– ರಾಘವೇಂದ್ರ ಅಡಿಗ ಎಚ್ಚೆನ್.

ಬೆಂಗಳೂರಿನ ಪ್ರೀಮಿಯರ್ ಶಾಪಿಂಗ್ ಮತ್ತು ಲೈಫ್‍ಸ್ಟೈಲ್ ತಾಣವಾಗಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಗ್ರ್ಯಾಂಡ್ ಪ್ಲಾಜಾದಲ್ಲಿ ಅತ್ಯಾಕರ್ಷಕವಾದ 75 ಅಡಿಗಳ ಎತ್ತರದ ಕ್ರಿಸ್‍ಮಸ್ ಟ್ರೀಗೆ ಕಣ್ಣು ಕೋರೈಸುವ ವಿದ್ಯುದ್ದೀಪಗಳ ಅಲಂಕಾರದೊಂದಿಗೆ ಇಂದು ಹಬ್ಬದ ಸೀಸನ್ ಅದ್ಧೂರಿ ಚಾಲನೆ ನೀಡಿದೆ. ರಾಣವಿಜಯ್‍ಸಿಂಗ್, ಪ್ರಿನ್ಸ್ ನರುಲಾ, ನಿಖಿಲ್ ಚಿನ್ನಪ್ಪ, ಪ್ರಿಯಾಂಕ್ ಶರ್ಮಾ, ರಾಜೀವ್ ಲಕ್ಷ್ಮಣ ಮತ್ತು ಅರುಣ್ ಶರ್ಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮುಖ್ಯಅತಿಥಿಗಳಾಗಿ ಆಗಮಿಸಿ ಉದ್ಘಾಟನಾ ಸಮಾರಂಭದಲ್ಲಿ ಪ್ರೇಕ್ಷಕರ ಮನ ಗೆದ್ದರು. ಮಿನುಗುವ ದೀಪಗಳು, ಸಂಕೀರ್ಣವಾದ ಆಭರಣಗಳು ಮತ್ತು ಸೊಗಸಾದ ಹಬ್ಬದ ಅಲಂಕಾರಗಳೊಂದಿಗೆ ಈ ಎತ್ತರದ ಕ್ರಿಸ್‍ಮಸ್ ಟ್ರೀ ಪ್ರತಿಷ್ಠಾಪನೆಯು ಜೀವಂತವಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಸೆಲೆಬ್ರಿಟಿಗಳ ರೋಮಾಂಚನವನ್ನು ಇಮ್ಮಡಿಗೊಳಿಸಿತು. ಇದು ಮುಂಬರುವ ಹಬ್ಬದ ಋತುವಿಗೆ ಒಂದು ರೋಮಾಂಚಕ ಮತ್ತು ಉತ್ಸಾಹಭರಿತವಾದ ಮೆರಗು ತರಲಿದೆ.

