``ನಿರ್ಮಾಪಕ ನಿರ್ದೇಶಕರು ಮಹಿಳಾ ಕೊರಿಯೋಗ್ರಾಫರ್ ಸಹ ಉತ್ತಮ ಕೆಲಸ ನಿರ್ವಹಿಸಬಲ್ಲರು ಎಂದು ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ.....!''
ಪೋನಿ ವರ್ಮ 2002ರಲ್ಲಿ ಒಂದು ಖಾಸಗಿ ಟಿ.ವಿ. ಚಾನೆಲ್ ಮೂಲಕ ರಿಯಾಲಿಟಿ ಶೋನಿಂದ ತಮ್ಮ ಕೆರಿಯರ್ ಆರಂಭಿಸಿದರು. ಇದಾದ ಮೇಲೆ `ಗುಜಾರಿಶ್, ಭೂಲ್ ಭುಲೈಯಾ, ದಿ ಡರ್ಟಿ ಪಿಕ್ಚರ್' ಮುಂತಾದ ಅನೇಕ ಚಿತ್ರಗಳಲ್ಲಿ ಒಂದಾದ ಮೇಲೆ ಒಂದರಂತೆ ಕೊರಿಯೋಗ್ರಫಿ ಮಾಡುತ್ತಾ ಮುಂದುವರಿಸಿದರು. ಅವರು ಎಲ್ಲಕ್ಕೂ ಹೆಚ್ಚಾಗಿ ಅಕ್ಷಯ್ ಕುಮಾರ್‌ರ ಚಿತ್ರಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ.
ಮುಂಬೈನ ಪೋನಿ ವರ್ಮಾರಿಗೆ ಬಾಲ್ಯದಿಂದಲೇ ನೃತ್ಯವೆಂದರೆ ಪಂಚಪ್ರಾಣ. ಆಕೆಯ ಈ ಆಸಕ್ತಿಗೆ ನೀರೆರೆದು ಪೋಷಿಸಿದರು ಅವರ ಅಣ್ಣ. ಹೀಗೆ ಸಿನಿಮಾಗಳಲ್ಲಿ ಬಿಝಿಯಾಗಿರುವಾಗ ದಕ್ಷಿಣದ ಚಿತ್ರರಂಗದತ್ತ ತಿರುಗಲು, ಅಲ್ಲಿ ಕನ್ನಡದ ನಟ, ನಿರ್ದೇಶಕ ಪ್ರಕಾಶ್ ರೈರ ಸ್ನೇಹ ಗಳಿಸಿ, ಅದು ಪ್ರೇಮಕ್ಕೆ ತಿರುಗಲು ಮುಂದೆ ಅವರನ್ನೇ ಮದುವೆಯಾದರು. ಪೋನಿ ಹೇಳುತ್ತಾರೆ, ``ನನಗೆ ಬಾಲ್ಯದಿಂದಲೇ ಡ್ಯಾನ್ಸ್ ಎಂದರೆ ವಿಶೇಷ ಪ್ರೀತಿ. ನಮ್ಮ ಏರಿಯಾದಲ್ಲಿನ ಸೊಸೈಟಿಯಲ್ಲಿ ಪ್ರತಿ ಹಬ್ಬಕ್ಕೂ ಪರ್ಫಾರ್ವ್‌ಮಾಡುತ್ತಿದ್ದೆ. ನಾನು ಚಿಕ್ಕಳಾಗಿದ್ದಾಗ ಸರೋಜ್ ಖಾನ್‌ಹಾಗೂ ಶ್ರೀದೇವಿಯವರನ್ನು ಅನುಕರಿಸಿ ಡ್ಯಾನ್ಸ್ ಮಾಡುತ್ತಿದ್ದೆ. ಕಾಲೇಜು ಸೇರಿದ ಮೇಲೆ ಪಾರ್ಟ್ ಟೈಂ ಡ್ಯಾನ್ಸ್ ಕಲಿಸತೊಡಗಿದೆ. ಅದು ನನ್ನ ಸಂಪಾದನೆಗೆ ಮೂಲವಾದುದಲ್ಲದೆ, ನನ್ನ ಕೆರಿಯರ್‌ಗೂ ನೆರವಾಯಿತು.''
ಡ್ಯಾನ್ಸ್ ಆಯಿತು ಪ್ಯಾಷನ್
ನೃತ್ಯಕಲೆ ಎಂಥದು ಎಂದರೆ ಪ್ರತಿ ಕ್ಷಣ ಏನಾದರೊಂದು ಹೊಸ ಬಗೆಯ, ತುಸು ವಿಭಿನ್ನವಾದ ಹಾಗೂ ರಚನಾತ್ಮಕ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ. ಪೋನಿಯವರಿಗೆ ಈ ಎಲ್ಲಾ ವೈಶಿಷ್ಟ್ಯಗಳೂ ಇದ್ದುದರಿಂದ, ಈ ಕ್ಷೇತ್ರವನ್ನೇ ತಮ್ಮ ಕೆರಿಯರ್ ಆಗಿಸಿಕೊಳ್ಳಲು ಆಕೆ ನಿರ್ಧರಿಸಿದರು.
