ಅಭಿಮಾನಿಗಳ ಜಾಗೃತಗೊಳಿಸುತ್ತಿರುವ ಪರಿಣೀತಿ
ಬಾಲಿವುಡ್‌ನ ಖ್ಯಾತ ನಟಿ ಪರಿಣೀತಿ ಚೋಪ್ರಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಅಭಿಮಾನಿಗಳನ್ನು ಕೊರೋನಾ ವೈರಸ್ ಕುರಿತು ಹೆಚ್ಚು ಹೆಚ್ಚಾಗಿ ಜಾಗೃತಗೊಳಿಸುತ್ತಿದ್ದಾಳೆ. ಬೇರೆ ಸೆಲೆಬ್ರಿಟಿಗಳು ತಮ್ಮ ಚಿತ್ರಗಳ ಬಿಡುಗಡೆ ದಿನಾಂಕದ ಕುರಿತು ತಲೆ ಕೆಡಿಸಿಕೊಂಡಿದ್ದರೆ, ಈ ಪರಿಣೀತಿ ಮಾತ್ರ ಜಾಗೃತಿ ಕ್ರಿಯೇಟ್ ಮಾಡುವಲ್ಲಿ ಬಿಝಿಯೋ ಬಿಝಿ! ಈಕೆಯ ಹೊಸ `ಸಂದೀಪ್‌ಔರ್ ಪಿಂಕಿ ಫರಾರ್' (ಪರಾರಿ) ಚಿತ್ರ ಸಹ ತಡವಾಗಿ ರಿಲೀಸ್ ಆಗಲಿದೆ. ಈ ಚಿತ್ರದ ಟ್ರೇಲರ್ ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ. ಪಾಪ, ಎಲ್ಲರಂತೆ ಇವಳೂ ಚಿತ್ರದ ಬಿಡುಗಡೆಯನ್ನೇ ಕಾಯುತ್ತಿದ್ದಾಳೆ. ಈ ಮಧ್ಯೆ ಇವಳು `ಜುವಾಹಾ ಸ್ಯಾರೀಸ್'ನ ರಾಯಭಾರಿ ಆಗಿದ್ದಾಳೆ.
ಅಮಿತ್ನನ್ನು ಬದಲಿಸಿದ ಪಾತ್ರ
ಅಮಿತ್ ಸಾಧ್ ಮೊದಲಿನಿಂದ ನೈಜ ಜೀವನದ ಆಧಾರಿತ ಚಿತ್ರಗಳಲ್ಲಷ್ಟೇ ನಟಿಸುತ್ತಾ ಬಂದಿದ್ದಾನೆ. ವರ್ತಮಾನದಲ್ಲೂ ಅಂಥದ್ದೇ ಕಂಟೆಂಟ್ ಇರುವ ಚಿತ್ರವನ್ನು ಪ್ರೇಕ್ಷಕರ ಮುಂದಿಡಲಿದ್ದಾನೆ. ಈತನ ಮುಂದಿನ ಒರಿಜಿನ್ ವೆಬ್ ಫಿಲ್ಮ್ `ಆಪರೇಶನ್‌ಪರಿಂದೆ' ಇಂಥದೇ ಕಥೆ ಹೊಂದಿದೆ. ಇದರಲ್ಲಿ ಅಮಿತ್ ಸ್ಪೆಷಲ್ ಟಾಸ್ಕ್ ಆಫೀಸರ್ ಆಗಿರುತ್ತಾನೆ. ಜೇಲಿನಿಂದ ಪರಾರಿ ಆಗುವ ಖೈದಿಗಳನ್ನು ಹಿಡಿಯಲು ಅವರನ್ನು ಹಿಂಬಾಲಿಸುವ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾನೆ ಅಮಿತ್. ಈ ಚಿತ್ರ 24 ಗಂಟೆಗಳಲ್ಲಿ ನಡೆಯುವ ಘಟನೆಗಳ ಕಥಾನಕ ಹೊಂದಿದೆ. ಅಮಿತ್‌ನನ್ನು ಈ ಪಾತ್ರದ ಪರಕಾಯ ಪ್ರವೇಶ ಮಾಡಿರುವ ಬಗ್ಗೆ ಕೇಳಿದಾಗ, ಅತಿ ಉತ್ಸಾಹದಿಂದ ಆತ, ``ಈ ಪಾತ್ರ ನಿಭಾಯಿಸಿದ ಮೇಲೆ ನನ್ನ ವ್ಯಕ್ತಿತ್ವದಲ್ಲಿ ಹೆಚ್ಚಿನ ಬದಲಾವಣೆ ಬಂದಿದೆ. ಇಂಥ ಕ್ಲಿಷ್ಟಕರ ಕೆರಿಯರ್‌ನಲ್ಲಿ ದಿನದಿನ ಹೋರಾಡುವ ಇಂಥ ಅಧಿಕಾರಿಗಳಿಗಾಗಿ ನನ್ನ ಮನಸ್ಸು ಸದಾ ಗೌರವದಿಂದ ಬಾಗುತ್ತದೆ, ಅವರ ಕುರಿತು 100 ಪಟ್ಟು ಆದರಣೆ ಹೆಚ್ಚಿದೆ. ಇದು ನನ್ನನ್ನು ಮತ್ತಷ್ಟು ಪರಿಪಕ್ವ ನಟನನ್ನಾಗಿ ಮಾಡಿದೆ!'' ಎನ್ನುತ್ತಾನೆ.