IMG-20251202-WA0007

ಫೀನಿಕ್ಸ್ ಮಾಲ್ ಆಫ್ ಏಷ್ಯಾ ತನ್ನ ಯುರೋಪಿಯನ್ ಥೀಮ್ಡ್ ಕ್ರಿಸ್‍ಮಸ್ ಮಾರುಕಟ್ಟೆಯನ್ನು ಸಹ ಅನಾವರಣ ಮಾಡಿದೆ. ಇದನ್ನು ವಿಂಟರ್ ಸ್ಟ್ರೀಟ್ಸ್ ಮತ್ತು ಫೆಸ್ಟಿವ್ ಟ್ರಡಿಶನ್ಸ್‍ಗೆ ಹೊಂದಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ರಜಾದಿನಗಳ ಮೂಲಕ ವಾರಾಂತ್ಯಗಳಲ್ಲಿ ಆಯೋಜಿಸಲಾದ ಈ ಮಾರುಕಟ್ಟೆಯು ಕ್ರಿಸ್‍ಮಸ್ ಅಲಂಕಾರ, ಕರಕುಶಲ ಉಡುಗೊರೆಗಳು, ಕುಶಲಕರ್ಮಿ ಸರಕುಗಳು, ಹಬ್ಬದ ತಿಂಡಿಗಳು ಮತ್ತು ರುಚಿಕಟ್ಟಾದ ಖಾದ್ಯಗಳನ್ನು ಅನ್ವೇಷಿಸಲು ಸಂದರ್ಶಕರು, ಗ್ರಾಹಕರನ್ನು ಆಹ್ವಾನಿಸುತ್ತದೆ. ವಾರಾಂತ್ಯದ ಆಚರಣೆಗಳಲ್ಲಿ ಕ್ಯಾರೋಲ್ ಗಾಯಕರು, ಎಲ್ಫ್ ಕಪಲ್, ಗ್ರಿಂಚ್ ಜಗ್ಲರ್ ಮತ್ತು ಚಾರ್ಮಿಂಗ್ ಸ್ನೋಮ್ಯಾನ್‍ನಂತಹ ಪ್ರದರ್ಶನಗಳು ಎಲ್ಲರನ್ನೂ ರೋಮಾಂಚನಗೊಳಿಸಲಿವೆ. ಸಾಂಟಾರವರ ಗ್ರೊಟ್ಟೊ ಮಕ್ಕಳನ್ನು ಸಾಂಟಾ ಕ್ಲಾಸ್ ಅವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿದ್ದು, ಅವರ ಆಸೆಗಳ ಪಟ್ಟಿಯನ್ನು ಹಂಚಿಕೊಳ್ಳಲು ಮತ್ತು ಸ್ಮರಣೀಯವಾದ ಹಬ್ಬದ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಸ್ವಾಗತಿಸುತ್ತದೆ.

IMG-20251202-WA0010

ವಿದ್ಯುದ್ದೀಪಗಳಿಂದ ಅಲಂಕೃತವಾದ ಕ್ರಿಸ್‍ಮಸ್ ಟ್ರೀ ನಂತರ ಹಬ್ಬದ ಕಾರ್ಯಕ್ರಮವು ವಿಶೇಷವಾದ ಕ್ರಿಸ್‍ಮಸ್ ಪಾರ್ಟಿಗಾಗಿ ದೋಬಾರದತ್ತ ಎಲ್ಲರನ್ನೂ ಆಕರ್ಷಿಸುತ್ತದೆ. ಅಲ್ಲಿ ಸಂಗೀತ ಕ್ಯುರೇಟರ್ ಮತ್ತು ಐಕಾನಿಕ್ ಡಿಜೆ ನಿಖಿಲ್ ಚಿನ್ನಪ್ಪ ಅವರ ಸಂಗೀತ ಕಾರ್ಯಕ್ರಮ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು. ಈ ಮೂಲಕ ರಾತ್ರಿಯಲ್ಲಿ ಬೆಳಕಿನ ಕಿರಣಗಳು ಮೂಡುವಂತೆ ಮಾಡಿತು. ಅವೆರ ಸಿಗ್ನೇಚರ್ ಮಿಕ್ಸಸ್, ಎದೆಬಡಿತ ಹೆಚ್ಚಾಗುವಂತಹ ಬೀಟ್ಸ್ ಮತ್ತು ಮನಮೋಹಕವಾದ ಸಂಗೀತ ಕಾರಂಜಿಯು ಅಲ್ಲಿ ನೆರೆದಿದ್ದ ಸಂಗೀತ ಪ್ರಿಯರು ಮತ್ತು ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸುವಂತೆ ಮಾಡಿತು. ಈ ಮೂಲಕ ಆ ಜಾಗ ಹಾಟ್‍ಸ್ಪಾಟ್ ಆಗಿ ಪರಿವರ್ತನೆಗೊಂಡಿತು. ಇಲ್ಲಿ ಸೇರಿದ್ದ ಸೆಲೆಬ್ರಿಟಿ ಅತಿಥಿಗಳು ಆಚರಣೆಯಲ್ಲಿ