ತಮ್ಮ ಕೆಲಸದ ಜೊತೆ ಜೊತೆಯಲ್ಲೇ ಪೋನಿ ಗಣೇಶ್ ಹೆಗಡೆಯವರೊಂದಿಗೆ ಬೆರೆತು ಹಲವಾರು ಶೋ ನಡೆಸಿದರು. ಅದೇ ಸಂದರ್ಭದಲ್ಲಿ ವೈಭವಿ ಮರ್ಚೆಂಟ್‌ರೊಂದಿಗೆ ಸ್ನೇಹ ಬೆಳೆಸಿದರು. ವೈಭವಿಯನ್ನು ತಮ್ಮ ಅಕ್ಕನೆಂದೇ ಭಾವಿಸುವ ಪೋನಿ, ಅವರಿಂದ ಎಲ್ಲಾ ಡ್ಯಾನ್ಸ್ ಟೆಕ್ನಿಕ್ಸ್ ಬಗ್ಗೆ ಕಲಿತರು. ಆಕೆಯೊಂದಿಗೆ ಇದ್ದುಕೊಂಡೇ ಪೋನಿ ಹಲವಾರು ಚಿತ್ರಗಳಿಗೆ ಕೊರಿಯೋಗ್ರಫಿ ಮಾಡಿದರು.
ಇದೇ ಸಂದರ್ಭದಲ್ಲಿ ಈಕೆಗೆ ದಕ್ಷಿಣದ ಫಿಲ್ಮ್ ಮೇಕರ್ ಪ್ರಿಯದರ್ಶನ್‌ರಿಂದ ಫೋನ್ ಬಂದಾಗ, ಅವರ ಚಿತ್ರಕ್ಕೆ ಕೊರಿಯೋಗ್ರಫಿ ಮಾಡಲು ಒಪ್ಪಿಕೊಂಡರು. ಹೀಗೆ `ಯೇ ತೇರಾ ಘರ್ ಯೇ ಮೇರಾ ಘರ್' ಚಿತ್ರಕ್ಕೆ ಸೋಲೋ ಕೊರಿಯೋಗ್ರಫಿ ಮಾಡಿದರು. ಪೋನಿ ಹಿಂದಿ ಚಿತ್ರಗಳಿಗೆ ಮಾತ್ರವಲ್ಲದೆ ತಮಿಳು, ಮಲೆಯಾಳಂ ಚಿತ್ರಗಳಿಗೂ ಕೆಲಸ ಮಾಡಿದ್ದಾರೆ.
ಡ್ಯಾನ್ಸ್ ನ್ನು ಅರ್ಥ ಮಾಡಿಕೊಳ್ಳುವುದು ಕೊರಿಯೋಗ್ರಫಿ ಕುರಿತಾಗಿ ಪೋನಿ ಹೇಳುತ್ತಾರೆ, ``ಒಂದು ಹಾಡು ರೂಪುಗೊಳ್ಳುವಾಗ ಅದು ಹೇಗೆ ರೆಡಿ ಆಗಬೇಕೆಂಬುದನ್ನು ಒಂದು ವಿಧದಲ್ಲಿ ಅದು ತಾನೇ ತಿಳಿಸುತ್ತದೆ. ಬೇರೆ ಬೇರೆ ವಾದ್ಯಯಂತ್ರಗಳ ಬೇರೆ ಬೇರೆ ಭಾಷೆ ಇರುತ್ತದೆ. ವಯೋಲಿನ್ ನುಡಿಸುವಾಗ ತಂಗಾಳಿ ಸದ್ದು ಮಾಡಿದಂತೆ, ಸಿತಾರ್ ನುಡಿಸುವಾಗ ಕಣ್ಣುರೆಪ್ಪೆ ತೆರೆದು ಮುಚ್ಚಿದಂತೆ ಇತ್ಯಾದಿ ಭಾಷೆ ಅರ್ಥ ಮಾಡಿಕೊಂಡು ಅದನ್ನು ಅನುಭವಿಸಬೇಕು. ಕೊರಿಯೋಗ್ರಫಿಯನ್ನು ಹೃದಯಪೂರ್ವಕವಾಗಿ ಮಾಡಬೇಕು, ಕೇವಲ ಬುದ್ಧಿವಂತಿಕೆಯಿಂದಲ್ಲ. ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಾಧುರಿ ದೀಕ್ಷಿತ್ ನಂ.1, ಹೀಗಾಗಿಯೇ ಆಕೆಯ ಡ್ಯಾನ್ಸ್ ದಿ ಬೆಸ್ಟ್ ಆಗಿರುತ್ತದೆ.''