ದೀಪಿಕಾ ಹೇಳಿದ್ದು ಯಾರ ಕುರಿತು?
ಇತ್ತೀಚೆಗೆ ಒಂದು ಟಿವಿ ವಾಹಿನಿಗೆ ಸಂದರ್ಶನ ಕೊಡುವಾಗ ದೀಪಿಕಾ ಪಡುಕೋಣೆ ತನ್ನ ಪೂರ್ವಾಶ್ರಮದ ಬಾಯ್‌ಫ್ರೆಂಡ್‌ಗಳ ಕುರಿತು ಖುಲ್ಲಂಖುಲ್ಲ ಹಂಚಿಕೊಂಡಳು. ಒಂದು ಸಲ ತನ್ನ ಮಾಜಿ ಬಾಯ್‌ಫ್ರೆಂಡ್‌ನ್ನು ಆಕೆ ರೆಡ್‌ಹ್ಯಾಂಡ್ ಆಗಿ ಹಿಡಿದು ಹಾಕಿದ್ದಳಂತೆ. ಅದಾದ ಮೇಲೆ ತಪ್ಪು ಒಪ್ಪಿಕೊಳ್ಳುತ್ತಾ, ಅವನು ಅವಳ ಮುಂದೆ ಕಿವಿ ಹಿಡಿದುಕೊಂಡು ಬಸ್ಕಿ ಹೊಡೆದನಂತೆ. ಆ ಸಮಯದಲ್ಲೇನೋ ಪಾಪ ಎನಿಸಿ ಅವಳು ಅವನನ್ನು ಕ್ಷಮಿಸಿದಳಂತೆ.... ಆದರೆ ಆ ಸಂಬಂಧ ಉಳಿಸಿಕೊಳ್ಳಬೇಕೇ ಎಂದು ಯೋಚಿಸಿ, ನಿರಾಕರಿಸಿದಳಂತೆ. ಇದೀಗ ಸುದ್ದಿ ಸಂಗ್ರಾಹಕರು ಇವಳ ಮಾಜಿ ಬಾಯ್‌ಫ್ರೆಂಡ್ ಯಾರಿರಬಹುದು..... ರಣಬೀರ್ ಕಪೂರ್ ಅಲ್ಲದೆ ಬೇರಾರಿರಲು ಸಾಧ್ಯ? ಎಂದು ಮಂಡೆ ಬಿಸಿ ಮಾಡಿಕೊಂಡಿದ್ದಾರಂತೆ. ದೀಪಿಕಾ ತಾನಾಗಿ ಇದರ ಕುರಿತು ಬಾಯಿಬಿಡದ ಹೊರತು ಈ ಸಸ್ಪೆನ್ಸ್ ಮುರಿಯಲಾಗದು. ನೋಡೋಣ..... ಮುಂದೆ ಗೊತ್ತಾದರೂ ಆಗಬಹುದು.
ಶೋಭಿತಾಳಿಗೆ ಸಿಕ್ಕಿದ ಸುವರ್ಣ ಅವಕಾಶ
ನಿರ್ದೇಶಕ ಶಶಿಕಿರಣ್‌ರ ಮುಂದಿನ `ಮೇಜರ್' ಚಿತ್ರದಲ್ಲಿ ಶೋಭಿತಾಳಿಗೆ ಒಂದು ಅದ್ಭುತ ಪಾತ್ರ ಸಿಕ್ಕಿದೆಯಂತೆ. ಈ ಚಿತ್ರದ ಪ್ರಮುಖ ಕಲಾವಿದರಲ್ಲಿ ಅವಳೂ ಒಬ್ಬಳು. ಈ ಚಿತ್ರದಲ್ಲಿ ಅತಿ ಮಹತ್ವಪೂರ್ಣ ಪಾತ್ರ ನಿಭಾಯಿಸುತ್ತಿದ್ದಾಳೆ. ಈಗಾಗಲೇ ಈಕೆ ವೆಬ್‌ಸೀರೀಸ್‌ನ್ನೂ ಒಳಗೊಂಡಂತೆ ಹಲವಾರು ಚಿತ್ರಗಳಲ್ಲಿ ಮಿಂಚಿದ್ದಾಳೆ. ` ದಿ ಬಾರ್ಡ್ ಆಫ್ ಬ್ಲಡ್, ರಮಣ್ ರಾಘವ್, ದಿ ಬಾಡಿ' ಇತ್ಯಾದಿ. ಆದರೆ ಇದುವರೆಗೂ ಅಂಥ ಮಹತ್ತರ ಐಡೆಂಟಿಟಿ ಸಿಕ್ಕಿರಲಿಲ್ಲ. ಮರಳಿ ಯತ್ನ ಮಾಡು...... ಎಂದು ಜಪಿಸುತ್ತಿರುವ ಶೋಭಿತಾಳಿಗೆ ಶುಭಾಗಲಿ!