IMG-20251202-WA0009

ಸೇರುವುದರೊಂದಿಗೆ ಪಾರ್ಟಿಗೆ ಹೊಸ ಉತ್ಸಾಹವನ್ನು ತಂದುಕೊಟ್ಟಿತು. ಈ ಮೂಲಕ ಸಂಗೀತ, ಗ್ಲಾಮರ್ ಮತ್ತು ಕ್ರಿಸ್‍ಮಸ್ ಮೆರಗನ್ನು ಸ್ಮರಣೀಯವಾಗಿಸಿತು.
ಈ ಸಂಭ್ರಮಾಚರಣೆಯ ಬಗ್ಗೆ ಮಾತನಾಡಿದ ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಸೆಂಟರ್ ಡೈರೆಕ್ಟರ್ ಮತ್ತು ಮಾರ್ಕೆಟಿಂಗ್ ಡೈರೆಕ್ಟರ್- ಸೌತ್ ರಿತು ಮೆಹ್ತಾ ಅವರು, “ಈ ವರ್ಷದ ಭವ್ಯವಾದ ಕ್ರಿಸ್‍ಮಸ್ ಅಲಂಕಾರವನ್ನು ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಅನಾವರಣಗೊಳಿಸಲು ನಾವು ಸಂತೋಷಪಡುತ್ತೇವೆ. ನಮ್ಮ 75 ಅಡಿ ಎತ್ತರದ ಕ್ರಿಸ್‍ಮಸ್ ಮರದ ಬೆಳಕಿನ ಅಲಂಕಾರವು ನಮ್ಮ ಸೆಲೆಬ್ರೇಶನ್‍ನ ಪ್ರಮುಖ ಅಂಶವಾಗಿದೆ.

IMG-20251202-WA0007

ನಮ್ಮ ಸೆಲೆಬ್ರಿಟಿ ಅತಿಥಿಗಳ ಉಪಸ್ಥಿತಿಯು ಆ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿದೆ. ಈ ವರ್ಷದ ಯುರೋಪಿಯನ್ ಥೀಮ್ ಮಾರುಕಟ್ಟೆ, ಇಲ್ಲಿನ ಅಲಂಕಾರಗಳು ಮತ್ತು ಹಬ್ಬದ ಚಟುವಟಿಕೆಗಳು ನಮ್ಮ ಪ್ರೇಕ್ಷಕರು ಮತ್ತು ಸಂದರ್ಶಕರಿಗೆ ಮಾಂತ್ರಿಕವಾದ ವಾತಾವರಣವನ್ನು ಸೃಷ್ಟಿ ಮಾಡಿದೆ. ಹಬ್ಬದ ಸಂದರ್ಭದಲ್ಲಿ ಕುಟುಂಬಗಳನ್ನು ಒಟ್ಟುಗೂಡಿಸುವ ವಿಶ್ವದರ್ಜೆಯ ಅನುಭವಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ’’ ಎಂದು ತಿಳಿಸಿದರು.

IMG-20251202-WA0008

ಬೆಂಗಳೂರಿನ ಪ್ರಮುಖ ಎಕ್ಸ್‍ಪೀರಿಯೆನ್ಸ್ ತಾಣವಾಗಬೇಕೆಂಬ ಫೀನಿಕ್ಸ್ ಮಾಲ್ ಆಫ್ ಏಷ್ಯಾದ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ವರ್ಷದ ಕ್ರಿಸ್‍ಮಸ್ ಅಲಂಕಾರವು ಕಲ್ಪನೆ, ಆನಂದ ಮತ್ತು ಹಬ್ಬದ ಸಡಗರದ ವಾತಾವರಣವನ್ನು ಜೀವನಕ್ಕೆ ತಟ್ಟುವಂತೆ ಮಾಡುತ್ತದೆ. ಇಲ್ಲಿನ ಪ್ರದರ್ಶನಗಳು ಮತ್ತು ಆಕರ್ಷಣೆಗಳು ರಜಾದಿನಗಳಾದ್ಯಂತ ಮುಂದುವರಿಯುತ್ತವೆ. ಈ ಮೂಲಕ ಮಾಲ್ ಅನ್ನು ಎಲ್ಲಾ ಸಂದರ್ಶಕರಿಗೆ ಆಕರ್ಷಕ ಹಬ್ಬದ ತಾಣವಾಗಿ ಪರಿವರ್ತಿಸುತ್ತವೆ  .

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