಮಾತ್ರ ಅರ್ಥವಾಗುತ್ತದೆ ಎಂಬ ಪ್ರೇಕ್ಷಕರ ಮಾತನ್ನು ಕೇಳಿದ ಚಿತ್ರವಿಮರ್ಶಕ ಈ ಚಿತ್ರಕ್ಕೆ ವಿಮರ್ಶೆ ಬರೆಯಲಾಗದೆ ಒದ್ದಾಡುತ್ತಾನೆ. ಕೊನೆಗೆ ಆ ಚಿತ್ರದ ನಿರ್ದೇಶಕನನ್ನು ಹುಡುಕಿಕೊಂಡು ಹೋಗಿ ಆತನನ್ನು ಭೇಟಿಯಾಗಿ ಚಿತ್ರದ ಒಳಾರ್ಥ ತಿಳಿಯಲು ನಿರ್ಧರಿಸುತ್ತಾನೆ. ಆದರೆ ದೊಡ್ಡ ಟ್ವಿಸ್ಟ್ ಏನೆಂದರೆ ಅಲ್ಲಿ ವಿಮರ್ಶಕನಿಗೆ ಚಿತ್ರದ ನಿರ್ದೇಶಕ ಸಿಗುವುದಿಲ್ಲ ಬದಲಾಗಿ ಸುಟ್ಟುಹಾಕಲು ಹೋಗಿದ್ದ ಕಥೆಯ ಪ್ರತಿ ಸಿಗುತ್ತದೆ. ಇದರಿಂದ ವಿಮರ್ಶಕನ ಗೊಂದಲ ಮತ್ತಷ್ಟು ಜಾಸ್ತಿ ಆಗುತ್ತದೆ.

ಜೀ ಕನ್ನಡ ಜನಪ್ರಿಯ ಧಾರಾವಾಹಿಗಳು, ಸೂಪರ್ ರಿಯಾಲಿಟಿ ಶೋಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಗಳಿಂದ  ಪ್ರೇಕ್ಷಕರ ಮನಗೆದ್ದು ನಂ.1 ಸ್ಥಾನದಲ್ಲಿದೆ. ಪ್ರತಿ ಬಾರಿಯೂ ಹೊಸತನದಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಜೀ ಕನ್ನಡ ಈಗ ವೀಕ್ಷಕರಿಗೆ ಮಗದೊಂದು ಮನರಂಜನೆಯ ರಸದೌತಣ ಬಡಿಸುತ್ತಿದೆ.

ಯುಗಾದಿ ಹಬ್ಬದ ಪ್ರಯುಕ್ತ ಪ್ರಸಾರ ಆಗುವ UI ಸಿನೆಮಾ ನೋಡಿ, ವಾಚ್ ಅಂಡ್ ವಿನ್ ಕಾಂಟೆಸ್ಟ್ ನಲ್ಲಿ ಭಾಗವಹಿಸಿ 10 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಬಹುಮಾನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಕಾಂಟೆಸ್ಟ್ ಮಾರ್ಚ್ 30 ರಿಂದ ಶುರುವಾಗಿ ಏಪ್ರಿಲ್ 6 ರ ವರೆಗೆ ನಡೆಯಲಿದ್ದು, ಪ್ರತಿ ಅರ್ಧ ಗಂಟೆಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ 3 ಅದೃಷ್ಟಶಾಲಿಗಳಿಗೆ ಉಡುಗೊರೆ ಮತ್ತು ಒಬ್ಬ ಅದೃಷ್ಟಶಾಲಿಗೆ ಬಂಪರ್ ಬಹುಮಾನ ದೊರೆಯಲಿದೆ. ಜೀ ಯಿಂದ ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಬಹುಮಾನ ನಿಮ್ಮದಾಗಿಸಿಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